ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

40 ಡಿಗ್ರಿ ಸೆಲ್ಸಿಯಸ್‌ ಬಿಸಿಲಿಗೆ ಐಸ್‌ಕ್ರೀಂನಂತೆ ಕರಗುವ ಬ್ರಿಟನ್ ರಸ್ತೆಗಳು; ಭಾರತದಲ್ಲಿ 45 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿದ್ದರೂ ರೋಡ್‌ ಗಟ್ಟಿಮುಟ್ಟಾಗಿ ಉಳಿಯುವುದೇಕೆ?

UK Roads Melt at 40°C: ಯುರೋಪ್‌ನಾದ್ಯಂತ ತಾಪಮಾನ ಗಣನೀಯವಾಗಿ ಹೆಚ್ಚಿದ್ದು, ರಸ್ತೆಗಳು ಕರಗುತ್ತಿವೆ. ರೈಲು ಹಳಿಗಳು ಬಾಗುತ್ತಿದ್ದರೆ, ಬರಿ ಬಿಸಿಲಿಗೆ ಅಮ್ಲೇಟ್‌ ಮಾಡುತ್ತಿರುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಆದರೆ ಇಷ್ಟೇ ತಾಪಮಾನವಿದ್ದರೂ ಭಾರತದಲ್ಲಿ ರಸ್ತೆಗಳು ಸುರಕ್ಷಿತವಾಗಿವೆ. ಇದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

40 ಡಿಗ್ರಿ ಬಿಸಿಲಿಗೆ ಕರಗಿದ ಬ್ರಿಟನ್ ರಸ್ತೆಗಳು

ಲಂಡನ್, ಜು. 1: ಯುರೋಪಿನ ಕೆಲವು ಭಾಗಗಳು ದಾಖಲೆ ಮಟ್ಟದ ಗರಿಷ್ಠ ತಾಪಮಾನವನ್ನು ಎದುರಿಸುತ್ತಿರುವುದರಿಂದ, ಇಂಗ್ಲೆಂಡ್‌ನ ರಸ್ತೆಗಳು (Europe) ಬಿಸಿಲಿಗೆ ಕರಗುತ್ತಿರುವ, ಹಾನಿಗೊಳಗಾಗುತ್ತಿರುವ ಸುದ್ದಿ ಜಗತ್ತಿನ ಗಮನ ಸೆಳೆದಿದೆ. ಈ ಸ್ಥಿತಿಯು ಭಾರತದೊಂಗಿನ ಪರಿಸ್ಥಿತಿ ಜತೆ ಹೋಲಿಕೆಗೂ ಕಾರಣವಾಗಿದೆ. ಯಾಕೆಂದರೆ ಭಾರತದಲ್ಲಿ ಬೇಸಗೆಯ ಉತ್ತುಂಗದಲ್ಲಿ ತಾಪಮಾನವು ನಿಯಮಿತವಾಗಿ 45 ಡಿಗ್ರಿ ಸೆಲ್ಸಿಯಸ್ (UK Roads Melt at 40°C) ದಾಟಿದರೂ ಸಹ, ರಸ್ತೆಗಳು ಸಾಮಾನ್ಯವಾಗಿ ಈ ಮಟ್ಟದ ವೈಫಲ್ಯವನ್ನು ಎದುರಿಸುವುದಿಲ್ಲ. ಅದೇಕೆ? ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಇದರರ್ಥ ನಮ್ಮ ದೇಶವು ಅಲ್ಲಿಗಿಂತ ಗಟ್ಟಿಯಾದ ರಸ್ತೆ ನಿರ್ಮಿಸುತ್ತದೆ ಎಂದಲ್ಲ. ಬದಲಿಗೆ, ಆಯಾ ದೇಶದ ರಸ್ತೆಗಳು ಅಲ್ಲಿನ ಹವಾಮಾನದ ಆಧಾರದ ಮೇಲೆ ನಿರ್ಮಾಣವಾಗುತ್ತದೆ. ಅಲ್ಲಿನ ರಸ್ತೆ ನಿರ್ಮಾಣ ಸಾಮಗ್ರಿಗಳನ್ನು ಇದೇ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ ಎನ್ನುತ್ತಾರೆ ತಜ್ಞರು.

ಬಿಸಿಲಿಗೆ ಕರಗುವ ಇಂಗ್ಲೆಂಡ್‌ನ ರಸ್ತೆಗಳು:



ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಸಾಂಪ್ರದಾಯಿಕವಾಗಿ ರಸ್ತೆ ನಿರ್ಮಾಣದ ಸಂಪೂರ್ಣ ಗಮನವನ್ನು ಅತಿಯಾದ ಚಳಿಯ ವಾತಾವರಣವನ್ನು ತಡೆದುಕೊಳ್ಳುವುದರ ಮೇಲೆಯೇ ಕೇಂದ್ರೀಕರಿಸಲಾಗುತ್ತದೆ. ಅಲ್ಲಿನ ರಸ್ತೆಗಳನ್ನು ಮಂಜುಗಡ್ಡೆಯಾಗುವ ಮತ್ತು ಕರಗುವ ಪ್ರಕ್ರಿಯೆಗಳನ್ನು ಸಹಿಸಿಕೊಳ್ಳುವಂತೆ ನಿರ್ಮಾಣ ಮಾಡಲಾಗುತ್ತದೆ. ಇಲ್ಲದಿದ್ದರೆ ರಸ್ತೆಗಳಲ್ಲಿ ಬಿರುಕುಮೂಡಿ ಇಡೀ ನಾಶವಾಗುವ ಅಪಾಯವಿರುತ್ತದೆ.

ಲಂಡನ್‌ನಲ್ಲೂ ಭಾರತೀಯ ಆಟೋ ರಿಕ್ಷಾ ಪತ್ತೆ: ʼʼಗೇಮ್‌ ಓವರ್‌ʼʼ ಎಂದ ನೆಟ್ಟಿಗರು

ಇದೇ ಕಾರಣಕ್ಕಾಗಿ, ಯುರೋಪಿನ ಅನೇಕ ರಸ್ತೆಗಳ ನಿರ್ಮಾಣಕ್ಕೆ ಹಾಟ್-ರೋಲ್ಡ್ ಅಸ್ಫಾಲ್ಟ್ ಮತ್ತು ಡೆನ್ಸ್ ಅಸ್ಫಾಲ್ಟ್ ಕಾಂಕ್ರೀಟ್‌ನಂತಹ ಸಾಮಗ್ರಿಗಳನ್ನು ಬಳಸಲಾಗುತ್ತದೆ. ಈ ಮಿಶ್ರಣಗಳು ಹೆಚ್ಚಿನ ಪ್ರಮಾಣದ ಡಾಮರು ಮತ್ತು ಅತ್ಯಂತ ಸೂಕ್ಷ್ಮವಾದ ಕಲ್ಲುಗಳನ್ನು ಒಳಗೊಂಡಿರುತ್ತವೆ. ಇದು ಮೇಲ್ಮೈಗೆ ಹೆಚ್ಚಿನ ನಾಜೂಕು ನೀಡುತ್ತದೆ.

ಕಠಿಣ ಚಳಿಗಾಲದಲ್ಲಿ ರಸ್ತೆಗಳು ಸುಲಭವಾಗಿ ಬಿರುಕು ಬಿಡದಂತೆ ಮತ್ತು ಕುಗ್ಗಲು ಇದು ತುಂಬಾ ಉಪಯುಕ್ತ. ತಾಪಮಾನವು ಶೂನ್ಯಕ್ಕಿಂತ ಕೆಳಕ್ಕೆ ಇಳಿದಾಗಲೂ ರಸ್ತೆಗಳು ಬಾಳಿಕೆ ಬರುವಂತೆ ಮಾಡಲು ಮೃದುವಾದ ಡಾಮರು ಸಹಾಯ ಮಾಡುತ್ತದೆ. ಆದರೆ ಇದು ಅತಿಯಾದ ಉಷ್ಣತೆಯನ್ನು ತಡೆದುಕೊಳ್ಳಲು ಶಕ್ತವಾಗಿರುವುದಿಲ್ಲ.

ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾದಾಗ ಈ ಡಾಮರು ಮಿಶ್ರಣಗಳಲ್ಲಿರುವ ಬಿಟುಮೆನ್ ಮೃದುವಾಗುತ್ತದೆ. ಈ ಸಮಯದಲ್ಲಿ ಭಾರಿ ವಾಹನಗಳ ಒತ್ತಡದಿಂದಾಗಿ ರಸ್ತೆಯ ಮೇಲ್ಮೈ ವಿರೂಪಗೊಂಡು, ಆಳವಾದ ಗೆರೆಗಳು, ಹೊಂಡ ಕಂಡು ಬರುತ್ತದೆ. ಕೆಲವೊಮ್ಮೆ ರಸ್ತೆಯೇ ಕರಗುತ್ತದೆ, ವಾಹನಗಳ ಟೈರ್‌ಗಳಿಗೆ ಅಂಟಿಕೊಳ್ಳುತ್ತದೆ.

ಇಂತಹ ತೀವ್ರವಾದ ಉಷ್ಣಾಂಶವು ಇಂಗ್ಲೆಂಡ್‌ನ ಇತಿಹಾಸದಲ್ಲಿ ಅತ್ಯಂತ ಅಪರೂಪವಾಗಿರುವುದರಿಂದ, ಅಲ್ಲಿನ ರಸ್ತೆಗಳನ್ನು ದೀರ್ಘಕಾಲದ ತೀವ್ರ ಶಾಖವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿಲ್ಲ.

ಮದ್ಯದ ಅಮಲಿನಲ್ಲಿ ರಸ್ತೆ ಮಧ್ಯೆಯೇ ಮಲಗಿದ ಮಹಿಳೆ: "ಇದು ನಿಜವಾದ ಲಿಂಗ ಸಮಾನತೆ" ಎಂದ ನೆಟ್ಟಿಗರು

ಭಾರತದಲ್ಲಿನ ಹವಾಮಾನ ಭಿನ್ನ

ಇನ್ನು ಭಾರತವು ವಿಭಿನ್ನ ಹವಾಮಾನ ಸವಾಲನ್ನು ಎದುರಿಸುತ್ತದೆ. ದೀರ್ಘ ಹಿಮಪಾತದ ಬದಲು, ರಸ್ತೆಗಳು ತಿಂಗಳುಗಟ್ಟಲೆ ತೀವ್ರವಾದ ಶಾಖ, ಸೂರ್ಯನ ಬೆಳಕು ಮತ್ತು ಭಾರಿ ಸಂಚಾರವನ್ನು ತಡೆದುಕೊಳ್ಳಬೇಕು. ಇದನ್ನು ನಿಭಾಯಿಸಲು, ಭಾರತೀಯ ರಸ್ತೆ ನಿರ್ಮಾಣಕ್ಕೆ ಸಾಮಾನ್ಯವಾಗಿ VG-30 ಮತ್ತು VG-40 ಸೇರಿದಂತೆ ಗಟ್ಟಿಯಾದ ದರ್ಜೆಯ ಬಿಟುಮೆನ್ ಅನ್ನು ಬಳಸಲಾಗುತ್ತದೆ. ಈ ವಸ್ತುಗಳು ಹೆಚ್ಚಿನ ಸ್ನಿಗ್ಧತೆಯನ್ನು ಹೊಂದಿರುತ್ತವೆ ಮತ್ತು ತಾಪಮಾನವು ಏರಿದಾಗ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ.