ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಆರೋಗ್ಯ ವೃದ್ಧಿಗಾಗಿ ಸೇವಿಸಬೇಕಾದ ಆಯುರ್ವೇದ ಎಲೆಗಳು

ತುಳಸಿ,ಬೇವಿನ‌ಎಲೆ, ಕರಿಬೇವಿನ ಎಲೆ ಇತ್ಯಾದಿಯನ್ನು ಹಿಂದಿನ ಕಾಲದಿಂದಲೂ ಆಯುರ್ವೇದ ದಲ್ಲಿ ಔಷಧಿಯಾಗಿಯೂ ಬಳಸಿಕೊಂಡು ಬರಲಾಗುತ್ತಿದೆ. ಈ ಎಲೆ ಗಳಲ್ಲಿ ಕ್ಯಾಲ್ಸಿಯಂ, ಪ್ರಾಸ್ಪರಸ್ ಮತ್ತು ವಿಟಮಿನ್ ಸಿ, ಡಿ, ಇ ಹಾಗೂ ವಿಟಮಿನ್ ಬಿ ಪ್ರಮಾಣ ಹೆಚ್ಚಾಗಿ ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಹಲವು ರೀತಿಯ ಆರೋಗ್ಯ ಲಾಭವನ್ನು ಹೊಂದಿದೆ.

ನವದೆಹಲಿ: ನಮ್ಮ ಮನೆಯ ಸುತ್ತಲ್ಲಿರುವ ಅದೆಷ್ಟೋ ಸಸ್ಯಗಳು ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ(Health Tips) ಹೆಚ್ಚು ಪ್ರಯೋಜನಕಾರಿಯಾಗಿದೆ‌. ಅದರಲ್ಲೂ ಪುರಾತನ ಕಾಲದಿಂದಲೂ ಬಳಕೆ ಮಾಡುವ ತುಳಸಿ, ಬೇವಿನ‌ ಎಲೆ, ಕರಿಬೇವಿನ ಎಲೆ ಇತ್ಯಾದಿಯನ್ನು ಹಿಂದಿನ ಕಾಲದಿಂದಲೂ ಆಯು ರ್ವೇದ ದಲ್ಲಿ ಔಷಧಿಯಾಗಿಯೂ ಬಳಸಿಕೊಂಡು ಬರಲಾಗುತ್ತಿದೆ. ಈ ಎಲೆಗಳಲ್ಲಿ ಕ್ಯಾಲ್ಸಿಯಂ, ಪ್ರಾಸ್ಪರಸ್ ಮತ್ತು ವಿಟಮಿನ್ ಸಿ, ಡಿ, ಇ ಹಾಗೂ ವಿಟ ಮಿನ್ ಬಿ ಪ್ರಮಾಣ ಹೆಚ್ಚಾಗಿ ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಹಲವು ರೀತಿಯ ಆರೋಗ್ಯ ಲಾಭ ವನ್ನು ಹೊಂದಿದೆ.ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ಸೇವಿಸುವುದರಿಂದ ದೇಹದೊಳಗಿನ ಹಾಗೂ ಹೊರಗಿನ ಹಲವು ಆರೋಗ್ಯ‌ ಸಮಸ್ಯೆ ಗಳಿಗೆ ಮುಕ್ತಿ ಸಿಗಲಿದೆ.

ತುಳಸಿ ಎಲೆ: ತುಳಸಿಯಲ್ಲಿ ಆಂಟಿಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳಿದ್ದು ಈ ಎಲೆಗಳನ್ನು ಸೇವನೆ ಮಾಡು ವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.ತುಳಸಿಯನ್ನು ಆಯುರ್ವೇದದಲ್ಲಿ ಒತ್ತಡವನ್ನು ನಿವಾರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಮುಖವೆಂದು ಪರಿಗಣಿಸಲಾಗಿದೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ 4-5 ತಾಜಾ ತುಳಸಿ ಎಲೆಗಳನ್ನು ಅಗಿಯುವುರಿಂದ ಉಸಿ ರಾಟದ ವ್ಯವಸ್ಥೆಯನ್ನು ಉತ್ತೇಜಿಸಲು ಮತ್ತು ಜೀರ್ಣಕಾರಿ ಪ್ರಕ್ರಿಯೆಗಳಿಗೆ ಸಹಾಯಕಾರಿ ಯಾಗಲಿದೆ. ತುಳಸಿ ಕೆಲವು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಸಹ ಹೊಂದಿದ್ದು ಇದು ಸೋಂಕುಗಳ ವಿರುದ್ಧ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತದೆ.

ಬೇವಿನ ಎಲೆಗಳು: ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಅಗಿಯುವುದು ಇದು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡಲಿದೆ.ಅದರ ಜೊತೆ ಚರ್ಮದ ಸಮಸ್ಯೆ ಗಳನ್ನು ಕಡಿಮೆ ಮಾಡಲು ಮತ್ತು ಯಕೃತ್ತಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡಲಿದೆ. ಇದರ ಬ್ಯಾಕ್ಟೀ ರಿಯಾ ವಿರೋಧಿ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳು ಬಾಯಿಯ ಆರೋಗ್ಯವನ್ನು ಸಹ ರಕ್ಷಣೆ ಮಾಡ ಲಿದೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಸೊಪ್ಪನ್ನು ತಿಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ನಿಮ್ಮ ಚರ್ಮ ವನ್ನು ಸ್ವಚ್ಛಗೊಳಿಸುವುದರೊಂದಿಗೆ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಏಷ್ಯನ್ ಪೆಸಿಫಿಕ್ ಜರ್ನಲ್ ಆಫ್ ಟ್ರಾಪಿಕಲ್ ಬಯೋಮೆಡಿಸಿನ್‌ನ ಸಂಶೋಧನೆಯ ಪ್ರಕಾರ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕನ್ನು ನಿರ್ವಹಿಸುವಲ್ಲಿ ಬೇವು ಹೆಚ್ಚು ಪರಿಣಾಮಕಾರಿ ಯಾಗಿದೆ ಎಂದು ತಿಳಿಸಿದೆ.

ಕರಿಬೇವಿನ ಎಲೆಗಳು:

ಕರಿಬೇವಿನ ಎಲೆಗಳು ಜೀರ್ಣಕ್ರಿಯೆಗೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ಇದು ಮಧುಮೇಹವನ್ನು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಹಾಗಾಗಿ ಈ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಉತ್ತಮ. ಇವು ಇನ್ಸುಲಿನ್ ಮಟ್ಟವನ್ನು ಸುಧಾರಿಸುವ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅವು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲ ಗಳಾಗಿದ್ದು ದೇಹವನ್ನು ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ.

ವೀಳ್ಯದೆಲೆಗಳು: ಬೆಳಗ್ಗೆ ತಿಂಡಿ ತಿನ್ನುವ ಅಥವಾ ಊಟ ಮಾಡುವ ಮೊದಲು ಒಂದು ವೀಳ್ಯದೆಲೆ ತಿಂದರೆ ತಿಂದ ಆಹಾರ ವನ್ನು ಚೆನ್ನಾಗಿ ಜೀರ್ಣಮಾಡುತ್ತದೆ. ಅಷ್ಟೇ ಅಲ್ಲದೆ ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆ ಉಬ್ಬುವುದು ಅಥವಾ ಮಲಬದ್ಧತೆಯಂತಹ ಅಸ್ವಸ್ಥತೆಗಳನ್ನು ಸರಾಗಗೊಳಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ತಿನ್ನುವ ವೀಳ್ಯದೆಲೆಯು ಬಾಯಿಯ ನೈರ್ಮಲ್ಯವನ್ನು ಹೆಚ್ಚಿಸುವ ಜೊತೆಗೆ‌ ಬಾಯಿಯ ವಾಸನೆಯನ್ನು ಕೂಡ ತಾಜಾಗೊಳಿಸುತ್ತದೆ. ಇಂಟರ್‌ ನ್ಯಾಶನಲ್ ಜರ್ನಲ್ ಆಫ್ ಫಾರ್ಮಾ ಸ್ಯುಟಿಕಲ್ ಸೈನ್ಸಸ್ ಮತ್ತು ರಿಸರ್ಚ್‌ನಲ್ಲಿನ ಸಂಶೋಧನೆಗಳು ವೀಳ್ಯ ದೆಲೆಯ ಬಳಕೆಯು ಆಂಟಿಮೈಕ್ರೊಬಿಯಲ್ ಮತ್ತು ಜೀರ್ಣಕಾರಿ ಗುಣಗಳನ್ನು ಹೊಂದಿದೆ ಎಂದು ವರದಿ ಮಾಡಿದೆ.

ಇದನ್ನು ಓದಿ: Health Tips: ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಿಸಲು ಈ ಆಹಾರ ತ್ಯಜಿಸಿ!

ಪುದೀನಾ ಎಲೆಗಳು: ಆಯುರ್ವೇದ ಮತ್ತು ಮನೆ ಮದ್ದಿನಲ್ಲಿ ಪುದೀನ ಎಲೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿ ಬಹಳಷ್ಟು ಔಷಧೀಯ ಗುಣಗಳು ಇರಲಿದ್ದು ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಹೆಚ್ಚಾಗಿ ಹೊಂದಿದೆ. ಖಾಲಿ ಹೊಟ್ಟೆಯಲ್ಲಿ ಬೆರಳೆಣಿಕೆಯಷ್ಟು ತಾಜಾ ಪುದೀನ ಎಲೆಗಳ ಸೇವನೆ ಯು ಅಜೀರ್ಣವನ್ನು ಗುಣಪಡಿಸಲು ಸಹಾಯಕ ವಾಗಿದೆ. ಈ ಎಲೆಯು ಹಸಿವನ್ನು ಸುಧಾರಿಸಲು ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಹೊಟ್ಟೆಯ ಸೆಳೆತವನ್ನು ಕಡಿಮೆ ಮಾಡುವ ಜೊತೆಗೆ ಜಠರ ಕರುಳಿನ ಅಸ್ವಸ್ಥತೆಗಳು ಮತ್ತು ಉರಿಯೂತದ ನಿರ್ವಹಣೆಯಲ್ಲಿ ಪುದೀನಾ ಬಳಸಬಹುದು ಎಂದು ಎಥ್ನೋ ಫಾರ್ಮಾ ಕಾಲಜಿ ಸಂಶೋಧನೆಯು ವರದಿ ಮಾಡಿದೆ.