ಲಂಡನ್‌ನಲ್ಲೂ ಭಾರತೀಯ ಆಟೋ ರಿಕ್ಷಾ ಪತ್ತೆ: ʼʼಗೇಮ್ ಓವರ್ʼʼ ಎಂದ ನೆಟ್ಟಿಗರು
Viral Video: ಲಂಡನ್ ಅಂದಾಕ್ಷಣ ಅಲ್ಲಿನ ಐಷಾರಾಮಿ ಕಾರು, ಡಬಲ್ ಡೆಕ್ಕರ್ ಬಸ್ ಇತ್ಯಾದಿ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಇತ್ತೀಚೆಗೆ ಕಪ್ಪು-ಹಳದಿ ಬಣ್ಣದ ಭಾರತೀಯ ಆಟೋ-ರಿಕ್ಷಾ ಟ್ರಾಫಿಕ್ ನಡುವೆ ಸಾಗುತ್ತಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಲಂಡನ್ ರಸ್ತೆಯಲ್ಲಿ ಭಾರತೀಯ ಆಟೋ ರಿಕ್ಷಾ -
ಲಂಡನ್, ಮಾ. 22: ಹೆಚ್ಚಿನ ಪ್ರವಾಸಿಗರ ಆಕರ್ಷಣೆಯ ಸ್ಥಳ ಇಂಗ್ಲೆಂಡ್‌ನ ರಾಜಧಾನಿ ಲಂಡನ್. ಈ ನಗರ ಹೆಚ್ಚಿನ ಮೂಲಭೂತ ಸೌಕರ್ಯದೊಂದಿಗೆ ಪ್ರವಾಸೋದ್ಯಮ ಕೇಂದ್ರವಾಗಿಯೂ ಜನಪ್ರಿಯತೆ. ಅದರಲ್ಲೂ ಲಂಡನ್ ಅಂದಾಕ್ಷಣ ಅಲ್ಲಿನ ಐಷಾರಾಮಿ ಕಾರು, ಡಬಲ್ ಡೆಕ್ಕರ್ ಬಸ್ ಇತ್ಯಾದಿಯೇ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಇತ್ತೀಚೆಗೆ ಕಪ್ಪು-ಹಳದಿ ಬಣ್ಣದ ಭಾರತೀಯ ಆಟೋ-ರಿಕ್ಷಾ ಟ್ರಾಫಿಕ್ ನಡುವೆ ಸಾಗುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.
ಕಂಟೆಂಟ್ ಕ್ರಿಯೇಟರ್ ಒಬ್ಬರು ಈ ಕ್ಲಿಪ್ ಶೇರ್ ಮಾಡಿದ್ದಾರೆ. ಕಾರುಗಳು, ಬಸ್‌ಗಳು ಕಿಕ್ಕಿರಿದ ವಾಹನಗಳ ಮಧ್ಯೆ ಭಾರತೀಯ ಮೂಲದ ಆಟೋ ರಿಕ್ಷಾ ಕಾಣಿಸಿಕೊಂಡಿದೆ. ಭಾರತೀಯರು ಈ ದೃಶ್ಯಕ್ಕೆ ಅಚ್ಚರಿ ವ್ಯಕ್ತ ಪಡಿಸಿದ್ದು, ಇದು ನಮ್ಮ ಹೆಮ್ಮೆ ಎಂದು ಹೇಳಿಕೊಂಡಿದ್ದಾರೆ. ಜೇ ಧೋಲಾಕಿಯಾ ಎಂಬ ಹೆಸರಿನ ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಶೇರ್ ಮಾಡಿದ್ದು ʼ'ಲಂಡನ್‌ನಲ್ಲಿ ರಿಕ್ಷಾ? ಬಾಸ್, ಆಟ ಮುಗಿದಿದೆ. ಇಂಗ್ಲೆಂಡ್‌ನಲ್ಲಿ ಟ್ರಾಫಿಕ್‌ನಲ್ಲಿ ಭಾರತೀಯ ಆಟೋ ಕಾಣಿಸಿಕೊಂಡಿದೆʼʼ ಎಂದು ಬರೆದುಕೊಂಡಿದ್ದಾರೆ.
ವಿಡಿಯೊ ನೋಡಿ:
ಲಂಡನ್‌ನ ಟ್ರಾಫಿಕ್‌ಗಳ ನಡುವೆ ಭಾರತೀಯ ಆಟೋರಿಕ್ಷಾವು ಸಲೀಸಾಗಿ ರಸ್ತೆ ಮಧ್ಯೆ ಸಾಗುತ್ತಿದೆ. ವಿದೇಶದಲ್ಲಿ ವಾಸಿಸುವ ಅನೇಕರಿಗೆ ತಮ್ಮ ಊರನ್ನು ನೆನಪಿಸುವಂತೆ ಮಾಡಿದೆ. ಅನೇಕರು ಇದು ಲಂಡನ್‌ನಂತೆ ಕಾಣುತ್ತಿಲ್ಲ. ಮುಂಬೈ ಅಥವಾ ದೆಹಲಿಯಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ಆಟೋ ರಿಕ್ಷಾ ರಾಜರೋಷದಿಂದ ಚಲಿಸುತ್ತಿರುವುದು ಕಾಣಬಹುದು.
ಆಟವಾಡುತ್ತಿದ್ದಾಗ ಮೊದಲ ಮಹಡಿಯಿಂದ ಬಿದ್ದ 3 ವರ್ಷದ ಮಗು
ಕೆಲವರು ಲಂಡನ್‌ನ ವೆಂಬ್ಲಿಯಂತಹ ಪ್ರದೇಶಗಳಲ್ಲಿ ಇದೇ ರೀತಿಯ ವಾಹನಗಳನ್ನು ನೋಡಿರುವುದನ್ನು ನೆನಪಿಸಿಕೊಂಡಿದ್ದಾರೆ. ಭಾರತೀಯರಿಗೆ ಇದೊಂದು ವಿಶೇಷ ಅನುಭವ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಲಂಡನ್‌ನಲ್ಲಿ ಈ ಆಟೋರಿಕ್ಷಾ ಕಾಣಿಸಿಕೊಂಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.