ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ukraine Independence Day: ರಷ್ಯಾ ಪರಮಾಣು ಸ್ಥಾವರದ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ

Russian Nuclear Plant: ಉಕ್ರೇನ್‌ ರಷ್ಯಾದ ಅಣುಸ್ಥಾವರದ ಮೇಲೆ ಡ್ರೋನ್‌ ದಾಳಿ ನಡೆಸಿದೆ. ''ಉಕ್ರೇನ್‌ ಡ್ರೋನ್ ದಾಳಿ ನಡೆಸಿದ ಪರಿಣಾಮ ಭಾನುವಾರ ಪಶ್ಚಿಮ ಕುರ್ಸ್ಕ್ ಪ್ರದೇಶದ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡಿತ್ತುʼʼ ಎಂದು ರಷ್ಯಾ ಆರೋಪಿಸಿದೆ. ಸದ್ಯ ಉಕ್ರೇನ್‌ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಷ್ಯಾ ಪರಮಾಣು ಸ್ಥಾವರದ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ

Ramesh B Ramesh B Aug 24, 2025 8:11 PM

ಮಾಸ್ಕೋ: ಭಾನುವಾರ (ಆಗಸ್ಟ್‌ 24) 34ನೇ ಸ್ವಾತಂತ್ರ್ಯೋತ್ಸವ ಆಚರಿಸಿದ ಉಕ್ರೇನ್‌ (Ukraine Independence Day) ರಷ್ಯಾದ ಅಣುಸ್ಥಾವರದ ಮೇಲೆ ಡ್ರೋನ್‌ ದಾಳಿ ನಡೆಸಿದೆ. ''ಉಕ್ರೇನ್‌ ಡ್ರೋನ್ ದಾಳಿ ನಡೆಸಿದ ಪರಿಣಾಮ ಭಾನುವಾರ ಪಶ್ಚಿಮ ಕುರ್ಸ್ಕ್ ಪ್ರದೇಶದ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡಿತ್ತುʼʼ ಎಂದು ರಷ್ಯಾ ಆರೋಪಿಸಿದೆ. ವಿದ್ಯುತ್‌ ಸ್ಥಾವರ, ಇಂಧನ ಘಟಕಗಳನ್ನು ಗುರಿಯಾಗಿಸಿಕೊಂಡು ಈ ಆಕ್ರಮಣ ನಡೆಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸದ್ಯ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಪರಮಾಣು ಸ್ಥಾವರದಲ್ಲಿ ಕಾಣಿಕೊಂಡ ಬೆಂಕಿಯನ್ನು ತ್ವರಿತವಾಗಿ ನಂದಿಸಲಾಯಿತು. ದಾಳಿಯು ಟ್ರಾನ್ಸ್‌ಫಾರ್ಮರ್‌ಗೆ ಹಾನಿಯನ್ನುಂಟು ಮಾಡಿದರೂ, ವಿಕಿರಣ ಮಟ್ಟಗಳು ಸಾಮಾನ್ಯ ವ್ಯಾಪ್ತಿಯಲ್ಲಿಯೇ ಇದ್ದವು ಎಂದು ಮೂಲಗಳು ತಿಳಿಸಿವೆ.

ಮಿಲಿಟರಿ ಚಟುವಟಿಕೆಯಿಂದಾಗಿ ಅಣು ವಿದ್ಯುತ್‌ ಸ್ಥಾವರಗಳಲ್ಲಿನ ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂಬ ಮಾಧ್ಯಮ ವರದಿಗಳ ಬಗ್ಗೆ ತನಗೆ ತಿಳಿದಿದೆ ಎಂದು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆ ಹೇಳಿದೆ. ಮಹಾನಿರ್ದೇಶಕ ರಾಫೆಲ್ ಮರಿಯಾನೋ ಗ್ರೊಸಿ "ಪ್ರತಿಯೊಂದು ಪರಮಾಣು ಘಟಕವನ್ನು ಎಲ್ಲ ಸಮಯದಲ್ಲೂ ರಕ್ಷಿಸಬೇಕು" ಎಂದು ಒತ್ತಿ ಹೇಳಿದ್ದಾರೆ. ಸದ್ಯ ಈ ಆರೋಪದ ಬಗ್ಗೆ ಉಕ್ರೇನ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.



ಈ ಸುದ್ದಿಯನ್ನೂ ಓದಿ: Dr M S DurgaPraveen Column: ಉಕ್ರೇನ್‌ ಮತ್ತು ರಷ್ಯಾ ನಡುವಿನ ಹಗ್ಗಜಗ್ಗಾಟಕ್ಕೆ ಕೊನೆಯೆಂದು ?

ರಷ್ಯಾದ ಲೆನಿನ್‌ಗ್ರಾಡ್ ಪ್ರದೇಶದ ಉಸ್ಟ್-ಲುಗಾ ಬಂದರಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನೂ ಅಗ್ನಿಶಾಮಕ ದಳದವರು ನಂದಿಸಿದ್ದಾರೆ. ಇದು ಪ್ರಮುಖ ಇಂಧನ ರಫ್ತು ಟರ್ಮಿನಲ್ ಆಗಿದ್ದು, ಬಹುದೊಡ್ಡ ಅನಾಹುತವೊಂದು ತಪ್ಪಿದೆ. ಈ ವೇಳೆ ಸುಮಾರು 10 ಉಕ್ರೇನ್‌ ಡ್ರೋನ್‌ಗಳನ್ನು ಹೊಡೆದುರುಳಿಸಲಾಯಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಷ್ಯಾದ ರಕ್ಷಣಾ ಸಚಿವಾಲಯವು ಭಾನುವಾರ ರಾತ್ರಿಯವರೆಗೆ ತನ್ನ ಭೂಪ್ರದೇಶದ ಮೇಲೆ ಹಾರಾಟ ನಡೆಸಿದ್ದ ಒಟ್ಟು 95 ಉಕ್ರೇನ್‌ ಡ್ರೋನ್‌ಗಳನ್ನು ತಡೆಯಲಾಗಿದೆ ಎಂದು ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಭಾನುವಾರ ರಾತ್ರಿಯವರೆಗೆ ರಷ್ಯಾ 72 ಡ್ರೋನ್‌ಗಳು ಮತ್ತು ಡಿಕಾಯ್‌ಗಳನ್ನು ಕ್ರೂಸ್ ಕ್ಷಿಪಣಿಯೊಂದಿಗೆ ಹಾರಿಸಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ. ಇವುಗಳಲ್ಲಿ 48 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಅಥವಾ ಜಾಮ್‌ ಮಾಡಲಾಗಿದೆ ಎಂದು ವಿವರಿಸಿದೆ.

ಉಕ್ರೇನ್‌ 1991ರಲ್ಲಿ ಸೋವಿಯತ್ ಒಕ್ಕೂಟದಿಂದ ಸ್ವತಂತ್ರಗೊಂಡಿತ್ತು. ಆ ದಿನವನ್ನು ಸ್ಮರಿಸುವ ಸಲುವಾಗಿ ಉಕ್ರೇನ್ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದಂತೆ ಈ ಬೆಳವಣಿಗೆ ಸಂಭವಿಸಿವೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ವಾತಂತ್ರ್ಯ ಚೌಕದಲ್ಲಿ ನಡೆಸಿದ ಭಾಷಣದಲ್ಲಿ ಸುಭದ್ರ ಉಕ್ರೇನ್ ನಿರ್ಮಿಸುವುದಾಗಿ ತಿಳಿಸಿದರು.

ಕೈವ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಮೆರಿಕದ ವಿಶೇಷ ರಾಯಭಾರಿ ಕೀತ್ ಕೆಲ್ಲಾಗ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಝೆಲೆನ್ಸ್ಕಿ ಅವರಿಗೆ ಉಕ್ರೇನಿಯನ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಂಘರ್ಷ ಆರಂಭವಾಗಿ 3 ವರ್ಷ ಕಳೆದಿದ್ದು ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. 2022ರ ಫೆಬ್ರವರಿ 24ರಂದು ಉಕ್ರೇನ್‌ನ ಮೇಲೆ ರಷ್ಯಾ ದೊಡ್ಡ ಪ್ರಮಾಣದಲ್ಲಿ ಸೈನಿಕ ದಾಳಿಯನ್ನು ಪ್ರಾರಂಭಿಸುವುದರೊಂದಿಗೆ ಆ ಎರಡು ದೇಶಗಳ ನಡುವಿನ ಘರ್ಷಣೆ ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಟ್ಟಿತು.