Trump tariffs: ತೆರಿಗೆ ನೀತಿಯಲ್ಲಿ ನೋ ಚೇಂಜ್ ಎಂದ ಅಮೆರಿಕ; ಭಾರತಕ್ಕೆ ನಿರಾಸೆ
ಭಾರತದ ಮೇಲಿನ ಸುಂಕದ ಕುರಿತು ಯಾವುದೇ ಕಾರಣಕ್ಕೂ ಅಮೆರಿಕ ತನ್ನ ನಿಲುವನ್ನು ಸಡಿಲಿಸುವುದಿಲ್ಲ. ಭಾರತ ಮತ್ತು ಯುಎಸ್ ನಡುವಿನ ವ್ಯಾಪಾರ ಮಾತುಕತೆಗಳು ಮುಂದುವರಿದಿವೆ. ನವದೆಹಲಿ ಮತ್ತು ವಾಷಿಂಗ್ಟನ್ ತನ್ನ ಅಂತಿಮ ನಿಲುವನ್ನು ತಲುಪುವ ಮುನ್ನ ದೀರ್ಘಾವಧಿಯ ದೃಷ್ಟಿಕೋನ ಮತ್ತು ವ್ಯಾಪಾರ ವಹಿವಾಟಿನಲ್ಲಿ ಏರಿಳಿತಗಳನ್ನು ಒಪ್ಪಿಕೊಳ್ಳಲೇಬೇಕು ಎಂದು ಅಮೆರಿಕದ ರಾಷ್ಟ್ರೀಯ ಆರ್ಥಿಕ ಮಂಡಳಿಯ ನಿರ್ದೇಶಕ ಕೆವಿನ್ ಹ್ಯಾಸೆಟ್ ಎಚ್ಚರಿಸಿದ್ದಾರೆ.

-

ವಾಷಿಂಗ್ಟನ್: ರಷ್ಯಾದಿಂದ ಕಚ್ಚಾತೈಲವನ್ನು ( Russian crude trade ) ಆಮದು ಮಾಡುತ್ತಿರುವ ಭಾರತಕ್ಕೆ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ ಉನ್ನತ ಆರ್ಥಿಕ ಸಲಹೆಗಾರ (economic adviser) ಮತ್ತು ಅಮೆರಿಕದ ರಾಷ್ಟ್ರೀಯ ಆರ್ಥಿಕ ಮಂಡಳಿಯ ನಿರ್ದೇಶಕ (US National Economic Council Director) ಕೆವಿನ್ ಹ್ಯಾಸೆಟ್ (Kevin Hassett ) ಮತ್ತೊಮ್ಮೆ ಎಚ್ಚರಿಕೆಯನ್ನು ನೀಡಿದ್ದಾರೆ. ಭಾರತೀಯರು ಒಂದು ವೇಳೆ ರಷ್ಯಾದ ಕಚ್ಚಾ ತೈಲ ವ್ಯಾಪಾರವನ್ನು ನಿಯಂತ್ರಿಸಲು ವಿಫಲವಾದರೆ ಅದರ ಪರಿಣಾಮವನ್ನು ಎದುರಿಸಬೇಕಾದೀತು. ಅಮೆರಿಕದ ಅಧ್ಯಕ್ಷರು ಯಾವುದೇ ಕಾರಣಕ್ಕೂ ಭಾರತೀಯ ಆಮದುಗಳ ಮೇಲಿನ ದಂಡನಾತ್ಮಕ ಸುಂಕಗಳ ಬಗ್ಗೆ ತಮ್ಮ ನಿಲುವನ್ನು ಸಡಿಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ಯುಎಸ್ ನಡುವಿನ ವ್ಯಾಪಾರ ಮಾತುಕತೆಗಳು ಮುಂದುವರಿದಿವೆ. ನವದೆಹಲಿ ಮತ್ತು ವಾಷಿಂಗ್ಟನ್ ತನ್ನ ಅಂತಿಮ ನಿಲುವನ್ನು ತಲುಪುವ ಮುನ್ನ ದೀರ್ಘಾವಧಿಯ ದೃಷ್ಟಿಕೋನ ಮತ್ತು ವ್ಯಾಪಾರ ವಹಿವಾಟಿನಲ್ಲಿ ಏರಿಳಿತಗಳನ್ನು ಒಪ್ಪಿಕೊಳ್ಳಬೇಕಾದ ಅಗತ್ಯವಿದೆ ಎಂದು ಹ್ಯಾಸೆಟ್ ತಿಳಿಸಿದ್ದಾರೆ.
ಭಾರತವು ರಷ್ಯಾದ ಕಚ್ಚಾ ತೈಲ ವ್ಯಾಪಾರವನ್ನು ನಿಯಂತ್ರಿಸಲು ವಿಫಲವಾದರೆ ಅಮೆರಿಕದ ಅಧ್ಯಕ್ಷರು ಭಾರತೀಯ ಆಮದುಗಳ ಮೇಲಿನ ವಾಷಿಂಗ್ಟನ್‌ನ ದಂಡನಾತ್ಮಕ ಸುಂಕಗಳ ಬಗ್ಗೆ ತಮ್ಮ ನಿಲುವನ್ನು ಸಡಿಲಿಸುವುದಿಲ್ಲ ಎಂದು ಎಚ್ಚರಿಸಿರುವ ಕೆವಿನ್ ಹ್ಯಾಸೆಟ್, ನವದೆಹಲಿಯೊಂದಿಗಿನ ವ್ಯಾಪಾರ ಮಾತುಕತೆಗಳು ಕಷ್ಟಕರವಾಗಿದೆ. ಯಾಕೆಂದರೆ ಭಾರತವು ತನ್ನ ಮಾರುಕಟ್ಟೆಗಳನ್ನು ಅಮೆರಿಕನ್ ಉತ್ಪನ್ನಗಳಿಗೆ ತೆರೆಯುವಲ್ಲಿ ನಿಷ್ಠುರತೆಯನ್ನು ಹೊಂದಿದೆ ಎಂದು ಅವರು ಆರೋಪಿಸಿದರು.
ಭಾರತೀಯರು ಮಣಿಯದಿದ್ದರೆ ಅಧ್ಯಕ್ಷ ಟ್ರಂಪ್ ಕೂಡ ಮಣಿಯುವುದಿಲ್ಲ. ಈಗಾಗಲೇ ಅಮೆರಿಕವು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ಕ್ಕೆ ಹೆಚ್ಚಿಸಿದೆ. ಇದು ಬ್ರೆಜಿಲ್ ಹೊರತುಪಡಿಸಿ ವಿಧಿಸಿರುವ ಅತೀ ಹೆಚ್ಚಿನ ಸುಂಕವಾಗಿದೆ. ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದಕ್ಕೆ ದಂಡನಾತ್ಮಕವಾಗಿ ಇದರಲ್ಲಿ ಶೇ. 25 ಹೆಚ್ಚುವರಿ ಸುಂಕವನ್ನು ಸೇರಿಸಲಾಗಿದೆ ಎಂದರು.
ಭಾರತದೊಂದಿಗೆ ವ್ಯಾಪಾರ ಮಾತುಕತೆ ಜಟಿಲವಾಗಿದೆ ಎಂದಿರುವ ಹ್ಯಾಸೆಟ್, ರಷ್ಯಾ ಮತ್ತು ಉಕ್ರೇನ್ ನಡುವಿನ ಶಾಂತಿ ಒಪ್ಪಂದಕ್ಕಾಗಿ ಮತ್ತು ಲಕ್ಷಾಂತರ ಜೀವಗಳನ್ನು ಉಳಿಸಲು ರಷ್ಯಾದ ಮೇಲೆ ಒತ್ತಡ ಹಾಕಲು ಪ್ರಯತ್ನಿಸಲಾಗುತ್ತಿದೆ. ಈ ನಡುವೆ ರಷ್ಯಾದಿಂದ ಭಾರತ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸಿದೆ. ಅಲ್ಲದೆ ನಮ್ಮ ಉತ್ಪನ್ನಗಳಿಗೆ ತಮ್ಮ ಮಾರುಕಟ್ಟೆಗಳನ್ನು ತೆರೆಯುವ ಬಗ್ಗೆ ಭಾರತೀಯರು ನಿಷ್ಠುರತೆ ತೋರಿಸುತ್ತಿದ್ದಾರೆ ಎಂದು ಹೇಳಿದರು.
ಭಾರತ ಮತ್ತು ಯುಎಸ್ ನಡುವೆ ವ್ಯಾಪಾರ ಮಾತುಕತೆಗಳು ಮುಂದುವರಿದಿದೆ. ಈ ಎಲ್ಲ ವ್ಯಾಪಾರ ಮಾತುಕತೆಗಳನ್ನು ನೋಡಿದಾಗ ನಾವೆಲ್ಲರೂ ಕಲಿತ ಒಂದು ಪಾಠವೆಂದರೆ ದಿಗಂತದ ಮೇಲೆ ಕಣ್ಣುಗಳನ್ನು ಇಡಬೇಕು. ಅಂತಿಮ ನಿರ್ಣಯ ಕೈಗೊಳ್ಳುವ ಮೊದಲು ಏರಿಳಿತಗಳನ್ನು ಗುರುತಿಸಬೇಕು ಎಂದು ತಿಳಿಸಿದರು.
ಭಾರತದ ಮೇಲಿನ ಹೆಚ್ಚಿನ ಸುಂಕಗಳು ಭಾರತವು ರಷ್ಯಾದ ತೈಲವನ್ನು ಖರೀದಿಸುವುದಕ್ಕೆ ಮಾತ್ರವಲ್ಲ ಆದರೆ ನಡೆಯುತ್ತಿರುವ ವ್ಯಾಪಾರ ಒಪ್ಪಂದದ ಮಾತುಕತೆಗಳ ದೀರ್ಘಾವಧಿಯ ಪರಿಣಾಮವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮೇ ಅಥವಾ ಜೂನ್‌ನಲ್ಲಿ ಈ ಒಪ್ಪಂದ ಅಂತಿಮವಾಗುತ್ತದೆ ಎಂದು ನಾವು ಭಾವಿಸಿದ್ದೆವು. ಭಾರತವು ಆರಂಭಿಕ ಒಪ್ಪಂದಗಳಲ್ಲಿ ಒಂದಾಗಿರಬಹುದು. ಆದರೆ ಅವರು ಒಂದು ರೀತಿಯಲ್ಲಿ ನಮ್ಮನ್ನು ಆಕರ್ಷಿಸಿದರು ಎಂದು ಇತ್ತೀಚೆಗೆ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಕೂಡ ಹೇಳಿದ್ದರು.
ಭಾರತದೊಂದಿಗಿನ ಮಾತುಕತೆಗಳ ಸಮಯದಲ್ಲಿ ನವದೆಹಲಿ ಸ್ವಲ್ಪ ಅಸಹಕಾರ ತೋರಿದೆ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ನಾನು ಭಾವಿಸುತ್ತೇನೆ. ಅಮೆರಿಕ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದೆ. ಕೊನೆಗೆ ನಾವು ಖಂಡಿತಾ ಒಟ್ಟಿಗೆ ಸೇರುತ್ತೇವೆ ಎನ್ನುವ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: PM Narendra Modi : 7ವರ್ಷಗಳ ನಂತರ ಜಪಾನ್‌ಗೆ ಪ್ರಧಾನಿ ಮೋದಿ ಭೇಟಿ- ಕಾರ್ಯಕ್ರಮಗಳ ವಿವರ ಹೀಗಿದೆ
ಭಾರತದ ನಿಲುವೇನು?
ಭಾರತವು ದೃಢವಾಗಿದೆ. ಅಮೆರಿಕದ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಈಗಾಗಲೇ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ನಾವು ದೇಶದ ರೈತರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲಎಂದು ತಿಳಿಸಿದ್ದಾರೆ. ಅಮೆರಿಕದ ಹೊಸ ಸುಂಕಗಳಿಂದ 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ರಫ್ತಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಸರ್ಕಾರ ಅಂದಾಜಿಸಿದೆ. ಹೊಸ ಸುಂಕದಿಂದಾಗಿ ಭಾರತ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗಬಹುದು. ಇದು ಉದ್ಯೋಗ ನಷ್ಟ, ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.