Health Tips: ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಸಿಗಲಿದೆ ಇಷ್ಟೆಲ್ಲ ಆರೋಗ್ಯ ಭಾಗ್ಯ
ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿದ್ದು, ದೇಹವನ್ನು ನಿರ್ಜಲೀಕರಣದಿಂದ ಪಾರು ಮಾಡಿ, ಹೈಡ್ರೇಟೆಡ್ ಆಗಿರಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ಇದು ದೇಹದ ಉಷ್ಣಾಂಶವನ್ನು ಸಮಸ್ಥಿತಿಗೆ ತರುತ್ತದೆ. ಇಷ್ಟು ಮಾತ್ರವಲ್ಲದೆ ಕಲ್ಲಂಗಡಿ ಸೇವನೆಯಿಂದ ಯಾವೆಲ್ಲ ಆರೋಗ್ಯ ಲಾಭ ಇದೆ ಎನ್ನುವ ಮಾಹಿತಿ ಇಲ್ಲಿದೆ.
![ಕಲ್ಲಂಗಡಿ ಹಣ್ಣಿನ ಸೇವನೆಯಿಂದಾಗುವ ಅನುಕೂಲಗಳು](https://cdn-vishwavani-prod.hindverse.com/media/original_images/watermelon.jpg)
watermelon
![Profile](https://vishwavani.news/static/img/user.png)
ನವದೆಹಲಿ: ಆರೋಗ್ಯಕ್ಕೆ ಉತ್ತಮವಾದ ಹಣ್ಣುಗಳಲ್ಲಿ ಕಲ್ಲಂಗಡಿ (Water Mealon) ಪ್ರಮುಖವಾದುದು. ಈ ಹಣ್ಣಿನಲ್ಲಿ ಕ್ಯಾಲೊರಿ ಕಡಿಮೆ ಇದ್ದು, ಯಾವ ವಯಸ್ಸಿನವರೂ ನಿಯ ಮಿತವಾಗಿ ಸೇವಿಸಬಹುದು. ಅದರಲ್ಲೂ ಬೇಸಗೆಯಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಕಲ್ಲಂಗಡಿ ಬಾಯಾರಿಕೆಯನ್ನು ನೀಗಿಸುವುದು ಮಾತ್ರವಲ್ಲದೇ ದೇಹದ ತೇವಾಂಶವನ್ನು ಉಳಿಸುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಜೀವಸತ್ವ, ಖನಿಜ ಮತ್ತು ಇತರ ಪೋಷಕಾಂಶಗಳನ್ನು ಹೇರಳವಾಗಿದೆ. ಬೇಸಗೆಯಲ್ಲಿ ದೇಹದಲ್ಲಿನ ನೀರಿನಾಂಶ ಕಾಪಾಡಿಕೊಳ್ಳುವುದು ಸಹಿತ ಇದು ಹಲವು ರೀತಿಯ ಆರೋಗ್ಯ ಸಮಸ್ಯೆ ಸುಧಾರಿಸಲು ನೆರವಾಗುತ್ತದೆ. ಕಲ್ಲಂಗಡಿ ಸೇವನೆಯಿಂದ ಯಾವೆಲ್ಲ ಆರೋಗ್ಯ ಲಾಭ ಇದೆ ಎನ್ನುವ ಮಾಹಿತಿ ಇಲ್ಲಿದೆ.
ದೇಹವನ್ನು ಹೈಡ್ರೇಟೆಡ್ ಆಗಿ ಇರಿಸುತ್ತದೆ
ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿದ್ದು, ದೇಹವನ್ನು ನಿರ್ಜಲೀಕರಣದಿಂದ ಪಾರು ಮಾಡಿ, ಹೈಡ್ರೇಟೆಡ್ ಆಗಿರಿಸುವಲ್ಲಿ ನೆರವಾಗುತ್ತದೆ. ಇದು ದೇಹದ ಉಷ್ಣಾಂಶವನ್ನು ಸಮಸ್ಥಿತಿಗೆ ತರುತ್ತದೆ. ಮಾತ್ರವಲ್ಲ ಜೀವಕೋಶಗಳಿಗೆ ಪೋಷಕಾಂಶವನ್ನು ಒದಗಿಸುವ ಜತೆಗೆ ಅಂಗಾಂಶಗಳ ಕಾರ್ಯ ಸುಧಾರಣೆಗೆ ನೆರವಾಗುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಣೆ
ಅಮೈನೋ ಆಮ್ಲವಾದ ಎಲ್ ಸಿಟ್ರುಲಿನ್ ಅಂಶ ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅಮೈನೋ ಆಮ್ಲ ನಿಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಜತೆಗ ದೇಹದಲ್ಲಿನ ಸಕ್ಕರೆ ಮಟ್ಟವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಚರ್ಮದ ಕಾಂತಿ ಹೆಚ್ಚಳ
ಕಲ್ಲಂಗಡಿ ಹಣ್ಣು ಚರ್ಮದ ಆರೈಕೆಗೂ ಉತ್ತಮ. ಕಲ್ಲಂಗಡಿ ಸೇವನೆಯಿಂದ ಚರ್ಮ ಸುಕ್ಕು ಗಟ್ಟುವುದು, ನೆರಿಗೆ ಬೀಳುವುದನ್ನು ತಡೆಯಬಹುದು. ಇದರಲ್ಲಿನ ಕೊಲಾಜನ್ ಅಂಶ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಮಿಟಮಿನ್ ಎ ಮುಖದಲ್ಲಿನ ಎಣ್ಣೆ ಅಂಶವನ್ನು ತಡೆಯುತ್ತದೆ. ಮುಖದ ಕಾಂತಿಯನ್ನು ಮತ್ತಷ್ಟು ಹೊಳೆಯುವಂತೆ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಕಲ್ಲಂಗಡಿ ಹಣ್ಣಿನಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಬಹಳಷ್ಟು ಸಹಕಾರಿ. ಅಲ್ಲದೆ ಇದರಲ್ಲಿನ ನಾರಿನಾಂಶವು ಜೀರ್ಣಕ್ರಿಯೆಗೆ ನೆರವಾಗುತ್ತದೆ ಮತ್ತು ಹೊಟ್ಟೆ ತುಂಬಿದ ಭಾವನೆ ಉಂಟು ಮಾಡಿ ಪದೇ ಪದೆ ತಿಂಡಿ ತಿನ್ನುವ ಅಭ್ಯಾಸವನ್ನು ತಪ್ಪಿಸುತ್ತದೆ.
ಉರಿಯೂತದ ವಿರುದ್ಧ ಹೋರಾಡಲು ಸಹಕಾರಿ
ಉರಿಯೂತವು ಹೃದ್ರೋಗ, ಕ್ಯಾನ್ಸರ್ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಕಲ್ಲಂಗಡಿ ಹಣ್ಣು ಉರಿಯೂತದ ವಿರುದ್ಧ ಹೋರಾಡುತ್ತದೆ.
ಇದನ್ನು ಓದಿ: Health Tips: ಎಷ್ಟೇ ಓದಿದರೂ ನೆನಪಿನಲ್ಲಿ ಉಳಿಯುತ್ತಿಲ್ಲವೇ? ಈ ಟ್ರಿಕ್ಸ್ ಫಾಲೋ ಮಾಡಿ
ಇಂಜೆಕ್ಷನ್ ಕೊಟ್ಟ ಕಲ್ಲಂಗಡಿ ಹಣ್ಣು ಗುರುತಿಸುವುದು ಹೇಗೆ?
- ನೀವು ಖರೀದಿಸುವ ಕಲ್ಲಂಗಡಿ ಸಾಮಾನ್ಯಕ್ಕಿಂತ ಹೆಚ್ಚು ಕೆಂಪಾಗಿದ್ದರೆ, ಅದಕ್ಕೆ ರಾಸಾಯನಿಕ ಇಂಜೆಕ್ಟ್ ಮಾಡಲಾಗಿದೆ ಎಂದರ್ಥ.
- ಕಲ್ಲಂಗಡಿ ಖರೀದಿಸುವಾಗ ಚೆನ್ನಾಗಿ ಪರೀಕ್ಷಿಸಿ. ಅವುಗಳ ಮೇಲೆ ಎಲ್ಲಿಯಾದರೂ ರಂಧ್ರಗಳಿದ್ದರೆ ಅವುಗಳನ್ನು ಖರೀದಿಸಬೇಡಿ. ರಂಧ್ರವಿರುವ ಕಲ್ಲಂಗಡಿಗಳಿಗೆ ಇಂಜೆಕ್ಷನ್ ನೀಡಿರುವ ಸಾಧ್ಯತೆ ಇದೆ.
- ತಾಜಾ ಕಲ್ಲಂಗಡಿ ಸಿಹಿ ಮತ್ತು ಸುವಾಸನೆ ಹೊಂದಿರಬೇಕು. ಕಲ್ಲಂಗಡಿ ವಾಸನೆ ಅಥವಾ ಅಸಾಮಾನ್ಯ ರುಚಿಯನ್ನು ಹೊಂದಿದ್ದರೆ ಇದಕ್ಕೆ ರಾಸಾಯನಿಕ ಬೆರೆಸಲಾಗಿದೆ ಎಂದರ್ಥ.
- ಕಲ್ಲಂಗಡಿ ಹಣ್ಣಿನ ಸಿಪ್ಪೆ ತೆಳುವಾಗಿ ಕಂಡು ಬಂದರೆ ಅಥವಾ ರುಚಿಯಲ್ಲಿ ಬದಲಾವಣೆ ಕಂಡು ಬಂದರೆ ಅದು ಕೃತಕ ಹಣ್ಣು ಆಗಿರುವ ಸಾಧ್ಯತೆ ಇದೆ.