ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Consuming Fruits: ಹಣ್ಣುಗಳನ್ನು ಸೇವಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

Health Tips: ಹಣ್ಣುಗಳನ್ನು ಕೇವಲ 'ತಿನ್ನುವುದು' ಮಾತ್ರವಲ್ಲ, ಅವುಗಳನ್ನು ಹೇಗೆ, ಯಾವಾಗ ಮತ್ತು ಯಾವುದರೊಂದಿಗೆ ತಿನ್ನುತ್ತೇವೆ ಎಂಬುದು ಕೂಡ ಮುಖ್ಯವಾಗುತ್ತದೆ. ನೀವು ಹಣ್ಣನ್ನು ಹೇಗೆ ಸೇವಿಸುತ್ತೀರಿ, ನೀವು ಅದನ್ನು ಸೇವಿಸುವ ಪ್ರಮಾಣ ಹೀಗೆ ಇವೆಲ್ಲವೂ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಹಣ್ಣುಗಳನ್ನು ಸೇವಿಸುವಾಗ ಸಾಮಾನ್ಯವಾಗಿ ನಾವು ಮಾಡುವ ತಪ್ಪುಗಳು ಯಾವುವು ಎನ್ನುವ ವಿವರ ಇಲ್ಲಿದೆ.

ನವದೆಹಲಿ: ಹಣ್ಣುಗಳು (Fruits) ನಮ್ಮ ಆರೋಗ್ಯಕ್ಕೆ ಬಹಳ ಅಗತ್ಯವಾದದ್ದು. ಜೀವಸತ್ವಗಳು, ಖನಿಜಾಂಶಗಳು ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ಹಣ್ಣುಗಳು ಹೃದಯ ಕಾಯಿಲೆ, ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಆದರೆ ಹಣ್ಣುಗಳನ್ನು ಕೇವಲ 'ತಿನ್ನುವುದು' ಮಾತ್ರವಲ್ಲ, ಅವುಗಳನ್ನು ಹೇಗೆ, ಯಾವಾಗ ಮತ್ತು ಯಾವುದರೊಂದಿಗೆ ತಿನ್ನುತ್ತೇವೆ ಎಂಬುದು ಕೂಡ ಮುಖ್ಯವಾಗುತ್ತದೆ. ನೀವು ಹಣ್ಣನ್ನು ಹೇಗೆ ಸೇವಿಸುತ್ತೀರಿ, ನೀವು ಅದನ್ನು ಸೇವಿಸುವ ಪ್ರಮಾಣ ಹೀಗೆ ಇವೆಲ್ಲವೂ ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ. ಹಾಗಾಗಿ ಹಣ್ಣುಗಳನ್ನು ಸೇವಿಸುವಾಗ ನಾವು ಸಾಮಾನ್ಯವಾಗಿ ಮಾಡುವ ತಪ್ಪುಗಳನ್ನು ಯಾವ ರೀತಿ ಸರಿಪಡಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.

ಹಣ್ಣು ಸೇವನೆಯ ತಪ್ಪುಗಳು

ಸಂಪೂರ್ಣ ಹಣ್ಣನ್ನು ತಿನ್ನದೆ ಹಣ್ಣಿನ ರಸವನ್ನುಆರಿಸುವುದು: ಹಣ್ಣಿನ ಜ್ಯೂಸ್ ತಯಾರಿಸುವಾಗ ಫೈಬರ್ (ನಾರು) ಅಂಶವು ಹೊರಹೋಗುತ್ತದೆ. ಫೈಬರ್ ಇಲ್ಲದ ಕಾರಣ ಸಕ್ಕರೆಯು ನೇರವಾಗಿ ರಕ್ತಕ್ಕೆ ಹೋಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಇಡೀ ಹಣ್ಣು ತಿನ್ನುವಾಗ ಸಿಗುವ ಫೈಬರ್ ಅಂಶಗಳು ಜ್ಯೂಸ್‌ನಿಂದ ಸಿಗುವುದಿಲ್ಲ.

ಊಟದ ನಂತರ ಸಿಹಿತಿಂಡಿಯಾಗಿ ಹಣ್ಣು ತಿನ್ನುವುದು: ಹೆಚ್ಚಿನವರು ಊಟ ಮಾಡಿದ ತಕ್ಷಣ ಹಣ್ಣು ತಿನ್ನುತ್ತಾರೆ. ಇದು ಗ್ಲೈಸೆಮಿಕ್ ಪರಿಣಾಮದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಕೂಡ ತೊಂದರೆಯಾಗಬಹುದು. ಹೀಗಾಗಿಹಿ ಹಣ್ಣುಗಳನ್ನು ಊಟಕ್ಕೆ 20-30 ನಿಮಿಷಗಳ ಮೊದಲು ಸೇವಿಸಿ.

ಒಣ ಹಣ್ಣುಗಳನ್ನು ಅತಿಯಾಗಿ ತಿನ್ನುವುದು: ಒಣ ಹಣ್ಣುಗಳಲ್ಲಿ ನೀರಿನಾಂಶ ಇರುವುದಿಲ್ಲ. ಹಾಗಾಗಿ ಅವುಗಳಲ್ಲಿ ಕ್ಯಾಲೋರಿ ಸಾಂದ್ರತೆ ಹೆಚ್ಚಿರುತ್ತವೆ ಮತ್ತು ಅವುಗಳನ್ನು ಸುಲಭವಾಗಿ ಹೆಚ್ಚು ತಿನ್ನುತ್ತಾರೆ. ಹಾಗಾಗಿ ಒಣ ಹಣ್ಣುಗಳನ್ನು ಕೇವಲ ಅಲಂಕಾರಿಕವಾಗಿ ಅಥವಾ ರುಚಿಗಾಗಿ ಸಣ್ಣ ಪ್ರಮಾಣದಲ್ಲಿ ಬಳಸಿ.

ಇದನ್ನು ಓದಿ:Bones Health: ನಮ್ಮ ಮೂಳೆಗಳು ಬಲವಾಗಿರಲು ಏನೇನು ಬೇಕು ಗೊತ್ತೇ?

ಹಣ್ಣುಗಳನ್ನು ಸ್ಮೂಥಿಗಳಲ್ಲಿ ಬೆರೆಸುವುದು: ಹಣ್ಣಿನ ಸ್ಮೂದಿ ಮಾಡುವುದು ಅದನ್ನು ಜ್ಯೂಸ್ ಮಾಡುವುದಕ್ಕಿಂತ ಉತ್ತಮ ಎಂದು ನೀವು ಭಾವಿಸಬಹುದು. ಆದರೆ ಅದು ತಪ್ಪು. ಬ್ಲೆಂಡರ್ ಬಳಸಿ ಸ್ಮೂಥಿ ಮಾಡುವಾಗ ಹಣ್ಣಿನ ಫೈಬರ್‌ನ ಪ್ರಯೋಜನಗಳು ಕಡಿಮೆಯಾಗುತ್ತವೆ. ಜತೆಗೆ ಹಾಲು ಅಥವಾ ಜೇನು ಸೇರಿಸುವುದರಿಂದ ಅನಗತ್ಯ ಕ್ಯಾಲೋರಿಗಳು ಹೆಚ್ಚಾಗುತ್ತವೆ.

ನೈಸರ್ಗಿಕ ಸಕ್ಕರೆ ಅಪಾಯವಿಲ್ಲ ಎಂದು ನಿರ್ಲಕ್ಷಿಸುವುದು: ಹಣ್ಣುಗಳಲ್ಲಿರುವ ಸಕ್ಕರೆ ನೈಸರ್ಗಿಕವಾಗಿದ್ದರೂ, ಮಧುಮೇಹ ಇರುವವರು ಅಥವಾ ಅತಿಯಾಗಿ ತೂಕವಿರುವವರು ಸಕ್ಕರೆ ಪ್ರಮಾಣವನ್ನು ಲೆಕ್ಕಿಸದೆ ತಿಂದರೆ ಗ್ಲೂಕೋಸ್ ನಿಯಂತ್ರಣ ಹದಗೆಡಬಹುದು. ಹಾಗಾಗಿ ಮಧುಮೇಹಿಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಣ್ಣುಗಳನ್ನು ಮಾತ್ರ ಸೇವಿಸಬೇಕು.

ಒಂದೇ ರೀತಿಯ ಹಣ್ಣನ್ನೇ ತಿನ್ನುವುದು: ವಿಭಿನ್ನ ಬಣ್ಣದ ಮತ್ತು ವಿಧದ ಹಣ್ಣುಗಳು ವಿವಿಧ ಬಗೆಯ ಪೋಷಕಾಂಶಗಳು ಮತ್ತು ಫೈಟೊ ಕೆಮಿಕಲ್‌ಗಳನ್ನು ನೀಡುತ್ತವೆ. ಒಂದೇ ರೀತಿಯ ಹಣ್ಣುಗಳನ್ನು ತಿನ್ನುವುದು ಪೋಷಕಾಂಶದ ಕೊರತೆಗೆ ಕಾರಣವಾಗಬಹುದು.

ಆಮ್ಲೀಯ ಹಣ್ಣುಗಳ ಸೇವನೆ ನಂತರ ಬಾಯಿ ಸ್ವಚ್ಛಗೊಳಿಸದಿರುವುದು: ಕಿತ್ತಳೆ, ನಿಂಬೆ ಹಣ್ಣುಗಳಂತಹ ಹೆಚ್ಚು ಆಮ್ಲೀಯ ಹಣ್ಣುಗಳು ಮತ್ತು ಅವುಗಳ ಜ್ಯೂಸ್‌ಗಳ ಆಗಾಗ್ಗೆ ಸೇವನೆಯು ಹಲ್ಲುಗಳ ಎನಾಮೆಲ್‌ ಅನ್ನು ಸವೆಸಬಹುದು. ಆಮ್ಲೀಯ ಹಣ್ಣುಗಳನ್ನು ತಿಂದ ನಂತರ ನೀರಿನಿಂದ ಬಾಯಿಯನ್ನು ತೊಳೆಯಿರಿ.