cholesterol: ಎಲ್‌ಡಿಎಲ್ ಕೊಲೆಸ್ಟ್ರಾಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಕುರಿತು ಪ್ರತಿಯೊಬ್ಬರೂ ವೈದ್ಯರನ್ನು ಕೇಳಬೇಕಾದ 3 ಪ್ರಮುಖ ಪ್ರಶ್ನೆಗಳು
ದೇಶಾದ್ಯಂತ ಹೃದಯಾಘಾತದಂತಹ ಗಂಭೀರ ಹೃದಯ ಸಂಬಂಧಿ ಸಮಸ್ಯೆಗಳು ಯುವಜನರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ ವೈದ್ಯಕೀಯ ತಜ್ಞರು ಇದೀಗ ಪ್ರಮುಖ ಎಚ್ಚರಿಕೆ ಯೊಂದನ್ನು ನೀಡುತ್ತಿದ್ದಾರೆ. ಅದೇನೆಂದರೆ, ಭಾರತದ ಯುವ ಪೀಳಿಗೆಯಲ್ಲಿ ಹೆಚ್ಚಿನ ಎಲ್‌ಡಿಎಲ್ ಕೊಲೆಸ್ಟ್ರಾಲ್ (ಇದನ್ನು ಸಾಮಾನ್ಯ ಭಾಷೆಯಲ್ಲಿ "ಕೆಟ್ಟ ಕೊಲೆಸ್ಟ್ರಾಲ್" ಎಂದೂ ಕರೆಯಲಾಗುತ್ತದೆ) ಕಂಡುಬರು ತ್ತಿದ್ದು, ಇದೊಂದು ಸದ್ದಿಲ್ಲದೆ ಪ್ರಾಣಕ್ಕೆ ಎರವಾಗುವ ಅಪಾಯಕಾರಿ ಸಮಸ್ಯೆಯಾಗಿದೆ ಎಂಬುದು.
-
18 ವರ್ಷ ವಯಸ್ಸಿನಿಂದಲೇ ನಿಯಮಿತ ಲಿಪಿಡ್ ಪ್ರೊಫೈಲ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಹೃದ್ರೋಗ ತಜ್ಞರ ಶಿಫಾರಸು; ನಿಮ್ಮ ಮುಂದಿನ ಹೃದಯ ತಪಾಸಣೆಯನ್ನು ಹೆಚ್ಚು ಫಲಪ್ರದ ವಾಗಿಸಿಕೊಳ್ಳುವ ಕುರಿತ ಬರಹ.
ದೇಶಾದ್ಯಂತ ಹೃದಯಾಘಾತದಂತಹ ಗಂಭೀರ ಹೃದಯ ಸಂಬಂಧಿ ಸಮಸ್ಯೆಗಳು ಯುವಜನರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ ವೈದ್ಯಕೀಯ ತಜ್ಞರು ಇದೀಗ ಪ್ರಮುಖ ಎಚ್ಚರಿಕೆ ಯೊಂದನ್ನು ನೀಡುತ್ತಿದ್ದಾರೆ. ಅದೇನೆಂದರೆ, ಭಾರತದ ಯುವ ಪೀಳಿಗೆಯಲ್ಲಿ ಹೆಚ್ಚಿನ ಎಲ್‌ಡಿಎಲ್ ಕೊಲೆಸ್ಟ್ರಾಲ್ (ಇದನ್ನು ಸಾಮಾನ್ಯ ಭಾಷೆಯಲ್ಲಿ "ಕೆಟ್ಟ ಕೊಲೆಸ್ಟ್ರಾಲ್" ಎಂದೂ ಕರೆಯ ಲಾಗುತ್ತದೆ) ಕಂಡುಬರುತ್ತಿದ್ದು, ಇದೊಂದು ಸದ್ದಿಲ್ಲದೆ ಪ್ರಾಣಕ್ಕೆ ಎರವಾಗುವ ಅಪಾಯಕಾರಿ ಸಮಸ್ಯೆಯಾಗಿದೆ ಎಂಬುದು.
"ನನಗೆ 30ರ ಆಸುಪಾಸಿನ ವಯಸ್ಸು. ನಿತ್ಯ ತಪ್ಪದೆ ಕಠಿಣ ವ್ಯಾಯಾಮ ಮಾಡುತ್ತೇನೆ ಹಾಗೂ ಪೌಷ್ಟಿಕ ಸಮತೋಲಿತ ಆಹಾರವನ್ನೇ ಸೇವಿಸುತ್ತೇನೆ" ಎಂದು ಮುಂಬೈ ಮೂಲದ ರಾಹುಲ್ [ಹೆಸರು ಬದಲಾಯಿಸಲಾಗಿದೆ] ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. "ವಾಡಿಕೆಯ ಸಾಮಾನ್ಯ ಆರೋಗ್ಯ ತಪಾಸಣೆಯಲ್ಲಿ ನನಗೆ ಅಧಿಕ ಎಲ್‌ಡಿಎಲ್-ಸಿ ಇರುವುದು ಪತ್ತೆಯಾದಾಗ ನಾನು ಸಂಪೂರ್ಣ ದಿಗ್ಭ್ರಮೆಗೊಂಡೆ ಮತ್ತು ಆಶ್ಚರ್ಯಚಕಿತನಾದೆ.
ಇದನ್ನೂ ಓದಿ: Health Tips: ಪರಿಮಳಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ! ಅದ್ಭುತ ಆರೋಗ್ಯ ಲಾಭವನ್ನು ಹೊಂದಿದೆ ಏಲಕ್ಕಿ!
ಎಲ್‌ಡಿಎಲ್ ಕೊಲೆಸ್ಟ್ರಾಲ್ ಹೆಚ್ಚಾಗಲು ಕೇವಲ ಆಹಾರವಷ್ಟೇ ಅಲ್ಲದೆ ಹಲವಾರು ವೈದ್ಯಕೀಯ ಕಾರಣಗಳಿರಬಹುದು ಎಂದು ನನ್ನ ಹೃದ್ರೋಗ ತಜ್ಞರು ಸಮಾಧಾನದಿಂದ ವಿವರಿಸಿದರು. ಅಲ್ಲದೆ ನನ್ನ ಆರೋಗ್ಯಕರ ಜೀವನಶೈಲಿಯ ಜತೆಗೆ ವೈದ್ಯಕೀಯ ಚಿಕಿತ್ಸೆಯನ್ನು ತಪ್ಪದೇ ಮುಂದುವರಿಸಲು ಧೈರ್ಯ ತುಂಬಿದರು" ಎಂದು ಅವರು ಹೇಳುತ್ತಾರೆ.
ಪ್ರತಿಯೊಬ್ಬರೂ ತಮ್ಮ 18 ವರ್ಷ ವಯಸ್ಸಿನಿಂದಲೇ ನಿಯಮಿತ ಲಿಪಿಡ್ ಪ್ರೊಫೈಲ್ ತಪಾಸಣೆ ಗಳನ್ನು ಆರಂಭಿಸಬೇಕು. ಏಕೆಂದರೆ ಆರಂಭಿಕ ಹಂತದಲ್ಲೇ ರೋಗಲಕ್ಷಣಗಳನ್ನು ಪತ್ತೆಹಚ್ಚುವು ದರಿಂದ ಸೂಕ್ತ ಸಮಯದಲ್ಲಿ ಮುನ್ನೆಚ್ಚರಿಕೆ ಹಾಗೂ ಚಿಕಿತ್ಸೆ ಕೈಗೊಳ್ಳಲು ಸಾಧ್ಯವಾಗುತ್ತದೆ. ಎಲ್‌ಡಿಎಲ್-ಸಿ ಗುರಿಯ ಮಟ್ಟವು ಪ್ರತಿಯೊಬ್ಬ ವ್ಯಕ್ತಿಗೂ ಪ್ರತ್ಯೇಕವಾಗಿರುತ್ತದೆ ಮತ್ತು ಇದು ಅವರವರ ವಯಸ್ಸು, ಇತರ ಸಹ-ಅನಾರೋಗ್ಯ ಸಮಸ್ಯೆಗಳು ಹಾಗೂ ಆನುವಂಶಿಕ ಅಂಶಗಳಿಂದ ನಿರ್ಧರಿಸಲ್ಪಡುತ್ತದೆ.
ಬೆಂಗಳೂರಿನ ಕಾವೇರಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥರಾದ ಡಾ. ವಿವೇಕ್ ಜಿ. ಅವರು ಈ ಕುರಿತು ಮಾತನಾಡಿ , "ಹೆಚ್ಚಿನ ಎಲ್‌ಡಿಎಲ್-ಸಿ ಮಟ್ಟವು ಕೇವಲ ವೃದ್ಧಾಪ್ಯ ಅಥವಾ ಜಡ ಜೀವನಶೈಲಿಗೆ ಮಾತ್ರ ಸಂಬಂಧಿಸಿದೆ ಎಂದು ಹಲವರು ತಪ್ಪು ಭಾವಿಸುತ್ತಾರೆ. ಆದರೆ ವಾಸ್ತವ ಸ್ಥಿತಿ ಬಹಳ ಭಿನ್ನವಾಗಿದೆ. ಸಮತೋಲಿತ ಆಹಾರ ಸೇವಿಸುವ ಮತ್ತು ನಿತ್ಯ ಜಿಮ್ ವ್ಯಾಯಾಮ ಮಾಡುವ ಯುವಜನರಲ್ಲೂ ಎಲ್‌ಡಿಎಲ್-ಸಿ ಅಧಿಕವಾಗಿರಬಹುದು.
ಮುಖ್ಯವಾಗಿ ಕುಟುಂಬದ ಅನುವಂಶಿಕ ಹಿನ್ನೆಲೆ ಇದಕ್ಕೆ ಪ್ರಮುಖ ಕಾರಣ. ವಯಸ್ಸು, ಫಿಟ್ನೆಸ್ ಮತ್ತು ಜೀವನಶೈಲಿಗಳು ಮಾತ್ರವೇ ನಿಮ್ಮ ಕೊಲೆಸ್ಟ್ರಾಲ್ ಸುರಕ್ಷಿತ ಮಟ್ಟದಲ್ಲಿದೆಯೇ ಎಂಬುದನ್ನು ಖಚಿತಪಡಿಸಲಾರವು. ಆದ್ದರಿಂದ ವಯಸ್ಕ ಹಂತದ ಆರಂಭದಿಂದಲೇ ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದರಿಂದ ಎಲ್‌ಡಿಎಲ್-ಸಿ ಏರಿಕೆಯನ್ನು ಮೊದಲೇ ಗುರುತಿಸಲು ಅನುಕೂಲವಾಗುತ್ತದೆ. ಇದು ರೋಗಿಗಳು ಹಾಗೂ ವೈದ್ಯರಿಗೆ ಸರಿಯಾದ ಸಮಯದಲ್ಲಿ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ಮತ್ತು ದೀರ್ಘಕಾಲೀನ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ" ಎಂದು ವಿವರಿಸಿದರು.
ನಿಮ್ಮ ವೈದ್ಯರನ್ನು ಭೇಟಿ ಮಾಡಿದಾಗ, ಸಾಮಾನ್ಯ ಸಂಭಾಷಣೆಯ ಬದಲು ಈ ಕೆಳಗಿನ ಮೂರು ಅತ್ಯಗತ್ಯ ಪ್ರಶ್ನೆಗಳನ್ನು ಕೇಳಿ:
"ಇಂದು ನನ್ನ ಎಲ್‌ಡಿಎಲ್-ಸಿ ಮಟ್ಟ ನಿಖರವಾಗಿ ಎಷ್ಟಿದೆ?"
- ಇದು ಏಕೆ ಮುಖ್ಯ: ರಕ್ತನಾಳಗಳಲ್ಲಿ ಜಿಡ್ಡಿನ ಪದರ (ಪ್ಲೇಕ್) ಶೇಖರಣೆಯಾಗಿ ರಕ್ತಪರಿಚಲನೆಗೆ ತಡೆ ಒಡ್ಡಲು ಕಾರಣವಾಗುವ ಪ್ರಮುಖ "ಕೆಟ್ಟ ಕೊಲೆಸ್ಟ್ರಾಲ್" ಎಂದರೆ ಅದು ಎಲ್‌ಡಿಎಲ್-ಸಿ. ಅಧಿಕ ಎಲ್‌ಡಿಎಲ್-ಸಿ ಬಾಹ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಪ್ರದರ್ಶಿಸದ ಗುಪ್ತ ಅಪಾಯವಾಗಿರುವುದರಿಂದ, ಇತ್ತೀಚಿನ ರಕ್ತ ಪರೀಕ್ಷೆಯ ನಿಖರವಾದ ಸಂಖ್ಯೆಯನ್ನು ತಿಳಿದುಕೊಳ್ಳುವುದೇ ಹೃದಯ ರಕ್ಷಣೆಯ ಮೊದಲ ಹೆಜ್ಜೆಯಾಗಿದೆ.
"ನನ್ನ ವೈಯಕ್ತಿಕ ಎಲ್‌ಡಿಎಲ್-ಸಿ ಗುರಿ (ಟಾರ್ಗೆಟ್) ಎಷ್ಟು?"
- ಇದು ಏಕೆ ಮುಖ್ಯ: ಕೊಲೆಸ್ಟ್ರಾಲ್ ನಿಯಂತ್ರಣದ ಗುರಿಯು ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾ (ಸಿಎಸ್‌ಐ) ಮಾರ್ಗಸೂಚಿ ಪ್ರಕಾರ, ನಿಮ್ಮ ವೈಯಕ್ತಿಕ ಆರೋಗ್ಯ ಸ್ಥಿತಿಯ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ:
- ಕಡಿಮೆ ಅಪಾಯ: ಗುರಿ <116 ಎಂಜಿ/ಡಿಎಲ್
- ಮಧ್ಯಮ ಅಪಾಯ: ಗುರಿ <100 ಎಂಜಿ/ಡಿಎಲ್
- ಹೆಚ್ಚಿನ ಅಪಾಯ (ಮಧುಮೇಹ, ಅಧಿಕ ರಕ್ತದೊತ್ತಡ, ಕಿಡ್ನಿ ಕಾಯಿಲೆ ಇರುವವರು): ಗುರಿ <70 ಎಂಜಿ/ಡಿಎಲ್
- ಅತ್ಯಧಿಕ ಅಪಾಯ (ಈ ಹಿಂದೆ ಹೃದಯಾಘಾತವಾದವರು, ಸ್ಟೆಂಟ್ ಅಥವಾ ಬೈಪಾಸ್ ಆದವರು): ಗುರಿ <55 ಎಂಜಿ/ಡಿಎಲ್
"ನಾನು ನನ್ನ ಗುರಿಯನ್ನು ತಲುಪಿದ್ದೇನೆಯೇ? ಇಲ್ಲದಿದ್ದರೆ ಮುಂದಿನ ಚಿಕಿತ್ಸಾ ಆಯ್ಕೆಗಳೇನು?"
- ಇದು ಏಕೆ ಮುಖ್ಯ: ಕೇವಲ ಮಾತ್ರೆಗಳನ್ನು ಸೇವಿಸುವುದರಿಂದ ಅಥವಾ ಪಥ್ಯದ ಆಹಾರ ಪಾಲಿಸುವುದರಿಂದಲೇ ಕೊಲೆಸ್ಟ್ರಾಲ್ ಸುರಕ್ಷಿತ ಮಟ್ಟ ತಲುಪಿದೆ ಎಂದು ಭಾವಿಸಲಾಗದು.
ಜೀವನಶೈಲಿ ಬದಲಾವಣೆ ಹಾಗೂ ಸಾಮಾನ್ಯ ಮಾತ್ರೆಗಳಿಂದ ಗುರಿ ಮುಟ್ಟಲು ಸಾಧ್ಯವಾಗದಿದ್ದರೆ ವೈದ್ಯರು ಚಿಕಿತ್ಸೆಯನ್ನು ಪರಿಷ್ಕರಿಸುತ್ತಾರೆ. ಅತಿಯಾದ ಅಪಾಯದಲ್ಲಿರುವವರಿಗೆ ಪಿಸಿಎಸ್‌ಕೆ9 ಇನ್ಹಿಬಿಟರ್‌ಗಳು ಮತ್ತು ಎಸ್‌ಐಆರ್‌ಎನ್‌ಎನಂತಹ ಸುಧಾರಿತ ಚುಚ್ಚುಮದ್ದು ಚಿಕಿತ್ಸೆಗಳು ಲಭ್ಯವಿವೆ.
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವುದು ಆಜೀವ ಬದ್ಧತೆಯಾಗಿದೆ. ಸಕಾಲಿಕ ತಪಾಸಣೆ, ನಿರಂತರ ಚಿಕಿತ್ಸೆ ಮತ್ತು ವೈದ್ಯಕೀಯ ಸಲಹೆಗಳ ಪಾಲನೆಯಿಂದ ಮಾತ್ರ ಸದೃಢ ಹೃದಯ ಹಾಗೂ ಆರೋಗ್ಯಕರ ಭವಿಷ್ಯ ಸಾಧ್ಯ.