ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಟೋಕಿಯೊದಲ್ಲಿ ವಿಚಿತ್ರವಾಗಿ ವರ್ತಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್

Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಾನಸಿಕ ಅಸ್ವಸ್ಥತೆ ಕಾಡುತ್ತಿದೆಯೇ ಎಂಬ ಪ್ರಶ್ನೆ ಕೆಲವು ತಿಂಗಳ ಹಿಂದೆ ಭಾರಿ ಚರ್ಚೆಯಾಗಿತ್ತು. ಯಾಕೆಂದರೆ ಅವರ ವರ್ತನೆ ವಿಶ್ವದ ನಾಯಕರನ್ನು ಹಲವು ಸಂದರ್ಭಗಳಲ್ಲಿ ಗೊಂದಲಕ್ಕೀಡು ಮಾಡಿದೆ. ಇದೀಗ ಜಪಾನ್‌ನಲ್ಲಿನ ಅವರ ನಡೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

ಟೋಕಿಯೊ: ಮೂರು ದಿನಗಳ ಭೇಟಿಗಾಗಿ ಜಪಾನ್‌ಗೆ (Japan) ಆಗಮಿಸಿರುವ ಅಮೆರಿಕ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್ (Donald Trump) ಟೋಕಿಯೊದಲ್ಲಿ ಗೌರವ ವಂದನೆ ಸ್ವೀಕರಿಸುವಾಗ ಯಾವುದೇ ರೀತಿಯ ಸೂಚನೆ ಇಲ್ಲದೆ ಅತ್ತಿತ್ತ ನಡೆದಾಡಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ (Viral News) ಆಗಿದೆ. ಕೆಲವು ತಿಂಗಳ ಹಿಂದೆ ಟ್ರಂಪ್ ಅವರಿಗೆ ಮಾನಸಿಕ ಅಸ್ವಸ್ಥತೆ ಕಾಡುತ್ತಿದೆ ಎನ್ನುವ ಗೊಂದಲ ವಿಶ್ವದ ನಾಯಕರನ್ನು ಕಾಡಿತ್ತು. ಇದೀಗ ಜಪಾನ್‌ನಲ್ಲಿನ ಅವರ ವಿಚಿತ್ರ ನಡೆ ಮತ್ತೆ ಈ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಪಾನ್‌ಗೆ ಮೂರು ದಿನಗಳ ಭೇಟಿಗಾಗಿ ಮಂಗಳವಾರ ಟೋಕಿಯೊಗೆ ಆಗಮಿಸಿದರು. ಈ ವೇಳೆ ಅವರು ಎರಡು ರಾಷ್ಟ್ರಗಳ ನಡುವಿನ ರಕ್ಷಣಾ ಮತ್ತು ಆರ್ಥಿಕ ಸಂಬಂಧಗಳನ್ನು ಬಲ ಪಡಿಸುವ ಕುರಿತು ಪ್ರಧಾನಿ ಸನೇ ತಕೈಚಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಅಮೆರಿಕದ ಮಾಜಿ ಅಧ್ಯಕ್ಷ ಜೋ ಬಿಡನ್ ತಮ್ಮ ಅಧಿಕಾರದ ಕೊನೆಯ ದಿನಗಳಲ್ಲಿ ಮಾಡಿದ ಮಾತಿನ ಚಕಮಕಿ ಸಾಮಾಜಿಕ ಮಾಧ್ಯಮಗಳಲ್ಲಿ ತಮಾಷೆಯ ಮೀಮ್‌ಗಳನ್ನು ಉಂಟು ಮಾಡಿದ್ದರೆ ಇದೀಗ ಟ್ರಂಪ್ ಜಪಾನ್‌ಗೆ ನೀಡಿರುವ ಅಧಿಕೃತ ಭೇಟಿಯ ವೇಳೆ ಅವರ ಅಸಹಜ ನಡವಳಿಕೆ ಭಾರಿ ವೈರಲ್ ಆಗಿದೆ. ರಾಷ್ಟ್ರದ ಮುಖ್ಯಸ್ಥರಾಗಿರುವ ಟ್ರಂಪ್ ವಿದ್ಯುಕ್ತ ಸ್ವಾಗತದ ಸಮಯದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಸ್ವಲ್ಪವೂ ಅರಿವಿಲ್ಲದಂತೆ ವರ್ತಿಸಿದರು.

ಇದನ್ನೂ ಓದಿ: Fighter Jets: ಫೈಟರ್ ಜೆಟ್‌ಗಳಲ್ಲಿ ಹಾರಾಟ ನಡೆಸಿದ ಭಾರತೀಯ ನಾಯಕರು

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೊದಲ್ಲಿ ಟ್ರಂಪ್ ಜಪಾನ್‌ನ ಹೊಸ ಪ್ರಧಾನಿ ಸನೇ ತಕೈಚಿ ಅವರೊಂದಿಗೆ ನಡೆಯುತ್ತಿರುವುದನ್ನು ಕಾಣಬಹುದು. ಮಂಗಳವಾರ ಟೋಕಿಯೊದಲ್ಲಿ ಅವರಿಗೆ ಗಾರ್ಡ್ ಆಫ್ ಆನರ್‌ನೊಂದಿಗೆ ವಿದ್ಯುಕ್ತ ಸ್ವಾಗತ ನೀಡಲಾಯಿತು.

ಗಾರ್ಡ್ ಆಫ್ ಆನರ್ ವೇಳೆ ಸಿಬ್ಬಂದಿಗೆ ಸೆಲ್ಯೂಟ್ ಮಾಡಲು ಕೈ ಎತ್ತಿದ ಟ್ರಂಪ್ ಇದ್ದಕ್ಕಿದ್ದಂತೆ ಅದನ್ನು ಕೆಳಗಿಳಿಸುವ ಮೊದಲು ಅದು ಶಿಷ್ಟಾಚಾರವಲ್ಲ ಎಂದು ಅರಿತರು. ಬಳಿಕ ಜಪಾನ್ ಪ್ರಧಾನಿ ಜತೆ ಹೆಜ್ಜೆ ಹಾಕುವಾಗ ಅವರು ನಿಲ್ಲುವಂತೆ ಸೂಚಿಸಿದರೂ ಟ್ರಂಪ್ ಅದನ್ನು ಗಮನಿಸಲಿಲ್ಲ. ಅವರು ಮುಂದೆ ನಡೆಯುತ್ತಾ ಸಾಗಿದರು. ತಮ್ಮದೇ ಆದ ಆಲೋಚನೆಗಳಲ್ಲಿ ಅವರು ಮುಳುಗಿರುವುದನ್ನು ಕಾಣಬಹುದು.



ಟ್ರಂಪ್ ನಡೆಯುತ್ತಾ ಮುಂದೆ ಸಾಗುತ್ತಿದ್ದಾಗ ಪ್ರಧಾನಿ ತಕೈಚಿ ಆಶ್ಚರ್ಯದಿಂದ ನೋಡಿದರು. ಏನಾಗುತ್ತಿದೆ ಎಂಬುದು ಅವರ ಅರಿವಿಗೂ ಬರಲಿಲ್ಲ. ಬಳಿಕ ಟ್ರಂಪ್ ಅವರನ್ನು ಹಿಂಬಾಲಿಸಲು ಅವರು ಸ್ವಲ್ಪ ವೇಗವಾಗಿ ಹೆಜ್ಜೆ ಹಾಕಿದರು.

ಕೆಲವು ಕ್ಷಣಗಳ ಬಳಿಕ ಗಾರ್ಡ್‌ಗಳಲ್ಲಿ ಒಬ್ಬರು ಟ್ರಂಪ್‌ಗೆ ವೇದಿಕೆಯನ್ನು ಏರಲು ಅವರು ದಾರಿಯನ್ನು ತೋರಿಸಿದಾಗ ಅಮೆರಿಕ ಅಧ್ಯಕ್ಷರು ಅದನ್ನು ಮತ್ತೆ ಗಮನಿಸಲಿಲ್ಲ. ಯಾವುದೇ ರೀತಿಯ ಸುಳಿವನ್ನು ಪಾಲಿಸದ ಟ್ರಂಪ್ ತಮ್ಮದೇ ಆದ ರೀತಿಯಲ್ಲಿ ನಡೆದುಕೊಂಡು ಹೋಗುವುದನ್ನು ಈ ವಿಡಿಯೊದಲ್ಲಿ ಕಾಣಬಹುದು.

ಜಪಾನ್ ಪ್ರಧಾನಿ ಅವರಿಗೆ ಮತ್ತೆ ದಾರಿ ತೋರಿಸಿದ ಅನಂತರ ಟ್ರಂಪ್ ಅದನ್ನು ಸರಿಯಾಗಿ ಅರ್ಥ ಮಾಡಿಕೊಂದು ಸಾಗಿದರು. ಬಳಿಕ ಇಬ್ಬರು ನಾಯಕರು ರಾಷ್ಟ್ರಗೀತೆಗಳಿಗೆ ನಿಂತರು. ಈ ಹಿಂದೆಯೂ ಟ್ರಂಪ್ ಅವರ ಹೇಳಿಕೆಗಳು, ತಪ್ಪು ತಿಳುವಳಿಕೆಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯಕ್ಕೆ ಕಾರಣವಾಗಿದ್ದರು. ಕೆಲವೇ ದಿನಗಳ ಹಿಂದೆ ಟ್ರಂಪ್ ಭಾರತವನ್ನು ಪ್ರತಿ ವರ್ಷ ಹೊಸ ಪ್ರಧಾನಿಯನ್ನು ಪಡೆಯುವ ದೇಶ ಎಂದು ಕರೆದಿದ್ದರು.

ಇದನ್ನೂ ಓದಿ: UAE Lottery: ತಾಯಿ ಬರ್ತ್‌ ಡೇಯಂದೇ ಜಾಕ್‌ಪಾಟ್‌! ಅಬುಧಾಬಿಯಲ್ಲಿ ₹240 ಕೋಟಿ ರೂ. ಲಾಟರಿ ಗೆದ್ದ ಭಾರತದ ಯುವಕ

ಕಳೆದ ಕೆಲವು ತಿಂಗಳಿಂದ 79 ವರ್ಷದ ಟ್ರಂಪ್ ಮಾನಸಿಕ ಅಸ್ವಸ್ಥತೆಯನ್ನು ಎದುರಿಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಯಾಕೆಂದರೆ ಅವರ ಕೆಲವೊಂದು ನಡೆ ಜಾಗತಿಕ ನಾಯಕರು ಗೊಂದಲಕ್ಕೀಡು ಮಾಡಿದೆ. ಇತ್ತೀಚೆಗೆ ಸುಂಕಗಳ ವಿಚಾರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಭಾವ್ಯ ಪರಮಾಣು ಯುದ್ಧವನ್ನು ತಡೆಗಟ್ಟಿದ್ದೇನೆ ಎನ್ನುವ ಹೇಳಿಕೆ ಟ್ರಂಪ್ ಅವರ ವಿಚಿತ್ರ ನಡವಳಿಕೆ ಎನ್ನುವಂತೆ ಮಾಡಿತ್ತು. ಇದೀಗ ಟ್ರಂಪ್ ಕೂಡ ಜೋ ಬೈಡನ್‌ ಅವರಂತೆ ಮಾನಸಿಕ ಆರೋಗ್ಯದ ಸವಾಲುಗಳನ್ನು ಎದುರಿಸುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಕಾಡುವಂತೆ ಮಾಡಿದೆ.

ವಿದ್ಯಾ ಇರ್ವತ್ತೂರು

View all posts by this author