ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jaggery Water: ಖಾಲಿ ಹೊಟ್ಟೆಯಲ್ಲಿ ಬೆಲ್ಲದ ನೀರು ಸೇವಿಸುವುದರಿಂದ ಈ ಆರೋಗ್ಯ ಲಾಭ ಇದೆ

ಬೆಲ್ಲದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ, ಪೊಟ್ಯಾಸಿಯಂ, ಸೋಡಿಯಂ, ಕಬ್ಬಿಣ, ಮ್ಯಾಂಗನೀಸ್,ಸೇರಿದಂತೆ ಹಲವು ಖನಿಜಗಳಿವೆ. ಬೆಲ್ಲವನ್ನು ಆಯುರ್ವೇದಲ್ಲೂ ಉತ್ತಮ ಎಂದು ಪರಿಗಣಿಸಲಾಗಿದೆ. ಬೆಲ್ಲದ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾ ರಿಸುವ ಜೊತೆಗೆ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಇದರಿಂದ ಪರಿಹಾರ ಪಡೆಯಬಹುದು.ಅದರಲ್ಲೂ ಬೆಲ್ಲವನ್ನು ನೀರಿನೊಂದಿಗೆ ಬೆರೆಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಲಾಭ ಪಡೆದು ಕೊಳ್ಳಬಹುದು.

ಬೆಲ್ಲದ ನೀರಿನ ಆರೋಗ್ಯ ಪ್ರಯೋಜನಗಳೇನು?

Profile Pushpa Kumari Jun 7, 2025 6:00 AM

ಬೆಂಗಳೂರು: ಸಕ್ಕರೆಗೆ ಹೋಲಿಕೆ ಮಾಡಿದರೆ ಬೆಲ್ಲವು ಆರೋಗ್ಯಕ್ಕೆ ಬಹಳ‌ ಒಳ್ಳೆಯದು. ಬೆಲ್ಲವು ನೈಸರ್ಗಿಕ ಸಿಹಿಕಾರಕ ವಾಗಿರುವುದರಿಂದ ಬೆಲ್ಲದ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮ ಎಂದು ಹೇಳಲಾಗುತ್ತದೆ. ಬೆಲ್ಲದಲ್ಲಿ ಕ್ಯಾಲ್ಸಿಯಂ, ಮೆಗ್ನೀ ಸಿಯಂ, ಪೊಟ್ಯಾಸಿಯಂ, ಸೋಡಿಯಂ, ಕಬ್ಬಿಣ, ಮ್ಯಾಂಗನೀಸ್,‌ ಸೇರಿದಂತೆ ಹಲವು ಖನಿಜಗಳಿವೆ. ಬೆಲ್ಲವನ್ನು ಆಯು ರ್ವೇದಲ್ಲೂ ಉತ್ತಮ ಎಂದು ಪರಿಗಣಿಸಲಾಗಿದೆ. ಬೆಲ್ಲದ ನೀರನ್ನು (Jaggery Water) ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವ ಜೊತೆಗೆ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಇದರಿಂದ ಪರಿಹಾರ ಪಡೆಯಬಹುದು. ಅದರಲ್ಲೂ ಬೆಲ್ಲವನ್ನು ನೀರಿನೊಂದಿಗೆ ಬೆರೆಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಲಾಭ ಪಡೆದುಕೊಳ್ಳಬಹುದು.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ:

ಬೆಲ್ಲವು ಮೆಗ್ನೀಸಿಯಮ್, ವಿಟಮಿನ್ ಬಿ 1, ಬಿ 6 ಮತ್ತು ಸಿ ಹೊಂದಿದೆ. ಇದರೊಂದಿಗೆ ಬೆಲ್ಲವು ಉತ್ಕರ್ಷಣ ನಿರೋಧಕ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ಯಾವುದೇ ರೋಗ ಹರಡದಂತೆ ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಬೆಲ್ಲದ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ರಕ್ತಹೀನತೆಗೆ ಉತ್ತಮ:

ಬೆಲ್ಲವು ಕಬ್ಬಿಣ ಮತ್ತು ಫೋಲೇಟ್ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಾಗಾಗಿ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಿದ್ದರೆ, ಬೆಲ್ಲದ ನೀರನ್ನು ಸೇವನೆ ಮಾಡಿ.ಇದರಿಂದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು.

ಚರ್ಮಕ್ಕೆ ಪ್ರಯೋಜನಕಾರಿ:

ಪ್ರತಿದಿನ ಬೆಲ್ಲದ ನೀರನ್ನು ಸೇವನೆ ಮಾಡಿದರೆ ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು ತ್ವಚೆಯನ್ನು ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ.

ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ:

ಬೆಳಗ್ಗೆ ಬೆಲ್ಲದ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಸಿಡಿಟಿ, ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಬಳಲುತ್ತಿರುವವರು ಬೆಲ್ಲದ ನೀರನ್ನು ದಿನ ನಿತ್ಯ ಬಳಸಿದರೆ ಈ ಸಮಸ್ಯೆ ನಿವಾರಣೆ ಮಾಡಬಹುದು.

ತೂಕ ಇಳಿಕೆಗೆ ಸಹಕಾರಿ:

ಪ್ರತಿ ದಿನ ಬೆಲ್ಲದ ನೀರು ಕುಡಿಯುವುದರಿಂದ ತೂಕ ಇಳಿಸಬಹುದು. ಇದು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಬೆಲ್ಲವನ್ನು ಬಿಸಿನೀರಿನೊಂದಿಗೆ ಸೇವಿಸುವುದರಿಂದ ನಿಮ್ಮ ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನು ಓದಿ: Health Tips: ಗಸಗಸೆ ಬೀಜಗಳು ಪಾಯಸಕ್ಕೊಂದೇ ಅಲ್ಲ, ಆರೋಗ್ಯಕ್ಕೂ ಬೇಕು

ಮಲಬದ್ಧತೆ ನಿವಾರಣೆ:

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರು ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬೆಲ್ಲದ ನೀರನ್ನು ಕುಡಿಯಬೇಕು. ಹೀಗೆ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಕಾರಿ:

ಬೆಲ್ಲದ ನೀರನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಿಸಬಹುದು. ಇದರಿಂದ ನೀವು ದಿನ ನಿತ್ಯ ಕ್ರೀಯಾ ಶೀಲರಾಗಿ ಮತ್ತು ಉಲ್ಲಾಸದಿಂದ ಇರುವಿರಿ. ಅದಕ್ಕಾಗಿಯೇ ಇದರ ಸೇವನೆಯು ಬಹಳಷ್ಟು ಪ್ರಯೋಜನಕಾರಿಯಾಗಿದೆ.

ಜ್ವರಕ್ಕೂ ರಾಮಬಾಣ:

ಬೆಲ್ಲವು ಶೀತ, ಕೆಮ್ಮು ಮತ್ತು ಜ್ವರದ ಸಮಸ್ಯೆ ನಿವಾರಿಸುತ್ತದೆ. ಇದು ಹಲವಾರು ಫೀನಾಲಿಕ್ ಸಂಯುಕ್ತಗಳಿಂದ ಕೂಡಿದೆ. ಇದು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಿ ದೇಹ ವಿಶ್ರಾಂತಿ ಪಡೆಯಲು ಸಹಕಾರಿ.

ಹೀಗೆ ತಯಾರಿಸಿ:

ಬೆಲ್ಲವನ್ನು ಸಂಪೂರ್ಣವಾಗಿ ಕರಗುವ ತನಕ ನೀರಿನಲ್ಲಿ ಕುದಿಸಿ. ಬಳಿಕ ಅದನ್ನು 10-15 ನಿಮಿಷಗಳ ಕಾಲ ತಣ್ಣಗಾಗಲು ಬಿಡಬೇಕು. ಬಳಿಕ ಅದಕ್ಕೆ ನಿಂಬೆಹಣ್ಣನ್ನು ಹಿಂಡಿ ಪುದೀನ ಎಲೆಗಳನ್ನು ಸೇರಿಸಿ ಕುಡಿಯಬಹುದು.