ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Clay Pot: ಬೇಸಿಗೆಯಲ್ಲಿ ಮಣ್ಣಿನ ಮಡಕೆಯಲ್ಲಿಟ್ಟು ನೀರು ಕುಡಿದರೆ ಈ ಪ್ರಯೋಜನಗಳಿವೆ!

ಈಗೆಲ್ಲಾ ಹೆಚ್ಚಿನವರು ಫಿಲ್ಟರ್‌ಗಳಲ್ಲಿ ತುಂಬಿಸಿಟ್ಟ ನೀರು, ಫ್ರಿಡ್ಜ್ ನೀರನ್ನೇ ಕುಡಿಯಲು ಇಷ್ಟ ಪಡುತ್ತಾರೆ. ಆದರೆ ಮಣ್ಣಿನ ಮಡಕೆಗಳು ನೀರನ್ನು ನೈಸರ್ಗಿಕವಾಗಿ ತಂಪಾಗಿಡುವುದರ ಜೊತೆಗೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡಲಿದೆ. ಆದರೆ ಆರೋಗ್ಯಕ್ಕೆ ಮಣ್ಣಿನ ಮಡಕೆಯ ನೀರು ಉತ್ತಮ ಎಂಬುದು ಬಹಳಷ್ಟು ಜನರಿಗೆ ತಿಳಿದೇ ಇಲ್ಲ.

ಮಣ್ಣಿನ ಪಾತ್ರೆಯಲ್ಲಿರುವ ನೀರು ಸೇವನೆಯಿಂದ ಸಿಗುವ ಆರೋಗ್ಯ ಲಾಭ!

Profile Pushpa Kumari Mar 19, 2025 6:00 AM

ನವದೆಹಲಿ: ಹಿಂದಿನ ಕಾಲದಲ್ಲೆಲ್ಲಾ ನೀರನ್ನು ಮಣ್ಣಿನ ಮಡಕೆಯಲ್ಲಿ (Clay Pot) ತುಂಬಿಸಿ ಉಪಯೋಗಿಸುತ್ತಿದ್ದರು. ಅದರಲ್ಲೂ ಭಾರತದಲ್ಲಿ ಕುಡಿಯುವ ನೀರನ್ನು ಮಣ್ಣಿನ ಪಾತ್ರೆಗಳಲ್ಲಿ ಇಡುವ ಸಂಪ್ರದಾಯ ಬಹಳ ಹಿಂದಿನಿಂದಲೂ ಇದೆ. ಆದರೆ ಈಗೆಲ್ಲಾ ಹೆಚ್ಚಿನವರು ಫಿಲ್ಟರ್‌ಗಳಲ್ಲಿ ತುಂಬಿಸಿಟ್ಟ ನೀರು, ಫ್ರಿಡ್ಜ್ ನೀರನ್ನೇ ಕುಡಿಯಲು ಇಷ್ಟ ಪಡುತ್ತಾರೆ. ಮಣ್ಣಿನ ಮಡಕೆಗಳು ನೀರನ್ನು ನೈಸರ್ಗಿಕವಾಗಿ ತಂಪಾಗಿಡುವುದರ ಜೊತೆಗೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡಲಿದೆ. ದೇಹದಲ್ಲಿನ ಶುಷ್ಕತೆ ಮತ್ತು ಶಾಖವನ್ನು ಸಮತೋಲನಗೊಳಿಸಲು ಮಣ್ಣಿನ ಮಡಕೆಯು ಬೇಸಿಗೆಯಲ್ಲಿ ಇದರ ಬಳಕೆ ಬಹಳಷ್ಟು ಉತ್ತಮವಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಹಾಗಾದರೆ ಮಣ್ಣಿನ ಪಾತ್ರೆಗಳನ್ನು ಬಳಸುವುದರಿಂದ ಏನೆಲ್ಲಾ ಪ್ರಯೋಜನ ಸಿಗಲಿದೆ. ಆರೋಗ್ಯಕ್ಕೆ ಮಣ್ಣಿನ ಪಾತ್ರೆಯಲ್ಲಿನ ನೀರನ್ನು ಸೇವನೆ ಮಾಡುವುದು ಎಷ್ಟು ಉತ್ತಮ ಎನ್ನುವ ಮಾಹಿತಿ ಇಲ್ಲಿದೆ.

ನೈಸರ್ಗಿಕವಾಗಿ ತಂಪಾಗಿಸುತ್ತವೆ:

ಮಣ್ಣಿನ ಮಡಕೆಯನ್ನು ಬಳಸುವುದರಿಂದ ಉತ್ತಮ‌ ಪ್ರಯೋಜನವೆಂದರೆ ಇದು ನೀರನ್ನು ನೈಸರ್ಗಿಕವಾಗಿ ತಂಪಾಗಿಸುವ ಗುಣಲಕ್ಷಣ ಹೊಂದಿದೆ. ಜೇಡಿಮಣ್ಣಿನ ಮಡಕೆಗಳು ಸರಂಧ್ರ ಸ್ವಭಾವವನ್ನು ಹೊಂದಿದ್ದು, ಇದು ಮಡಕೆಯ ಮೇಲ್ಮೈಯಲ್ಲಿ ಬೇಗನೆ ಆವಿಯಾಗುತ್ತದೆ.ಈ ಆವಿಯಾಗುವ ಪ್ರಕ್ರಿಯೆಯು ಮಡಕೆಯೊಳಗೆ ನೀರನ್ನು ಆಹ್ಲಾದಕರವಾದ ತಂಪಾಗಿಇರಿಸುತ್ತದೆ, ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವುದು ಬಹಳಷ್ಟು ಆರೋಗ್ಯಕ್ಕೆ ಒಳಿತು. ಫ್ರಿಡ್ಜ್ ನಲ್ಲಿಟ್ಟ ನೀರು ಇದು ತುಂಬಾ ತಂಪಾಗಿದ್ದರೂ ಗಂಟಲಿನ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಆದರೆ ಮಣ್ಣಿನ ಮಡಕೆಯ ನೀರು ನೈಸರ್ಗಿಕವಾಗಿ ರಿಫ್ರೆಶ್ ಇರಲಿದ್ದು ದೇಹವನ್ನು ತಂಪಾಗಿಸುತ್ತದೆ.

ಸನ್‌ ಸ್ಟ್ರೋಕ್‌ ನಿವಾರಣೆ

ಮಣ್ಣಿನ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿಟ್ಟರೆ , ಅದು ಮಣ್ಣಿನಲ್ಲಿರುವ ಖನಿಜಗಳೊಂದಿಗೆ ಬೆರೆತು ನೀರಿನ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಮಣ್ಣಿನ ಪಾತ್ರೆಗಳಲ್ಲಿ ಸಂಗ್ರಹವಾಗಿರುವ ನೀರಿನಿಂದ ಜೀವಸತ್ವಗಳು ಮತ್ತು ಖನಿಜಗಳು ದೇಹದ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಿ ದೇಹಕ್ಕೆ ಕೂಲಿಂಗ್ ಪರಿಣಾಮವನ್ನು ನೀಡುತ್ತದೆ. ಜೇಡಿಮಣ್ಣಿನ ಕ್ಷಾರೀಯ ಸ್ವಭಾವವು ನೀರಿನಲ್ಲಿ ಆಮ್ಲೀಯತೆಯನ್ನು ತಟಸ್ಥಗೊಳಿಸುತ್ತದೆ. ಇದು ದೇಹದಲ್ಲಿ ಸಮತೋಲಿತ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸನ್ ಸ್ಟ್ರೋಕ್ ನಿವಾರಣೆಗೂ ಸಹಾಯಕ.

ಜೀರ್ಣಕ್ರಿಯೆಗೆ ಸಹಕಾರಿ:

ಮಣ್ಣಿನ ಮಡಕೆಯಿಂದ ನೀರು ಕುಡಿಯುವುದರಿಂದ ದೇಹದ ಚಯಾಪಚಯ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯಕವಾಗಲಿದೆ. ಜೇಡಿ ಮಣ್ಣಿನಲ್ಲಿರುವ ಖನಿಜಗಳು ನೀರಿನಲ್ಲಿರುವ ಪೋಷಕಾಂಶ ಹೆಚ್ಚಿಸಿ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಆಹಾರದಿಂದ ಪೋಷಕಾಂಶ ಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಉತ್ತಮ ಚಯಾಪಚಯ ಮತ್ತು ಸುಧಾರಿತ ಕರುಳಿನ ಆರೋಗ್ಯವನ್ನು ಹೆಚ್ಚಿಸಿ‌ಜೀರ್ಣಾಂಗ ಅಸ್ವಸ್ಥತೆ ಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

ಸುಧಾರಿತ ರುಚಿ:

ಜೇಡಿಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ವಿಶಿಷ್ಟವಾದ, ಆಹ್ಲಾದಕರವಾದ ರುಚಿಯನ್ನು ಹೊಂದಿರುತ್ತದೆ. ಇದು ಪ್ಲಾಸ್ಟಿಕ್ ಅಥವಾ ಲೋಹದ ಪಾತ್ರೆಗಳಲ್ಲಿ ಸಂಗ್ರಹಿಸಲಾದ ನೀರಿಗಿಂತ ಹೆಚ್ಚು ರುಚಿ ನೀಡಲಿದೆ. ಮಣ್ಣಿನ ಪಾತ್ರೆಯಲ್ಲಿ ಉಂಟು ಮಾಡುವ ನೈಸರ್ಗಿಕ ಪ್ರಕ್ರಿಯೆಯು ಕಲ್ಮಶಗಳನ್ನು ತೆಗೆದುಹಾಕಿ ನೀರಿಗೆ ಸೌಮ್ಯವಾದ ಮಣ್ಣಿನ ಪರಿಮಳವನ್ನು ನೀಡಲಿದೆ.‌ ಇದು ಕುಡಿಯುವ ನೀರನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ ಮತ್ತು ದಿನವಿಡೀ ದೇಹವನ್ನು ಹೈಡ್ರೀಕರಿಸಿದಂತೆ ಇರಿಸಲಿದೆ.

ಪರಿಸರ ಸ್ನೇಹಿ:

ನೀರನ್ನು ಸಂಗ್ರಹಿಸಲು ಮಣ್ಣಿನ ಮಡಕೆಯನ್ನು ಬಳಸುವುದು ಪರಿಸರ ಸ್ನೇಹಿ ಆಯ್ಕೆಯಾಗಿದೆ. ಪ್ಲಾಸ್ಟಿಕ್ ಬಾಟಲಿಗಳು ಅಥವಾ ಲೋಹದ ಪಾತ್ರೆ ಗಳಿಗಿಂತ ಭಿನ್ನವಾಗಿ, ಮಣ್ಣಿನ ಮಡಕೆಗಳನ್ನು ನೈಸರ್ಗಿಕ, ಜೈವಿಕ ವಿಘ ಟನೀಯ ವಸ್ತುಗಳಿಂದ ತಯಾರಿಸಲಾಗುತ್ತದೆ, ಇದು ಪರಿಸರಕ್ಕೆ ಯಾವು ದೇ ರೀತಿಯಲ್ಲಿ‌ ಹಾನಿಯಾಗುವುದಿಲ್ಲ. ಮಣ್ಣಿನ ಮಡಕೆಯನ್ನು ಆರಿಸುವ ಮೂಲಕ, ನೀವು ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಪ್ಲಾಸ್ಟಿಕ್ ಬಾಟಲಿಗಳ ತಯಾರಿಕೆ ಮತ್ತು ವಿಲೇವಾರಿಗೆ ಸಂಬಂಧಿಸಿದ ಪರಿಸರದ ಹಾನಿಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.

ರಾಸಾಯನಿಕ ಮುಕ್ತ:

ಮಣ್ಣಿನ ಮಡಕೆಗಳು ರಾಸಾಯನಿಕ ಮುಕ್ತವಾಗಿದ್ದು‌ ಇತರ ಪ್ಲಾಸ್ಟಿಕ್ ಪಾತ್ರೆಗಳು ಹಾನಿಕಾರಕ ರಾಸಾಯನಿಕಗಳನ್ನು ನೀರಿನಲ್ಲಿ ಸೇರಿ ಆರೋ ಗ್ಯದ ಅಪಾಯಗಳನ್ನು ಉಂಟುಮಾಡಬಹುದು. ನಾವು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವಾಗ, ಅದರಲ್ಲಿ ಬಿಸ್ಫೆನಾಲ್ ಎ ಅಥವಾ ಬಿಪಿಎಯಂತಹ ವಿಷಕಾರಿ ರಾಸಾಯನಿಕ ಅಂಶ ಸೇರಿ ಇದು ದೇಹಕ್ಕೆ ಅನೇಕ ರೀತಿಯಲ್ಲಿ ಹಾನಿ ಮಾಡಬಹುದು.

ಮಾಲಿನ್ಯಕಾರಕ ಕಡಿಮೆ:

ಜೇಡಿಮಣ್ಣಿನ ಸರಂಧ್ರ ಸ್ವಭಾವವು ನೈಸರ್ಗಿಕ ಫಿಲ್ಟರ್ ಆಗಿ ಕಾರ್ಯ ನಿರ್ವಹಿಸುತ್ತದೆ, ನೀರಿನಲ್ಲಿ ಇರುವ ಕಲ್ಮಶಗಳು ಮತ್ತು ವಿಷಗಳನ್ನು ಇದು ಹಿಡಿದಿಟ್ಟುಕೊಳ್ಳುತ್ತದೆ. ಈ ನೈಸರ್ಗಿಕ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹ ವಾಗಿರುವ ನೀರು ಮಾಲಿನ್ಯಕಾರಕಗಳ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ,

ಇದನ್ನು ಓದಿ: Health Tips: ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಎಂದಿಗೂ ಇಡ್ಬೇಡಿ

​ಆಸಿಡಿಟಿ ಸಮಸ್ಯೆಗೆ ಮುಕ್ತಿ:

ಮಣ್ಣಿನ ಪಾತ್ರೆಗಳಲ್ಲಿ ತುಂಬಿಸಿಟ್ಟ ನೀರನ್ನು ಕುಡಿಯುವುದರಿಂದ ಅಸಿ ಡಿಟಿಯಂತಹ ಸಮಸ್ಯೆಗಳು ಹೋಗಲಾಡಿಸಲು ಸಹಾಯ ಮಾಡ ಲಿದೆ. ಮಣ್ಣು ಪ್ರಕೃತಿಯಲ್ಲಿ ಕ್ಷಾರೀಯವಾಗಿದ್ದು ಅದು ಸಾಕಷ್ಟು pH ಸಮ ತೋಲನ ವನ್ನು ಒದಗಿಸುತ್ತದೆ. ಈ ಮೂಲಕ ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಂಬಂಧಿತ ಸಮಸ್ಯೆಯನ್ನು ದೂರವಿಡುತ್ತದೆ

ದೇಹ ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸುತ್ತದೆ:

ಮಣ್ಣಿನ ಮಡಕೆಗಳಲ್ಲಿ ನೀರು ತುಂಬಿಸಿ ಇಟ್ಟಿರುವುದರಿಂದ ಹಲವು ಜೀವಸತ್ವಗಳು ಮತ್ತು ಪ್ರಯೋಜನಕಾರಿ ಖನಿಜಾಂಶಗಳು ದೊರಕಲಿದೆ. ಹಾಗಾಗಿ ಈ ನೀರು ಕುಡಿಯುವುದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳ ಮಟ್ಟ ಹೆಚ್ಚಿ ಇದರಿಂದ ನಿರ್ಜಲೀಕರಣದ ಅಪಾಯ ಕಡಿಮೆಯಾಗುತ್ತದೆ.