Virgin Flight: ವಿಮಾನದಲ್ಲಿ ಮುಚ್ಚಿದ ಶೌಚಾಲಯ: ಬಾಟಲ್‌ನಲ್ಲೇ ಮೂತ್ರ ವಿಸರ್ಜಿಸಿದ ಪ್ರಯಾಣಿಕರು
ಬಾಲಿಯಿಂದ ಬ್ರಿಸ್ಬೇನ್‌ಗೆ ತೆರಳುತ್ತಿದ್ದ ವರ್ಜಿನ್ ವಿಮಾನದ ಶೌಚಾಲಯ ಮುಚ್ಚಿದ್ದರಿಂದ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ. ಬೋಯಿಂಗ್ 737 ಮ್ಯಾಕ್ಸ್ 8ರಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಪ್ರಯಾಣಿಕರು ಬಾಟಲಿಗಳಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾಯಿತು. ಈ ತೊಂದರೆಗಾಗಿ ವಿಮಾನಯಾನ ಸಂಸ್ಥೆಯು ಪ್ರಯಾಣಿಕರಲ್ಲಿ ಕ್ಷಮೆಯನ್ನು ಯಾಚಿಸಿದೆ.

-

ಬ್ರಿಸ್ಬೇನ್: ಶೌಚಾಲಯದ ವ್ಯವಸ್ಥೆ (Toilet Trouble In Flight) ಇಲ್ಲದೆ ಪ್ರಯಾಣಿಕರು ಪರದಾಡಿರುವ ಘಟನೆ ಬಾಲಿಯಿಂದ ಬ್ರಿಸ್ಬೇನ್‌ಗೆ ತೆರಳಿದ ವರ್ಜಿನ್ ವಿಮಾನದಲ್ಲಿ (Bali to Brisbane flight) ನಡೆದಿದೆ. ವಿಮಾನ ಹಾರಾಟದ ಮಧ್ಯೆ ಪ್ರಯಾಣಿಕರು ಮದ್ಯದ ಬಾಟಲಿಗಳಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾಯಿತು. ಇದಕ್ಕಾಗಿ ವಿಮಾನಯಾನ ಸಂಸ್ಥೆ (Airlines) ಪ್ರಯಾಣಿಕರಲ್ಲಿ ಕ್ಷಮೆಯನ್ನೂ ಕೋರಿದೆ. ಇಂತಹ ಸವಾಲಿನ ಪರಿಸ್ಥಿತಿಯನ್ನು ನಿರ್ವಹಿಸಿದ ಸಿಬ್ಬಂದಿಗೆ ಧನ್ಯವಾದವನ್ನು ತಿಳಿಸಿದೆ. ಈ ಘಟನೆ ಬಾಲಿಯಿಂದ ಬ್ರಿಸ್ಬೇನ್‌ಗೆ ಪ್ರಯಾಣಿಸುತ್ತಿದ್ದ ಬೋಯಿಂಗ್ 737 ಮ್ಯಾಕ್ಸ್ 8ರಲ್ಲಿ (Boeing 737 MAX 8) ಗುರುವಾರ ನಡೆದಿದೆ.
ಬಾಲಿಯಿಂದ ಬ್ರಿಸ್ಬೇನ್‌ಗೆ ಪ್ರಯಾಣಿಸುತ್ತಿದ್ದ ವರ್ಜಿನ್ ವಿಮಾನದಲ್ಲಿ ಶೌಚಾಲಯದ ಬಾಗಿಲು ಓಪನ್ ಆಗದ ಕಾರಣ ಪ್ರಯಾಣಿಕರು ಬಾಟಲಿಗಳಲ್ಲಿ ಮೂತ್ರ ವಿಸರ್ಜಿಸಬೇಕಾದ ಅನಿವಾರ್ಯತೆಗೆ ಸಿಲುಕಿದರು. ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಗುರುವಾರ (ಆಗಸ್ಟ್ 28) ಮಧ್ಯಾಹ್ನ ಡೆನ್‌ಪಸರ್‌ನಿಂದ ಹೊರಟು ಬ್ರಿಸ್ಬೇನ್‌ಗೆ ತೆರಳುತ್ತಿದ್ದ ವೇಳೆ ನಿರ್ವಹಣಾ ಸಮಸ್ಯೆಗಳಿಂದಾಗಿ ಈ ಘಟನೆ ನಡೆದಿದೆ.
#Breaking 🚨 Newz: #WhatTheHell 😡
— BreakinNewz (@BreakinNewz01) August 29, 2025
"Mile-High Toilet Nightmare Shocks Passengers!"
➡️ Passengers on a Virgin Australia flight from Bali to Brisbane were forced to urinate in bottles after all toilets failed mid-flight on Thursday.
➡️ Images online showed toilets overflowing… pic.twitter.com/CrQSFecYrm
ವಿಮಾನದ ಹಿಂಭಾಗದಲ್ಲಿದ್ದ ಶೌಚಾಲಯಗಳಲ್ಲಿ ಒಂದು ನಿರ್ಗಮನಕ್ಕೆ ಮೊದಲೇ ಮುಚ್ಚಿತ್ತು. ಆರು ಗಂಟೆಗಳ ಪ್ರಯಾಣದಲ್ಲಿ ಉಳಿದ ಶೌಚಾಲಯವೂ ಅಸಮರ್ಪಕವಾಗಿ ಕಾರ್ಯನಿರ್ವಹಿಸಿತ್ತು. ಇದರಿಂದಾಗಿ ಪ್ರಯಾಣಿಕರುಗೆ ಶೌಚಾಲಯ ಪ್ರವೇಶವನ್ನು ನಿರ್ಬಂಧಿಸಲಾಯಿತು. ಆದರೆ ಇದು ವಿಮಾನ ಪ್ರಯಾಣಿಕರಿಗೆ ತೀವ್ರ ಸಂಕಷ್ಟ ತಂದೊಡ್ಡಿತ್ತು. ಪ್ರಯಾಣದ ಕೊನೆಯ ಮೂರು ಗಂಟೆಗಳು ಅನೇಕರು ತೀವ್ರ ತೊಂದರೆ ಅನುಭವಿಸಿದರು. ಇದರಿಂದಾಗಿ ವಿಮಾನಯಾನ ಸಿಬ್ಬಂದಿಯು ಪ್ರಯಾಣಿಕರಿಗೆ ಬಾಟಲಿಗಳಲ್ಲಿ ಮೂತ್ರ ವಿಸರ್ಜಿಸಲು ಅವಕಾಶ ಮಾಡಿಕೊಟ್ಟರು. ಕೆಲವರು ಇದರಿಂದ ತೀವ್ರ ಸಂಕಷ್ಟ ಅನುಭವಿಸಿದರು. ಇದು ಅವಮಾನಕರ ಮತ್ತು ದುಃಖಕರ ಎಂದು ಅನೇಕ ಪ್ರಯಾಣಿಕರು ಹೇಳಿದರು.
ವೃದ್ಧ ಮಹಿಳೆಯೊಬ್ಬರು ಇದರಿಂದ ಅವಮಾನ ಅನುಭವಿಸಿರುವುದಾಗಿ ತಿಳಿಸಿದ್ದಾರೆ. ವರ್ಜಿನ್ ಆಸ್ಟ್ರೇಲಿಯಾ ತೊಂದರೆಗೊಳಗಾದ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ. ಸವಾಲಿನ ಪರಿಸ್ಥಿತಿಯನ್ನು ನಿರ್ವಹಿಸಿದ್ದಕ್ಕಾಗಿ ಸಿಬ್ಬಂದಿಗೆ ಧನ್ಯವಾದಗಳನ್ನು ಸಲ್ಲಿಸಿದೆ.
ನಮ್ಮ ಅತಿಥಿಗಳಲ್ಲಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ವಿಮಾನದಲ್ಲಿ ಸವಾಲಿನ ಪರಿಸ್ಥಿತಿಯನ್ನು ನಿರ್ವಹಿಸಿದ್ದಕ್ಕಾಗಿ ನಮ್ಮ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಈ ಘಟನೆಯು ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕಿದ್ದು, ಆಸ್ಟ್ರೇಲಿಯನ್ ಸಾರಿಗೆ ಕಾರ್ಮಿಕರ ಒಕ್ಕೂಟವು ಇದನ್ನು ಖಂಡಿಸಿದೆ.