ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Trump-Zelenskyy: ಜನರ ಜೀವನದ ಜೊತೆ ಆಟ ಆಡಬೇಡ, ಝೆಲೆನ್​ಸ್ಕಿಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

ಅಮೆರಿಕಕ್ಕೆ ಭೇಟಿ ನೀಡಿದ್ದ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಶ್ವೇತಭವನದಲ್ಲಿ ಅಧ್ಯಕ್ಷ ಜತೆ ಮಾತುಕತೆ ನಡೆಸಿದ್ದಾರೆ. ಟ್ರಂಪ್‌ ಹಾಗೂ ಉಕ್ರೇನ್‌ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ಜೋರಾಗಿದ್ದು, ಓವೆಲ್‌ ಹೌಸ್‌ನಲ್ಲಿ ಇಬ್ಬರೂ ಮಾಧ್ಯಮಗಳ ಎದುರಿಗೇ ಕಿತ್ತಾಡಿಕೊಂಡಿದ್ದಾರೆ.

ಮಾಧ್ಯಮಗಳ ಎದುರಿಗೇ  ಕಿತ್ತಾಡಿದ ಟ್ರಂಪ್-ಝೆಲೆನ್ಸ್ಕಿ

ಟ್ರಂಪ್‌ ಜೊತೆ ಝೆಲೆನ್ಸ್ಕಿ

Profile Vishakha Bhat Mar 1, 2025 8:53 AM

ವಾಷಿಂಗ್ಟನ್:‌ ಅಮೆರಿಕಕ್ಕೆ ಭೇಟಿ ನೀಡಿದ್ದ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಶ್ವೇತಭವನದಲ್ಲಿ ಅಧ್ಯಕ್ಷ (Trump-Zelenskyy) ಜತೆ ಮಾತುಕತೆ ನಡೆಸಿದ್ದಾರೆ. ರಷ್ಯಾ ವಿರುದ್ಧದ ಹೋರಾಟಕ್ಕಾಗಿ ಜೋ ಬೈಡನ್ ಅವರ ಆಡಳಿತದಲ್ಲಿ ಉಕ್ರೇನ್‌ಗೆ ಶತಕೋಟಿ ಡಾಲರ್ ಮೌಲ್ಯದ ಅಮೆರಿಕನ್ ಶಸ್ತ್ರಾಸ್ತ್ರಗಳು, ಲಾಜಿಸ್ಟಿಕ್ಸ್ ಮತ್ತು ನೈತಿಕ ಬೆಂಬಲವನ್ನು ನೀಡಲಾಗಿತ್ತು. ಆದರೆ ಟ್ರಂಪ್‌ ಅಧಿಕಾರಕ್ಕೇರುತ್ತಲೆ ಟ್ರಂಪ್‌ ಉಲ್ಟಾ ಹೊಡೆದಿದ್ದಾರೆ. ಇದೀಗ ಟ್ರಂಪ್‌ ಹಾಗೂ ಉಕ್ರೇನ್‌ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ಜೋರಾಗಿದ್ದು, ಇಬ್ಬರೂ ಮಾಧ್ಯಮಗಳ ಎದುರಿಗೇ ಕಿತ್ತಾಡಿಕೊಂಡಿದ್ದಾರೆ.

ಓವಲ್ ಹೌಸ್‌ನಲ್ಲಿ ಮಾಧ್ಯಮಗಳ ಮುಂದೆ ನಡೆದ ಈ ಚರ್ಚೆಯಲ್ಲಿ ಟ್ರಂಪ್, ಝೆಲೆನ್ಸ್ಕಿ, ನೀವು ಲಕ್ಷಾಂತರ ಜೀವಗಳ ಜೊತೆ ಆಟವಾಡುತ್ತಿದ್ದೀರಿ ಎಂದು ಹೇಳಿದರು. ನಿಮ್ಮ ದೇಶ ಅಪಾಯದಲ್ಲಿದೆ ಆದರೆ ನಿಮಗೆ ಅರ್ಥವಾಗುತ್ತಿಲ್ಲ. ನೀವು ರಾಜಿ ಮಾಡಿಕೊಳ್ಳಲೇ ಬೇಕು ಎಂದು ಟ್ರಂಪ್‌ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಝೆಲೆನ್ಸ್ಕಿ, ನಮಗೆ ಕದನ ವಿರಾಮ ಅಗತ್ಯವಿಲ್ಲ ಎಂದು ಹೇಳಿದರು.

ಟ್ರಂಪ್ ಆಡಳಿತವು ಮೂರು ವರ್ಷಗಳ ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸಲು, ರಷ್ಯಾದೊಂದಿಗೆ ಉತ್ತಮ ಸಂಬಂಧವನ್ನು ನಿರ್ಮಿಸಲು ಮತ್ತು ಉಕ್ರೇನ್‌ಗೆ ಬೆಂಬಲ ನೀಡಲು ಖರ್ಚು ಮಾಡಿದ ಹಣವನ್ನು ಮರುಪಡೆಯಲು ಸಹಾಯ ಮಾಡಲು ಬಯಸುತ್ತಿದೆ. ಈ ಚರ್ಚೆಯ ಸಮಯದಲ್ಲಿ, ರಷ್ಯಾದೊಂದಿಗೆ ಯಾವುದೇ ಕದನ ವಿರಾಮವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದರು. ಈ ಹಿಂದೆ 25 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅಮೆರಿಕ ರಷ್ಯಾದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ಹೇಳಿದರು.



ಅಮೆರಿಕದೊಂದಿಗೆ ಪ್ರಮುಖ ಆರ್ಥಿಕ ಒಪ್ಪಂದ ಮಾಡಿಕೊಳ್ಳಲು ಝೆಲೆನ್ಸ್ಕಿ ಶ್ವೇತಭವನಕ್ಕೆ ತೆರಳಿದ್ದರು. ಓವಲ್ ಹೌಸ್‌ನಲ್ಲಿ ಮಾಧ್ಯಮಗಳ ಮುಂದೆ ಝೆಲೆನ್ಸ್ಕಿಯವರ ವರ್ತನೆಯಿಂದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಕೋಪಗೊಂಡಿದ್ದರು. ಮಾಧ್ಯಮಗಳ ಮುಂದೆ ಇಂತಹ ಮಾತುಗಳನ್ನು ಹೇಳುವುದು ಅವಮಾನ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Donald Trump: ಅಂತರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ ವಿರುದ್ಧವೇ ಡೊನಾಲ್ಡ್‌ ಟ್ರಂಪ್‌ ಸಮರ

ಓವಲ್ ಆಫೀಸ್​ನಲ್ಲಿ ಮಾತಿನ ಚಕಮಕಿಯ ನಂತರ ಉಕ್ರೇನ್‌ ಅಧ್ಯಕ್ಷ ಝೆಲೆನ್​ಸ್ಕಿ ಜೊತೆಗಿನ ಮಾತುಕತೆಯನ್ನ ಟ್ರಂಪ್ ಮೊಟಕುಗೊಳಿಸಿದರು. ಇಷ್ಟಾದರೂ ನಂತರ ಅಮೆರಿಕ ಅಧ್ಯಕ್ಷ ಟ್ರಂಪ್​ ಶಾಂತಿಗೆ ಸಿದ್ಧರಾದಾಗ ಮತ್ತೆ ಬರಬಹುದು ಎಂದು ಝೆಲೆನ್​ಸ್ಕಿಗೆ ಪರೋಕ್ಷ ಆಹ್ವಾನ ನೀಡಿದ್ದಾರೆ. ಅಮೆರಿಕ ಮಾತಿಗೆ ಬಗ್ಗದ ಝೆಲೆನ್​ಸ್ಕಿ, ಶ್ವೇತಭವನದಿಂದ ಹೊರ ನಡೆದಿದ್ದಾರೆ.