ಅನಿಶ್ಚಿತತೆ, ಆತಂಕ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ವಿಮಾನಯಾನ ಪುನಾರಂಭಕ್ಕೆ ಕಾಯುತ್ತಿರುವ ಸಾವಿರಾರು ಭಾರತೀಯರು
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಉದ್ವಿಗ್ನತೆ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಿದೆ. ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಆತಂಕದಲ್ಲಿದ್ದು, ಇಂಟರ್‌ನೆಟ್ ಕಡಿತ ಹಾಗೂ ಡ್ರೋನ್ ದಾಳಿಗಳ ಭೀತಿಯ ನಡುವೆ ಜೀವನ ನಡೆಸುತ್ತಿದ್ದಾರೆ. ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವು ಏರ್‌ಪೋರ್ಟ್‌ಗಳಲ್ಲಿ 100ಕ್ಕೂ ಹೆಚ್ಚು ವಿಮಾನ ರದ್ದಾಗಿದ್ದು, ಉಮ್ರಾ ಯಾತ್ರಿಕರು ಹಾಗೂ ವಿದೇಶ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಮಾ. 2: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆಯು ಯುದ್ಧ ಪೀಡಿತ ಪ್ರದೇಶವನ್ನು ದಾಟಿ ಇಡೀ ವಿಶ್ವದ ಮೇಲೆ ಪರಿಣಾಮ ಬೀರುತ್ತಿದೆ. ಇರಾನ್‌ನಲ್ಲಿ (Iran) ಸಿಲುಕಿರುವ ವಿದ್ಯಾರ್ಥಿಗಳಿಂದ ಹಿಡಿದು ಭಾರತದ ವಿಮಾನ ನಿಲ್ದಾಣಗಳಲ್ಲಿ (Indian airports) ಕಾಯುತ್ತಿರುವ ಕುಟುಂಬಗಳವರೆಗೆ ಲಕ್ಷಾಂತರ ಜನರು ವಿಮಾನ ರದ್ದತಿ, ವಿಳಂಬ ಮತ್ತು ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಕ್ಷಿಣ ಇರಾನ್‌ನ (South Iran) ಶಿರಾಜ್‌ನಲ್ಲಿರುವ (Shiraz) ಶ್ರೀನಗರ ಮೂಲದ ವಿದ್ಯಾರ್ಥಿನಿ ಖುರೇಷಿಯಾ (Quershia) ಪ್ರಕಾರ, ಅಲ್ಲಿನ ಜೀವನ ಅತಂತ್ರವಾಗಿದೆ. ಇಂಟರ್‌ನೆಟ್ (Internet) ಸಂಪರ್ಕ ಕಡಿತಗೊಂಡಿದ್ದು, ಕೇವಲ ವಿಪಿಎನ್ (VPN) ಮೂಲಕ ಮಾತ್ರ ಸಂದೇಶ ಕಳುಹಿಸಲು ಸಾಧ್ಯವಾಗುತ್ತಿದೆ. "ನಮ್ಮ ಸುತ್ತಮುತ್ತ ಡ್ರೋನ್ ಮತ್ತು ವೈಮಾನಿಕ ದಾಳಿಗಳ ಶಬ್ದ ಕೇಳಿಸುತ್ತಿದೆ. ಎಟಿಎಂಗಳಲ್ಲಿ ಹಣ ಖಾಲಿಯಾಗುತ್ತಿದೆ, ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ (ಮಾರ್ಚ್ 2) ಸುಮಾರು 100ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಸೌದಿ ಅರೇಬಿಯಾಕ್ಕೆ ಉಮ್ರಾ ಯಾತ್ರೆಗೆ ತೆರಳುವವರು ಭಯ ಮತ್ತು ಭಕ್ತಿಯ ನಡುವೆ ಪ್ರಯಾಣ ಬೆಳೆಸುತ್ತಿದ್ದಾರೆ. "ಗಲ್ಫ್ ರಾಷ್ಟ್ರಗಳು ಯುದ್ಧದ ಜ್ವಾಲೆಯಲ್ಲಿ ಬೆಳಗುತ್ತಿವೆ. ನಮ್ಮ ಪೋಷಕರ ಸುರಕ್ಷತೆಯ ಬಗ್ಗೆ ನಮಗೆ ಆತಂಕವಿದೆ. ಆದರೆ ಅಲ್ಲಾಹನು ನಮ್ಮನ್ನು ರಕ್ಷಿಸುತ್ತಾನೆ ಎಂಬ ನಂಬಿಕೆಯಿದೆ" ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ವಿಮಾನ ರದ್ದಾಗಿರುವ ಬಗ್ಗೆ ಮಾಹಿತಿ:
🎙️Air India extends suspension of all flights to and from UAE, Saudi Arabia, Israel, and Qatar.
— All India Radio News (@airnewsalerts) March 2, 2026
🎙️Centre issues advisory to states urging caution as tension in West Asia escalates.
🎙️Global crude oil prices spike around 9 per cent amid fear of supply disruption; Stock markets… pic.twitter.com/wq2lWa0U9o
ಮತ್ತೊಂದೆಡೆ, ಮಸ್ಕತ್ ಮತ್ತು ಲಂಡನ್‌ಗೆ ತೆರಳಬೇಕಿದ್ದ ಅನೇಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಬಾಕಿಯಾಗಿದ್ದಾರೆ. ಏರ್ ಇಂಡಿಯಾ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಸುರಕ್ಷತೆಯ ದೃಷ್ಟಿಯಿಂದ ಇರಾನ್ ಮತ್ತು ಇಸ್ರೇಲ್ ವಾಯುಪ್ರದೇಶವನ್ನು ತಪ್ಪಿಸಲು ಮಾರ್ಗಗಳನ್ನು ಬದಲಾಯಿಸಿವೆ ಅಥವಾ ವಿಮಾನಗಳನ್ನು ರದ್ದುಗೊಳಿಸಿವೆ. ಈ ಅನಿಶ್ಚಿತತೆಯ ನಡುವೆ, ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಮೇನಿ ಅವರ ನಿಧನದ ಸುದ್ದಿಯು ಪ್ರಯಾಣಿಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಇರಾನ್ ಸಂಘರ್ಷದ ಬಗ್ಗೆ ಚೀನಾದ ಮೌನ: ಬೀಜಿಂಗ್‌ನ ನಿಗೂಢ ತಂತ್ರ ಬಿಚ್ಚಿಟ್ಟ ತಜ್ಞರು
ಭಾರತ ಸರ್ಕಾರವು ತನ್ನ ಪ್ರಜೆಗಳ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದು, ರಾಯಭಾರ ಕಚೇರಿಗಳ ಮೂಲಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಜನರು ಸಂಯಮದಿಂದ ಇರುವಂತೆ ಮತ್ತು ವಿಮಾನಯಾನ ಸಂಸ್ಥೆಗಳ ಅಧಿಕೃತ ಅಪ್‌ಡೇಟ್‌ಗಳನ್ನು ಗಮನಿಸುವಂತೆ ಸೂಚಿಸಲಾಗಿದೆ.