ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಆರೋಗ್ಯಕರ ಎಂದು ಅತಿಯಾಗಿ ತಿನ್ನುವ ಆಹಾರಗಳು ನಿಮ್ಮ ದೇಹದ ಮೇಲೆ ಈ ಪರಿಣಾಮ ಬೀರಬಹುದು!

ದೇಹಕ್ಕೆ ವಿಟಮಿನ್ ಮಿನರಲ್ಸ್ ಎಲ್ಲವೂ ಅಗತ್ಯವೇ ಆದರೆ ಅತಿಯಾದರೆ ಅಮೃತವು ವಿಷ ಎಂಬಂತಾಗಬಾರದು. ಆರೋಗ್ಯ ಕಾಳಜಿಯ ದೃಷ್ಟಿಯಿಂದ ನೀವು ಸೇವಿಸುವ ಆಹಾರ ನಿಜವಾಗಿಯೂ ಸುರಕ್ಷಿತವೇ ಇಲ್ಲವೇ ಎಂಬ ಬಗ್ಗೆ ಸರಿಯಾಗಿ ಪರಮರ್ಶಿಸಬೇಕು. ಇಲ್ಲವಾದರೆ ಆರೋಗ್ಯ ಕಾಳಜಿಯ ಆಹಾರ ಗಳೆ ಅನಾರೋಗ್ಯ ಪರಿಸ್ಥಿತಿಗೆ ಕಾರಣವಾಗುವ ಸಾಧ್ಯತೆ ಇದೆ.

ಆರೋಗ್ಯ ಕಾಳಜಿಗಾಗಿ ಸೇವಿಸುವ ಆಹಾರದ ಬಗ್ಗೆ ಎಚ್ಚರವಿರಲಿ

Profile Pushpa Kumari Feb 18, 2025 5:00 AM

ನವದೆಹಲಿ: ಆರೋಗ್ಯದ ಬಗ್ಗೆ ಅತಿಯಾಗಿ ಕಾಳಜಿ ವಹಿಸುವವರು ಹೆಚ್ಚಿನ ಪ್ರೋಟಿನ್, ಫೈಬರ್ ಯುಕ್ತ ಆಹಾರಕ್ಕೆ ಮೊದಲ ಆಧ್ಯತೆ ನೀಡುತ್ತಾರೆ. ದೇಹದ ಆರೋಗ್ಯಕ್ಕೆ ಹಣ್ಣು, ಹಾಲು , ತರಕಾರಿ, ಮೊಟ್ಟೆ , ಎಳನೀರು ಇತ್ಯಾದಿ ಎಲ್ಲವೂ ಅಗತ್ಯವಾಗಿದ್ದು ನಮ್ಮ ದೇಹ ಸದಾ ಆರೋಗ್ಯವಾಗಿ ಇರಬೇಕು ಎಂದು ಮಿತಿ ಮೀರಿ ಆರೋಗ್ಯಯುಕ್ತ ಆಹಾರ ಸೇವಿಸಿದರೆ ದೇಹಕ್ಕೆ ಹಾನಿಯಾಗುವ ಸಾಧ್ಯತೆ ಕೂಡ ಇದೆ(Health Tips). ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಜಂಕ್ ಫುಡ್ , ಅಧಿಕ ಕೊಬ್ಬಿನ ಆಹಾರಕ್ಕೆ ವಿರಾಮ ಹೇಳಿ ಹಣ್ಣು ತರಕಾರಿ ಸೇವಿಸುವುದು ಬಹಳ ಉತ್ತಮ ಎಂದು ಅಂದು ಕೊಳ್ಳುತ್ತಾರೆ. ಆದರೆ ಆರೋಗ್ಯ ವೃದ್ಧಿಗೋಸ್ಕರ ಪ್ರೋಟಿನ್ ಯುಕ್ತ,ಫೈಬರ್ ಯುಕ್ತ ಆಹಾರ ಅತಿಯಾಗಿ ಸೇವಿಸುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಆಘಾತಕಾರಿ ಅಂಶವೊಂದನ್ನು ತಜ್ಞರು ತಿಳಿಸಿದ್ದಾರೆ.

ದೇಹಕ್ಕೆ ವಿಟಮಿನ್ ಮಿನರಲ್ಸ್ ಎಲ್ಲವೂ ಅಗತ್ಯವೇ ಆದರೆ ಅತಿ ಯಾದರೆ ಅಮೃತವು ವಿಷ ಎಂಬಂತಾಗಬಾರದು. ಆರೋಗ್ಯ ಕಾಳಜಿ ಯ ದೃಷ್ಟಿಯಿಂದ ನೀವು ಸೇವಿಸುವ ಆಹಾರ ನಿಜವಾಗಿಯೂ ಸುರಕ್ಷಿತ ವೇ ಇಲ್ಲವೇ ಎಂಬ ಬಗ್ಗೆ ಸರಿಯಾಗಿ ಪರಮರ್ಶಿಸಬೇಕು. ಇಲ್ಲವಾದರೆ ಆರೋಗ್ಯ ಕಾಳಜಿಯ ಆಹಾರಗಳೆ ಅನಾರೋಗ್ಯ ಪರಿಸ್ಥಿತಿಗೆ ಕಾರಣವಾಗುವ ಸಾಧ್ಯತೆ ಇದೆ.

ಅಧಿಕ ಎಳನೀರು ಬೇಡ:

ದೇಹಕ್ಕೆ ಎಳನೀರು ತುಂಬಾ ಒಳ್ಳೆಯದು ಎಂಬುದು ನಮಗೆ ತಿಳಿದಿದೆ. ಆದರೆ ಎಳನೀರು ಸೇವಿಸುವ ಪ್ರಮಾಣ ಮಿತವಾಗಿ ಇದ್ದರಷ್ಟೆ ಅದು ಒಳ್ಳೆಯದು ಎನಿಸಲಿದೆ. ದಿನಕ್ಕೆ 7-8 ಎಳನೀರು ಸೇವಿಸಿದರೆ ದೇಹದಲ್ಲಿ ಪೊಟ್ಯಾಸಿಯಮ್‌ ಮಟ್ಟ ವಿಪರೀತ ಹೆಚ್ಚಾಗಲಿದೆ. ಹಾಗಾಗಿ ನಿತ್ಯ ವೀಪರೀತ ಸೇವನೆ ಮಾಡದೆ ವಾರಕ್ಕೆ 2-3 ಎಳನೀರು ಸೇವನೆ ಮಾಡಿದರೆ ದೇಹದ ಆರೋಗ್ಯ ದೃಷ್ಟಿಯಿಂದ ಬಹಳ ಅನುಕೂಲವಾಗಲಿದೆ.

ಪಪ್ಪಾಯ ಎಷ್ಟು ತಿನ್ನಬಹುದು?

ಪಪ್ಪಾಯ ಸೇವನೆ ಮಾಡುವುದರಿಂದ ಚರ್ಮ ಕಾಂತಿಯುಕ್ತವಾಗಲಿದೆ. ದೇಹ ಸದಾ ಲವಲವಿಕೆಯಿಂದ ಇರಲಿದೆ. ಋತು ಚಕ್ರ (ಮುಟ್ಟಿನ) ಸಮಸ್ಯೆ ನಿವಾರಣೆಗೂ ಪಪ್ಪಾಯ ಸೇವನೆ ಬಹಳ ಉತ್ತಮ ಕ್ರಮವಾಗಿದೆ. ಆದರೆ ನಿತ್ಯ 4-5 ಪಪ್ಪಾಯಿಯನ್ನು ಸೇವಿಸುವುದರಿಂದ ಚರ್ಮ ಕಾಂತಿಯುಕ್ತವಾಗಲಾರದು ಬದಲಿಗೆ ಚರ್ಮ ಬಿಳಿಚಿಕೊಳ್ಳುವ ಸಾಧ್ಯತೆ ಇದೆ. ಪಪ್ಪಾಯಯಲ್ಲಿರುವ ಬೀಟಾ ಕ್ಯಾರೋಟಿನ್ ಅಂಶದಿಂದ ಚರ್ಮ ಬಿಳಿಚಿ ಕೊಂಡು ಹಳದಿ ಬಣ್ಣವಾಗಿಬಿಡುವ ಸಾಧ್ಯತೆ ಇದೆ. ಹಾಗಾಗಿ ವಾರಕ್ಕೆ 3ಪಪ್ಪಾಯ ಸೇವನೆ ಮಾತ್ರವೇ ಆರೋಗ್ಯಕರ ವಿಧಾನ ಎನ್ನಬಹುದು.

ನೀರಿನ ಸೇವನೆಗೂ ಮಿತಿ ಇರಲಿ

ನಿತ್ಯ ಸರಿಸುಮಾರು 2-3ಲೀಟರ್ ನೀರಿನ ಸೇವನೆ ಮಾಡಬೇಕು ಎಂದು ಎಲ್ಲ ವೈದ್ಯಕೀಯ ಸಲಹೆ ಇರುವುದು ಕಾಣಬಹುದು. ಆದರೆ ಅದನ್ನು ಮೀರಿ ಆಹಾರಕ್ಕಿಂತಲೂ ನೀರಿನ ಸೇವನೆ ಅಧಿಕ ಮಾಡುವುದು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ದಿನದಲ್ಲಿ 4 ಲೀಟರ್ ಗಿಂತ ಹೆಚ್ಚಿನ ನೀರು ಸೇವನೆ ಮಾಡಿದರೆ ರಕ್ತದಲ್ಲಿ ಇರುವ ಸೋಡಿಯಂ ಮಟ್ಟ ಕಡಿಮೆಯಾಗಲಿದೆ. ಇದರಿಂದ ತಲೆನೋವು , ವಾಂತಿ, ತಲೆಸುತ್ತು ಬರುವ ಸಾಧ್ಯತೆ ಇದೆ.

ಮೊಟ್ಟೆ ಸೇವನೆ ಅಧಿಕವಾಗದಿರಲಿ:

ಮೊಟ್ಟೆಯಲ್ಲಿ ಅಧಿಕ ಪ್ರೋಟೀನ್ ಅಂಶ ಇದೆ ಎಂಬುದು ನಮಗೆ ತಿಳಿದಿದೆ. ದಿನಕ್ಕ 3-4 ಮೊಟ್ಟೆ ಸೇವನೆ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಆದರೆ ದಿನಕ್ಕೆ 15-20 ಮೊಟ್ಟೆ ಸೇವನೆ ಮಾಡಿದರೆ ದೇಹದ ಕೊಲೆಸ್ಟ್ರಾಲ್ ಮಟ್ಟ ಏರಲಿದೆ. ಗ್ಯಾಸ್ಟ್ರಿಕ್‌ , ಅಜೀರ್ಣ, ಹೃದಯ ಸಂಬಂಧಿತ ಸಮಸ್ಯೆಗಳು ಕಾಡುವ ಸಾಧ್ಯತೆ ಇವೆ.

ಇದನ್ನು ಓದಿ: Health Tips: ಖಾಲಿ ಹೊಟ್ಟೆಯ ನಡಿಗೆ ಅಥವಾ ಊಟದ ನಂತರದ ನಡಿಗೆ! ತೂಕ ಇಳಿಕೆಗೆ ಯಾವುದು ಉತ್ತಮ?

ನೆನೆಸಿದ ಕಾಳುಗಳು:

ಹೆಸರು, ಕಡಲೆಕಾಯಿ, ಬಾದಾಮಿ ಇತರ ಕಾಳನ್ನು ನೆನೆಸಿ ಮೊಳಕೆ ಮಾಡಿ ಹೆಚ್ಚಿನವರು ನಿತ್ಯ ಸೇವನೆ ಮಾಡುತ್ತಾರೆ.ಆದರೆ ಇದನ್ನು ಅತೀಯಾಗಿ ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವ ಜೊತೆ ಯಲ್ಲಿ ತೂಕ ಕೂಡ ಹೆಚ್ಚಾಗಲಿದೆ. ಹೀಗಾಗಿ ನೀವು ಯಾವುದೇ ಆಹಾರ ಸೇವಿಸುವಾಗಲು ಅದನ್ನು ಯಾವ ಪ್ರಮಾಣದಲ್ಲಿ ಸೇವಿಸುತ್ತಿದ್ದೀರಿ ಎಂಬುದರ ಮೇಲೆ ಅದು ಆರೋಗ್ಯಕ್ಕೆ ಪೂರಕವೋ ಅಥವಾ ಇಲ್ಲವೊ ಎಂಬುದು ತಿಳಿದು ಬರಲಿದೆ.