ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಖಾಲಿ ಹೊಟ್ಟೆಯ ನಡಿಗೆ ಅಥವಾ ಊಟದ ನಂತರದ ನಡಿಗೆ! ತೂಕ ಇಳಿಕೆಗೆ ಯಾವುದು ಉತ್ತಮ?

ತೂಕ ನಷ್ಟಕ್ಕೆ ಯಾವ ನಡಿಗೆ ಹೆಚ್ಚು ಪರಿಣಾಮಕಾರಿ ಎನ್ನುವ ಸಂದೇಹ ನಿಮ್ಮಲ್ಲಿ ಇದ್ದರೆ ಖಾಲಿ ಹೊಟ್ಟೆ ಅಥವಾ ಊಟದ ನಂತರ ನಡಿಗೆ ಇವೆರಡೂ‌ ರೀತಿಯ ನಡಿಗೆಗಳು ಕ್ಯಾಲೊರಿಗಳನ್ನು ಕಡಿಮೆ ಮಾಡಲಿದ್ದು ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇವರೆಡನ್ನು ಯಾರು ಆಯ್ಕೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ತೂಕ ಇಳಿಕೆಗೆ ಯಾವ ವಾಕಿಂಗ್ ಬೆಸ್ಟ್! ಇಲ್ಲಿದೆ ತಜ್ಞರ ಸಲಹೆ

ಸಾಂದರ್ಭಿಕ ಚಿತ್ರ

Profile Pushpa Kumari Feb 17, 2025 5:00 AM

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿಗೆ ಕಾಡುತ್ತಿರುವ ಸಮಸ್ಯೆ ಎಂದರೆ ಅದು ಅಧಿಕ ತೂಕ. ಹೀಗಾಗಿ ತೂಕ ಇಳಿಸಿಕೊಳ್ಳಲು ಹೆಚ್ಚಿನ ಜನರು ಹರಸಾಹಸ ಪಡುತಿದ್ದು ತೂಕ ಇಳಿಕೆಗೆ ಸುಲಭವಾದ ವಿಧಾನ ಎಂದರೆ ಅದು ನಡಿಗೆ(Health Tips). ತೂಕವನ್ನು ನೀವು ಕ್ರಮೇಣವಾಗಿ ಮತ್ತು ಸಮರ್ಥವಾಗಿ ಕಡಿಮೆ ಮಾಡಿಕೊಳ್ಳಲು ವಾಕಿಂಗ್ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದ್ದು ತೂಕ ಇಳಿಸಿ ಕೊಳ್ಳಲು ಮತ್ತು ಕ್ಯಾಲೊರಿಗಳನ್ನು ಕಡಿಮೆ ಮಾಡಿಕೊಳ್ಳಲು ಹೆಚ್ಚಿನ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಡಿಗೆಗೆ ಆದ್ಯತೆ ನೀಡುತ್ತಾರೆ. ಕೆಲವರು ಊಟದ ನಂತರ ವಾಕಿಂಗ್ ಮಾಡುತ್ತಾರೆ. ಹಾಗಾಗಿ ಇವರೆ ಡರಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಯಾವುದು ಅಗತ್ಯ ಎನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ ಈ ಮಾಹಿತಿ ಓದಿ.

ತೂಕ ನಷ್ಟಕ್ಕೆ ಯಾವ ನಡಿಗೆ ಹೆಚ್ಚು ಪರಿಣಾಮಕಾರಿ ಎನ್ನುವ ಸಂದೇಹ ನಿಮ್ಮಲ್ಲಿ ಇದ್ದರೆ ಖಾಲಿ ಹೊಟ್ಟೆ ಅಥವಾ ಊಟದ ನಂತರ ನಡಿಗೆ ಇವೆರಡೂ‌ ರೀತಿಯ ನಡಿಗೆಗಳು ಕ್ಯಾಲೊರಿಗಳನ್ನು ಕಡಿಮೆ ಮಾಡಲಿದ್ದು ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇವರೆಡನ್ನು ಯಾರು ಆಯ್ಕೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಖಾಲಿ ಹೊಟ್ಟೆಯ ನಡಿಗೆ:

  • ಆರೋಗ್ಯವಂತ ವ್ಯಕ್ತಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸಿದ್ದರೆ ಖಾಲಿ ಹೊಟ್ಟೆಯಲ್ಲಿ ನಡೆಯುವುದು ಉತ್ತಮ. ಖಾಲಿ ಹೊಟ್ಟೆಯಲ್ಲಿ ನಡೆಯುವಾಗ, ದೇಹವು ಶಕ್ತಿಗಾಗಿ ಸಂಗ್ರಹವಾಗಿರುವ ಕೊಬ್ಬನ್ನು ಬಳಕೆ ಮಾಡಲು ಒತ್ತಾಯಿಸಲಿದೆ ಎಂದು ತಜ್ಞರು ಹೇಳು ತ್ತಾರೆ. ಹಾಗಾಗಿ ಇದು ಹೆಚ್ಚಿದ ಕೊಬ್ಬು ನಿವಾರಣೆಗೆ ಸಹಾಯ ಮಾಡಲಿದೆ.
  • ಖಾಲಿ ಹೊಟ್ಟೆಯ ಬೆಳಗಿನ ವಾಕಿಂಗ್‌ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ದೇಹದ ಪೋಷಕಾಂಶಗಳನ್ನು ಬಳಸಿಕೊಳ್ಳಲು ಸಹಕಾರಿ ಮಾಡಲಿದೆ. ಇದು ದೇಹದ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡಲಿದೆ.
  • ಹೊಟ್ಟೆಯ ಕೊಬ್ಬು ಅಥವಾ ಯಾವುದೇ ರೀತಿಯ ಕೊಬ್ಬು ಕರಗಿಸಲು ಖಾಲಿ ಹೊಟ್ಟೆಯ ನಡಿಗೆ ಉತ್ತಮ. ಹಾಗಾಗಿ ಬೆಳಗಿನ ನಡಿಗೆಗಳು ಹೊಟ್ಟೆಯ ಕೊಬ್ಬು ನಷ್ಟ ಸೇರಿದಂತೆ ಎಲ್ಲಾ ರೀತಿಯ ಕೊಬ್ಬು ನಷ್ಟಕ್ಕೆ ಪರಿಣಾಮಕಾರಿ ಯಾಗಲಿದೆ.
  • ವಾಕಿಂಗ್ ಅಥವಾ ವ್ಯಾಯಾಮದ ಸಮಯದಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟವು ಕಡಿಮೆಯಾಗಲಿದ್ದು ಪಿತ್ತಜನಕಾಂಗವು ಗ್ಲೈಕೋಜೆನ್ ಅನ್ನು ಗ್ಲೂಕೋಸ್ ಆಗಿ ವಿಭಜಿಸುತ್ತದೆ. ಈ ಸಂದರ್ಭದಲ್ಲಿ ದೇಹದಲ್ಲಿ ಗ್ಲೈಕೋಜೆನ್ ಸಂಗ್ರಹಣೆಯು‌ ಕಡಿಮೆ ಇರುತ್ತದೆ. ಆದ್ದರಿಂದ, ಉಪ ವಾಸದ ಸಂದರ್ಭ ವ್ಯಾಯಾಮ ಮಾಡುವುದರಿಂದ ದೇಹವು ಶಕ್ತಿಗಾಗಿ ಹೆಚ್ಚಿನ ಕೊಬ್ಬನ್ನು ಸುಡುವಂತೆ ಮಾಡುತ್ತದೆ.
  • ಬೆಳಗಿನ ಉಪಾಹಾರದ ಮೊದಲು ಯಾವುದೇ ವ್ಯಾಯಾಮವನ್ನು ಮಾಡುವುದರಿಂದ ಕೊಬ್ಬಿನ ಆಕ್ಸಿಡೀಕರಣವನ್ನು ಹೆಚ್ಚಿಸುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡಲಿದೆ.
  • ಆದರೆ ಮಧುಮೇಹ, ಅಧಿಕ ರಕ್ತದೊತ್ತಡ ಆರೋಗ್ಯ ಸಮಸ್ಯೆ ಗಳಿರುವವರು ಉಪವಾಸದ ನಡಿಗೆಯಲ್ಲಿ ತೊಡಗಿಸಿಕೊಳ್ಳುವಾಗ ಜಾಗರೂಕರಾಗಿರಬೇಕು.
  • ಕಡಿಮೆ ರಕ್ತದಲ್ಲಿನ ಸಕ್ಕರೆ ಮತ್ತು ನಿರ್ಜಲೀಕರಣ ಪರಿಣಾಮಗಳಿಂದ ತಲೆತಿರುಗುವಿಕೆ, ನಡುಕ ಮತ್ತು ಮೂರ್ಛೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಸಮಸ್ಯೆ ಇದ್ದವರಿಗೆ ಈ ನಡಿಗೆ ಉತ್ತಮವಲ್ಲ.

ಊಟದ ನಂತರ ವಾಕಿಂಗ್ ಪ್ರಯೋಜನಗಳು:

  • ಊಟದ ನಂತರ ನಡೆಯುವುದು ನೀವು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಊಟದ ನಂತರ ನಡಿಗೆಯು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡಲಿದೆ.
  • ಊಟದ ನಂತರದ ನಡಿಗೆ ಕರುಳಿನ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಕಾರಿ ಯಾಗಿದ್ದು ಇದು ಹೊಟ್ಟೆಯುಬ್ಬರ ಮತ್ತು ಅಸಿಡಿಟಿ ಸಮಸ್ಯೆ ಯನ್ನು ದೂರ ಮಾಡಲಿದೆ.
  • ಟೈಪ್ 2 ಡಯಾಬಿಟಿಸ್ ಅಪಾಯದಲ್ಲಿರುವವರಿಗೆ ಊಟದ ನಂತರ ನಡೆಯುವುದು ಉತ್ತಮ ಮಾರ್ಗವಾಗಿದೆ.

ಇದನ್ನು ಓದಿ: Health Tips: ಪ್ರೇಮಿಗಳ ದಿನಕ್ಕೆ ಮಾತ್ರವಲ್ಲ, ವರ್ಷವಿಡೀ ಇರಲಿ ಕೆಂಪು ಬಣ್ಣದ ಆಹಾರಗಳು!

ಎಷ್ಟು ನಡೆಯಬೇಕು?

ತೂಕ ನಷ್ಟಕ್ಕೆ ಮತ್ತು ಒಟ್ಟಾರೆ ದೇಹದ ಯೋಗ ಕ್ಷೇಮವನ್ನು ಕಾಪಾಡಿಕೊಳ್ಳಲು, ಪ್ರತಿದಿನ 30 ರಿಂದ 60 ನಿಮಿಷಗಳ ಕಾಲ ನಡೆಯಬೇಕು.ಇನ್ನು ತೂಕವನ್ನು ಕಳೆದುಕೊಳ್ಳಲು ನೀವು ಎಷ್ಟು ವ್ಯಾಯಾಮ ಮಾಡುತ್ತೀರಿ ಎಂಬುದರ ಮೇಲೆ ಮಾತ್ರ ಅವಲಂಬಿ ತವಾಗಿರುವುದಿಲ್ಲ. ನಿಮ್ಮ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿ ಕೊಳ್ಳುವ ಜೊತೆಗೆ, ಸಾಕಷ್ಟು ನಿದ್ರೆ ಪಡೆಯಬೇಕು. ಆರೋಗ್ಯಕರ ಆಹಾರ ಕೂಡ ಸೇವನೆ ಮಾಡಬೇಕು.