ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Beauty Tips: ಹಸಿ ಶುಂಠಿ ಬಳಸಿದ್ರೆ ಮೊಡವೆ ಮಾಯವಾಗುತ್ತಾ? ಈ ಬಗ್ಗೆ ವೈದ್ಯರು ಹೇಳೋದೇನು?

Beauty Tips: ಮಾರುಕಟ್ಟೆಯಲ್ಲಿ ಸಿಗುವ ಬ್ಯೂಟಿ ಪ್ರಾಡಕ್ಟ್‌ನಲ್ಲಿ ರಾಸಾಯನಿಕಗಳಿರುತ್ತವೆ ಎಂದು ಆನ್ಲೈ‌ನ್ ವಿಡಿಯೊ ನೋಡಿ ಮನೆಯಲ್ಲೇ ವಿವಿಧ ರೀತಿಯ ಫೇಸ್ ಪ್ಯಾಕ್ ತಯಾರಿಸಿ ಆ ಮೂಲಕ ಕಲೆ ಹೋಗಲಾಡಿಸಲು ಪ್ರಯತ್ನಿಸುತ್ತಾರೆ.ಆದರೆ ಇದು ನಿಜಕ್ಕೂ ಚರ್ಮದ ಕಲೆಗಳನ್ನು ಹೋಗಲಾಡಿಸಿ ಕಾಂತಿ ಹೆಚ್ಚಿಸುತ್ತದೆಯೇ? ಈ ಬಗ್ಗೆ ವೈದ್ಯರು ಹೇಳೋದೇನು?

ಹಸಿ ಶುಂಠಿ ಫೇಸ್ ಸ್ಕ್ರಬ್ ಮಾಡುವ ಮುನ್ನ ಇರಲಿ ಎಚ್ಚರ!

Profile Pushpa Kumari Mar 21, 2025 5:30 AM

ನವದೆಹಲಿ: ಹೆಚ್ಚಿನ ಮಹಿಳೆಯರು ತಮ್ಮ ಚರ್ಮವನ್ನು ಕಾಂತಿಯುತವಾಗಿ ಇಟ್ಟುಕೊಳ್ಳಬೇಕು ಎಂದು ಹಲವು ರೀತಿಯ ಸೌಂದರ್ಯವರ್ಧಕಗಳನ್ನು(Beauty Tips) ಹಚ್ಚುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಈ ವಸ್ತುಗಳಲ್ಲಿ ರಾಸಾಯನಿಕಗಳಿರುತ್ತವೆ ಎಂದು ಅನ್ ಲೈನ್ ವಿಡಿಯೊ ನೋಡಿ ಮನೆಯಲ್ಲೇ ಕಡಲೆಹಿಟ್ಟು, ಓಟ್ ಮೀಲ್, ಟೊಮೆಟೊ, ಹಸಿಶುಂಠಿ ಇತ್ಯಾದಿಯ ಫೇಸ್ ಪ್ಯಾಕ್, ಫೇಸ್‌ ರಬ್ ಮಾಡುವ ಮೂಲಕ ಕಲೆ ಹೋಗಲಾಡಿಸಲು ಪ್ರಯತ್ನಿಸುತ್ತಾರೆ. ಅದರೆ ಹಸಿ ಶುಂಠಿಯನ್ನು ರಬ್ ಮಾಡುವುದರಿಂದ ಮೊಡವೆ, ಸುಕ್ಕುಗಳಂತಹ ಚರ್ಮದ ಸಮಸ್ಯೆಗೆ ಮುಕ್ತಿ ಪಡೆಯಬಹುದು ಎಂದು ಹೆಚ್ಚಾಗಿ ಪ್ರಯೋಗಿಸಿದರೆ ಇದರಿಂದ ಅಡ್ಡಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಇದೆ ಎಂದು ಚರ್ಮದ ತಜ್ಞರೇ ಎಚ್ಚರಿಕೆ ನೀಡಿದ್ದಾರೆ. ಮೊಡವೆ, ಚರ್ಮದ ಸಮಸ್ಯೆ ಇದ್ದವರು ಯಾವುದೇ ವೈದ್ಯಕೀಯ ಸಲಹೆ ಇಲ್ಲದೆ‌ ಹಸಿ ಶುಂಠಿಯನ್ನು ಸ್ಕ್ರಬ್ ಮಾಡಿದರೆ ಚರ್ಮಕ್ಕೆ ಮತ್ತಷ್ಟು ಹಾನಿಯಾಗಲಿದೆ ಎಂದು ಈ ಬಗ್ಗೆ ಸೂಚನೆ ನೀಡಿದ್ದಾರೆ. ಹಾಗಿದ್ರೆ ಯಾಕೆ ಇದು ಸರಿಯಾದ ಕ್ರಮವಲ್ಲ? ಚರ್ಮ ರೋಗ ತಜ್ಞರು ಈ ಬಗ್ಗೆ ಯಾವ ಸಲಹೆ ನೀಡಿದ್ದಾರೆ ಇತ್ಯಾದಿ ಮಾಹಿತಿ ಇಲ್ಲಿದೆ.

ಮೊಡವೆ ನಿರ್ಮೂಲನೆಯಲ್ಲಿ ಹಸಿಶುಂಠಿ ಬಳಕೆ ಮಾಡುವುದು ಉಪಯುಕ್ತ ವಿಧಾನ ಆಗಿದ್ದರೂ ಇದು ಶಾಶ್ವತ ಪರಿಹಾರ ಕ್ರಮವಲ್ಲ. ಹಸಿ ಶುಂಠಿ ಮುಖಕ್ಕೆ ಉಜ್ಜುವುದರಿಂದ ಕೆಲವೊಮ್ಮೆ ಚರ್ಮ ಸುಡುವ ಸಾಧ್ಯತೆ ಇರಲಿದ್ದು ಸೂಕ್ತ ಕ್ರಮ ಅಲ್ಲ ಎಂಬುದು ಚರ್ಮ ತಜ್ಞರ ಅಭಿಪ್ರಾಯವಾಗಿದೆ. ಶುಂಠಿಯಲ್ಲಿ ನಂಜು ನಿರೋಧಕ ಮತ್ತು ಆಂಟಿ-ಆಕ್ಸಿಡೆಂಟ್ ಗುಣಗಳಿದ್ದು ಮೊಡವೆ ನಿವಾರಣೆಗೆ ಪರಿಣಾಮಕಾರಿಯಾಗಿದ್ದರೂ ಇದರಿಂದ ಚರ್ಮ ಹಾನಿಯಾಗುವ ಸಾಧ್ಯತೆ ಇದೆ.

ಯಾವೆಲ್ಲ ಅಡ್ಡಪರಿಣಾಮ ಉಂಟಾಗಲಿದೆ?

  • ಹಸಿ ಶುಂಠಿಯನ್ನು ಮುಖಕ್ಕೆ ನೇರವಾಗಿ ಸ್ಕ್ರಬ್ ಮಾಡುವುದರಿಂದ ಚರ್ಮದ ಪಿಎಚ್ ಲೆವೆಲ್ ಬದಲಾಗುವ ಸಾಧ್ಯತೆ ಇದೆ.
  • ಚರ್ಮದ ಮೈಕ್ರೋಫ್ಲೋರಾ ಹಾನಿಯಾಗುವ ಕಾರಣ ಮೊಡವೆ ಕಡಿಮೆಯಾಗುವ ಬದಲು ಹೆಚ್ಚಾಗುವ ಸಾಧ್ಯತೆಯೂ ಇದೆ.
  • ಹಸಿ ಶುಂಠಿಯಲ್ಲಿ ಉರಿಯ ಪ್ರಮಾಣ ಇದ್ದು ಮುಖಕ್ಕೆ ನೇರವಾಗಿ ಹಚ್ಚುವುದರಿಂದ ಚರ್ಮ ಸುಟ್ಟಂತಾಗಲಿದೆ.
  • ಕೆಲವೊಂದು ಬಾರಿ ಈ ವಿಧಾನ ಶುಷ್ಕ ಚರ್ಮಕ್ಕೆ ಕಾರಣವಾಗಲಿದೆ.
  • ಹಸಿ ಶುಂಠಿ ನೇರವಾಗಿ ಹಚ್ಚುದರಿಂದ ಚರ್ಮದ ಕಿರಿಕಿರಿ, ಅಲರ್ಜಿ ಇತರ ಸಮಸ್ಯೆ ಬರುವ ಸಾಧ್ಯತೆ ಇದೆ.
  • ಚರ್ಮಕ್ಕೆ ಈ ಸ್ಕ್ರಬ್ ಹೊಂದಿಕೆಯಾಗದಿದ್ದರೆ ತುರಿಕೆಯಾಗುವ ಸಾಧ್ಯತೆಯು ಇದೆ.

ಇದನ್ನು ಓದಿ: Beauty Tips: ಆರೋಗ್ಯಕರ ಚರ್ಮದ ಆರೈಕೆಗೆ ಇಲ್ಲಿದೆ ಟಿಪ್ಸ್

ಇತರ ಪ್ರಯೋಜನ ಇದೆಯೆ?

ಶುಂಠಿಯಿಂದ ಮುಖದ ಮೇಲಿನ ಚರ್ಮಗಳಿಗೆ ಸ್ಕ್ರಬ್ ಮಾಡುವುದು ಸರಿಯಾದ ಕ್ರಮವಲ್ಲದು ಇದರಲ್ಲಿರುವ ಕೆಲವು ಔಷಧೀಯ ಗುಣಗಳು ದೇಹದ ಆರೋಗ್ಯ ವೃದ್ಧಿಸಲು ಬಹಳ ಸಹಕಾರಿ ಆಗಲಿದೆ.

  • ಶುಂಠಿಯಿಂದ ಮಾಡಿದ್ದ ಟೀ ಸೇವಿಸಿದರೆ ಉರಿಯೂತ ಸಮಸ್ಯೆ ನಿವಾರಣೆ ಆಗಲಿದೆ.
  • ಶುಂಠಿಯನ್ನು ನೀರಿನೊಂದಿಗೆ ಕುದಿಸಿ ಅದರ ನೀರನ್ನು ಸೇವನೆ ಮಾಡಿದರೆ ಗ್ಯಾಸ್ಟ್ರಿಕ್‌ , ಅಲರ್ಜಿ, ಹೊಟ್ಟೆ ಉರಿಯಂತಹ ಸಮಸ್ಯೆ ನಿವಾರಣೆ ಆಗಲಿದೆ.
  • ಇದರಲ್ಲಿ ಇರುವ ರೋಗನಿರೋಧಕ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಬಲತುಂಬಲಿದೆ.
  • ಶುಂಠಿ ಸೇವನೆ ಮಾಡುವುದರಿಂದ ಮೇದೋಗ್ರಂಥಿಗಳ ಆರೋಗ್ಯ ವೃದ್ಧಿಯಾಗಿ ಚರ್ಮದ ಅನೇಕ ಸಮಸ್ಯೆ ನಿವಾರಣೆ ಆಗಲಿದೆ.

ಒಟ್ಟಿನಲ್ಲಿ ಶುಂಠಿಯಲ್ಲಿ ಅನೇಕ ಆರೋಗ್ಯಕ್ಕೆ ಪೂರಕವಾಗುವ ಅಂಶಗಳಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಕಂಡಂತೆ ಯಾವ ಪ್ರಯೋಗ ಗಳನ್ನು ನೇರವಾಗಿ ಬಳಕೆ ಮಾಡದೆ ಚರ್ಮರೋಗ ತಜ್ಞರ ವೈದ್ಯಕೀಯ ಸಲಹೆ ಪಡೆಯುವುದು ಸೂಕ್ತ.