ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Control Bad Breath From Mouth: ಬಾಯಿ ದುರ್ವಾಸನೆ ಬರುತ್ತಿದೆಯೇ? ಈ ಟಿಪ್ಸ್ ಅನುಸರಿಸಿ!

ಬಾಯಿಯಲ್ಲಿ ದುರ್ವಾಸನೆ ಬರಲು ಕಾರಣ ಏನು? ಇದಕ್ಕಿರುವ ಪರಿಹಾರ ಕ್ರಮಗಳ ಬಗ್ಗೆಇತ್ತೀಚೆಗಷ್ಟೇ ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ವೈದ್ಯರಾದ ಡಾ. ಇಬ್ಬನಿ ಪಿ.ಪಿ. ಅವರು ತಿಳಿಸಿಕೊಟ್ಟಿದ್ದಾರೆ. ಬಾಯಿಯ ದುರ್ವಾಸನೆ ಇರುವಾಗ ಸಂಕೋಚ ಮನೋಭಾವನೆ ಇರುವುದು ಸಹಜ‌. ಈ ಸಮಸ್ಯೆ 5ವರ್ಷದ ಮಗುವಿನಿಂದ 80ರ ವಯೋವೃದ್ಧರ ತನಕ ಇದ್ದೇ ಇರುತ್ತದೆ. ಅಂತೆಯೇ ಸರಳವಾದ ಸುಲಭ ವಾದ ಚಿಕಿತ್ಸಾ ವಿಧಾನದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಈ ಬಗ್ಗೆ ಸಲಹೆ ನೀಡಿದ್ದಾರೆ.

ಬಾಯಿ ದುರ್ವಾಸನೆಗೆ ಇರುವ ಪರಿಹಾರ ಕ್ರಮಗಳು ಏನು?

ಬಾಯಿ ದುರ್ವಾಸನೆಗೆ ಪರಿಹಾರ -

Profile
Pushpa Kumari Dec 4, 2025 7:00 AM

ಬೆಂಗಳೂರು, ಡಿ. 3: ಇತ್ತೀಚಿನ ದಿನದಲ್ಲಿ ಬಹುತೇಕರು ಬಾಯಿಯ ದುರ್ವಾಸನೆ ಸಮಸ್ಯೆಗೆ ಒಳಗಾಗಿ ಸಾಕಷ್ಟು ಮುಜುಗರದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬಹಿರಂಗವಾಗಿ ಯಾರೊಂದಿಗೂ ಮಾತನಾಡಲು ಸಾಧ್ಯವಾಗದೆ ಅನೇಕ ಸಂದರ್ಭಗಳಲ್ಲಿ ಹಿಂಜರಿಕೆಯಿಂದ ಇದ್ದವರು ಇದ್ದಾರೆ. ಬಾಯಿಯಲ್ಲಿ ದುರ್ವಾಸನೆ (Bad Breath) ಬರಲು ಕಾರಣ ಏನು? ಇದಕ್ಕಿರುವ ಪರಿಹಾರ ಕ್ರಮಗಳ ಬಗ್ಗೆ ಇತ್ತೀಚೆಗಷ್ಟೇ ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ವೈದ್ಯರಾದ ಡಾ. ಇಬ್ಬನಿ ಪಿ.ಪಿ. (Dr. Ibbani P.P) ಅವರು ತಿಳಿಸಿಕೊಟ್ಟಿದ್ದಾರೆ. ಬಾಯಿಯ ದುರ್ವಾಸನೆ ಇರುವಾಗ ಸಂಕೋಚ ಮನೋ ಭಾವನೆ ಇರುವುದು ಸಹಜ‌. ಈ ಸಮಸ್ಯೆ 5ವರ್ಷದ ಮಗುವಿನಿಂದ 80ರ ವಯೋವೃದ್ಧರ ತನಕ ಇದ್ದೇ ಇರುತ್ತದೆ. ಅಂತೆಯೇ ಸರಳವಾದ ಸುಲಭವಾದ ಚಿಕಿತ್ಸಾ ವಿಧಾನದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಈ ಬಗ್ಗೆ ಸಲಹೆ ನೀಡಿದ್ದಾರೆ.

ಬಾಯಿ ದುರ್ವಾಸನೆ ಕೆಲವರಿಗೆ ನಿತ್ಯ ಇರಲಿದೆ ಇನ್ನು ಕೆಲವರು ಈರುಳ್ಳಿ, ಬೆಳ್ಳುಳ್ಳಿ ಇತರೆ ಸೇವನೆ ಮಾಡುದರ ಮೂಲಕ ಉಂಟಾಗಲಿದೆ. ಧೂಮಪಾನ ಮಾಡುದರಿಂದಲೂ , ಮದ್ಯ ಸೇವನೆಯಿಂದ, ಇತರ ಪಾನ್ ಮಸಾಲ ಸೇವನೆ ಕೂಡ ಬಾಯಿ ದುರ್ವಾಸನೆಗೆ ಕಾರಣವಾಗುವ ಸಾಧ್ಯತೆ ಇದೆ. ನಿಮ್ಮ ಬಾಯಲ್ಲಿ ದುರ್ವಾಸನೆ ಇದೆ ಅಥವಾ ಇಲ್ಲ ಎಂದು ಪತ್ತೆ ಹಚ್ಚಲು ಅನೇಕ ಕ್ರಮಗಳ ಬಗ್ಗೆ ವೈದ್ಯರಾದ ಇಬ್ಬನಿ ಅವರು ತಿಳಿಸಿದ್ದಾರೆ.

ವಿಡಿಯೋ ನೋಡಿ:



ನಿಮಗೆ ಬಾಯಿ ದುರ್ವಾಸನೆ ಸಮಸ್ಯೆ ಇದೆ ಅಥವಾ ಇಲ್ಲ ಎಂದು ತಿಳಿದುಕೊಳ್ಳಲು ಕೂಡ ಕೆಲವು ಕ್ರಮಗಳಿವೆ. ಅದರಲ್ಲಿ ಆರ್ಗಾನೋ ಲೆಫ್ತಿಕ್ ಕ್ರಮ ಅಥವಾ ಸ್ನಿಫ್ ಟೆಸ್ಟ್ ಕ್ರಮದ ಮೂಲಕ ಬಾಯಿಯ ದುರ್ವಾಸನೆ ಇದೆ ಎಂಬುದನ್ನು ತಿಳಿಯಬಹುದು. ಆರ್ಗಾನೋ ಕ್ರಮ ಎಂದರೆ ನಿಮ್ಮ ಆಪ್ತರು ಸ್ನೇಹಿತರು ಬಾಯಿ ವಾಸನೆ ಬರುವುದನ್ನು ಗಮನಿಸಿ ನಿಮಗೆ ತಿಳಿಸುವ ವಿಧಾನ ಇದಾಗಿದೆ. ಎರಡನೇದಾಗಿ ಬಾಯಿ ದುರ್ವಾಸನೆ ಇದೆ ಎಂದು ಸ್ವ ಪರಿಶೀಲಿಸಿಕೊಳ್ಳುದಾಗಿದೆ. ನಿಮ್ಮ ಎಂಜಲು, ನಾಲಿಗೆ , ಒಸಡು ಇತ್ಯಾದಿ ಪರಿಶೀಲಿಸಬೇಕು. ಮೂರನೇಯದ್ದಾಗಿ ಹ್ಯಾಲಿಮೇಟರ್ ಕ್ರಮದಲ್ಲಿಯೂ ದುರ್ವಾಸನೆ ಪತ್ತೆ ಹಚ್ಚಬಹುದು. ಹ್ಯಾಲಿಮೇಟರ್ ಮಿಷನ್ ನಲ್ಲಿ ಬಾಯಿಯಿಂದ ಗಾಳಿ ಊದುವ ಮೂಲಕ ದುರ್ವಾಸನೆ ಪತ್ತೆ ಹಚ್ಚಬಹುದು ಎಂದು ಅವರು ತಿಳಿಸಿದ್ದಾರೆ.

Health Tips: ಚಳಿಗಾಲದ ಆರೋಗ್ಯಕ್ಕೆ ಗಿಡಮೂಲಿಕೆ ಚಹಾಗಳನ್ನು ಕುಡಿದ್ರೆ ಈ ಪ್ರಯೋಜನಗಳು ನಿಮ್ಮದಾಗಲಿದೆ!

  • ಹಲ್ಲಿನ ಮಧ್ಯೆ ಆಹಾರ ಸಿಕ್ಕಿ ಹಾಕಿಕೊಂಡು ಕೂಡ ಅದು ಬಾಯಿ ದುರ್ವಾಸನೆ ಉಂಟು ಮಾಡಲಿದೆ.
  • ವಸಡಿನ ಸಮಸ್ಯೆ ಇದ್ದವರು ಎಷ್ಟೇ ಹಲ್ಲು ಉಜ್ಜಿದರೂ ಬಾಯಿ ದುರ್ವಾಸನೆ ಸಮಸ್ಯೆ ಇದ್ದೇ ಇರಲಿದೆ.
  • ವಸಡಿನಲ್ಲಿ ರಕ್ತ ಬರುವುದು, ಊದಿಕೊಳ್ಳುವುದು, ರಕ್ತ ಕಂಡು ಬರುವುದು ಕೂಡ ಬಾಯಿ ವಾಸನೆಗೆ ಕಾರಣವಾಗಿದೆ.
  • ಹುಳುಕು ಹಲ್ಲಿನ ಸಮಸ್ಯೆ ಇದ್ದವರಿಗೆ ಕೂಡ ಬಾಯಿ ದುರ್ವಾಸನೆ ಸಮಸ್ಯೆ ಇರಲಿದೆ.
  • ವಯೋವೃದ್ಧರಿಗೆ ವಯಸ್ಸಾಗುತ್ತಾ ಹೋದಂತೆ ಬಾಯಿಯಲ್ಲಿ ಎಂಜಲು ಬರುವ ಪ್ರಮಾಣ ಕಡಿಮೆ ಆಗಲಿದೆ. ಬಾಯಿ ಡ್ರೈ ಆಗುತ್ತಾ ಹೋದಂತೆ ಬಾಯಿ ವಾಸನೆ ಸಮಸ್ಯೆ ಬರಲಿದೆ.
  • ಇವೆಲ್ಲ ಹೊರಲಾಗಿ ಶೀತ , ಕೆಮ್ಮು ಇತರ ರೋಗ ಸಮಸ್ಯೆ ಇದ್ದಾಗ ಕೂಡ ಬಾಯಿ ದುರ್ವಾಸನೆ ಇರಲಿದೆ.
  • ಗ್ಯಾಸ್ಟಿಕ್, ಎಸಿಡಿಟಿ ಇತ್ಯಾದಿ ಹೊಟ್ಟೆ ಸಂಬಂಧಿತ ಆರೋಗ್ಯ ಸಮಸ್ಯೆ ಇದ್ದಾಗಲು ಬಾಯಿ ದುರ್ವಾಸನೆ ಇರಲಿದೆ‌.

ಪರಿಹಾರ ಕ್ರಮ ಏನು?

  • ಬಾಯಿ ದುರ್ವಾಸನೆ ಸಮಸ್ಯೆ ಇದ್ದವರು ನಿತ್ಯ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಬ್ರೆಶ್ ಮಾಡುವುದು ಕಡ್ಡಾಯವಾಗಿದೆ.
  • ನಾಲಿಗೆ ಕ್ಲೀನ್ ಮಾಡುವುದು , ಹಲ್ಲಿನ ನಡುವೆ ಸಿಲುಕಿದ್ದ ಆಹಾರ ಆಗಾಗ ಚೆಕ್ ಮಾಡಿ ಕ್ಲೀನ್ ಮಾಡಬೇಕು.
  • ಹೆಚ್ಚು ದುರ್ವಾಸನೆ ಇದ್ದ ಸಂದರ್ಭದಲ್ಲಿ ಮೌತ್ ವಾಶ್ ಬಳಕೆ ಮಾಡುವುದು ಬಹಳ ಉತ್ತಮ‌.
  • ಇವೆಲ್ಲ ಹೊರತಾಗಿ ಶುಗರ್ ಫ್ರಿ ಚ್ವಿಗಂ ಅಗೆಯುವುದು, ಮೌತ್ ಫ್ರೆಶ್ ನರ್ , ಮೌತ್ ಸ್ಪ್ರೆ ಬಳಸುವುದನ್ನು ಮಾಡಬೇಕು.
  • ಮನೆಯಲ್ಲಿ ಸಿಗುವ ತುಳಸಿ ಎಲೆ, ಲವಂಗ, ಏಲಕ್ಕಿ ಇವುಗಳನ್ನು ಅಗೆಯುವುದು ಕೂಡ ಬಾಯಿ ದುರ್ವಾಸನೆ ಸಮಸ್ಯೆ ಕಡಿಮೆ ಮಾಡಲಿದೆ.
  • ತುಂಬಾ ಹೆಚ್ಚು ದುರ್ವಾಸನೆ ಸಮಸ್ಯೆಯಿಂದ ಬಳಲುವವರು ವೈದ್ಯಕೀಯ ಮೊರೆಹೋಗಿ ವೈದ್ಯರ ಸಲಹೆ ಪಾಲಿಸುವುದು ಉತ್ತಮ ಎಂದು ಡಾ. ಇಬ್ಬನಿ ಅವರು ಸಲಹೆ ಕೂಡ ನೀಡಿದ್ದಾರೆ.