ಬೀಜಿಂಗ್: ಹೊಸ ವರ್ಷಕ್ಕೋ ಇಲ್ಲ ಹಬ್ಬ ಹರಿದಿನಗಳಲ್ಲಿ ಕಂಪನಿ ತನ್ನ ನೌಕರರಿಗೆ ಬೋನಸ್ ನೀಡುತ್ತದೆ. ಅದೇ ರೀತಿ ಚೀನಾದ (China) ಈ ಕಂಪನಿಯೂ ಕೂಡ ತನ್ನ ನೌಕರರಿಗೆ ಬೋನಸ್ ನೀಡಿದೆ. ಬೋನಸ್ ಅಂದರೆ ಅಷ್ಟಿಷ್ಟಲ್ಲ. ಇವರು ನೀಡಿರುವ ಬೋನಸ್ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.
ಹೌದು ಬರೋಬ್ಬರಿ 70 ಕೋಟಿ ಬೋನಸ್‌ನ್ನು ಈ ಕಂಪನಿ ಕೊಟ್ಟಿದ್ದು, ಮೇಜಿನ ಮೇಲೆ ದುಡ್ಡನ್ನು ಹರಡಲಾಗಿದೆ. ಆದರೆ, ನೌಕರರು ತಮಗೆ ಎಣಿಸಲು ಬರುವಷ್ಟು ಮಾತ್ರ ತೆಗೆದುಕೊಳ್ಳಬೇಕು ಎಂದು ಕಂಪನಿ ಷರತ್ತು ಹಾಕಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗುತ್ತಿದೆ.
ಹೌದು ಈ ಆಫರ್ ಕೊಟ್ಟಿದ್ದು, ಚೀನಾದ ಹೆನಾನ್ ಮೈನಿಂಗ್ ಕಂ. ಲಿಮಿಟೆಡ್. ಕಂಪನಿ ದೊಡ್ಡ ಮೇಜಿನ ಮೇಲೆ 70 ಕೋಟಿ ರೂ. ಹಣವನ್ನು ಹಾಕಿತು ಮತ್ತು ಉದ್ಯೋಗಿಗಳಿಗೆ ತಮ್ಮ ಬೋನಸ್‌ಗಳನ್ನು ಸಂಗ್ರಹಿಸಲು 15 ನಿಮಿಷಗಳ ಕಾಲಾವಕಾಶ ನೀಡಿದೆ. ಆದರೆ ಇದರಲ್ಲಿ ಮತ್ತೊಂದು ಷರತ್ತನ್ನು ವಿಧಿಸಲಾಗಿದ್ದು, ಒಂದು ವೇಳೆ ಹಣ ಎಣೆಸುವಲ್ಲಿ ತಪ್ಪಾದರೆ ಬೋನಸ್ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ ಎಂದು ಕಂಪನಿ ಹೇಳಿದೆ. ಈ ಸ್ಪರ್ಧೆಯಲ್ಲಿ 15 ನಿಮಿಷಗಳ ಅವಧಿಯಲ್ಲಿ ಉದ್ಯೋಗಿಯೊಬ್ಬರು 12 ರೂ ಲಕ್ಷವನ್ನು ತನ್ನದಾಗಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಮೊಸಳೆಯ ಬಾಯಿಯನ್ನೇ ಕಚ್ಚಿ ಸಾವಿನಿಂದ ಪಾರಾದ ಜೀಬ್ರಾ: ಶಾಕಿಂಗ್ ವಿಡಿಯೊ ವೈರಲ್
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋಗೆ ತರಹೇವಾರಿ ಕಮೆಂಟ್‌ಗಳು ಬರುತ್ತಿವೆ. ಕೆಲವರು ಕಂಪನಿಯ ಉದಾರತೆಯನ್ನು ಶ್ಲಾಘಿಸಿದರೆ, ಇತರರು ವಿಧಾನವನ್ನು ಟೀಕಿಸಿದ್ದಾರೆ. ಒಬ್ಬ ಬಳಕೆದಾರ ಕಮೆಂಟ್ ಮಾಡಿ ಈ ಕಂಪನಿಯಲ್ಲಿ ಕೆಲಸ ಖಾಲಿ ಇದ್ದರೆ ತನಗೆ ಹೇಳಿ ಇಂದು ಹೇಳಿದ್ದಾರೆ. ಇನ್ನೊಬ್ಬರು ಇದು ಸರಿ ಅಲ್ಲ ಎಲ್ಲರಿಗೂ ಸರಿ ಸಮನಾದ ಬೋನಸ್ ನೀಡಬೇಕು ಎಂದು ಹೇಳಿದ್ದಾರೆ.