ವಾಷಿಂಗ್ಟನ್: ಅಮೆರಿಕ ವಿಧಿಸಿದ ಸುಂಕ ಒತ್ತಡಕ್ಕೆ (US tariff) ಮಣಿದಿರುವ ಭಾರತ ಇದೀಗ ರಷ್ಯಾದಿಂದ ಕಚ್ಚಾ ತೈಲ (russian oil imports) ಆಮದು ಪ್ರಮಾಣವನ್ನು ಕಡಿಮೆ ಮಾಡಿದೆ. ಆದರೆ ಇದರಿಂದ ಭಾರತದ ತೈಲ ಅಗತ್ಯತೆಗೆ ತೊಂದರೆಯಾಗದಂತೆ ಅಮೆರಿಕವು ವೆನೆಜುವೆಲಾದ ತೈಲವನ್ನು (Venezuelan oil) ಭಾರತಕ್ಕೆ ನೀಡುತ್ತಿದೆ. ಇದರಿಂದ ನವದೆಹಲಿಯು ರಷ್ಯಾದ ತೈಲ ಆಮದುಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿ ವೆನೆಜುವೆಲಾದಿಂದ ಕಚ್ಚಾ ತೈಲ ಖರೀದಿಯನ್ನು ನಡೆಸಲಿದೆ. ಇದರಿಂದ ಮುಂಬರುವ ತಿಂಗಳುಗಳಲ್ಲಿ ಭಾರತಕ್ಕೆ ರಷ್ಯಾ ತೈಲ ಆಮದು ಪ್ರಮಾಣವು ತೀವ್ರವಾಗಿ ಕುಸಿಯಲಿದೆ ಎನ್ನಲಾಗಿದೆ.
ರಷ್ಯಾದಿಂದ ತೈಲ ಆಮದುಗಳನ್ನು ಕಡಿಮೆ ಮಾಡಲು ಈಗಾಗಲೇ ನವದೆಹಲಿಯು ಕ್ರಮವನ್ನು ಕೈಗೊಳ್ಳುತ್ತಿದೆ. ರಷ್ಯಾ ಬದಲು ಶೀಘ್ರದಲ್ಲೇ ಅಮೆರಿಕವು ಭಾರತಕ್ಕೆ ವೆನೆಜುವೆಲಾದ ಕಚ್ಚಾ ತೈಲವನ್ನು ಒದಗಿಸಲಿದೆ. ರಷ್ಯಾದಿಂದ ತೈಲ ಆಮದಿಗೆ ಪ್ರತಿಯಾಗಿ ವಾಷಿಂಗ್ಟನ್ ಭಾರತಕ್ಕೆ ಸುಂಕಗಳನ್ನು ಹೆಚ್ಚಿಸಿದ ಪರಿಣಾಮ ಭಾರತವು ರಷ್ಯಾದ ಕಚ್ಚಾ ತೈಲ ಖರೀದಿಯನ್ನು ಕಡಿತಗೊಳಿಸುವುದಾಗಿ ಹೇಳಿತ್ತು. ಇದರಿಂದಾಗಿ ಮುಂಬರುವ ದಿನಗಳಲ್ಲಿ ಭಾರತಕ್ಕೆ ಹಲವಾರು ಲಕ್ಷ ಬ್ಯಾರೆಲ್‌ಗಳಷ್ಟು ರಷ್ಯಾ ತೈಲ ಆಮದು ಕಡಿತವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಭಾರತ–ಇಯು ವ್ಯಾಪಾರ ಒಪ್ಪಂದಕ್ಕೆ ಸಹಿ: ಅಮೆರಿಕದ ಮೇಲೆ ಪರಿಣಾಮವೇನು?
ಕಳೆದ ಮಾರ್ಚ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ತೈಲವನ್ನು ಖರೀದಿಸುವ ದೇಶಗಳ ಮೇಲೆ ಶೇಕಡಾ 25ರಷ್ಟು ಸುಂಕಗಳನ್ನು ವಿಧಿಸಿದರು. ಇದರ ಬಳಿಕ ಯುಎಸ್ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿತ್ತು. ಬಳಿಕ ಭಾರತಕ್ಕೆ ರಷ್ಯಾದ ತೈಲ ಆಮದು ಪ್ರಮಾಣ ಕುಸಿಯುತ್ತಿದ್ದು, ಇದರಿಂದ ಉಂಟಾಗುವ ಪೂರೈಕೆ ತೊಂದರೆಯನ್ನು ಸರಿದೂಗಿಸಲು ಅಮೆರಿಕವು ವೆನೆಜುವೆಲಾದಿಂದ ತೈಲ ಖರೀದಿಗಳನ್ನು ಪುನರಾರಂಭಿಸಬಹುದು ಎಂದು ವಾಷಿಂಗ್ಟನ್ ತಿಳಿಸಿದೆ ಎನ್ನಲಾಗಿದೆ.
ಉಕ್ರೇನ್ ವಿರುದ್ಧ ಹೋರಾಡಲು ರಷ್ಯಾಕ್ಕೆ ತೈಲ ರಫ್ತಿನಿಂದ ಬರುವ ಆದಾಯವನ್ನು ತಡೆಯಲು ಅಮೆರಿಕ ಪ್ರಯತ್ನ ನಡೆಸುತ್ತಿದೆ. 2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಾಗ ರಷ್ಯಾಕ್ಕೆ ಪಾಶ್ಚಿಮಾತ್ಯ ನಿರ್ಬಂಧಗಳಿಂದಾಗಿ ರಷ್ಯಾ ತನ್ನ ತೈಲ ವ್ಯಾಪಾರದ ಮೇಲೆ ಗಣನೀಯ ಪ್ರಮಾಣದಲ್ಲಿ ರಿಯಾಯಿತಿ ನೀಡಿತು. ಆಗ ಭಾರತವು ರಷ್ಯಾದ ಪ್ರಮುಖ ತೈಲ ಖರೀದಿದಾರರಲ್ಲಿ ಒಂದಾಯಿತು. ಆದರೆ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇಕಡಾ 50 ಕ್ಕೆ ಏರಿಸಿದ ಬಳಿಕ ರಷ್ಯಾ ತೈಲ ಖರೀದಿಯನ್ನು ಭಾರತವು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿದೆ ಎಂದು ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಅಧ್ಯಕ್ಷರ ಭಾರತ ಪ್ರವಾಸದ ಬಳಿಕ ಪಾಕ್ ವಿಮಾನ ನಿಲ್ದಾಣ ಒಪ್ಪಂದದಿಂದ ಹಿಂದೆ ಸರಿದ ಯುಎಇ
ವೆನೆಜುವೆಲಾದ ತೈಲವನ್ನು ವಿಟೋಲ್ ಅಥವಾ ಟ್ರಾಫಿಗುರಾದಂತಹ ಹೊರಗಿನ ವ್ಯಾಪಾರ ಸಂಸ್ಥೆಗಳು ಮಾರಾಟ ಮಾಡುತ್ತವೆಯೇ ಅಥವಾ ವೆನೆಜುವೆಲಾದ ರಾಜ್ಯ ತೈಲ ಕಂಪನಿ ಪಿಡಿವಿಎಸ್ಎನಿಂದ ನೇರವಾಗಿ ಮಾರಾಟ ಮಾಡಲಾಗುತ್ತದೆಯೇ ಎಂಬುದರ ಕುರಿತು ಇನ್ನು ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.