ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sleeping Problem: ನಿದ್ರಾಹೀನತೆಯಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತವೆ?

ದೇಹಕ್ಕೆ ಸಾಕಷ್ಟು ನಿದ್ರೆ(Sleeping Problem)ಬೇಕು. ಇದು ದೇಹಕ್ಕೆ ವಿಶ್ರಾಂತಿ ನೀಡುತ್ತದೆ ಮತ್ತು ದೇಹದ ಅಂಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ನಿದ್ರೆಯಲ್ಲಿ ಸಮಸ್ಯೆಯಾದರೆ ಅದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ನೀವು ಸಾಕಷ್ಟು ನಿದ್ರೆ ಮಾಡದಿದ್ದರೆ ಏನೆಲ್ಲಾ ಸಮಸ್ಯೆ ಕಾಡುತ್ತದೆ ಎಂಬುದನ್ನು ತಿಳಿಯಿರಿ.

ನಿದ್ರಾ ಹೀನತೆ ಇದೆಯೇ? ಹಾಗಿದ್ರೆ ಈ ಕಾಯಿಲೆ ಬಗ್ಗೆ ಇರಲಿ ಎಚ್ಚರ!

ಸಾಂದರ್ಭಿಕ ಚಿತ್ರ

Profile pavithra Feb 16, 2025 6:30 AM

ಬೆಂಗಳೂರು: ದೇಹದ ಆರೋಗ್ಯಕ್ಕೆ ನಿದ್ದೆ ಬೇಕೇ ಬೇಕು. ದೇಹಕ್ಕೆಷ್ಟು ವಿಶಾಂತ್ರಿ ಬೇಕಾಗುತ್ತೋ, ಅದಕ್ಕಿಂತ ಹೆಚ್ಚು ಮನಸ್ಸಿಗೂ ಅಷ್ಟೇ ರೆಸ್ಟ್‌ ಬೇಕಾಗುತ್ತದೆ(Health Tips). ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ನಿದ್ದೆಯೇ ಬೆಸ್ಟ್‌ ಮದ್ದು. ಸಾಕಷ್ಟು ನಿದ್ರೆ ಮಾಡುವುದರಿಂದ ದೇಹದ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎರಡೂ ಚೆನ್ನಾಗಿರುತ್ತದೆ. ಇದರಿಂದ ಯಾವುದೇ ಅನಾರೋಗ್ಯ ಸಮಸ್ಯೆ ಕಾಡುವುದಿಲ್ಲ. ಹಾಗಾಗಿ ವೈದ್ಯರು ಪ್ರತಿದಿನ 8 ಗಂಟೆಗಳ ಕಾಲ ನಿದ್ರಿಸುವಂತೆ ಸಲಹೆ ನೀಡುತ್ತಾರೆ. ಆದರೆ ಕೆಲಸದ ಒತ್ತಡ, ಚಿಂತೆಯಿಂದಾಗಿ ಕೆಲವರು ಸರಿಯಾಗಿ ನಿದ್ರೆ ಮಾಡುವುದಿಲ್ಲ. ಈ ನಿದ್ರಾಹೀನತೆಯಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ತೂಕ ಹೆಚ್ಚಳ

ನಿದ್ರೆ ಮತ್ತು ತೂಕವು ಪರಸ್ಪರ ಸಂಬಂಧ ಹೊಂದಿವೆ. ಸರಿಯಾಗಿ ನಿದ್ರೆ ಮಾಡದಿದ್ದರೆ ನಿಮ್ಮ ದೇಹದಲ್ಲಿ ಹಸಿವಿನ ಹಾರ್ಮೋನುಗಳಲ್ಲಿ ಅಸಮತೋಲನ ಉಂಟಾಗುತ್ತದೆ. ಇದರಿಂದ ನಿಮಗೆ ತುಂಬಾ ಹಸಿವಾಗುತ್ತಿರುತ್ತದೆ. ಇದರಿಂದ ನೀವು ಹೆಚ್ಚು ಕ್ಯಾಲೋರಿ ಆಹಾರವನ್ನು ತಿನ್ನಲು ಶುರುಮಾಡುತ್ತೀರಿ. ಇದು ಕಾಲಾನಂತರದಲ್ಲಿ ತೂಕ ಹೆಚ್ಚಳ ಮತ್ತು ಬೊಜ್ಜಿಗೆ ಕಾರಣವಾಗಬಹುದು.

ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆ

ನಿಮ್ಮ ರೋಗನಿರೋಧಕ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ನಿದ್ರೆ ಅವಶ್ಯಕವಾಗಿದೆ. ಗಾಢ ನಿದ್ರೆಯ ಸಮಯದಲ್ಲಿ, ನಿಮ್ಮ ದೇಹವು ಸೈಟೋಕಿನ್‍ಗಳನ್ನು ಉತ್ಪಾದಿಸುತ್ತದೆ. ಇದು ಸೋಂಕುಗಳು ಮತ್ತು ಉರಿಯೂತದ ವಿರುದ್ಧ ಹೋರಾಡಲು ಅವಶ್ಯಕವಾಗಿದೆ. ಆದರೆ ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ ಈ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೈಟೋಕಿನ್‍ಗಳನ್ನು ಉತ್ಪಾದಿಸುವ ದೇಹದ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿ ನೀವು ಕಾಯಿಲೆ ಬೀಳುವಂತೆ ಮಾಡುತ್ತದೆ.

ಮಾನಸಿಕ ಆರೋಗ್ಯ ಸಮಸ್ಯೆಗಳು

ನಿದ್ರೆಯು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ನಿದ್ರೆಯ ಕೊರತೆಯಿಂದ ಕಿರಿಕಿರಿ, ಮನಸ್ಥಿತಿಯಲ್ಲಿ ಬದಲಾವಣೆಗಳಾಗುತ್ತದೆ. ಇದು ಆತಂಕ ಮತ್ತು ಖಿನ್ನತೆಯ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಕಾಲಾನಂತರದಲ್ಲಿ, ದೀರ್ಘಕಾಲದ ನಿದ್ರೆಯ ಕೊರತೆಯು ಮಾನಸಿಕ ರೋಗಕ್ಕೆ ಕಾರಣವಾಗಬಹುದು.

ಈ ಸುದ್ದಿಯನ್ನೂ ಓದಿ: Wipro GE Healthcare: ವಿಪ್ರೋ ಹೆಲ್ತ್ ಕೇರ್‌ನಿಂದ ರಾಜ್ಯದಲ್ಲಿ 8,000 ಕೋಟಿ ರೂ. ಹೂಡಿಕೆ

ಅರಿವಿನ ಸಮಸ್ಯೆ

ನಿಮ್ಮ ಮೆದುಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಉತ್ತಮ ಗುಣಮಟ್ಟದ ನಿದ್ರೆ ಬೇಕು. ನೀವು 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದಾಗ, ನಿಮ್ಮ ಮೆದುಳಿನ ಕಾರ್ಯಗಳಲ್ಲಿ ತೊಂದರೆ ಉಂಟಾಗುತ್ತದೆ. ಇದರಿಂದ ನಿಮ್ಮ ಗಮನವನ್ನು ಕೇಂದ್ರೀಕರಿಸಲು, ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ನಿಮಗೆ ಕಷ್ಟವಾಗಬಹುದು.

ಹೃದಯಾಘಾತದ ಸಮಸ್ಯೆ

ನಿದ್ರೆ ಸರಿಯಾಗಿ ಮಾಡದಿದ್ದರೆ ದೇಹದ ರಕ್ತದೊತ್ತಡ ಹೆಚ್ಚಾಗಬಹುದು. ರಕ್ತನಾಳಗಳನ್ನು ಇದು ಗಟ್ಟಿಯಾಗಿಸುವುದು. ನಂತರ ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಸಮಸ್ಯೆಗೆ ಕಾರಣವಾಗಬಹುದು. ದೀರ್ಘಕಾಲ ನಿದ್ರೆಯ ತೊಂದರೆ ಇದ್ದರೆ ನರವ್ಯವಸ್ಥೆ ಕಾರ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಇದರಿಂದ ಕಾರ್ಟಿಸೋಲ್‍ನಂತಹ ಹಾರ್ಮೋನ್ ಮಟ್ಟವು ಏರಿಕೆ ಆಗಿ ಹೃದಯದ ಸಮಸ್ಯೆಗಳು ಬರಬಹುದು.

ಅಧಿಕ ರಕ್ತದೊತ್ತಡ ಸಮಸ್ಯೆ

ನಿದ್ರೆಯ ಕೊರತೆಯು ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹೆಚ್ಚಿದ ಕಾರ್ಟಿಸೋಲ್ ಮಟ್ಟವು ರಕ್ತದೊತ್ತಡದಲ್ಲಿ ತಾತ್ಕಾಲಿಕ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ ಸಾಧ್ಯವಾದಷ್ಟು ಒತ್ತಡ, ಚಿಂತೆಯನ್ನು ದೂರಮಾಡಿ ಸುಖವಾದ ನಿದ್ರೆಯನ್ನು ಮಾಡಲು ಪ್ರಯತ್ನಿಸಿ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.