ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸಿದ್ರೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡಬಹುದು!

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರ ಸೇವಿಸಿದರೆ ಅಸಿಡಿಟಿ, ಸುಸ್ತು, ಕಿರಿಕಿರಿಯಂತಹ ಅನೇಕ ಸಮಸ್ಯೆ ಕಾಡಬಹುದು. ಈ ರೀತಿಯ ಜೀವನ ಶೈಲಿ ಆರೋಗ್ಯದ ಮೇಲೆ, ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾಗಿ ಉತ್ತಮ ಆರೋಗ್ಯಕ್ಕೆ ಯಾವ ಸಮಯದಲ್ಲಿ ಯಾವ ಆಹಾರವನ್ನು ತಿನ್ನಬೇಕು, ಯಾವ ಆಹಾರ ತಿನ್ನಬಾರದು ಎಂಬುದನ್ನೂ ನಾವು ತಿಳಿದುಕೊಂಡಿರಬೇಕು.

ಖಾಲಿ ಹೊಟ್ಟೆಗೆ ಈ ಆಹಾರ ಸೇವಿಸೋ ಮುನ್ನ ಎಚ್ಚರ... ಎಚ್ಚರ!

Profile Pushpa Kumari Feb 22, 2025 6:30 AM

ಬೆಂಗಳೂರು: ನಮ್ಮ ಆರೋಗ್ಯ ವೃದ್ದಿಗಾಗಿ ಉತ್ತಮ ಆಹಾರ ಪದ್ದತಿಯನ್ನೇ ಅಳವಡಿಸಿಕೊಳ್ಳಬೇಕು. ಆದರಲ್ಲೂ ಬೆಳಗ್ಗಿನ ಉಪಹಾರ ಅಂದರೆ ಬ್ರೇಕ್ ಫಾಸ್ಟ್ ವಿಚಾರದಲ್ಲಿ ನಾವು ಮಾಡುವ ಕೆಲವು ತಪ್ಪುಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರಲಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರ ಸೇವಿಸಿದರೆ ಅಸಿಡಿಟಿ, ಸುಸ್ತು, ಕಿರಿಕಿರಿಯಂತಹ ಅನೇಕ ಸಮಸ್ಯೆ ಕಾಡಬಹುದು(Health Tips). ಈ ರೀತಿಯ ಜೀವನ ಶೈಲಿ ಆರೋಗ್ಯದ ಮೇಲೆ, ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾಗಿ ಉತ್ತಮ ಆರೋಗ್ಯಕ್ಕೆ ಯಾವ ಸಮಯದಲ್ಲಿ ಯಾವ ಆಹಾರವನ್ನು ತಿನ್ನ ಬೇಕು, ಯಾವ ಆಹಾರ ತಿನ್ನಬಾರದು ಎಂಬುದನ್ನೂ ನಾವು ತಿಳಿದುಕೊಂಡಿರಬೇಕು.

ಎಣ್ಣೆ ಪದಾರ್ಥ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಡಬಹುದು‌.ಹಾಗಾಗಿ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಬೆಳಿಗ್ಗೆ ತಿನ್ನಬಾರದು. ಇದರಿಂದ ನಿಮ್ಮ ದೇಹದಲ್ಲಿ ಅನಾರೋಗ್ಯಕರ ಕೊಬ್ಬು ಉಂಟಾಗಿ ವಾಂತಿ, ಎದೆ ಉರಿ, ವಾಯು, ಹೊಟ್ಟೆ ಹುಣ್ಣು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.

ಕಾಫಿ:ಅನೇಕರು ದಿನ ಬೆಳಗ್ಗಿನ ದಿನವನ್ನು ಒಂದು ಕಪ್ ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ಆದರೆ ಕಾಫಿಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿ ಯುವುದು ಉತ್ತಮವಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ.. ಕಾಫಿ ಹೊಟ್ಟೆಯ ಆಮ್ಲದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಎದೆಯುರಿ, ಆಸಿಡ್ ರಿಫ್ಲಕ್ಸ್ ಅಥವಾ ಜಠರದ ಉರಿತದಂತಹ ಸಮಸ್ಯೆಗಳು ಕಾಡಬಹುದು.

ಮಸಾಲೆಯುಕ್ತ ಆಹಾರಗಳು: ಇನ್ನು ಬೆಳಗ್ಗಿನ ಖಾಲಿ ಹೊಟ್ಟೆಗೆ ಮಸಾಲೆಯುಕ್ತ ಆಹಾರಗಳು ಸೇವಿಸು ವುದನ್ನು ತಪ್ಪಿಸಬೇಕು.ಏಕೆಂದರೆ ಇವು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತವೆ. ಇದು ಗ್ಯಾಸ್ ಮತ್ತು ಆಮ್ಲೀಯತೆಗೆ ಕಾರಣವಾಗುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರಲಿದ್ದು ಇವುಗಳು ಆಸಿಡ್ ರಿಫ್ಲಕ್ಸ್, ಅಜೀರ್ಣ ಅಥವಾ ಕೆಟ್ಟ ಸಂದರ್ಭ ಗಳಲ್ಲಿ ಜಠರದ ಉರಿತ ಅಥವಾ ಜಠರ ಹುಣ್ಣುಗಳಿಗೆ ಕಾರಣವಾಗಬಹುದು.

ಖಾಲಿ ಹೊಟ್ಟೆಯಲ್ಲಿ ಸಿಹಿ ಪದಾರ್ಥಗಳನ್ನು ಸೇವಿಸಬಾರದು: ಖಾಲಿ ಹೊಟ್ಟೆಯಲ್ಲಿ ಕೇಕ್, ಪೇಸ್ಟ್ರಿ ಅಂತಹ ಸಿಹಿತಿಂಡಿಗಳನ್ನು ತಪ್ಪಿಸ ಬೇಕು‌.ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿಗಳನ್ನು ತಿನ್ನುವುದು ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.ಹಾಗಾಗಿ ಇದರಿಂದ ಆಲಸ್ಯ ಮತ್ತು ಆಯಾಸ ಹೆಚ್ಚಾಗುವ ಸಾಧ್ಯತೆ ಇರಲಿದೆ.

ಸಿಟ್ರಸ್ ಹಣ್ಣುಗಳು: ಬೆಳಗ್ಗಿನ ಖಾಲಿ ಹೊಟ್ಟೆಗೆ ಸಿಟ್ರಸ್ ಹಣ್ಣುಗಳನ್ನು ಸೇವಿಸಬಾರದು. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ, ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಜೀರ್ಣ ಪ್ರಕ್ರಿಯೆಗೆ ಸಂಬಂಧಪಟ್ಟ ಆಮ್ಲಗಳು ಹೆಚ್ಚಾಗಿ ಹೊಟ್ಟೆಯಲ್ಲಿ ಹುಣ್ಣುಗಳು ಆಗಬಹುದು.ಹಾಗಾಗಿ ನಿಂಬೆ, ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಆದ್ದರಿಂದ ಅವುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವಂತಿಲ್ಲ.

ಇದನ್ನು ಓದಿ: Health Tips: ಪ್ರತಿನಿತ್ಯ 4 ಕಿ.ಮೀ. ವಾಕ್ ಮಾಡಿ ಸಾಕು! ನಿಮ್ಮ ಹೃದಯ ಸದಾ ಆರೋಗ್ಯವಾಗಿರುತ್ತೆ

ಜಂಕ್ ಫುಡ್ ಸೇವಿಸಬಾರದು: ಪಿಜ್ಜಾ ಮತ್ತು ಬರ್ಗರ್‌ಗಳಂತಹ ಜಂಕ್ ಫುಡ್‌ಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನಬಾರದು‌.ಇವು ಹೆಚ್ಚಿನ ಕೊಬ್ಬು ಮತ್ತು ಸಂಸ್ಕರಿಸಿದ ಸಕ್ಕರೆ ಗಳನ್ನು ಹೊಂದಿರಲಿದ್ದು ದೇಹದಲ್ಲಿ ಜೀರ್ಣಿಸಿಕೊಳ್ಳಲು ಕಷ್ಟ ವಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಕಿರಿಕಿರಿ ಉಂಟು ಮಾಡಿ, ಎದೆ ಉರಿ ಸಹ ಕಂಡು ಬರುವಂತೆ ಮಾಡುತ್ತದೆ.