ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಧ್ಯಪ್ರಾಚ್ಯ ಯುದ್ಧಕ್ಕೆ ಶೀಘ್ರದಲ್ಲೇ ವಿರಾಮ; ಅಮೆರಿಕ-ಇರಾನ್ ನಡುವಿನ ಮಾತುಕತೆ ಫಲಪ್ರದ: ಕದನವಿರಾಮದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

Middle East war: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷಕ್ಕೆ ಪೂರ್ಣ ವಿರಾಮ ಬೀಳುವ ಸೂಚನೆ ಸಿಕ್ಕಿದೆ. ಅಮೆರಿಕ ಮತ್ತು ಇರಾನ್ ನಡುವೆ ಕದನವಿರಾಮದ ಮಾತುಕತೆ ಆರಂಭಗೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಮೂಲಕ ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟ ನಂತರ ಕಡಿಮೆಯಾಗುವ ಲಕ್ಷಣ ಕಂಡು ಬಂದಿದೆ.

ಮಧ್ಯಪ್ರಾಚ್ಯ ಯುದ್ಧಕ್ಕೆ ಶೀಘ್ರದಲ್ಲೇ ಬೀಳುತ್ತಾ ತೆರೆ?

ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -

Priyanka P
Priyanka P Mar 23, 2026 6:47 PM

ನವದೆಹಲಿ, ಮಾ. 23: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷಕ್ಕೆ (Middle East war) ಪೂರ್ಣ ವಿರಾಮ ಹಾಕುವುದಾಗಿ ಅಮೆರಿಕ ಮತ್ತು ಇರಾನ್ ನಡುವೆ ಫಲಪ್ರದ ಮಾತುಕತೆಗಳು ಆರಂಭಗೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ. ಮಾತುಕತೆ ಮುಂದುವರಿಯಲು ಅವಕಾಶ ನೀಡುವ ಉದ್ದೇಶದಿಂದ, ಇರಾನ್‌ನ ವಿದ್ಯುತ್ ಘಟಕಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಯೋಜಿಸಿದ್ದ ದಾಳಿಗಳನ್ನು 5 ದಿನಗಳ ಕಾಲ ಮುಂದೂಡುವುದಾಗಿ ಟ್ರಂಪ್ ಹೇಳಿದ್ದಾರೆ.

ಈ ಕ್ರಮವು ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟ ನಂತರ ಕಡಿಮೆಯಾಗುವ ಲಕ್ಷಣ ತೋರಿಸಿದೆ. ಟ್ರಂಪ್ ಅವರ ಇತ್ತೀಚಿನ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಇರಾನ್ ರಾಜ್ಯ ಮಾಧ್ಯಮ, ಇರಾನ್ ಪ್ರತೀಕಾರದ ಸಂಭಾವ್ಯತೆಗೆ ಹೆದರಿ ಅಮೆರಿಕ ಅಧ್ಯಕ್ಷರು ಹಿಂದೆ ಸರಿದಿದ್ದಾರೆ ಎಂದು ಪ್ರತಿಕ್ರಿಯಿಸಿದೆ.

ʼʼಎರಡು ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಪ್ರಾಚ್ಯದಲ್ಲಿನ ವೈಮನಸ್ಸನ್ನು ಸಂಪೂರ್ಣವಾಗಿ ಪರಿಹರಿಸುವ ಬಗ್ಗೆ ಅತ್ಯಂತ ಉತ್ತಮ ಮತ್ತು ಫಲಪ್ರದ ಮಾತುಕತೆಗಳು ನಡೆದಿವೆ ಎಂಬುದನ್ನು ತಿಳಿಸಲು ನನಗೆ ಸಂತೋಷವಾಗಿದೆ. ಈ ವಾರದವರೆಗೆ ಮುಂದುವರಿಯಲಿರುವ ಚರ್ಚೆಗಳ ಯಶಸ್ಸಿನ ಆಧಾರದ ಮೇಲೆ, ಇರಾನ್‌ನ ವಿದ್ಯುತ್ ಘಟಕಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಯೋಜಿಸಿದ್ದ ಎಲ್ಲ ಸೈನಿಕ ದಾಳಿಗಳನ್ನು ಐದು ದಿನಗಳ ಕಾಲ ಮುಂದೂಡಲು ರಕ್ಷಣಾ ಇಲಾಖೆಗೆ ನಾನು ನಿರ್ದೇಶನ ನೀಡಿದ್ದೇನೆʼʼ ಎಂದು ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಕೇಂದ್ರಗಳ ಮೇಲೆ ದಾಳಿ ಮಾಡಿದರೆ ತಿರುಗೇಟು ನಿಶ್ಚಿತ: ಇಸ್ರೇಲ್‌ಗೆ ಇರಾನ್ ಎಚ್ಚರಿಕೆ

ಈ ಕ್ರಮವು ತಾತ್ಕಾಲಿಕವಾಗಿದ್ದು, ಮಾತುಕತೆಗಳಲ್ಲಿ ಆಗುವ ಪ್ರಗತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ ಎಂಬ ಷರತ್ತು ಕೂಡ ಇತ್ತು. ಇದರ ಜತೆಗೆ, ಇರಾನ್ ಈ ಯಾವುದೇ ಷರತ್ತುಗಳನ್ನು ಒಪ್ಪಿಕೊಂಡಿದೆ ಎಂಬ ಸೂಚನೆಗಳಿಲ್ಲ. ಅಲ್ಲದೆ ನಿಜವಾಗಿಯೂ ಅಧಿಕೃತ ಮಾತುಕತೆಗಳು ಆರಂಭವಾಗಿವೆ ಎಂಬುದಕ್ಕೂ ಯಾವುದೇ ದೃಢೀಕರಣ ಇಲ್ಲ ಎಂದು ವರದಿಗಳು ತಿಳಿಸಿವೆ.

ಅಮೆರಿಕದ ಹಿಂದಿನ ಎಚ್ಚರಿಕೆಗೆ ಪ್ರತಿಕ್ರಿಯೆಯಾಗಿ ಇರಾನ್ ಸ್ಪಷ್ಟ ಬೆದರಿಕೆಗಳನ್ನು ನೀಡಿದ ಕೆಲವೇ ಗಂಟೆಗಳ ನಂತರ ಈ ಪ್ರಕಟಣೆ ಬಂದಿದೆ. ತಮ್ಮ ಪ್ರದೇಶವು ಮತ್ತಷ್ಟು ದಾಳಿಗೆ ಒಳಗಾದರೆ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್ ಮತ್ತು ಕುವೈತ್‌ನಲ್ಲಿರುವ ಇಸ್ರೇಲ್‌ನ ಎರಡು ದೊಡ್ಡ ವಿದ್ಯುತ್ ಸ್ಥಾವರಗಳು ಮತ್ತು ಸೌಲಭ್ಯಗಳು ಸೇರಿದಂತೆ ಹಲವು ಕಟ್ಟಡಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಸಿದೆ.

ಇರಾನ್ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಬೇಕು. ಇಲ್ಲದಿದ್ದರೆ ಅದರ ವಿದ್ಯುತ್ ಮೂಲ ಸೌಕರ್ಯವನ್ನು ನಾಶ ಮಾಡುವುದಾಗಿ ಟ್ರಂಪ್ 48 ಗಂಟೆಗಳ ಗಡುವು ನೀಡಿದ್ದರು. ಅದಾದ ಬಳಿಕ ಈ ಬೆಳವಣಿಗೆಗಳು ನಡೆದಿದೆ.

ಜಾಗತಿಕ ತೈಲ ಸಾಗಣೆಯ ಸರಿಸುಮಾರು ಐದನೇ ಒಂದು ಭಾಗದಷ್ಟು ತೈಲ ಸಾಗಣೆಗೆ ಚಾಕ್‌ಪಾಯಿಂಟ್ ಆಗಿರುವ ಕಿರಿದಾದ ಜಲಮಾರ್ಗದ ಮೂಲಕ ಟ್ಯಾಂಕರ್ ಸಂಚಾರವನ್ನು ಈಗಾಗಲೇ ನಿರ್ಬಂಧಿಸಿದೆ. ಕೊಲ್ಲಿಯಲ್ಲಿನ ಇಂಧನ ತಾಣಗಳು ಮತ್ತು ಅಮೆರಿಕ ರಾಜತಾಂತ್ರಿಕ ಕಾರ್ಯಾಚರಣೆಗಳ ಮೇಲೆ ಹಾಗೂ ಇಸ್ರೇಲ್‌ನೊಳಗಿನ ಗುರಿಗಳ ಮೇಲೆ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿದೆ.