ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Overthinking: ಅತಿಯಾಗಿ ಯೋಚನೆ ಆಲೋಚಿಸುವುದರಿಂದ ಏನೆಲ್ಲಾ ಆಗುತ್ತಾ ಗೊತ್ತಾ?

ಚಂಚಲ ಮನಸ್ಥಿತಿಯ ಲಕ್ಷಣವೇ ಹೀಗೆ. ಇದು ಹಲವಾರು ಆಲೋಚನೆಗಳಿಂದ ಕೂಡಿದ್ದು, ನಿಮ್ಮ ಗಮನವನ್ನು ಹಲವಾರು ವಿಷಯದ ಕಡೆಗೆ ನಿರಂತರವಾಗಿ ಸೆಳೆಯುತ್ತಿರುತ್ತದೆ. ಹರಿಯುವ ನೀರಿನಂತೆ ನಿಮ್ಮ ಮನಸ್ಸು ಕೂಡ ಎಲ್ಲಡೆ ಹರಿದಾಡುತ್ತಿರುತ್ತದೆ. ಮನಸ್ಯು ಅಸ್ಥಿರವಾಗಿರುತ್ತದೆ. ಧೃಢತೆಯ ಕೊರತೆಯಿರುತ್ತದೆ.

ಅತಿಯಾಗಿ ಯೋಚನೆ ಆಲೋಚಿಸುವುದರಿಂದ ಏನಾಗುತ್ತೆ ಗೊತ್ತಾ?

-

ಚಂಚಲತೆ ಅಥವ ಅಸ್ಥಿರ ಮನಸ್ಥಿತಿಯುಳ್ಳವರಿಗೆ ತಮ್ಮ ಗುರಿಗಳನ್ನು (Overthinking) ಮುಟ್ಟುವುದೇ ಒಂದು ಸವಾಲು. ತಮ್ಮ ಕೆಲಸ ಕಾಯ೯ಗಳನ್ನು ಕೂಡ ಅಪೂಣ೯ಗೊಳಿಸುತ್ತಾರೆ. ಬಯಸ್ಲಿದ್ದನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೇ, ಸ್ವ ಜಾಗೃತಿಯಿಂದ ತಮ್ಮ ಮನಸ್ಸನ್ನು ಹತೋಟಿಗೆ ತೆಗೆದುಕೊಂಡು ಚಂಚಲತೆ ಮನಸ್ಥಿತಿಯಿಂದ ಹೊರಬರಬಹುದು. ಯಶಸ್ಸು ಮತ್ತು ನೆಮ್ಮದಿಯ ಬದುಕಿಗೆ ಸ್ಥಿರವಾದ ಮನಸ್ಸು ಅತ್ಯಗತ್ಯ.

ನನಗೆ 48 ವರ್ಷ. ಸಣ್ಣ ಮಟ್ಟದ ವ್ಯವಹಾರ ಮಾಡಿಕೊಂಡು ಜೀವನ ಮಾಡುತ್ತಿದ್ದೇನೆ. ಹೆಂಡತಿ ಮತ್ತು ಇಬ್ಬರು ಓದುವ ಮಕ್ಕಳಿದ್ದಾರೆ. ತಕ್ಕ ಮಟ್ಚಿಗೆ ಬದುಕು ನಡೆದುಕೊಂಡು ಹೋಗುತ್ತಿದೆ. ಆದರೆ ಬಹಳ ವರ್ಷಗಳಿಂದ ನನಗೊಂದು ಸಮಸ್ಯೆ ಕಾಡುತ್ತಿದೆ. ನನ್ನ ಮನಸ್ಸು ಬಹಳ ಚಂಚಲ. ಸದಾ ಅಲ್ಲಿ ಇಲ್ಲಿ ಹರಿದಾಡುತ್ತಿರುತ್ತದೆ. ಏನೋ ಮಾಡಲು ಹೋಗಿ ಇನ್ನೇನ್ನೋ ಮಾಡುತ್ತೀನಿ. ಒಂದು ನಿಟ್ಟಿನ್ನಲ್ಲಿ ಕೆಲಸು ಮಾಡಲು ಆಗುವುದಿಲ್ಲ. ಹಲವಾರು ಆಲೋಚನೆಗಳು ಕಡೆ ಗಮನ ಹೋಗುತ್ತಿರುತ್ತದೆ. ಸದಾ ಮನಸ್ಸು ಬೇರೆ ಬೇರೆ ವಿಷಯದ ಕಡೆ ವಾಲುತ್ತಿರುತ್ತದೆ. ಗಮನ ಒಂದು ಕಡೆ ಕುಳಿತಿರುವುದಿಲ್ಲ. ಇದಕ್ಕೆ ಪರಿಹಾರ ತಿಳಿಸಿಕೊಡಿ.

ಹೌದು, ಚಂಚಲ ಮನಸ್ಥಿತಿಯ ಲಕ್ಷಣವೇ ಹೀಗೆ. ಇದು ಹಲವಾರು ಆಲೋಚನೆಗಳಿಂದ ಕೂಡಿದ್ದು, ನಿಮ್ಮ ಗಮನವನ್ನು ಹಲವಾರು ವಿಷಯದ ಕಡೆಗೆ ನಿರಂತರವಾಗಿ ಸೆಳೆಯುತ್ತಿರುತ್ತದೆ. ಹರಿಯುವ ನೀರಿನಂತೆ ನಿಮ್ಮ ಮನಸ್ಸು ಕೂಡ ಎಲ್ಲಡೆ ಹರಿದಾಡುತ್ತಿರುತ್ತದೆ. ಮನಸ್ಯು ಅಸ್ಥಿರವಾಗಿರುತ್ತದೆ. ಧೃಢತೆಯ ಕೊರತೆಯಿರುತ್ತದೆ. ಇಂತಹ ಮನಸ್ಥಿತಿಯಲ್ಲಿ ನಿಮಗೆ ಏಕಾಗ್ರತೆಯಿಂದ ಕೆಲಸ ಕಾಯ೯ಗಳನ್ನು ಮಾಡುವುದು ಸುಲಭವಾಗುವುದಿಲ್ಲ. ಸ್ಥಿತ ಪ್ರಜ್ಞೆತೆಯನ್ನು ಕಾಪಾಡಿಕೊಂಡು ಹೋಗುವುದು ಕಷ್ಟಕರವಾಗಿರುತ್ತದೆ. ಚಂಚಲ ಮನಸ್ಸು ಮುಂದುವರೆದಷ್ಟು ನಿಮ್ಮ ಆಸೆ ಆಕಾಂಕ್ಷೆಗಳು ಮತ್ತು ಗುರಿಗಳು ಅಪೂಣ೯ವಾಗುವ ಸಾಧ್ಯತೆ ಹೆಚ್ಚು.

ಸ್ಥಿರತೆ ಇಲ್ಲದ ಮನಸ್ಸು ಚಂಚಲತೆಗೀಡಾಗುತ್ತದೆ.

ಚಂಚಲತೆ ಎನ್ನುವುದು ನಿಮ್ಮ ಒಂದು ಮನಸ್ಥಿತಿ. ಸಾಮಾನ್ಯವಾಗಿ ಮಕ್ಕಳಲ್ಲಿ(ಬಾಲ್ಯ ಮತ್ತು ಟೀನೇಜ್ ವಯಸ್ಸಿನ್ನಲ್ಲಿ) ಚಂಚಲತೆಯು ಹಚ್ಚು ಕಂಡುಬರುತ್ತದೆ. ಮಕ್ಕಳಲ್ಲಿ ಚಂಚಲತೆ ಸಹಜವಾದ ಪ್ರಕ್ರಿಯೆ. ದೊಡ್ಜವರಲ್ಲಿ ಅತಿಯಾಗಿ ಯೋಚನೆ ಮಾಡುವುದರಿಂದ ಮತ್ತು ಮಾನಸಿಕ ಒತ್ತಡದಿಂದ ಚಂಚಲತೆ ಮನಸ್ಥಿತಿಯು ಉದ್ಭವಿಸಬಹುದು. ಕೆಲವೊಮ್ಮೆ ಬಾಲ್ಯದಿಂದ ಸತತವಾಗಿ ರೂಢಿ ಮಾಡಿಕೊಂಡು ನಿಮ್ಮ ಸ್ವಭಾವವಾಗಿ ಬಿಡಬಹುದು. ಹೀಗೆ ಅನೇಕ ಕಾರಣಗಳಿಂದ ನೀವು ಚಂಚಲ ಮನಸ್ಸಿನುಳ್ಳವರಾಗಿರಬಹುದು.

ಈ ಇರುವವರಿಗೆ ನಿಗವಿಟ್ಚು ಕೆಲಸ ಕಾಯ೯ಗಳನ್ನು ಮಾಡಲು ಅಥವ ಕಲಿಯಲು ಕಠಿಣವಾಗುತ್ತದೆ. ಚಂಚಲ ಮನವುಳ್ಳವರು ನಿಧಾ೯ರಗಳನ್ನು ತೆಗೆದುಕೊಳ್ಳಲು ಕಷ್ಟಪಡುತ್ತಾರೆ. ಗೊಂದಲ, ಅಸ್ಪಷ್ಟತೆಗಳನ್ನು ಕೂಡ ಹೊಂದಿರುತ್ತಾರೆ. ಇದರಿಂದಾಗಿ ಸಾಮಾನ್ಯವಾಗಿ ಕೆಲಸಗಳನ್ನು ಅಪೂಣ೯ಗೊಳಿಸುವ ಸಾಧ್ಯತೆ ಹೆಚ್ಚು. ಗುರಿಗಳನ್ನು ಮುಟ್ಟುವುದು ಕೂಡ ಸವಾಲಾಗಿರುತ್ತದೆ.

ಚಂಚಲ ಮನಸ್ಸೆಂದರೆ ಒಂದು ರೀತಿಯ ಅಸ್ಥಿರತೆ

ಚಂಚಲ ಮನಸ್ಸನ್ನು ಅಸ್ಥಿರ ಮನಸ್ಸು ಎಂದೂ ಕೂಡ ಕರೆಯಬಹುದು. ಇದು ಅನಿಯಮಿತ ಆಲೋಚನೆಗಳು, ಭಾವನೆಗಳು ಮತ್ತು ನಡವಳಿಕೆಗಳಿಂದ ನಿರೂಪಿಸಲ್ಪಟ್ಟ ಮಾನಸಿಕ ಸ್ಥಿತಿಯನ್ನು ಸೂಚಿಸುತ್ತದೆ, ಇದು ಹೆಚ್ಚಾಗಿ ಮಾನಸಿಕ ಯಾತನೆಯ ಚಿಹ್ನೆಗಳು ಅಥವಾ ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ. ಚಂಚಲತೆ ಉಳ್ಳವರಲ್ಲಿ ಮನಸ್ಥಿತಿ ಬದಲಾವಣೆಗಳು, ಹಿಂತೆಗೆದುಕೊಳ್ಳುವಿಕೆ, ಆತಂಕ, ಏಕಾಗ್ರತೆಯ ಮತ್ತು ನಿದ್ರೆಯ ಕೊರತೆಗಳು ಇರಬಹುದು.

ಅಸ್ಥಿರ ಮನಸ್ಥಿತಿಯು ಸಾಮಾನ್ಯವಾಗಿ ಈ ಕೆಳಗಿನಂತೆ ಪ್ರಕಟವಾಗುತ್ತದೆ:

ಮನಸ್ಥಿತಿಯಲ್ಲಿ ಬದಲಾವಣೆಗಳು: ಭಾವನೆಗಳಲ್ಲಿ ಗಮನಾರ್ಹ ಮತ್ತು ಅತೀವ್ಗವಾದ ಬದಲಾವಣೆಗಳನ್ನು ಕಾಣಬಹುದು.

ದೀರ್ಘಕಾಲದ ಆತಂಕ ಅಥವಾ ಚಿಂತೆ: ಭಯ ಅಥವಾ ಅಸ್ವಸ್ಥತೆಯ ನಿರಂತರ ಭಾವನೆಗಳು.

ಸಾಮಾಜಿಕವಾಗಿ ದೂರವಿರುವುದು: ಇತರರಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳುವುದು.

ಹತಾಶೆ ಮತ್ತು ಅಸಹಾಯಕತೆ: ಭವಿಷ್ಯದ ಬಗ್ಗೆ ಆಶಾವಾದದ ಕೊರತೆ.

ನಿದ್ರೆಯ ಮಾದರಿಗಳಲ್ಲಿನ ಬದಲಾವಣೆಗಳು: ಅಡ್ಡಿಪಡಿಸಿದ ಅಥವಾ ಬದಲಾದ ನಿದ್ರೆಯ ಅಭ್ಯಾಸಗಳು.

ಕೇಂದ್ರೀಕರಿಸಲು ಅಸಮರ್ಥತೆ: ಕಾರ್ಯಗಳ ಮೇಲೆ ಕೇಂದ್ರೀಕರಿಸುವಲ್ಲಿ ತೊಂದರೆ.

ಕಿರಿಕಿರಿ: ಕೋಪ ಅಥವಾ ಹತಾಶೆಯ ಪ್ರಕೋಪಗಳು.

ಸುಧಾರಣೆಗಾಗಿ ಕೆಲವು ತಂತ್ರಗಳು:

ಪ್ರಜ್ಞಾಪೂವ೯ಕ - ನೀವು ಪ್ರತಿಯೊಂದು ಕ್ಷಣವನ್ನು ಪ್ರಜ್ಞಾಪೂವ೯ಕವಾಗಿ ಬದುಕುವುದನ್ನು ರೂಢಿಮಾಡಿಕೊಳ್ಳಿ. ಈ ಕೆಳಗಿನ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳುವುದರಿಂದ ನಿಮ್ಮ ಆಲೋಚನೆಗಳಲ್ಲಿ ಮತ್ತು ಮನಸ್ಥಿತಿಯಲ್ಲಿ ಸುಧಾರಣೆ ಬರುವ ಸಾಧ್ಯತೆ ಹೆಚ್ಚು.

- ನಾನು ಈ ಕ್ಷಣದಲ್ಲಿ ಯಾವ ವಿಷಯದ ಕುರಿತು ಯೋಚಿಸುತ್ತಿದ್ದೇನೆ? ನನ್ನಲ್ಲಿರುವ ಭಾವನೆಗಳೇನು?

- ಹಿಂದಿನ ಕ್ಷಣಗಳಲ್ಲಿ ಬೇರೆ ಯಾವ ವಿಷಯಗಳ ಕುರಿತು ನಾನು ಸೋಚಿಸುತ್ತಿದ್ದೇ?

- ಈ ವಿಷಯಗಳಿಂದ ನನಗೆ ಏನಾದರೂ ಪ್ರಯೋಜನೆವಿದೆಯೇ?

- ನಾನು ಒಂದು ಹೊತ್ತಿನ್ನಲ್ಲಿ ಎಷ್ಟು ವಿಷಯಗಳ ಬಗ್ಗೆ ಹೆಚ್ಚು ಯೋಚಿಸುತ್ತೇನೆ? ಇದರಿಂದ ನನಗೆ ಹೇಗೆ ಅನ್ನಿಸುತ್ತದೆ? ನನಗೆ ನನ್ನ ಮನಸ್ಸನ್ನು ಕೇಂದ್ರಿಕರಿಸಲು ಕಷ್ಟವಾಗುತ್ತಿದೆಯಲ್ಲವೇ? ಕಾರಣಗಳೇನಿರಬಹುದು?

- ನಾನು ಈ ಕ್ಷಣದಲ್ಲಿ ಯಾವ ವಿಷಯ ಕುರಿತು ಆಲೋಚಿಸುವುದು ಅಗತ್ಯವಿದೇ?

- ನನ್ನ ಆಲೋಚನೆ, ಭಾವನೆ ಮತ್ತು ನನ್ನ ನಡುವಳಿಕೆಯನ್ನು ನಾನು ಹೇಗೆ ನಿಯಂತ್ರಿಸಬಹುದು ಎಂದು ಒಮ್ಮೆ ನಿಮ್ಮನ್ನು ನೀವು ಕೇಳಿಕೊಂಡರೆೇ, ಇದೇ ನಿಮ್ಮ ಮೊದಲ ಹೆಜ್ಜೆ. ನಿಮ್ಮ ಚಂಚಲತೆಯನ್ನು ಸರಿಪಡಿಸಬಹುದು.

- ಚಂಚಲ ಮನಸ್ಸಿನಿಗೆ ಬಹುತೇಕವಾಗಿ, ಅತಿಯಾಗಿ ಆಲೋಚಿಸುವುದು (over thinking) ಕಾರಣವಾಗಿರುತ್ತದೆ. ಇದಕ್ಕೆ ನೀವು ಓದುವ, ನೋಡುವ, ಕೇಳಿಸಿಕೊಳ್ಳುವ ತೊಡಗಿಸಿಕೊಳ್ಳುವ ಸುದ್ಧಿಗಳು ಮತ್ತು ವಿಷಯಗಳು ಪ್ರಚೋದನೆಯನ್ನು ನೀಡುತ್ತಿರುತ್ತವೆ. ಈ ಪ್ರಚೋದನೆಗಳನ್ನು ನೀವು ನಿಮೂ೯ಲನೆ ಮಾಡಿದ್ದಲ್ಲಿ ನಿಮ್ಮ ಚಂಚಲ ಮನಸ್ಥಿಯನ್ನು ಕೂಡ ಸರಿಪಡಿಸಬಹುದು

- ಮನಃಪೂವ೯ಕವಾಗಿ ತೊಡಗಿಸಿಕೊಳ್ಳುವುದು (ಮೈಂಡ್ ಫುಲ್ ನೆಸ್)- ಹಾಗೆಯೇ, ನೀವು ಯಾವುದೇ ಕೆಲಸ ಕಾಯ೯ಗಳನ್ನು ನಿವ೯ಹಿಸುವಾಗ ಮನಃಪೂವ೯ಕವಾಗಿ ಮಾಡುವುದನ್ನು ರೂಢಿ ಮಾಡಿಕೊಳ್ಳಿ. ದಿನಚರಿಯಿಂದ ಹಿಡಿದು ಉದ್ಯೋಗ, ವ್ಯವಹಾರಗಳ ಕೆಲಸಗಳನ್ನು ಕೂಡ ಮನಸ್ಸಿನ ಆಳದಿಂದ ನಿವ೯ಹಿಸಿ. ಒಂದು ಕಾಯ೯ ಮುಗಿಯುವ ತನಕ ಮತ್ತೊಂದು ವಿಷಯದ ಕುರಿತು ಯೋಚಿಸುವುದನ್ನು ಪ್ರಯತ್ನಪೂವ೯ಕವಾಗಿ ತಡೆಯಬೇಕು. ಇದನ್ನೇ ರೂಢಿ ಮಾಡಿಕೊಂಡರೆ ಮನಸ್ಸನ್ನು ಸ್ಥಿರಗೊಳಿಸುವುದು ದೂರದ ಮಾತಲ್ಲ.

- ಹೆಚ್ಚು ಸ್ಥಿರವಾದ ಮನಸ್ಥಿತಿಯನ್ನು ಬೆಳೆಸಲು, ನೀವು ಮನಸ್ಸಿಗೆ ಆಗಾಗ್ಲೆ ವಿಶ್ರಾಂತಿಯನ್ನು ನೀಡುವುದನ್ನು ಅಭ್ಯಾಸ ಮಾಡಬೇಕು. ಧ್ಯಾನ ( ಮೆಡಿಟೇಶನ್), ಆಳವಾದ ಉಸಿರಾಟ, ಪ್ರಾಣಯಾಮ ಅಥವಾ ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಶಾಂತಗೊಂಡು, ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.

- ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ: ಸಮತೋಲಿತ ಆಹಾರವನ್ನು ಮತ್ತು ಸಾಕಷ್ಟು ನಿದ್ರೆಗೆ, ದೈಹಿಕ ವ್ಯಾಯಾಮ ( ಯೋಗ) ಮನಸ್ಸನ್ನು ಸ್ಥಿರವಾಗಿಸಲು ನೆರವು ಮಾಡಿಕೊಡುತ್ತವೆ

- ತಂತ್ರಜ್ಞಾನದಿಂದ ವಿರಾಮಗಳನ್ನು ತೆಗೆದುಕೊಳ್ಳಿ: ಚಂಚಲತೆಯ ಮನಸ್ಸಿನ ವಿಚಲಿತ ಭಾವನೆಗಳನ್ನು ಕಡಿಮೆ ಮಾಡಲು ಅತಿಯಾದ ಮೊಬೈಲ್ , ಟೀವಿ ಮತ್ತು ಸಾಮಾಜಿಕ ಜಾಲಾತಾಣಗಳಿಂದ ಅಂತರವಿಟ್ಟುಕೊಳ್ಳಿ.

ಈ ಸುದ್ದಿಯನ್ನೂ ಓದಿ: Roopa Gururaj Column: ಮನಸ್ಸು ಪ್ರಶಾಂತವಾಗಿದ್ದಾಗ ಸಾಧನೆ ಸಾಧ್ಯ

ಇದಾಗಿಯೂ ಕೂಡ ನಿಮಗೆ ನಿಮ್ಮ ಅಸ್ಥಿರ ಮನಸ್ಥಿತಿಯನ್ನು ಸರಿಪಡಿಸುವುದು ಕಷ್ಟವಾದಲ್ಲಿ ವೃತ್ತಿಪರ ಸಹಾಯವನ್ನು ಪಡೆಯಿರಿ: ಮಾನಸಿಕ ಆರೋಗ್ಯ ವೃತ್ತಿಪರರು ಭಾವನಾತ್ಮಕ ಸ್ಥಿರತೆಗೆ ನಿಭಾಯಿಸುವ ತಂತ್ರಗಳು ಮತ್ತು ಬೆಂಬಲವನ್ನು ಒದಗಿಸಬಹುದು.