ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಹೇಡಿಗಳುʼʼ: ಇರಾನ್‌ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗರಂ

ಇರಾನ್ ವಿರುದ್ಧ ಮಿಲಿಟರಿ ಸಹಾಯ ಕೇಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೇನಾ ಪಡೆಗೆ ಯಾರೂ ಸಹಾಯ ಮಾಡಲು ಮುಂದೆ ಬಾರದೇ ಇರುವುದರಿಂದ ಆಕ್ರೋಶಗೊಂಡ ಅವರು ಅಮೆರಿಕದ ಮಿತ್ರರಾಷ್ಟ್ರಗಳನ್ನು ಹೇಡಿಗಳು ಎಂದು ಕರೆದಿದ್ದು, ಅಮೆರಿಕವಿಲ್ಲದೇ ಇದ್ದರೆ ನ್ಯಾಟೋ ಕೇವಲ ಕಾಗದದ ಹುಲಿ ಎಂದು ಹೇಳಿದ್ದಾರೆ.

ನ್ಯಾಟೋ ಕೇವಲ ಕಾಗದದ ಹುಲಿ ಎಂದ ಡೊನಾಲ್ಡ್ ಟ್ರಂಪ್

ಸಂಗ್ರಹ ಚಿತ್ರ -

ವಾಷಿಂಗ್ಟನ್: ಅಮೆರಿಕವಿಲ್ಲದೇ (america) ಇದ್ದರೆ ನ್ಯಾಟೋ (NATO) ಕೇವಲ ಕಾಗದದ ಹುಲಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump ) ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ (Social Media) ಪೋಸ್ಟ್ ಮಾಡಿರುವ ಅವರು ಇರಾನ್ (Iran war) ವಿರುದ್ಧ ಇಸ್ರೇಲ್ (Israel) ಮತ್ತು ಯುಎಸ್ (US) ಸೇನಾ ಪಡೆಯು ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್ ಮುಚ್ಚಿರುವ ಹೊರ್ಮುಜ್ ಜಲಸಂಧಿಯನ್ನು (Hormuz Strait) ತೆರವುಗೊಳಿಸಲು ಮಿತ್ರ ರಾಷ್ಟ್ರಗಳು ಸಹಾಯ ನೀಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಪೋಸ್ಟ್ ನಲ್ಲಿ ಅಮೆರಿಕದ ಮಿತ್ರರಾಷ್ಟ್ರಗಳನ್ನು ಹೇಡಿಗಳು ಎಂದು ಕರೆದ್ದಾರೆ.

ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಮಾಡಲು ಅಡ್ಡಿ ಪಡಿಸುತ್ತಿರುವ ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಿತ್ರರಾಷ್ಟ್ರಗಳ ಬಳಿ ಮಿಲಿಟರಿ ಸಹಾಯವನ್ನು ಡೊನಾಲ್ಡ್ ಟ್ರಂಪ್ ಕೇಳಿದ್ದರು. ಆದರೆ ಇದಕ್ಕೆ ಯಾರೂ ಕೂಡ ಪ್ರತಿಕ್ರಿಯೆ ನೀಡದೇ ಇರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇರಾನ್ ದಾಳಿಯಿಂದ ಕತಾರ್ ಎಲ್‌ಎನ್‌ಜಿ ರಫ್ತಿಗೆ ಅಡ್ಡಿ: ಭಾರತ ಸೇರಿ ಹಲವು ರಾಷ್ಟ್ರಗಳ ಕಾಡಲಿದ್ಯಾ ಇಂಧನ ಕೊರತೆ? ಇಂಧನ ಕೊರತೆ?

ಅಮೆರಿಕದ ಮಿತ್ರರಾಷ್ಟ್ರಗಳನ್ನು ಹೇಡಿಗಳು ಎಂದು ಅವರು ಕರೆದಿದ್ದು, ಇದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ ಎಂಬುದಾಗಿ ತಮ್ಮ ಟ್ರೂತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಹೇಳಿದ್ದಾರೆ. ಮಿತ್ರರಾಷ್ಟ್ರಗಳು ಏರುತ್ತಿರುವ ತೈಲ ಬೆಲೆಗಳ ಬಗ್ಗೆ ದೂರು ನೀಡುತ್ತವೆ. ಆದರೆ ಹೊರ್ಮುಜ್ ಜಲಸಂಧಿಯನ್ನು ತೆರೆಯಲು ಸಹಾಯ ಮಾಡಲು ಸಿದ್ಧವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಪ್ರದೇಶದ ತೈಲ ರಫ್ತಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನಿರ್ಣಾಯಕ ಜಲಮಾರ್ಗವನ್ನು ರಕ್ಷಿಸಲು ಸಹಾಯ ಮಾಡುವಂತೆ ಅವರು ಮಿತ್ರರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿದ್ದು, ನ್ಯಾಟೋಗೆ ನಾವು ತುಂಬಾ ಸಹಾಯ ಮಾಡಿದ್ದರೂ ಕೂಡ ಅಮೆರಿಕದ ಬೆಂಬಲಕ್ಕೆ ಯಾರೂ ಬರುತ್ತಿಲ್ಲ. ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಪಡೆದುಕೊಳ್ಳುವುದನ್ನು ತಡೆಯುವುದು ಮಿತ್ರರಾಷ್ಟ್ರಗಳ ಹಿತಾಸಕ್ತಿಯೂ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಇರಾನ್ ವಿರುದ್ಧ ಯುದ್ಧ ಪ್ರಾರಂಭವಾದ ಮೇಲೆ ಅಂತಾರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲ ದರ ಗಗನಕ್ಕೇರಿತು. ಪ್ರತಿ ಬ್ಯಾರೆಲ್‌ಗೆ ಶುಕ್ರವಾರ ಸುಮಾರು 108 ಡಾಲರ್ ಆಗಿದ್ದು, ಯುದ್ಧ ಪ್ರಾರಂಭವಾಗುವ ಮೊದಲು ಬ್ಯಾರೆಲ್‌ಗೆ ಸುಮಾರು 70 ಡಾಲರ್ ಆಗಿತ್ತು. ಆಹಾರ ಮತ್ತು ಅನೇಕ ಗ್ರಾಹಕ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಲು ಅನೇಕ ವಿಶ್ವ ನಾಯಕರು ಈಗಾಗಲೇ ಪರದಾಡುತ್ತಿದ್ದಾರೆ. ಈ ನಡುವೆ ಇಂಧನ ಬೆಲೆಗಳು ಕೂಡ ಹೆಚ್ಚಳವಾಗಿದೆ.

ನೀರು ಹರಿಸುವ ಮಾತೇ ಇಲ್ಲ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗುಡುಗು

ಹೊರ್ಮುಜ್ ಜಲಸಂಧಿಯ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳಲು ಜಪಾನ್ ಸೇರಿದಂತೆ ಹಲವು ಪ್ರಮುಖ ಯುರೋಪಿಯನ್ ರಾಷ್ಟ್ರಗಳು ಅಮೆರಿಕ ಜೊತೆ ಸೇರಲು ಒಪ್ಪಿಕೊಂಡವು. ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್ ಮತ್ತು ಜಪಾನ್ ಹೇಳಿಕೆಯಲ್ಲಿ ಇರಾನ್ ನಡೆಸಿದ ದಾಳಿಯನ್ನು ಖಂಡಿಸಿದೆ.