ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಳಿಗಾಲದಲ್ಲಿ ಪದೇ ಪದೇ ನೆಗಡಿಯಾಗುತ್ತಿದೆಯೇ? ಇದಕ್ಕೆ ಕಾರಣ ಏನು?

Health Tips: ಬೆಳಿಗ್ಗೆ ಎದ್ದ ಕೂಡಲೇ ಮೂಗು ಸೋರುವುದು, ಗಂಟಲು ಕೆರೆತ, ಕೆಮ್ಮು, ಜ್ವರದಂತಹ ಸಮಸ್ಯೆಗಳು ನಿಮಗೆ ಪದೇ ಪದೇ ಉಂಟಾಗುತ್ತಿದ್ದರೆ ಅದಕ್ಕೆ ರೋಗನಿರೋಧಕ ಶಕ್ತಿ ಮಾತ್ರ ಕಾರಣವಲ್ಲ. ಬದಲಾಗಿ, ನಮ್ಮ ಜೀವನಶೈಲಿಯಲ್ಲಿ ನಾವು ಮಾಡುವಂತಹ ತಪ್ಪುಗಳೇ ಕಾರಣವಾಗುತ್ತವೆ. ಕಡಿಮೆ ತಾಪ ಮಾನ, ಶುಷ್ಕ ಗಾಳಿ, ಕಿಕ್ಕಿರಿದ ಒಳಾಂಗಣ ಸ್ಥಳಗಳು ಮತ್ತು ಜೀವನಶೈಲಿಯ ಬದಲಾವಣೆಗಳು ಇತ್ಯಾದಿ ದೇಹದ ನೈಸರ್ಗಿಕ ರಕ್ಷಣೆಯನ್ನು ದುರ್ಬಲಗೊಳಿಸುತ್ತವೆ.. ಹಾಗಾಗಿ ಚಳಿಗಾಲದಲ್ಲಿ ಸೋಂಕು ಹೆಚ್ಚಾಗಲು ಪ್ರಮುಖ ತಪ್ಪುಗಳು ಯಾವುದು ಎಂಬುದನ್ನು ತಜ್ಞರು ಮಾಹಿತಿ ನೀಡಿದ್ದಾರೆ.

ಚಳಿಗಾಲದಲ್ಲಿ ವಿಪರೀತ ನೆಗಡಿಗೆ ಕಾರಣವೇನು?

ಸಂಗ್ರಹ ಚಿತ್ರ -

Profile
Pushpa Kumari Dec 18, 2025 7:00 AM

ಬೆಂಗಳೂರು,ಡಿ. 17: ಎಲ್ಲೆಡೆ ಚಳಿಗಾಲದ ಪ್ರಭಾವ ಜೊರಾಗಿಯೇ ಇದೆ. ಈ ಋತುವಿನಲ್ಲಿ ಹೆಚ್ಚಿನ ಜನರು ನೆಗಡಿ (Winter Cold) ಮತ್ತು ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಈ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಅದರಲ್ಲೂ ಬೆಳಿಗ್ಗೆ ಎದ್ದ ಕೂಡಲೇ ಮೂಗು ಸೋರುವುದು, ಗಂಟಲು ಕೆರೆತ, ಕೆಮ್ಮು, ಜ್ವರದಂತಹ ಸಮಸ್ಯೆಗಳು ನಿಮಗೆ ಪದೇ ಪದೇ ಉಂಟಾಗುತ್ತಿದ್ದರೆ ಅದಕ್ಕೆ ರೋಗನಿರೋಧಕ ಶಕ್ತಿ ಮಾತ್ರ ಕಾರಣವಲ್ಲ. ಬದಲಾಗಿ, ನಮ್ಮ ಜೀವನಶೈಲಿಯಲ್ಲಿ ನಾವು ಮಾಡುವಂತಹ ತಪ್ಪುಗಳೇ ಕಾರಣವಾಗುತ್ತವೆ. ಕಡಿಮೆ ತಾಪ ಮಾನ, ಶುಷ್ಕ ಗಾಳಿ, ಕಿಕ್ಕಿರಿದ ಒಳಾಂಗಣ ಸ್ಥಳಗಳು ಮತ್ತು ಜೀವನಶೈಲಿಯ ಬದಲಾವಣೆಗಳು ಇತ್ಯಾದಿ ದೇಹದ ನೈಸರ್ಗಿಕ ರಕ್ಷಣೆಯನ್ನು ದುರ್ಬಲಗೊಳಿಸುತ್ತವೆ.. ಹಾಗಾಗಿ ಚಳಿಗಾಲದಲ್ಲಿ ಸೋಂಕು ಹೆಚ್ಚಾಗಲು ಪ್ರಮುಖ ತಪ್ಪುಗಳು ಯಾವುದು ಎಂಬುದನ್ನು ತಜ್ಞರು ಮಾಹಿತಿ ನೀಡಿದ್ದಾರೆ.

ಒಳಾಂಗಣ ಗಾಳಿ ಹಾಗೂ ಹೀಟರ್ ಗಳ ಬಳಕೆ:

ಚಳಿಗಾಲದ ಗಾಳಿಯು ಬಹಳಷ್ಟು ಶುಷ್ಕವಾಗಿರುತ್ತದೆ, ಹೀಗಾಗಿ ಹೀಟರ್‌ಗಳು, ಬ್ಲೋವರ್‌ಗಳು ಅಥವಾ ರೂಮ್ ಹೀಟರ್‌ಗಳು ದೀರ್ಘಕಾಲದವರೆಗೆ ಕಾರ್ಯನಿರ್ವಹಿಸುವುದರಿಂದ ಒಣ ಗಾಳಿಯು ಮೂಗಿನ ಒಳಗಿನ ಲೋಳೆಪೊರೆಯನ್ನು ಒಣಗಿಸುತ್ತದೆ. ಮೂಗಿನಲ್ಲಿರುವ ಈ ಲೋಳೆಯು ವೈರಸ್‌ಗಳನ್ನು ತಡೆಯುವ ಅಂಶಗಳಾಗಿದ್ದು ಇದು ಒಣಗಿದಾಗ ವೈರಸ್‌ಗಳು ಸುಲಭವಾಗಿ ದೇಹವನ್ನು ಪ್ರವೇಶಿಸುತ್ತವೆ. ಇದು ವೈರಸ್‌ಗಳು ಆಕ್ರಮಣ ಮಾಡಲು ಸುಲಭಗೊಳಿಸುತ್ತದೆ.

Health Tips: ರಾತ್ರಿ ಮಲಗುವ ಮೊದಲು ಇದನ್ನು ತಿಂದ್ರೆ ಕಣ್ತುಂಬ ನಿದ್ರೆ ಗ್ಯಾರಂಟಿ

ಅಗತ್ಯಕ್ಕಿಂತ ಕಡಿಮೆ ಬಾರಿ ಕೈ ತೊಳೆಯುವುದು:

ಕೆಲವರು ಚಳಿ ಎಂಬ ಕಾರಣಕ್ಕೆ ಪದೇ ಪದೇ ಕೈ ತೊಳೆಯುವ ಗೋಜಿಗೆ ಹೋಗುವುದಿಲ್ಲ. ಆದರೆ ಕಚೇರಿಯ ಡೆಸ್ಕ್, ಲಿಫ್ಟ್ ಬಟನ್ ಅಥವಾ ಫೋನ್‌ಗಳ ಮೂಲಕ ವೈರಸ್‌ಗಳು ಹರಡಿ ಕೈಗೆ ಅಂಟಿ ಕೊಳ್ಳುತ್ತವೆ. ಆಗಾಗ್ಗೆ ಕೈ ತೊಳೆಯುವುದು ಉಸಿರಾಟದ ಸೋಂಕನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳು ಹೇಳಿವೆ..ವಿಶೇಷವಾಗಿ ಕಚೇರಿಗಳು, ಸಾರ್ವಜನಿಕ ಸಾರಿಗೆ ಮತ್ತು ಹೊರಗಿನ ಪ್ರದೇಶದಲ್ಲಿ ಕೆಲಸ ಮಾಡೋರಿಗೆ ಇದು ಅಗತ್ಯವಾಗಿರುತ್ತದೆ.

ನಿದ್ದೆಯ ಕೊರತೆ:

ಕಡಿಮೆ ನಿದ್ದೆ ಮಾಡೋರಿಗೆ ವೈರಸ್‌ಗಳು ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ. ಕೆಲವೊಂದಿಷ್ಟು ಬ್ಯುಸಿ ಜೀವನಶೈಲಿಯಿಂದ ನಿದ್ದೆ ಕಡಿಮೆಮಾಡಬಹುದು‌‌. ಆದರೆ ದಿನಕ್ಕೆ 7 ಗಂಟೆಗಿಂತ ಕಡಿಮೆ ನಿದ್ದೆ ಮಾಡುವವರಿಗೆ ಕೆಮ್ಮು ನೆಗಡಿ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ.

ಕಿಟಕಿಗಳನ್ನು ಪೂರ್ಣವಾಗಿ ಮುಚ್ಚುವುದು:

ಚಳಿಯ ವಾತಾವರಣದಿಂದಾಗಿ ಮನೆ ಬೆಚ್ಚಗಿರಲಿ ಎಂದು ಹೆಚ್ಚಿನವರು ಕಿಟಕಿ-ಬಾಗಿಲುಗಳನ್ನು ಪೂರ್ತಿ ಯಾಗಿ ಮುಚ್ಚುತ್ತಾರೆ.‌ಇದರಿಂದ ಮನೆಯೊಳಗೆ ಗಾಳಿಯ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ವೈರಸ್‌ಗಳು ಒಂದೆ ಕಡೆ ಹರಡಿ ಮನೆಯೊಳಗೆ ಪ್ರವೇಶ ಮಾಡುತ್ತವೆ.

ವಿಟಮಿನ್ ಡಿ ಕೊರತೆ ಸಮಸ್ಯೆ;

ವಿಟಮಿನ್ ಡಿ ರೋಗನಿರೋಧಕ ನಿಯಂತ್ರಣ ಮತ್ತು ಆಂಟಿ ಮೈಕ್ರೊಬಿಯಲ್ ಮೂಲಕ ಪ್ರಮುಖ ಪಾತ್ರ ವಹಿಸುತ್ತದೆ. ಕಡಿಮೆ ವಿಟಮಿನ್ ಡಿ ಹೊಂದಿರುವ ಜನರು ಶೀತ ಸೇರಿದಂತೆ ಹೆಚ್ಚಾಗಿ ಉಸಿರಾಟದ ಸೋಂಕುಗಳನ್ನು ಅನುಭವಿಸುತ್ತಾರೆ. ಇದು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಲಿದೆ.

ಹಳೆಯ ಕರ್ಚೀಫ್ ಮತ್ತು ಟವೆಲ್‌ಗಳ ಬಳಕೆ

ಹೆಚ್ಚಿನವರು ಕೆಮ್ಮು, ಶೀತ ಉಂಟಾದಾಗ ಬಳಸಿದ ಬಟ್ಟೆಯ ಕರ್ಚೀಫ್‌ಗಳನ್ನು ಅಥವಾ ಟವೆಲ್‌ ಗಳನ್ನೇ ಬಳಕೆ ಮಾಡುತ್ತಾರೆ. ಇದನ್ನು ಸ್ವಚ್ಛ ಗೊಳಿಸಿದೆ ಬಳಸುವುದರಿಂದ ವೈರಸ್‌ಗಳು ಮತ್ತೆ ಮತ್ತೆ ದೇಹಕ್ಕೆ ಹಬ್ಬಿಕೊಳ್ಳುತ್ತವೆ.

ಪೌಷ್ಟಿಕ ಆಹಾರದ ಕೊರತೆ:

ಚಳಿಗಾಲದಲ್ಲಿ ಹೆಚ್ಚಿನ‌ಜನರು ಜಂಕ್ ಫುಡ್ ಆಹಾರ ಸೇವಿಸುತ್ತಾರೆ.‌ಆದರೆ ಈ ಸಂದರ್ಭದಲ್ಲಿ ಹಣ್ಣು-ತರಕಾರಿಗಳು ಅಗತ್ಯ ಇದ್ದು ಇದನ್ನು ನಿರ್ಲಕ್ಷ್ಯ ಮಾಡುವುದರಿಂದ ಅಗತ್ಯವಾದ ಪೋಷ ಕಾಂಶಗಳು ಸಿಗದೇ ಇರಬಹುದು.

ತುಂಬಾ ಕಡಿಮೆ ಅಥವಾ ಹೆಚ್ಚು ವ್ಯಾಯಾಮ ಮಾಡುವುದು:

ಚಳಿಯ ಹವಾಮಾನವು ಕಾರ್ಯಚಟುವಟಿಯನ್ನು ನಿರುತ್ಸಾಹ ಗೊಳಿಸುತ್ತದೆ, ಇದು ಜಡ ಅಭ್ಯಾಸಗಳಿಗೆ ಕಾರಣವಾಗುತ್ತದೆ. ಮತ್ತೊಂದೆಡೆ, ಚೇತರಿಕೆ ಇಲ್ಲದೆ ಅತಿಯಾದ ಹೆಚ್ಚಿನ ವ್ಯಾಯಾಮಗಳು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಬಹುದು..ಹಾಗಾಗಿ ಅತಿಯಾದ ಚಳಿಯಿಂದ ವ್ಯಾಯಾಮ ಮಾಡದೇ ಇರುವುದು ಅಥವಾ ವಿಶ್ರಾಂತಿ ಇಲ್ಲದೆ ಅತಿಯಾಗಿ ಮಾಡು ವುದು ದೇಹದ ಅನಾರೋಗ್ಯಕ್ಕೆ ಕಾರಣವಾಗಬಹುದು.

ಆಂಟಿಬಯೋಟಿಕ್‌ಗಳ ಬಳಕೆ:

ನೆಗಡಿ ಮತ್ತು ಕೆಮ್ಮು ವೈರಸ್‌ಗಳಿಂದ ಬರುತ್ತವೆ. ಆದರೆ ಅನೇಕರು ವೈದ್ಯರ ಸಲಹೆ ಇಲ್ಲದೆ ಮೆಡಿಕಲ್‌ ನಿಂದ ತಂದು ಆಂಟಿಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ದೇಹಕ್ಕೆ ಮತ್ತಷ್ಟು ಒತ್ತಡ ಬೀಳಬಹುದು.