ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈಟ್‌ಫೀಲ್ಡ್ ನಲ್ಲಿರುವ ಅತಿ ದೊಡ್ಡ ಮಳಿಗೆ ಪುನರ್ ನವೀಕರಿಸಿ ಉದ್ಘಾಟಿಸಿದ ಡೆಕಾಥ್ಲಾನ್

ಇದೊಂದು ಭವಿಷ್ಯ ಸಿದ್ಧ, ಸಂಪೂರ್ಣ ಕ್ರೀಡಾ ವ್ಯವಸ್ಥೆ ಹೊಂದಿರುವ ಮಳಿಗೆಯಾಗಿದ್ದು, ಬೆಂಗಳೂರಿನ ಜನರು ಕ್ರೀಡೆ ಆಡುವ, ಕಲಿಯುವ ಮತ್ತು ಅನುಭವಿಸುವ ರೀತಿಯನ್ನೇ ಬದಲಾಯಿಸಲಿದೆ. ಭಾರತದ ಅತಿ ದೊಡ್ಡ ಮಳಿಗೆಯಾದ ಈ ಮಳಿಗೆಯು 60,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಬಹು-ಕ್ರೀಡಾ ಮೂಲಸೌಕರ್ಯ ವ್ಯವಸ್ಥೆ, ತಜ್ಞರ ತರಬೇತಿ, ಸಮುದಾಯ ಸ್ಥಳಗಳು, ಸುಸ್ಥಿರ ಸೇವೆಗಳು ಮತ್ತು ರಿಟೇಲ್ ಹೊಸತನವನ್ನು ಒಂದೇ ಸೂರಿನಡಿ ಪರಿಚಯಿಸುತ್ತಿದೆ.

ಅತಿ ದೊಡ್ಡ ಮಳಿಗೆ ಪುನರ್ ನವೀಕರಿಸಿ ಉದ್ಘಾಟಿಸಿದ ಡೆಕಾಥ್ಲಾನ್

-

Ashok Nayak
Ashok Nayak Nov 28, 2025 10:27 PM

ಬೆಂಗಳೂರು: ವಿಶ್ವದ ಪ್ರಮುಖ ಬಹು- ಕ್ರೀಡಾ ಬ್ರಾಂಡ್‌ಗಳಲ್ಲಿ ಒಂದಾಗಿರುವ ಡೆಕಾಥ್ಲಾನ್ ಸಂಸ್ಥೆಯು ಇಂದು ವೈಟ್‌ಫೀಲ್ಡ್‌ನಲ್ಲಿದ್ದ ತನ್ನ ಬಹುದೊಡ್ಡ ಮಳಿಗೆಯನ್ನು ಪುನರ್ ನವೀಕರಿಸಿ ಉದ್ಘಾಟಿಸಿದೆ.

ಇದೊಂದು ಭವಿಷ್ಯ ಸಿದ್ಧ, ಸಂಪೂರ್ಣ ಕ್ರೀಡಾ ವ್ಯವಸ್ಥೆ ಹೊಂದಿರುವ ಮಳಿಗೆಯಾಗಿದ್ದು, ಬೆಂಗಳೂರಿನ ಜನರು ಕ್ರೀಡೆ ಆಡುವ, ಕಲಿಯುವ ಮತ್ತು ಅನುಭವಿಸುವ ರೀತಿಯನ್ನೇ ಬದಲಾ ಯಿಸಲಿದೆ. ಭಾರತದ ಅತಿ ದೊಡ್ಡ ಮಳಿಗೆಯಾದ ಈ ಮಳಿಗೆಯು 60,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಬಹು-ಕ್ರೀಡಾ ಮೂಲಸೌಕರ್ಯ ವ್ಯವಸ್ಥೆ, ತಜ್ಞರ ತರಬೇತಿ, ಸಮುದಾಯ ಸ್ಥಳಗಳು, ಸುಸ್ಥಿರ ಸೇವೆಗಳು ಮತ್ತು ರಿಟೇಲ್ ಹೊಸತನವನ್ನು ಒಂದೇ ಸೂರಿನಡಿ ಪರಿಚಯಿಸುತ್ತಿದೆ. ಎಲ್ಲರಿಗೂ ಕ್ರೀಡಾ ವ್ಯವಸ್ಥೆಯನ್ನು ಸುಲಭವಾಗಿ ದೊರಕಿಸುವ ಮತ್ತು ದೇಶಾದ್ಯಂತ ಕೈಗೆಟುಕುವ, ಸಮುದಾಯ ಕೇಂದ್ರಿತ ಕ್ರೀಡಾ ಮೂಲಸೌಕರ್ಯ ನಿರ್ಮಿಸುವ ಡೆಕಾಥ್ಲಾನ್ ನ ಬದ್ಧತೆಗೆ ಈ ಮಳಿಗೆಯು ಬಲ ತುಂಬಲಿದೆ.

ಅಂಗಡಿಯಲ್ಲಿ ಸಂಪೂರ್ಣ “ಆಮ್ನಿ ಸರ್ವೀಸಸ್ ಜೋನ್” ಇದ್ದು, ಅದರಲ್ಲಿ ಸೆಕೆಂಡ್ ಲೈಫ್ (ಪೂರ್ವ ಬಳಕೆಯ ಸಾಮಾಗ್ರಿಗಳ ಮರುಬಳಕೆ), ಲೆವೆಲ್-3 ವರ್ಕ್‌ಶಾಪ್, ವೈಯಕ್ತೀಕರಿಸುವಿಕೆ ಸೌಲಭ್ಯ ಮತ್ತು ಡಿಸೈನ್ ಸ್ಟೇಷನ್‌ ಗಳಿವೆ. ಹೆಚ್ಚು ವಿಸ್ತಾರವಾದ ಟ್ರಯಲ್ ಸ್ಥಳಗಳು, ಆಕರ್ಷಕ ಶೋರೂಮ್‌ ಗಳು ಮತ್ತು “ಟ್ರೈ- ಬೈ” ವಲಯಗಳೂ ಇದ್ದು, ಗ್ರಾಹಕರು ಖರೀದಿಸುವ ಮೊದಲೇ ಸಾಮಾಗ್ರಿಗಳನ್ನು ಪ್ರಯೋಗಿಸಿ ನೋಡಬಹುದು. ಸಮುದಾಯ ಕ್ರೀಡಾ ಕೇಂದ್ರವಾಗಿ ವಿನ್ಯಾಸ ಗೊಂಡಿರುವ ಈ ಮಳಿಗೆಯಲ್ಲಿ ಬಾಸ್ಕೆಟ್‌ಬಾಲ್, ಫುಟ್‌ಬಾಲ್, ಸ್ಕೇಟಿಂಗ್, ಪಿಕಲ್‌ಬಾಲ್ ಮತ್ತು ಜಿಮ್ನಾಸ್ಟಿಕ್ಸ್‌ವಿಭಾಗದಲ್ಲಿ ಮಕ್ಕಳು ಮತ್ತು ದೊಡ್ಡವರಿಗೆ ತರಬೇತಿ ಕೋರ್ಸ್ ಗಳು, ವರ್ಕ್‌ಶಾಪ್‌ಗಳು ನಡೆಯಲಿವೆ. ಜೊತೆಗೆ ಮಕ್ಕಳ ವಲಯ, ಯೋಗ- ನೃತ್ಯ ಸ್ಟುಡಿಯೋ ಲಭ್ಯವಿದೆ. ವಿಶೇಷವಾಗಿ ಪ್ರತೀ ವಾರ ಸೈಕ್ಲಿಂಗ್- ರನ್ನಿಂಗ್ ಗುಂಪಿನ ಮೀಟಿಂಗ್, ಕ್ರೀಡಾ ಜನ್ಮದಿನ ಪಾರ್ಟಿಗಳು ಮತ್ತು ವಿವಿಧ ಕ್ರೀಡೆಗಳ ವರ್ಕ್‌ಶಾಪ್‌ಗಳು ನಡೆಯಲಿವೆ.

ಇದನ್ನೂ ಓದಿ: Bangalore News: ಇಎಂಇಯಲ್ಲಿ ಬ್ರೂಸ್ ಲೀ ಮಣಿಯವರ ಮತ್ತು ಎಂ.ಡಿ. ಪಲ್ಲವಿ ಅವರ ಮಾಸ್ಟರ್‌ಕ್ಲಾಸ್

ಎರಡು ಮಹಡಿಯ ಈ ಮಳಿಗೆಯ ಮೊದಲ ಮಹಡಿಯಲ್ಲಿ 29,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ, ಸಂಪೂರ್ಣ ಏರ್ ಕಂಡಿಷನ್ಡ್ ಬಹು- ಕ್ರೀಡಾ ಕೋರ್ಟ್ ಗಳಿವೆ. ಅವುಗಳ ಸುತ್ತಲೂ ಆಕರ್ಷಕ ಉತ್ಪನ್ನ ಶೋರೂಮ್‌ಗಳಿವೆ. ಗ್ರಾಹಕರು ಖರೀದಿಸುವ ಮೊದಲೇ ಇಲ್ಲಿ ಉತ್ಪನ್ನಗಳನ್ನು ಪ್ರಯೋಗಿಸಿ, ಪರೀಕ್ಷಿಸಿ ನೋಡಬಹುದು. ನಾವೀನ್ಯತೆಯ ಪ್ರಯೋಗ ಕ್ಷೇತ್ರವಾಗಿರುವ ಈ ಆಕರ್ಷಕ ಮಳಿಗೆಯು ಆರ್ ಎಫ್ ಐ ಡಿ ತಂತ್ರಜ್ಞಾನ, ಮೊಬೈಲ್ ಚೆಕೌಟ್ ಮತ್ತು ಏಕೀಕೃತ ವಾಣಿಜ್ಯ ಮಾದರಿಯನ್ನು ಒಳಗೊಂಡಿದೆ. ಡೆಕಾಥ್ಲಾನ್ ಆಪ್, ವೆಬ್‌ಸೈಟ್ ಮತ್ತು ಮಳಿಗೆಯನ್ನು ಒಂದೇ ರೀತಿ ಸಂಪರ್ಕಿಸಲಾಗಿದ್ದು, ಪ್ರತೀ ಗ್ರಾಹಕನಿಗೂ ಸುಲಭ ಮತ್ತು ಸಂಯೋಜಿತ ಕ್ರೀಡಾ ಅನುಭವ ನೀಡುತ್ತದೆ.

ಈ ಮಳಿಗೆ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಡೆಕಾಥ್ಲಾನ್ ಇಂಡಿಯಾದ ಸಿಇಓ ಸಂಕರ್ ಚಟರ್ಜಿ ಅವರು, “ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಕ್ರೀಡಾ ಕ್ಷೇತ್ರವು ತುಂಬಾ ಬದಲಾಗಿದೆ. ನಾವು ಆ ಬದಲಾವಣೆಯನ್ನು ಸಮೀಪದಿಂದಲೇ ನೋಡಿದ್ದೇವೆ. ಕೆಪಿಎಂಜಿ ವರದಿ ಪ್ರಕಾರ ‘ಪೇ-ಆಂಡ್-ಪ್ಲೇ’ (ಟರ್ಫ್) ಉದ್ಯಮ ತೀವ್ರವಾಗಿ ಬೆಳೆಯುತ್ತಿದೆ. ಹೆಚ್ಚು ಜನರು ಸ್ವಯಂ ಪ್ರೇರಿತವಾಗಿ ಕ್ರೀಡೆ ಆಡಲು ಮುಂದಾಗುತ್ತಿದ್ದಾರೆ. ಈ ಬೆಳವಣಿಗೆಯು ನಮ್ಮ ಆಟದ ಮೈದಾನಗಳ ಮೂಲಕ ಕ್ರೀಡಾ ವ್ಯವಸ್ಥೆಯನ್ನು ಬಲಪಡಿಸುವ ನಮ್ಮ ಉದ್ದೇಶಕ್ಕೆ ಇನ್ನಷ್ಟು ಬಲ ತುಂಬಿದೆ. ಈ ಮೂಲಕ ನಾವು ಕುಟುಂಬಗಳು ಮತ್ತು ಬಂಧು ಬಳಗ ಒಟ್ಟಾಗಿ ಸೇರುವ ಆಕರ್ಷಕ, ಬಹು-ಕ್ರೀಡಾ ಸ್ಥಳವನ್ನು ರೂಪುಗೊಳಿಸಲಿದ್ದೇವೆ" ಎಂದು ಹೇಳಿದರು.

ಮಾತು ಮುಂದುವರಿಸಿದ ಅವರು, “ಈ ಪುನರ್ ನವೀಕರಣದ ಮೂಲಕ ನಾವು ‘ಆಧುನೀಕರಣ’ ಎಂದರೇನು ಎಂಬುದನ್ನೇ ಮರು ವ್ಯಾಖ್ಯಾನಿಸುತ್ತಿದ್ದೇವೆ. ಈ ನವೀಕರಣವು ತಂತ್ರಜ್ಞಾನ ಮತ್ತು ವಾಸ್ತು ಅಪ್‌ ಗ್ರೇಡ್‌ ಗಿಂತ ಮೀರಿದ್ದಾಗಿದ್ದು, ನಮ್ಮ ಭೌತಿಕ ರಿಟೇಲ್ ಶಕ್ತಿಯನ್ನು ಡಿಜಿಟಲ್ ಮತ್ತು ಸುಸ್ಥಿರ ಸಾಮರ್ಥ್ಯಗಳೊಂದಿಗೆ ಸಂಯೋಜಿಸಿದ್ದೇವೆ. ಇಲ್ಲಿ ದುರಸ್ತಿ, ಮರುಮಾರಾಟ, ಮರುಖರೀದಿ ವ್ಯವಸ್ಥೆಯನ್ನೂ ಪರಿಚಯಿಸುತ್ತಿದ್ದೇವೆ. ಪ್ರತೀ ಡೆಕಾಥ್ಲಾನ್ ಮಳಿಗೆಯನ್ನೂ ಆಕರ್ಷಕ, ಸುಸ್ಥಿರ ಮತ್ತು ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಮತ್ತು ಭೂಮಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುವಂತೆ ಮಾಡುವುದೇ ನಮ್ಮ ಗುರಿಯಾಗಿದೆ” ಎಂದು ತಿಳಿಸಿದರು.

ಡೆಕಾಥ್ಲಾನ್ ಇಂಡಿಯಾದ ರಿಟೇಲ್ ಲೀಡರ್ ಶ್ರೀ ಗಿಲ್ಲೆಸ್ ಗೌಡೆಮಾರ್ಡ್ ಅವರು ಮಾತನಾಡಿ, “ಭಾರತದ ಕ್ರೀಡಾ ರಿಟೇಲ್ ವಲಯ ತೀವ್ರವಾಗಿ ಬದಲಾಗುತ್ತಿದೆ. ಹೊಸ ತಲೆಮಾರಿನ ಬಳಕೆದಾರರು ಸುಲಭ ಲಭ್ಯತೆ, ತಜ್ಞರ ಮಾರ್ಗದರ್ಶನ ಮತ್ತು ಮಳಿಗೆಯೊಳಗೇ ಆಕರ್ಷಕ ಅನುಭವ ಬಯಸು ತ್ತಾರೆ. ಈ ಮಳಿಗೆಯ ಪುನರ್ ನವೀಕರಣ ಭವಿಷ್ಯದತ್ತ ಒಂದು ವಿನೂತನ ಹೆಜ್ಜೆಯಾಗಿದ್ದು, ಆಕರ್ಷಕ ಅನುಭವ, ತಜ್ಞ ಮಾರ್ಗದರ್ಶನ ಮತ್ತು ಎಲ್ಲಾ ಚಾನಲ್‌ ಗಳ ಸೌಲಭ್ಯಕ್ಕೆ ಆದ್ಯತೆ ನೀಡುವ ಉನ್ನತ ರಿಟೇಲ್ ಸ್ವರೂಪವನ್ನು ಪರಿಚಯಿಸಲಾಗುತ್ತಿದೆ. ಬೆಂಗಳೂರು ಯಾವಾಗಲೂ ಟ್ರೆಂಡ್ ನಲ್ಲಿ ಮುಂದಿದ್ದು, ಈ ವಿಸ್ತರಣಾ ಕಾರ್ಯವು ಚುರುಕಾಗಿ ಮತ್ತು ವೇಗವಾಗಿ ಬೆಳೆಯು ತ್ತಿರುವ ಕ್ರೀಡಾ ಸಮುದಾಯಕ್ಕೆ ಸೇವೆ ಸಲ್ಲಿಸುವ ನಮ್ಮ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತದೆ” ಎಂದು ಹೇಳಿದರು.

ಡೆಕಾಥ್ಲಾನ್ ನ ಸರ್ಕುಲರ್ ಬಿಸಿನೆಸ್ ಯೋಜನೆಗಳ ಮೂಲಕ ಮರುಖರೀದಿ ಮತ್ತು ಸೆಕೆಂಡ್ ಲೈಫ್ ಕಾರ್ಯಕ್ರಮ (ಪೂರ್ವ ಬಳಕೆಯ ಸಾಮಗ್ರಿಗಳಿಗೆ ಹೊಸ ಜೀವ ನೀಡುವುದು), ತಜ್ಞರ ದುರಸ್ತಿ ಸೇವೆಗಳು ಸೇರಿದಂತೆ ಪರಿಸರ ಸ್ನೇಹಿ ಸೇವೆಗಳೆಲ್ಲವೂ ಒಂದೇ ಸೂರಿನಡಿ ಸಿಗುತ್ತವೆ. “ಬದಲಾಯಿಸದೆ ದುರಸ್ತಿ ಮಾಡಿ” ಎಂಬ ಪರಿಕಲ್ಪನೆಯನ್ನು ಈ ನಿರ್ವಹಣಾ ಸೇವೆಗಳು ಪ್ರೋತ್ಸಾಹಿಸುತ್ತದೆ. ನಡಿಗೆ ಮತ್ತು ಸೈಕ್ಲಿಂಗ್‌ ಗೆ ಪ್ರೋತ್ಸಾಹ ನೀಡುವ ಪರಿಸರ ಸ್ನೇಹಿ ಸಂಚಾರ ಸೌಕರ್ಯಗಳೂ ಇವೆ. ತ್ಯಾಜ್ಯ ನಿರ್ವಹಣೆ ಮತ್ತು ಶಕ್ತಿ ಬಳಕೆಯಲ್ಲಿ ಜವಾಬ್ದಾರಿಯುತ ಕಾರ್ಯಾಚರಣೆಗಳೊಂದಿಗೆ ಸುಸ್ಥಿರ ಆಯ್ಕೆಗಳನ್ನು ಸರಳ, ಸುಲಭ ಮತ್ತು ಪ್ರೋತ್ಸಾಹಕರವಾಗಿಸುತ್ತದೆ. ಇದು ನಿಜವಾಗಿಯೂ ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಳ್ಳುವ ಕ್ರೀಡಾ ಭವಿಷ್ಯವನ್ನು ರೂಪಿಸುವ ಡೆಕಾಥ್ಲಾನ್ ನ ದೂರದೃಷ್ಟಿ ಯನ್ನು ಪ್ರತಿಬಿಂಬಿಸುತ್ತದೆ.

2012ರಲ್ಲಿ ಆರಂಭವಾದ ವೈಟ್‌ಫೀಲ್ಡ್ ನ ಈ ಮಳಿಗೆಯು ಭಾರತದಲ್ಲಿ ಆರಂಭಿಸಲಾದ ಬ್ರಾಂಡ್‌ ನ ಆರಂಭಿಕ ಮಳಿಗೆಗಳಲ್ಲಿ ಒಂದಾಗಿದೆ. ಈವರೆಗೆ 11 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಸ್ವಾಗತಿಸಿದೆ. ಗುಣಮಟ್ಟದ, ಕೈಗೆಟುಕುವ ದರದ ಸಾಮಾಗ್ರಿಗಳನ್ನು ಎಲ್ಲರಿಗೂ ಒದಗಿಸುವ ಡೆಕಾಥ್ಲಾನ್ ನ ಪಯಣದಲ್ಲಿ ಪ್ರತಿಯೊಬ್ಬ ಗ್ರಾಹಕರು ಪಾಲುದಾರರಾಗಿದ್ದಾರೆ.