Health Tips: ಎಷ್ಟೇ ಓದಿದರೂ ನೆನಪಿನಲ್ಲಿ ಉಳಿಯುತ್ತಿಲ್ಲವೇ? ಈ ಟ್ರಿಕ್ಸ್ ಫಾಲೋ ಮಾಡಿ
ಮಕ್ಕಳಿಗೆ ಯೋಗಾಸನ ಅಭ್ಯಾಸ ಮಾಡುವುದರಿಂದ ಪರೀಕ್ಷೆಯಲ್ಲಿ ಮಾನಸಿಕ ಒತ್ತಡ ಬಾರದಂತೆ ತಡೆಯಬಹುದು. ಹಾಗಾಗಿ ಮಕ್ಕಳಿಗಾಗಿಯೇ ಕೆಲವೊಂದು ಆಸನಗಳಿದ್ದು ಇದನ್ನು ಕಲಿಯುವುದರಿಂದ ಪಠ್ಯಾಭ್ಯಾಸ ನೆನಪಿರುವ ಜೊತೆಗೆ ಪಠ್ಯೇತರ ಚಟುವಟಕೆಗಳಲ್ಲಿಯೂ ಮಕ್ಕಳು ಸಕ್ರಿಯವಾಗಿರುತ್ತಾರೆ. ಹಾಗಾಗಿ ಮಕ್ಕಳ ಸರ್ವತೋಮುಖ ಏಳ್ಗೆಗೆ ಇಂತಹ ಆಸನಗಳ ನಿತ್ಯ ಹವ್ಯಾಸವಾಗಿ ಮಕ್ಕಳಲ್ಲಿ ಅಭ್ಯಾಸ ಮಾಡಿಸಬೇಕು. ಹಾಗಿದ್ದರೆ ಅದ್ಯಾವ ಆಸನಗಳೆಂದು ನೋಡೋಣ.
![ನೆನಪಿನ ಶಕ್ತಿ ವೃದ್ಧಿಗೆ ಈ ಯೋಗಾಸನ ಟ್ರೈ ಮಾಡಿ](https://cdn-vishwavani-prod.hindverse.com/media/original_images/yoga.jpg)
yoga
![Profile](https://vishwavani.news/static/img/user.png)
ನವದೆಹಲಿ: ದಿನ ನಿತ್ಯ ಎಷ್ಟೇ ಅಭ್ಯಾಸ ಮಾಡಿದರೂ ಪರೀಕ್ಷೆಯಲ್ಲಿ ಉತ್ತರ ನೆನಪೇ ಬಾರದಂತಾಗುವುದು. ಏಕಾಗ್ರತೆಯ ಸಮಸ್ಯೆ ಉಂಟಾಗುವುದು ಇತ್ಯಾದಿ ಮಕ್ಕಳಲ್ಲಿ ಇಂದು ಸಾಮಾನ್ಯವಾಗಿದೆ. ಹಾಗಾಗಿ ಮನಸ್ಸನ್ನು ಪಠ್ಯ ವಿಷಯಗಳಿಗೆ ಕೇಂದ್ರೀಕರಿಸಬೇಕಾದರೆ ಯೋಗ, ಧ್ಯಾನ, ವ್ಯಾಯಾಮದಂತಹ (Yoga exercises) ದೈಹಿಕ ಚಟುವಟಿಕೆಗಳು ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಮಕ್ಕಳಿಗೆ ಯೋಗಾಸನ ಅಭ್ಯಾಸ ಮಾಡುವುದರಿಂದ ಪರೀಕ್ಷೆಯಲ್ಲಿ ಮಾನಸಿಕ ಒತ್ತಡ ಬಾರದಂತೆ ತಡೆಯಬಹುದು(Health Tips). ಹಾಗಾಗಿ ಮಕ್ಕಳಿಗಾಗಿಯೇ ಕೆಲವೊಂದು ಆಸನಗಳಿದ್ದು ಇದನ್ನು ಕಲಿಯುವುದರಿಂದ ಪಠ್ಯಾಭ್ಯಾಸ ನೆನಪಿರುವ ಜೊತೆಗೆ ಪಠ್ಯೇತರ ಚಟುವಟಕೆಗಳಲ್ಲಿಯೂ ಮಕ್ಕಳು ಸಕ್ರಿಯವಾಗಿರುತ್ತಾರೆ. ಹಾಗಾಗಿ ಮಕ್ಕಳ ಸರ್ವತೋಮುಖ ಏಳ್ಗೆಗೆ ಇಂತಹ ಆಸನಗಳನ್ನು ನಿತ್ಯ ಹವ್ಯಾಸವಾಗಿ ಮಕ್ಕಳಲ್ಲಿ ಬೆಳೆಸಬೇಕು.
ಬಾಲಾಸನ:
![ಬಾಲಾಸನ](https://cdn-vishwavani-prod.hindverse.com/media/images/blsn.width-800.png)
ಇದನ್ನು ಚೈಲ್ಡ್ ಪೋಸ್ ಎಂದು ಕೂಡ ಕರೆಯುತ್ತಾರೆ. ಮಕ್ಕಳಿಗೆ ಮಾಡುವ ಬಹಳ ಸುಲಭದ ಆಸನ ಎಂದು ಹೇಳಬಹುದು. ಬೆನ್ನನ್ನು ನಿಧಾನವಾಗಿ ಹಿಗ್ಗಿಸಿ ಆಳವಾಗಿ ಉಸಿರಾಟ ಮಾಡುವ ಒಂದು ವಿಧಾನ ಇದಾಗಿದೆ . ಮಕ್ಕಳ ಮೆದುಳಿನ ಬೆಳವಣಿಗೆಗೆ ಬಹಳ ಸಹಕಾರಿಯಾದ ಯೋಗಾಸನ ಇದಾಗಿದ್ದು ನರಮಂಡಲದ ಒತ್ತಡ ನಿವಾರಣೆಗೆ ಬಹಳ ಸಹಕಾರಿಯಾಗಿದೆ. ನಿತ್ಯ 3-5 ನಿಮಿಷ ಮಾಡಿದರೆ ಮನಸ್ಸು ಕೇಂದ್ರೀಕರಿಸಲು ಈ ಯೋಗ ಭಂಗಿ ಉಪಯುಕ್ತವಾಗಲಿದೆ.
ವೃಕ್ಷಾಸನ:
ಮಕ್ಕಳ ಮೆದುಳಿನ ಬೆಳವಣಿಗೆ ಹೆಚ್ಚಿಸುವ ಜೊತೆಗೆ ಒತ್ತಡ ನಿವಾರಿಸಿ ಓದುವ ವಿಚಾರದಲ್ಲಿ ಏಕಾಗ್ರತೆ ಮೂಡಿಸಲು ವೃಕ್ಷಾಸನ ಬಹಳ ಮುಖ್ಯ ಪಾತ್ರ ನಿರ್ವಹಿಸಲಿದೆ. ಮೊದಲು ನಿಂತು ಕೊಂಡು ಕೈ ಮೇಲೆ ಮಾಡಿ ನಮಸ್ಕರಿಸಬೇಕು ಬಳಿಕ ಒಂದು ಕಾಲನ್ನು ಅರ್ಧಕ್ಕೆ ಮಡಚಿ ಇನ್ನೊಂದು ಕಾಲಿಗೆ ತಾಗುವ ಹಾಗೆ ಮಾಡಿ ಧ್ಯಾನ ಮಾಡಬೇಕು. ಇದರಿಂದ ಮಕ್ಕಳಿಗೆ ಪರೀಕ್ಷೆ ಸಂಬಂಧಿಸಿದ ಆತಂಕ ದೂರ ಮಾಡಿ ಸ್ಥಿರ ಮನಸ್ಥಿತಿ ನೆಲೆಯಾಗುವಂತೆ ಮಾಡಲಿದೆ.
![ತಾಡಾಸನ](https://cdn-vishwavani-prod.hindverse.com/media/images/tdsn.width-800.jpg)
ತಾಡಾಸನ:
ಇದನ್ನು ಪರ್ವತ ಭಂಗಿ ಎಂದು ಸಹ ಕರೆಯುತ್ತಾರೆ. ಮಕ್ಕಳಲ್ಲಿ ಆತ್ಮ ವಿಶ್ವಾಸ ವೃದ್ಧಿಸುವ ಸಲುವಾಗಿ ತಾಡಾಸನ ಅಭ್ಯಾಸ ಮಾಡಬೇಕು. ನಿಂತಿದ್ದ ಭಂಗಿಯಲ್ಲಿ ಎರಡು ಕೈಯನ್ನು ಜೋಡಿಸುವ ಮೂಲಕ ಈ ಆಸನ ಮಾಡುತ್ತಾ ನಮ್ಮ ಉಸಿರಾಟ ಪ್ರಕ್ರಿಯೆಯನ್ನು ಏಕಾಗ್ರತೆಯಿಂದ ಗಮನಿಸಬೇಕು. 5-6 ಬಾರಿ ಈ ಆಸನ ಮಾಡುವುದರಿಂದ ಮಾನಸಿಕ ಸದೃಢತೆ ಜೊತೆಗೆ ಮಕ್ಕಳ ದೈಹಿಕ ಬೆಳವಣಿಗೆಗೆ ಕೂಡ ಈ ಆಸನ ಸಹಕಾರಿ ಆಗಲಿದೆ.
ಪಾದ ಹಸ್ತಾಸನ:
![ಪದಹಸ್ತಾಸನ](https://cdn-vishwavani-prod.hindverse.com/media/images/pdhstsn.width-800.jpg)
ಮಕ್ಕಳ ಮೆದುಳಿನ ರಕ್ತ ಸಂಚಲನ ಆರೋಗ್ಯಯುತವಾಗಲು ಪಾದ ಹಸ್ತಾಸನ ಬಹಳ ಸಹಕಾರಿ ಆಗಲಿದೆ. ಮೊದಲಿಗೆ ನಿಂತುಕೊಂಡು ಕೈ ಮೇಲೆ ಮಾಡಿ ನಮಸ್ಕರಿಸಿ ಬಳಿಕ ನೆಲಮುಖವಾಗಿ ಬಾಗಬೇಕು. ಬಳಿಕ ನಿಮ್ಮ ಎರಡು ಕಾಲುಗಳ ಹಿಂಭಾಗಕ್ಕೆ ಕೈ ಒಂದು ಸುತ್ತು ತಂದು ಉಸಿರಾಟ ಗಮನಿಸಬೇಕು. ಈ ರೀತಿ ಮಾಡುವುದರಿಂದ ಮಕ್ಕಳ ಆಯಾಸ ಕಡಿಮೆ ಮಾಡಲಿದೆ ಜೊತೆಗೆ ಒತ್ತಡ ಸಹ ನಿವಾರಣೆ ಆಗಲಿದೆ.
ಮಾರ್ಜಾಲಾಸನ:
![ಮಾರ್ಜಲಾಸನ](https://cdn-vishwavani-prod.hindverse.com/media/images/mrjlsn.width-800.png)
ಇದನ್ನು ಬೆಕ್ಕಿನ ಭಂಗಿ ಎಂದು ಸಹ ಕರೆಯುತ್ತಾರೆ. ಬೆಕ್ಕಿನಂತೆ ಎರಡು ಕೈ ನೆಲದ ಮೇಲೆ ಊರಿ ಇರಬೇಕು ಬಳಿಕ ಕಿಬ್ಬೊಟ್ಟೆಯಿಂದ ಉಸಿರು ತೆಗೆದುಕೊಳ್ಳುವುದು ಮತ್ತು ಬಿಡುವುದನ್ನು ನಿಧಾನವಾಗಿ ಮಾಡಬೇಕು. ಈ ಆಸನ ಮಾಡುವುದರಿಂದ ಮಕ್ಕಳ ಮನಸ್ಸು ಶಾಂತವಾಗಿರುತ್ತದೆ.
ಪಶ್ಚಿಮೋತ್ತಾಸನ:
ಇದು ಮಕ್ಕಳಿಗೆ ದೈಹಿಕ ಸದೃಢತೆಗೆ ಸಹಕಾರಿ ಆಗಲಿದೆ. ದೇಹಕ್ಕೆ ಸ್ವಲ್ಪ ವ್ಯಾಯಾಮ ಸಿಕ್ಕಂತಾಗಲಿದೆ. ನೆಲದ ಮೇಲೆ ಕಾಲು ಉದ್ದವಾಗಿ ಕುಳಿತುಕೊಂಡು ಪಾದವನ್ನು ಮುಟ್ಟುವ ಯೋಗ ಇದಾಗಿದ್ದು 12 ಸಲ ಬ್ರಿತ್ ಇನ್ ಮತ್ತು ಔಟ್ ಮಾಡುವುದರಿಂದ ಮಕ್ಕಳ ಏಕಾಗ್ರತೆ ಇದರಿಂದ ಹೆಚ್ಚಾಗಲಿದೆ.
ವಿಪರೀತ ಕರಣಿ ಆಸನ:
ವಿಪರೀತ ಕರಣಿ ಆಸನ ನಿತ್ಯ 4 ಬಾರಿ ಮಾಡಿದರೆ ಮಕ್ಕಳ ದೈಹಿಕ ಮತ್ತು ಮಾನಸಿಕ ಆಯಾಸ ಕಡಿಮೆಯಾಗಲಿದೆ. ನೆಲದ ಮೇಲೆ ಮಲಗಿ ಕಾಲನ್ನು ಮೇಲಕ್ಕೆ ಮಾಡುವ ಭಂಗಿ ಈ ಆಸನದಲ್ಲಿದ್ದು ದೇಹದ ರಕ್ತ ಸಂಚಾರಕ್ಕೆ ಬಹಳ ಸಹಕಾರಿ ಆಗಲಿದೆ.
ಗರುಡಾಸನ:
![Garudasana - 1_0](https://cdn-vishwavani-prod.hindverse.com/media/images/Garudasana_-_1_0.width-800.jpg)
ಒತ್ತಡ ರಹಿತವಾಗಿ ಕಲಿಯುವ ವಿಚಾರದ ಕಡೆ ಮಕ್ಕಳ ಮನಸ್ಸು ಕೇಂದ್ರೀಕರಿಸಲು ಗರುಡಾಸನ ಸಹಕಾರಿ ಆಗಿದೆ. ಒಂಟಿ ಕಾಲಿನಲ್ಲಿ ನಿಂತು ಕೈಗಳನ್ನು ಒಂದಕ್ಕೊಂದು ಬಂಧಿಯಾಗುವಂತೆ ಮಾಡುವ ಭಂಗಿ ಇದಾಗಿದ್ದು ಮಕ್ಕಳಲ್ಲಿ ಧನಾತ್ಮಕ ಆಲೋಚನೆ, ಚಿಂತನೆ ಮೂಡಿಸಲಿದೆ.
ಧ್ಯಾನ ಭಂಗಿ:
ಕುಳಿತಲ್ಲಿಯೆ ಪದ್ಮಾಸನ ಹಾಕಿ ಕೈಗಳನ್ನು ಧಾನ್ಯ ಮುದ್ರೆ ಮಾಡಿ ಧ್ಯಾನ ಮಾಡಬೇಕು. ಈ ಧ್ಯಾನ ಭಂಗಿಯಿಂದ ಮಕ್ಕಳಲ್ಲಿ ಭಾವನಾತ್ಮಕ ಸಮಸ್ಯೆಗಳು ನಿವಾರಣೆ ಆಗಲಿದೆ. ಈ ಆಸನ ಅಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡ ಇಲ್ಲದೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಮನೋಬಲ ಸಿದ್ಧಿಯಾಗಲಿದೆ.
ಇದನ್ನು ಓದಿ: Health Tips :ಆತುರಾತುರವಾಗಿ ತಿನ್ನುತ್ತೀರಾ? ಹಾಗಾದ್ರೆ ಈ ಆರೋಗ್ಯ ಸಮಸ್ಯೆಯ ಬಗ್ಗೆ ಎಚ್ಚರ ವಹಿಸಿ!
ಶವಾಸನ:
ಬಹುತೇಕರಿಗೆ ಈ ಆಸನ ಬಹಳ ಇಷ್ಟ. ಇದು ಮೇಲ್ನೋಟಕ್ಕೆ ಮಲಗಿ ಕೊಂಡಿರುವಂತೆ ಅನಿಸಿದರೂ ಮಲಗಿದ ಭಂಗಿಯಲ್ಲಿ ದೇಹದ ಸಮಸ್ತ ಅಂಗಗಳನ್ನು ಒಳಮನಸ್ಸಿನಿಂದ ಅದರ ಚಲನ ವಲನ ಗಮನಿಸುತ್ತಿರುವ ಒಂದು ವಿಶೇಷ ಆಸನ ಇದಾಗಿದೆ. ಇದನ್ನು 5ರಿಂದ 10 ನಿಮಿಷ ಮಾಡಿದರೆ ಮಾನಸಿಕ ಒತ್ತಡ ನಿವಾರಣೆ ಆಗಲಿದೆ.