ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Swami Vachanananda Guru: ಲಂಡನ್‌ನಲ್ಲಿ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಗೌರವ ನಮನ ಸಲ್ಲಿಸಿದ ವಚನಾನಂದ ಶ್ರೀ

Vishwaguru Basavanna: ಇಂಗ್ಲೆಂಡ್‌ ರಾಜಧಾನಿ ಲಂಡನ್‌ನಲ್ಲಿ ಸ್ಥಾಪಿಸಲಾಗಿರುವ ಬಸವಣ್ಣನವರ ಪ್ರತಿಮೆಗೆ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಗೌರವ ನಮನ ಸಲ್ಲಿಸಿದರು. ಈ ಪ್ರತಿಮೆಯನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ 2015ರ ನ. 14ರಂದು ಅನಾವರಣಗೊಳಿಸಿದ್ದರು.

ಬಸವಣ್ಣನವರ ಪ್ರತಿಮೆಗೆ ವಚನಾನಂದ ಶ್ರೀ ಗೌರವ ನಮನ

Profile Ramesh B Jul 17, 2025 3:53 PM

ಲಂಡನ್:‌ ಇಂಗ್ಲೆಂಡ್‌ನ ಲಂಡನ್‌ನ ಲ್ಯಾಂಬೆತ್‌ನಲ್ಲಿರುವ ವಿಶ್ವಗುರು ಬಸವಣ್ಣನವರ (Basavanna) ಪ್ರತಿಮೆಗೆ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು (Swami Vachanananda Guru) ಗೌರವ ನಮನ ಸಲ್ಲಿಸಿದರು. ಇಂಗ್ಲೆಂಡ್‌ ರಾಜಧಾನಿ ಲಂಡನ್‌ನಲ್ಲಿ ಸ್ಥಾಪಿಸಲಾಗಿರುವ 12ನೇ ಶತಮಾನದ ಮಹಾಮಾನವತಾವಾದಿ, ಕ್ರಾಂತಿಕಾರಿ ಸಮಾಜ ಸುಧಾರಕರೂ ಆದ ಬಸವಣ್ಣನವರ ಪ್ರತಿಮೆಯನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ 2015ರ ನ. 14ರಂದು ಅನಾವರಣಗೊಳಿಸಿದ್ದರು.

ʼʼಜಗಜ್ಯೋತಿ ಬಸವಣ್ಣನವರ ಪ್ರತಿಮೆ, ಥೇಮ್ಸ್ ನದಿ ಹಾಗೂ ಬ್ರಿಟಿಷ್ ಸಂಸತ್ ಭವನದ ನಡುವೆ ಪ್ರಶಾಂತ ವಾತಾವರಣವಿರುವ ತಾಣದಲ್ಲಿ ಸ್ಥಾಪಿತವಾಗಿದೆ. ಬಸವಣ್ಣನವರು ಸಾರಿದ ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ವರ್ಣ ವರ್ಗರಹಿತ ಸಮಾಜ ಹಾಗೂ ಮಾನವೀಯ ಮೌಲ್ಯಗಳಿಗೆ ಈ ಪ್ರತಿಮೆಯು ಸಾಕ್ಷಿಯಾಗಿದೆʼʼ ಎಂದು ಶ್ರೀ ವಚನಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ.

ʼʼಮ್ಯಾಗ್ನಾ ಕಾರ್ಟಾ (1215) ರೂಪುಗೊಳ್ಳುವ ಒಂದು ಶತಮಾನಕ್ಕೂ ಹೆಚ್ಚು ಪೂರ್ವದಲ್ಲಿ ವಚನ ಸಂವಿಧಾನವು ಅನುಭವಮಂಟಪ ಮೂಲಕ ತಲೆಯೆತ್ತಿ ನಿಂತಿತ್ತು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದುʼʼ ಎಂದಿದ್ದಾರೆ.

ʼʼಕಾಯಕ, ದಾಸೋಹ ಮತ್ತು ಶಿವಯೋಗ ಮೂಲಕ ಬಸವಾದಿ ಶರಣರ ಆದರ್ಶಗಳು ದೇಶ, ಕಾಲ, ಭಾಷೆಯ ಸೀಮೆ ಮೀರಿ ಮಾನವೀಯ ಮೌಲ್ಯಗಳ ದೀಪಸ್ತಂಭದಂತೆ ನಿಂತಿವೆʼʼ ಎಂದು ಅವರು ತಿಳಿಸಿದ್ದಾರೆ.

Swami Vachanananda Guru 2

ಈ ಸುದ್ದಿಯನ್ನೂ ಓದಿ: Mahakumbh 2025: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಭೇಟಿಯಾದ ರವಿಶಂಕರ್‌ ಗುರೂಜಿ, ವಚನಾನಂದ ಶ್ರೀ

ವಿಶ್ವಗುರು ಬಸವಣ್ಣನವರು 1131ರಲ್ಲಿ ಬಾಗೇವಾಡಿಯಲ್ಲಿ ಜನಿಸಿದರು. ಸಮಾಜದ ಕಲ್ಯಾಣಕ್ಕಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಭಕ್ತಿಯ ಮೂಲಕ ಆಧ್ಯಾತ್ಮಿಕತೆಯನ್ನು ಪ್ರಚುರಪಡಿಸಿದರು. 1ನೇ ಬಜ್ಜಳ ರಾಜನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳನ್ನು ಉತ್ತೇಜಿಸಿದವರು. ಅವರ ಸ್ಮರಣಾರ್ಥ ಲಂಡನ್‌ನಲ್ಲಿ ಪ್ರತಿಮೆ ನಿರ್ಮಿಸಲಾಗಿದೆ.