ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

World Health Day: ಜೀವನಶೈಲಿ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ: ಪ್ರಾಕ್ಟೊ

2023ರಲ್ಲಿ ಪ್ರತಿ ಹತ್ತ ಜನರ ಪೈಕಿ 3.4 ಜನರು ಜೀವನ ಶೈಲಿಯ ಕಾಯಿಲೆಗೆ ಬಗ್ಗೆ ವೈದ್ಯರನ್ನು ಸಂಪರ್ಕಿಸಿದ್ದರೆ, 2024ರಲ್ಲಿ ಈ ಪ್ರಮಾಣ 4.1ಕ್ಕೆ ಏರಿಕೆಯಾಗಿದೆ. ಇದೇ ವೇಳೆ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳನ್ನು ಪೂರ್ವಭಾವಿಯಾಗಿ ನಿರ್ವಹಿಸಲು ಹೆಚ್ಚಿನ ಜನರು ಡಿಜಿಟಲ್ ಪ್ಲಾಟ್‌ ಫಾರ್ಮ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಉತ್ತಮ ಆರೋಗ್ಯ ಫಲಿತಾಂಶಕ್ಕೆ ಕೊಡುಗೆ ನೀಡುವ ಒಂದು ಕ್ರಮ

Profile Ashok Nayak Apr 7, 2025 5:59 PM

ಬೆಂಗಳೂರು: ದೇಶದಲ್ಲಿ ಜೀವನಶೈಲಿ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ ಎಂದು ಭಾರತದ ಪ್ರಮುಖ ಮತ್ತು ಅತ್ಯಂತ ವಿಶ್ವಾಸಾರ್ಹ ಆರೋಗ್ಯ ಸೇವೆಗಳ ವೇದಿಕೆ ಯಾದ ಪ್ರಾಕ್ಟೊ ತನ್ನ ವಾರ್ಷಿಕ ಆರೋಗ್ಯ ವರದಿಯಲ್ಲಿ ತಿಳಿಸಿದೆ. ವಿಶ್ವ ಆರೋಗ್ಯ ದಿನದ ಹಿನ್ನೆಲೆಯಲ್ಲಿ ಪ್ರಾಕ್ಟೊ ಅಂಕಿ ಅಂಶ ಬಿಡುಗಡೆ ಮಾಡಿದ್ದು, ಜೀವನಶೈಲಿ ಕಾಯಿಲೆ ಜಾಗೃತಿ ಸಂಬಂಧ 30 ಮಿಲಿಯನ್‌ಗಿಂತಲೂ ಹೆಚ್ಚು ಜನರ ಡೇಟಾವನ್ನು ವಿಶ್ಲೇಷಿಸ ಲಾಗಿದೆ. ಇದರಲ್ಲಿ, ಶೇ.84ರಷ್ಟು ಜನರು ಜೀವನ ಶೈಲಿಯ ಕಾಯಿಲೆ ಬಗ್ಗೆ ಜಾಗೃತಿ ಹೊಂದಿ ದ್ದಾರೆ ಎಂದು ತಿಳಿಸಿದೆ. ಇದು ಭಾರತದ ಆರೋಗ್ಯ ಆದ್ಯತೆಗಳಲ್ಲಿ ಸ್ಪಷ್ಟ ಬದಲಾವಣೆಯ ನ್ನು ಸೂಚಿಸುತ್ತದೆ.

2023ರಲ್ಲಿ ಪ್ರತಿ ಹತ್ತ ಜನರ ಪೈಕಿ 3.4 ಜನರು ಜೀವನ ಶೈಲಿಯ ಕಾಯಿಲೆಗೆ ಬಗ್ಗೆ ವೈದ್ಯ ರನ್ನು ಸಂಪರ್ಕಿಸಿದ್ದರೆ, 2024ರಲ್ಲಿ ಈ ಪ್ರಮಾಣ 4.1ಕ್ಕೆ ಏರಿಕೆಯಾಗಿದೆ. ಇದೇ ವೇಳೆ ದೀರ್ಘ ಕಾಲದ ಆರೋಗ್ಯ ಪರಿಸ್ಥಿತಿಗಳನ್ನು ಪೂರ್ವಭಾವಿಯಾಗಿ ನಿರ್ವಹಿಸಲು ಹೆಚ್ಚಿನ ಜನರು ಡಿಜಿಟಲ್ ಪ್ಲಾಟ್‌ ಫಾರ್ಮ್‌ಗಳತ್ತ ಮುಖ ಮಾಡುತ್ತಿದ್ದಾರೆ. ಇದರಲ್ಲಿ ಶೇ.48ರಷ್ಟು ಜನರು 25-34 ವರ್ಷದವಾಗಿದ್ದರೆ. ಶೇ.20ರಷ್ಟು ಜನರು ಟೈಯರ್-2 ನಗರ ಪ್ರದೇಶದ ಜನರಾಗಿ ದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: Health Tips: ಪ್ರತಿದಿನ ವಾಕಿಂಗ್ ಮಾಡಿದ್ರೆ ಹೃದಯಾಘಾತದ ಅಪಾಯ ಕಡಿಮೆ

ವರದಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಪ್ರಾಕ್ಟೊದ ವೈದ್ಯಕೀಯ ಸಂಶೋಧನಾ ಮುಖ್ಯಸ್ಥ ಡಾ. ವಿಶಾಲ್ ಜಾನಿ,‘‘ ಜನರು. ವಿಶೇಷವಾಗಿ ಕಿರಿಯ ವಯಸ್ಕರು, ತಮ್ಮ ಆರೋಗ್ಯದ ಬಗ್ಗೆ ಹೇಗೆ ಪೂರ್ವಭಾವಿಯಾಗಿ ಕ್ರಮ ತೆಗದುಕೊಳ್ಳುತ್ತಾರೆ ಎಂಬುದರ ಸ್ಪಷ್ಟ ಬದಲಾವಣೆಯನ್ನು ಈ ಮೂಲಕ ನೋಡುತ್ತಿದ್ದೇವೆ. ಆರಂಭಿಕ ರೋಗ ಪತ್ತೆ, ನಿರ್ವಹಣೆ ಮತ್ತು ವೈದ್ಯಕೀಯ ಸಲಹೆ ತಿಳಿದುಕೊಳ್ಳಲು ಡಿಜಿಟಲ್ ಪರಿಕರಗಳನ್ನು ಹೆಚ್ಚಿನ ಜನರು ಒಲವು ತೋರುತ್ತಿದ್ದಾರೆ.

ಇದು ಬೆಳೆಯುತ್ತಿರುವ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಇಂದು ರೋಗಿಗಳು ತಿಳು ವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚು ಸಬಲರಾಗಿದ್ದಾರೆ. ಇದು ಉತ್ತಮ ಆರೋಗ್ಯ ಫಲಿತಾಂಶಕ್ಕೆ ಕೊಡುಗೆ ನೀಡುವ ಒಂದು ಕ್ರಮವಾಗಿದೆ. ಚಿಕಿತ್ಸೆಯ ಬಗ್ಗೆ ಮಾತ್ರ ವಲ್ಲ, ಇದು ದೀರ್ಘಕಾಲೀನ ಆರೋಗ್ಯಕ್ಕೂ ಇದು ಸಹಕಾರಿಯಾಗಿದೆ’’ಎನ್ನುತ್ತಾರೆ.

ಡಿಜಿಟಲ್ ಪ್ಲಾಟ್‌ಫಾರ್ಮ್ ಗಳು ಆರೋಗ್ಯ ಸೇವೆಯಲ್ಲಿ ಅಸ್ತಿತ್ವದಲ್ಲಿರುವ ಅಂತರವನ್ನು ಕಡಿಮೆ ಮಾಡುತ್ತಿವೆ ಮತ್ತು ಲಕ್ಷಾಂತರ ಜನರು ಸಕಾಲಿಕ ಕ್ರಮ ತೆಗೆದುಕೊಳ್ಳಲು ಸಹಾಯ ಮಾಡುತ್ತಿವೆ ಎಂದು ದೃಢಪಡಿಸುತ್ತದೆ ಎಂದು ಡಾ. ವಿಶಾಲ್ ಜಾನಿ ಅಭಿಪ್ರಾಯ ಪಟ್ಟಿದ್ದಾರೆ.