ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್‌ನ ಫೈಟರ್ ಜೆಟ್‌ಗಳು, ಡ್ರೋನ್‌ಗಳನ್ನು ನಾಶಪಡಿಸಿದ ಅಮೆರಿಕ; ಕಾರ್ಯಾಚರಣೆಯ ದೃಶ್ಯದ ವಿಡಿಯೊ ಬಿಡುಗಡೆ

US destroys Iran’s parked fighter jets: ಅಮೆರಿಕವು ಇರಾನಿನ ಯುದ್ಧ ವಿಮಾನಗಳು ಮತ್ತು ಡ್ರೋನ್ ಹ್ಯಾಂಗರ್‌ಗಳನ್ನು ಗುರಿಯಾಗಿಸಿಕೊಂಡಿದೆ. ನಿಲುಗಡೆ ಮಾಡಲಾಗಿದ್ದ ಫೈಟರ್ ಜೆಟ್, ಡ್ರೋನ್‌ಗಳ ಮೇಲೆ ಯುಎಸ್ ಪಡೆಗಳು ಬಾಂಬ್ ದಾಳಿ ನಡೆಸಲಾಗಿದೆ. ಈ ದೃಶ್ಯಾವಳಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಇರಾನ್‌ನ ಫೈಟರ್ ಜೆಟ್‌ಗಳು, ಡ್ರೋನ್‌ಗಳನ್ನು ನಾಶಪಡಿಸಿದ ಅಮೆರಿಕ

ಟೆಹ್ರಾನ್, ಮಾ.2: ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಸಂಘರ್ಷ ಹೆಚ್ಚುತ್ತಿರದ್ದಂತೆ, ಅಮೆರಿಕವು ಇರಾನಿನ ಯುದ್ಧ ವಿಮಾನಗಳು ಮತ್ತು ಡ್ರೋನ್ ಹ್ಯಾಂಗರ್‌ಗಳನ್ನು ಗುರಿಯಾಗಿಸಿಕೊಂಡಿದೆ. ಯುಎಸ್ (US) ಸೆಂಟ್ರಲ್ ಕಮಾಂಡ್ ದಾಳಿಯ ದೃಶ್ಯಗಳನ್ನು ಹಂಚಿಕೊಂಡಿದ್ದು, ಇರಾನ್ ಬೆದರಿಕೆ ತಡೆಯಲು ಅಮೆರಿಕ ಪಡೆಗಳು ಧೈರ್ಯಶಾಲಿ ಕ್ರಮ ಕೈಗೊಳ್ಳುತ್ತಿವೆ ಎಂದು ಹೇಳಿದೆ. ನಿಲುಗಡೆ ಮಾಡಲಾಗಿದ್ದ ಫೈಟರ್ ಜೆಟ್, ಡ್ರೋನ್‌ಗಳ ಮೇಲೆ ಯುಎಸ್ ಪಡೆಗಳು ಬಾಂಬ್ ದಾಳಿ ನಡೆಸುತ್ತಿರುವುದನ್ನು ದೃಶ್ಯಗಳಲ್ಲಿ ತೋರಿಸಲಾಗಿದೆ. ಅಮೆರಿಕ ಮಿಲಿಟರಿ ಕಾರ್ಯಾಚರಣೆಯು (America Military operation) ಇರಾನಿನ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿವೆ.

ತಿಂಗಳುಗಳ ಕಾಲ ನಡೆದ ಮಾತುಕತೆ ಮತ್ತು ವಿಫಲ ಮಾತುಕತೆಗಳ ನಂತರ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರ ಇಸ್ರೇಲ್, ಇರಾನ್ ಮೇಲೆ ಸಂಘಟಿತ ದಾಳಿಯನ್ನು ಪ್ರಾರಂಭಿಸಿವೆ. ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಇಸ್ಫಹಾನ್ ಸೇರಿದಂತೆ ಪ್ರಮುಖ ಇರಾನಿನ ನಗರಗಳ ಮೇಲಿನ ವೈಮಾನಿಕ ದಾಳಿಗಳನ್ನು ನಡೆಸಿದ್ದು, ಭಾರಿ ಹಾನಿಯನ್ನುಂಟುಮಾಡಿವೆ.

ಇಲ್ಲಿದೆ ದಾಳಿಯ ವಿಡಿಯೊ:



ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಈ ದಾಳಿಯಲ್ಲಿ ಸಾವಿಗೀಡಾಗಿದ್ದು, ಟೆಹ್ರಾನ್ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ. ದಾಳಿಗೆ ಪ್ರತೀಕಾರವಾಗಿ ಇರಾನ್, ಯುಎಇ ಮತ್ತು ಕತಾರ್‌ನಂತಹ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಬಾಂಬ್ ದಾಳಿ ಮಾಡಿದೆ.

ಇರಾನ್ ಸಂಘರ್ಷದಲ್ಲಿ ಮೂರು ಅಮೆರಿಕನ್‌ ಸೈನಿಕರು ಸಾವು, ಐವರಿಗೆ ಗಂಭೀರ ಗಾಯ: ದೃಢಪಡಿಸಿದ ಯುಎಸ್

ಈ ಕ್ರಮವು ಸಂಘರ್ಷವನ್ನು ವಿಸ್ತರಿಸುವ ಮತ್ತು ತನ್ನ ಶತ್ರುವಿನ ಜೊತೆ ಸೇರುವುದರಿಂದ ಪರಿಣಾಮಗಳು ಉಂಟಾಗುತ್ತವೆ ಎಂಬ ಸಂದೇಶವನ್ನು ಕಳುಹಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಜಾಗತಿಕ ತೈಲ ನಿಕ್ಷೇಪಗಳಲ್ಲಿ ಶೇ. 50 ಕ್ಕಿಂತ ಹೆಚ್ಚು ಹೊಂದಿರುವ ಮಧ್ಯಪ್ರಾಚ್ಯದಲ್ಲಿ ಈ ಸಂಘರ್ಷವು ಶಾಂತಿಯನ್ನು ಭಂಗಗೊಳಿಸಿದೆ.

ಅಂದರೆ ಈ ಸಂಘರ್ಷವು ಭೌಗೋಳಿಕ ರಾಜಕೀಯ ಪರಿಣಾಮಗಳನ್ನು ಉಂಟುಮಾಡಬಹುದು. ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಈ ಪರಿಸ್ಥಿತಿಯು ಗಲ್ಫ್ ಪ್ರದೇಶದ 11 ರಾಷ್ಟ್ರಗಳಲ್ಲಿ ವಾಯುಪ್ರದೇಶವನ್ನು ಮುಚ್ಚಲಾಗಿದೆ.

ಮಧ್ಯಪ್ರಾಚ್ಯವು 90 ಲಕ್ಷ ಭಾರತೀಯ ವಲಸಿಗರಿಗೆ ನೆಲೆಯಾಗಿದ್ದು, ಅವರು ಈಗ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ದೇಶದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಭದ್ರತಾ ಕುರಿತಾದ ಸಂಪುಟ ಸಮಿತಿಯು, ಪ್ರಕ್ಷುಬ್ಧತೆಯಿಂದ ಪ್ರಭಾವಿತರಾದ ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಮುಖ ಸರ್ಕಾರಿ ಇಲಾಖೆಗಳಿಗೆ ನಿರ್ದೇಶನ ನೀಡಿದೆ. ಯಾವುದೇ ತುರ್ತು ಪರಿಸ್ಥಿತಿಗಾಗಿ ಸರ್ಕಾರ ಸ್ಥಳಾಂತರಿಸುವ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದರೂ, ಎಲ್ಲಾ ಮಿತ್ರ ರಾಷ್ಟ್ರಗಳು ಮಾತುಕತೆಗೆ ಮರಳುವಂತೆ ಒತ್ತಾಯಿಸುತ್ತಿದೆ.