Samsung: ಆಕರ್ಷಕ ವಿನ್ಯಾಸ, ಎಐ ಫೀಚರ್ ಗಳು, ಉತ್ತಮ ಬಾಳಿಕೆ ಮತ್ತು ಓಐಎಸ್ ಆಧರಿತ ನೋ ಶೇಕ್ ಕ್ಯಾಮೆರಾ ಹೊಂದಿರುವ ಗ್ಯಾಲಕ್ಸಿ ಎ17 5ಜಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್
ಗ್ಯಾಲಕ್ಸಿ ಎ17 5ಜಿ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ಎ ಸರಣಿಯ ಪರಂಪರೆಯ ಮುಂದುವರಿಕೆ ಯಾಗಿದ್ದು, ಭಾರತದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಹೊಸತನಗಳನ್ನು ಒದಗಿಸುತ್ತದೆ. ಈ ಫೋನ್ ಆಕರ್ಷಕ ವಿನ್ಯಾಸ, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಸ್ಮಾರ್ಟ್ ಎಐ ಫೀಚರ್ ಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತದೆ.

-

ಗ್ಯಾಲಕ್ಸಿ ಎ17 5ಜಿ ಸ್ಮಾರ್ಟ್ ಫೋನ್ ಜನಪ್ರಿಯ ಎಐ ಫೀಚರ್ ಗಳಾದ ಸರ್ಕಲ್ ಟು ಸರ್ಚ್ ಮತ್ತು ಜೆಮಿನಿ ಲೈವ್ ಹೊಂದಿದೆ. ಭಾರತದಲ್ಲಿ ಅಭಿವೃದ್ಧಿಪಡಿಸಲಾದ ‘ಮೇಕ್ ಫಾರ್ ಇಂಡಿಯಾ’ ಫೀಚರ್ ಆದ ಆನ್-ಡಿವೈಸ್ ವಾಯ್ಸ್ ಮೇಲ್ ಫೀಚರ್ ಗ್ಯಾಲಕ್ಸಿ ಎ17 5ಜಿ ನಲ್ಲಿ ಲಭ್ಯವಿದೆ.
ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎ ಸರಣಿಯ ಅತ್ಯಂತ ಕೈಗೆಟುಕುವ ಬೆಲೆಯ ಎಐ ಸ್ಮಾರ್ಟ್‌ಫೋನ್ ಆಗಿರುವ ಗ್ಯಾಲಕ್ಸಿ ಎ17 5ಜಿ ಅನ್ನು ಇಂದು ಬಿಡುಗಡೆ ಮಾಡಿದೆ. ಕೇವಲ 7.5 ಮಿಮೀ ದಪ್ಪ ಇರುವ ಗ್ಯಾಲಕ್ಸಿ ಎ17 5ಜಿ ತನ್ನ ವಿಭಾಗದಲ್ಲಿಯೇ ಅತ್ಯಂತ ತೆಳ್ಳಗಿನ ಸ್ಮಾರ್ಟ್‌ಫೋನ್ ಆಗಿದೆ. ಇದರ ತೂಕ ಕೇವಲ 192 ಗ್ರಾಂ ಆಗಿದ್ದು, ಇದರಿಂದ ಈ ಫೋನ್ ಬಳಕೆಗೆ ಮತ್ತು ಹಿಡಿದುಕೊಳ್ಳಲು ಆರಾಮದಾಯಕ ಅನುಭವ ಒದಗಿಸುತ್ತದೆ. ಗ್ಯಾಲಕ್ಸಿ ಎ16 5ಜಿಯ ಯಶಸ್ಸಿನ ಆಧಾರದಲ್ಲಿ ಈ ಫೋನ್ ನಿರ್ಮಿಸ ಲಾಗಿದ್ದು, ಈ ಫೋನ್ ಭಾರತದಲ್ಲಿ ಸ್ಯಾಮ್‌ಸಂಗ್‌ನ ಅತ್ಯಂತ ಜನಪ್ರಿಯ ಬೆಸ್ಟ್ ಸೆಲ್ಲರ್ ಸ್ಮಾರ್ಟ್ ಫೋನ್‌ಗಳಲ್ಲಿ ಒಂದಾಗಿರಲಿದೆ.
ಗ್ಯಾಲಕ್ಸಿ ಎ17 5ಜಿ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ಎ ಸರಣಿಯ ಪರಂಪರೆಯ ಮುಂದುವರಿಕೆ ಯಾಗಿದ್ದು, ಭಾರತದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಹೊಸತನಗಳನ್ನು ಒದಗಿಸುತ್ತದೆ. ಈ ಫೋನ್ ಆಕರ್ಷಕ ವಿನ್ಯಾಸ, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಸ್ಮಾರ್ಟ್ ಎಐ ಫೀಚರ್ ಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತದೆ. ಉತ್ತಮ ಎಐ ಫೀಚರ್ ಗಳು, ಡಿಸ್‌ಪ್ಲೇ, ಕ್ಯಾಮೆರಾ, ಭದ್ರತೆ, ಕರೆ ಸೌಲಭ್ಯ ಮತ್ತು ಓಎಸ್ ಅಪ್‌ಗ್ರೇಡ್ ಗಳೊಂದಿಗೆ ಈ ಫೋನ್ ಹಬ್ಬದ ಕಾಲದಲ್ಲಿ ಬಂದಿರುವ ಸ್ಯಾಮ್‌ಸಂಗ್‌ನ ಅತ್ಯುತ್ತಮ ಕೊಡುಗೆಯಾಗಿದೆ.
ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್ ನ ಸೀನಿಯರ್ ವೈಸ್ ಪ್ರೆಸಿಡೆಂಟ್ ರಾಜು ಪುಲ್ಲನ್ ಅವರು, “ಕೈಗೆಟುಕುವ ಬೆಲೆಯಲ್ಲಿ ವಿನೂತನ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಒದಗಿಸುವ ಪರಂಪರೆ ಹೊಂದಿರುವ ಗ್ಯಾಲಕ್ಸಿ ಎ ಸರಣಿಯು ನಮ್ಮ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಸರಣಿಯಾಗಿದೆ. ಗ್ಯಾಲಕ್ಸಿ ಎ17 5ಜಿ ನಮ್ಮ ಅತ್ಯಂತ ಕೈಗೆಟುಕುವ ಎಐ ಸ್ಮಾರ್ಟ್‌ಫೋನ್ ಆಗಿದ್ದು, ಸರ್ಕಲ್ ಟು ಸರ್ಚ್ ಮತ್ತು ಜೆಮಿನಿ ಲೈವ್ ನಂತಹ ಜನಪ್ರಿಯ ಎಐ ಫೀಚರ್ ಗಳನ್ನು ಒಳಗೊಂಡಿದೆ. ಇದರ ಜೊತೆಗೆ, ಭಾರತೀಯ ಎಂಜಿನಿಯರ್ ಗಳು ಅಭಿವೃದ್ಧಿ ಪಡಿಸಿರುವ ಆನ್-ಡಿವೈಸ್ ವಾಯ್ಸ್ ಮೇಲ್ ಫೀಚರ್ ಕರೆ ಸೌಲಭ್ಯವನ್ನು ಆನಂದದಾಯಕ ಗೊಳಿಸುತ್ತದೆ. ಈ ಫೋನ್ ಈ ಹಬ್ಬದ ಸಮಯಕ್ಕೆ ನಮ್ಮ ಪ್ರಮುಖ ಕೊಡುಗೆಯಾಗಿದ್ದು, ಇದರ ಯಶಸ್ಸಿನಿಂದ ಈ ವರ್ಷದ ಕೊನೆಯ ವೇಳೆಗೆ 100 ಮಿಲಿಯನ್ ಸಂತೋಷಕರ ಗ್ಯಾಲಕ್ಸಿ ಎ ಸರಣಿಯ ಗ್ರಾಹಕರನ್ನು ಹೊಂದುವ ವಿಶ್ವಾಸವಿದೆ” ಎಂದು ಹೇಳಿದರು.
ಎಲ್ಲರಿಗೂ ಎಐ
ಗ್ಯಾಲಕ್ಸಿ ಎ17 5ಜಿ ಸರ್ಕಲ್ ಟು ಸರ್ಚ್ ಫೀಚರ್ ಅನ್ನು ಒಳಗೊಂಡಿದ್ದು, ಈ ಮೂಲಕ ಗ್ಯಾಲಕ್ಸಿ ವಿಭಾಗದ ಬಹುತೇಕ ಡಿವೈಸ್ ಗಳಿಗೆ ಮೊಬೈಲ್ ಎಐ ಅನ್ನು ಒದಗಿಸಿದಂತಾಗುತ್ತದೆ. ಸ್ಯಾಮ್‌ಸಂಗ್- ಗೂಗಲ್ ಸಹಭಾಗಿತ್ವದಲ್ಲಿ ನಿರ್ಮಿತವಾದ ಈ ಫೀಚರ್, ಚಿತ್ರಗಳು, ಪಠ್ಯಗಳು ಮತ್ತು ಸಂಗೀತವನ್ನು ಸರ್ಚ್ ಮಾಡಲು ವಿಶೇಷ ಸೌಲಭ್ಯ ಒದಗಿಸುತ್ತದೆ. ಇದರ ಜೊತೆಗೆ, ಜೆಮಿನಿ ಲೈವ್ ಮೂಲಕ ಹೊಸ ಎಐ ಅನುಭವವನ್ನು ಒದಗಿಸುತ್ತದೆ. ಜೆಮಿನಿ ಲೈನ್ ಗ್ಯಾಲಕ್ಸಿ ಬಳಕೆದಾರರಿಗೆ ಎಐ ಬಳಕೆಯನ್ನು ಸುಲಭವಾಗಿಸುತ್ತದೆ. ಎಐ ಶಕ್ತಿಯ ಸಹಾಯದಿಂದ ಗ್ಯಾಲಕ್ಸಿ ಎ17 5ಜಿ ಬಳಕೆದಾರರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಬಹುದು. ಇದು ಗ್ಯಾಲಕ್ಸಿ ಸ್ಮಾರ್ಟ್ ಫೋನ್ ಗಳಲ್ಲಿಯೇ ಮೊದಲ ಬಾರಿಗೆ ಆನ್-ಡಿವೈಸ್ ವಾಯ್ಸ್ ಮೇಲ್ ಫೀಚರ್ ಅನ್ನು ಒಳಗೊಂಡಿದ್ದು, ಈ ಫೀಚರ್ ಕರೆಗೆ ಉತ್ತರಿಸಲು ಸಾಧ್ಯವಾಗದ್ದಾಗ ಕರೆ ಮಾಡುವವರಿಗೆ ಸಂದೇಶವನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ.
ಅದ್ಭುತ ನೋ ಶೇಕ್ ಕ್ಯಾಮೆರಾ ಮತ್ತು ಸೂಪರ್ ಅಮೋಲ್ಡ್ ಡಿಸ್‌ಪ್ಲೇ
ಗ್ಯಾಲಕ್ಸಿ ಎ17 5ಜಿ ಸ್ಮಾರ್ಟ್ ಫೋನ್ 50ಎಂಪಿಯ ಮೇನ್ ಕ್ಯಾಮೆರಾದೊಂದಿಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಓಐಎಸ್) ಅನ್ನು ಒಳಗೊಂಡಿದ್ದು, ಇದನ್ನು ನೋ ಶೇಕ್ ಕ್ಯಾಮ್ ಎಂದು ಕರೆಯಲಾಗುತ್ತದೆ. ಈ ತಂತ್ರಜ್ಞಾನವು ಕಷ್ಟದ ಪರಿಸ್ಥಿತಿಗಳಲ್ಲಿಯೂ ಬ್ಲರ್ ಆಗಿಲ್ಲದ ವೀಡಿಯೊಗಳು ಮತ್ತು ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಇದರ ಜೊತೆಗೆ 5 ಎಂಪಿಯ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮ್ಯಾಕ್ರೋ ಲೆನ್ಸ್ ಇದ್ದು, ವಿಶಾಲವಾದ ಲ್ಯಾಂಡ್ ಸ್ಕೇಪ್ ಫೋಟೋ ಗಳಿಂದ ಹಿಡಿದು ಆಕರ್ಷಕವಾದ ಕ್ಲೋಸ್-ಅಪ್ ಗಳವರೆಗೆ ವಿವಿಧ ರೀತಿಯ ಫೋಟೋ ತೆಗೆಯಲು ಅನುವು ಮಾಡಿಕೊಡುತ್ತದೆ. ಈ ಫೋನ್ 6.7" ಫುಲ್ ಎಚ್ ಡಿ+ ಸೂಪರ್ ಅಮೋಲ್ಡ್ ಡಿಸ್ ಪ್ಲೇಯೊಂದಿಗೆ ದೊರಕುತ್ತಿದ್ದು, ಹೊರಾಂಗಣದಲ್ಲಿ ಅತ್ಯಂತ ಪ್ರಖರ ಹಿಸಿಲಿದ್ದರೂ ಡಿಸ್ ಪ್ಲೇ ಸ್ಪಷ್ಟ ಮತ್ತು ಆಕರ್ಷಕ ಗುಣಮಟ್ಟದ ದೃಶ್ಯ ವೀಕ್ಷಣೆಗೆ ಅನುವು ಮಾಡಿಕೊಡುತ್ತದೆ.
ದೀರ್ಘ ಬಾಳಿಕೆ ಮತ್ತು ಸಂಪೂರ್ಣ ಸುರಕ್ಷೆ
ಗ್ಯಾಲಕ್ಸಿ ಎ17 5ಜಿ ಸ್ಮಾರ್ಟ್ ಫೋನ್ ಕಾರ್ನಿಂಗ್® ಗೊರಿಲ್ಲಾ® ಗ್ಲಾಸ್ ವಿಕ್ಟಸ್® (ಮುಂಭಾಗದಲ್ಲಿ) ಮತ್ತು ಐಪಿ54 ಧೂಳು ಮತ್ತು ಸ್ಪ್ಲಾಶ್ ರೆಸಿಸ್ಟೆನ್ಸ್ ರೇಟಿಂಗ್ ಹೊಂದಿದ್ದು, ಅತ್ಯುತ್ತಮ ಬಾಳಿಕೆ ಬರಲಿದೆ. ಉದ್ಯಮದ ಮಾನದಂಡಗಳನ್ನು ಮೀರಿಸುವ ಈ ಫೋನ್, 6ಜನರೇಷನ್ ನ ಆಂಡ್ರಾಯ್ಡ್ ಅಪ್ ಗ್ರೇಡ್ ಗಳು ಮತ್ತು 6 ವರ್ಷಗಳ ಭದ್ರತಾ ಅಪ್ ಡೇಟ್ ಗಳನ್ನು ನೀಡುತ್ತದೆ. ಈ ಫೋನ್ ಒನ್ ಯುಐ 7 ಹೊಂದಿದೆ.
ಅದ್ಭುತ ಕಾರ್ಯಕ್ಷಮತೆ
5ಎನ್ಎಂ ಎಕ್ಸಿನೋಸ್ 1330 ಪ್ರೊಸೆಸರ್ ನಿಂದ ಚಾಲಿತವಾದ ಗ್ಯಾಲಕ್ಸಿ ಎ17 5ಜಿ, ವೇಗವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ವಿದ್ಯುತ್ ದಕ್ಷತೆ ಹೊಂದಿದೆ. 5000 ಎಂಎಎಚ್ ಬ್ಯಾಟರಿ ಹೊಂದಿದ್ದು, ಇದು ಬ್ರೌಸಿಂಗ್, ಗೇಮಿಂಗ್ ಮತ್ತು ಬಿಂಜ್ ವಾಚಿಂಗ್ ಗೆ ನೆರವಾಗಲು ದೀರ್ಘಕಾಲದ ಬಳಕೆಗೆ ಸೂಕ್ತವಾಗಿದೆ. 25ವಾರ್ಪ್ ಫಾಸ್ಟ್ ಚಾರ್ಜಿಂಗ್ ಹೊಂದಿದ್ದು, ಕಡಿಮೆ ಸಮಯದಲ್ಲಿ ಹೆಚ್ಚಿನ ಚಾರ್ಜಿಂಗ್ ಮಾಡಬಹುದಾಗಿದೆ.
ಲಭ್ಯತೆ, ಬೆಲೆ ಮತ್ತು ಆಫರ್ ಗಳು
ನೀಲಿ, ಬೂದು ಮತ್ತು ಕಪ್ಪು ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಗ್ಯಾಲಕ್ಸಿ ಎ17 5ಜಿ, ಇಂದಿನಿಂದ ರಿಟೇಲ್ ಅಂಗಡಿಗಳು, ಸ್ಯಾಮ್‌ಸಂಗ್ ಎಕ್ಸ್ ಕ್ಲೂಸಿವ್ ಸ್ಟೋರ್‌ಗಳು, Samsung.com ಮತ್ತು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ. ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 2ಟಿಬಿ ವರೆಗಿನ ಹೆಚ್ಚುವರಿ ಸ್ಟೋರೇಜ್ ಬಳಕೆಗೆ ಈ ಫೋನ್ ಸಪೋರ್ಟ್ ಮಾಡುತ್ತಿದ್ದು, ಆಪ್ ಗಳಿಗೆ, ಫೋಟೋಗಳಿಗೆ ಬೇಕಾದಷ್ಟು ಜಾಗವನ್ನು ಒದಗಿಸುತ್ತದೆ.
ಉತ್ಪನ್ನ ವೇರಿಯೆಂಟ್ ಬೆಲೆ ಆಫರ್ ಗಳು
ಗ್ಯಾಲಕ್ಸಿ ಎ17 5ಜಿ 6ಜಿಬಿ+128ಜಿಬಿ ರೂ. 18999
• ಎಚ್ ಡಿ ಎಫ್ ಸಿ ಮತ್ತು ಎಸ್ ಬಿ ಐ ಬ್ಯಾಂಕ್ ನೊಂದಿಗೆ ₹1000 ಕ್ಯಾಶ್‌ಬ್ಯಾಕ್ ಅಥವಾ ಯುಪಿಐ ಮೂಲಕ ₹1000 ಕ್ಯಾಶ್‌ಬ್ಯಾಕ್
- 10 ತಿಂಗಳವರೆಗೆ ಶೂನ್ಯ ಬಡ್ಡಿ, ಶೂನ್ಯ ಡೌನ್ ಪೇಮೆಂಟ್ ಮತ್ತು ಶೂನ್ಯ ಪ್ರೊಸೆಸಿಂಗ್ ಶುಲ್ಕ ಇರುವ ಇಎಂಐ ಸೌಲಭ್ಯ
- 8ಜಿಬಿ+128ಜಿಬಿ ರೂ. 20499
8ಜಿಬಿ+256ಜಿಬಿ ರೂ. 23499