ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಿವನ ಪೂಜೆಗೂ ಆರೋಗ್ಯಕ್ಕೂ ಇರುವ ಸಂಬಂಧ ಏನು ಗೊತ್ತೇ?

ಶಿವ ಪೂಜೆ ಎಂದರೆ ಎಲ್ಲರೂ ಮಾಡಬಹುದಾದ ಅತ್ಯಂತ ಸರಳ ವಿಧಾನದ ಪೂಜೆಯಾಗಿದೆ. ಶಿವನಿಗೆ ಎಕ್ಕದ ಹೂವು, ಬಿಲ್ವ ಪತ್ರೆ ಸಮರ್ಪಿಸಿದರೂ ಪೂಜೆಯಾಗುತ್ತದೆ. ಕೇವಲ ನೀರಿನ ಅಭಿಷೇಕದಿಂದಲೂ ಆರಾಧಿಸಬಹುದಾಗಿದೆ. ಶಿವನನ್ನು ಪೂಜಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳು ಇವೆ. ಅವು ಯಾವುದು ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ.

ಶಿವ ಪೂಜೆ ಹಿಂದಿದೆ ವೈಜ್ಞಾನಿಕ ರಹಸ್ಯ

ಪ್ರೊ. ಸುತ್ತೂರು ಎಸ್. ಮಾಲಿನಿ -

ಬೆಂಗಳೂರು: ಶಿವನ (God shiva) ಪೂಜೆ ಎನ್ನುವುದು ಒಂದು ಧ್ಯಾನ (Meditation). ನಾವು ಧ್ಯಾನ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದೋ ಅವೆಲ್ಲವನ್ನೂ ಶಿವನನ್ನು ಆರಾಧಿಸುವುದರಿಂದ ಪಡೆಯಬಹುದಾಗಿದೆ ಎನ್ನುತ್ತಾರೆ ಮೈಸೂರು ವಿವಿಯ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ (Dr. Suttur Malini). ವಿಶ್ವವಾಣಿ ಹೆಲ್ತ್ (Vishwavani health) ಯೂಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಶಿವ ಪೂಜೆ ಎಂದರೆ ಮೆದುಳಿಗೆ ನಿರಾಕಾರದಿಂದ ಆಕಾರ ಕೊಡುವಂತದ್ದು. ಶಿವಲಿಂಗವು ಗಮನ ಕೇಂದ್ರೀಕರಿಸುವ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.

ಶಿವಲಿಂಗವನ್ನು ಪೂಜಿಸುವುದರಿಂದ ಪಿಸಿಓಡಿ, ಥೈರಾಯ್ಡ್, ರಕ್ತದೊತ್ತಡ, ಡಯಾಬಿಟಿಸ್ ನಂತಹ ಕಾಯಿಲೆಗಳನ್ನು ದೂರ ಮಾಡಬಹುದಾಗಿದೆ ಎನ್ನುವ ಡಾ. ಸುತ್ತೂರು ಮಾಲಿನಿ, ಇವತ್ತು ಪೂಜೆಯಲ್ಲಿ ವೈಭವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಪೂಜೆಗೆ ವೈಭವಕ್ಕಿಂತ ಉದ್ದೇಶ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

ವಿಡಿಯೊ ಇಲ್ಲಿದೆ:



ಶಿವಲಿಂಗದ ಪೂಜೆಯ ಹಿಂದೆ ಹಲವಾರು ಆಶ್ಚರ್ಯಕರವಾದ ವೈಜ್ಞಾನಿಕ ಸಂಗತಿಗಳಿವೆ. ಇದು ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯದ ಸಾಕಷ್ಟು ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಅವರು ಹೇಳಿದರು.

ಶಿವ ಪೂಜೆ ಎಂದರೆ ಧ್ಯಾನ. ಸಾಮಾನ್ಯವಾಗಿ ನಮಗೆ ಪೂಜೆ ಮಾಡುವಾಗ ಒಂದು ಆಕಾರ ಬೇಕು ಎಂದುಕೊಳ್ಳುತ್ತೇವೆ. ನಿರಾಕರವನ್ನು ನೋಡಿಕೊಂಡು ಪೂಜೆ, ಧ್ಯಾನವನ್ನು ಮಾಡಲು ಸಾಧ್ಯವಿಲ್ಲ. ಆದರೆ ಶಿವಲಿಂಗದ ಆಕೃತಿಯು ನಿರಾಕಾರವಾಗಿದೆ. ಇದು ಅತ್ಯಂತ ಸರಳವಾದ ಆಕೃತಿಯಾಗಿದೆ. ಇದನ್ನು ಇಟ್ಟುಕೊಂಡು ನಾವು ಆಕಾರವನ್ನು ಕಲ್ಪಿಸಿಕೊಳ್ಳುತ್ತೇವೆ. ಶಿವಲಿಂಗವು ಧ್ಯಾನಕ್ಕೆ ಅತ್ಯಂತ ಸೂಕ್ತವಾದ ಆಕಾರವಾಗಿದೆ ಎಂದರು.

ಮನುಷ್ಯನ ಮೂಲ ಎಲ್ಲಿದೆ, ಅವನ ಉಗಮವಾಗಿದ್ದು ಹೇಗೆ ಗೊತ್ತೇ?

ಯಾವುದೇ ಮನುಷ್ಯ ರೂಪದ ದೇವರ ಆಕೃತಿಯನ್ನು ನೋಡಿದಾಗ ನಮ್ಮ ಗಮನ ಬೇರೆಡೆಗೆ ಸೆಳೆಯುತ್ತದೆ. ಆದರೆ ಶಿವಲಿಂಗ ನಮಗೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಶಿವನಿಗೆ ನಾವು ನೀರಿನ ಅಭಿಷೇಕ ಮಾಡುತ್ತೇವೆ. ಇದರಿಂದ ಸುತ್ತಮುತ್ತ ತಂಪಾದ ವಾತಾವರಣ ಸೃಷ್ಟಿಯಾಗುತ್ತದೆ. ಇದು ನಮ್ಮ ಪಂಚೇಂದ್ರಿಯಗಳ ಜಾಗೃತಿಗೆ ಸಹಾಯ ಮಾಡುತ್ತದೆ. ಮನಸ್ಸನ್ನು ಶಾಂತವಾಗಿರಿಸಿ ವಿವಿಧ ರೀತಿಯ ಹಾರ್ಮೋನ್ ಗಳ ಬಿಡುಗಡೆಗೆ ಸಹಕರಿಸುತ್ತದೆ. ಹೊರಗಿನ ಪ್ರಪಂಚದಿಂದ ಮನಸ್ಸನ್ನು ಒಳಗೆಳೆದುಕೊಂಡು ನಮ್ಮನ್ನು ನಾವು ಅವಲೋಕಿಸಲು ಪ್ರೇರೇಪಿಸುತ್ತದೆ ಎಂದರು.

ಶಿವನಿಗೆ ನಾವು ಸಮರ್ಪಿಸುವ ಬಿಲ್ವಪತ್ರೆಯು ಭೂತ, ವರ್ತಮಾನ, ಭವಿಷ್ಯವನ್ನು ಪ್ರತಿನಿಧಿಸುತ್ತದೆ. ಇದು ಭೂತಕಾಲದ ತಪ್ಪುಗಳನ್ನು ತಿದ್ದಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಹಾರ್ಮೋನ್ ವ್ಯತ್ಯಯವಾಗದಂತೆ ಕೂಡ ಶಿವಲಿಂಗದ ಪೂಜೆ ಸಹಾಯ ಮಾಡುವುದು. ದೇಹಾರೋಗ್ಯಕ್ಕೆ ಪೂರಕವಾದ, ಮನಸ್ಸು ಮತ್ತು ದೇಹವನ್ನು ಆರೋಗ್ಯಕರವಾಗಿ ಇರಿಸಬಲ್ಲ ಹಾರ್ಮೋನ್ ಗಳ ಬಿಡುಗಡೆ ಮಾಡಲು ಕೂಡ ನಿತ್ಯ ಶಿವಪೂಜೆಯಿಂದ ಸಾಧ್ಯವಿದೆ ಎಂದು ಅವರು ತಿಳಿಸಿದರು.

ಕಾಫಿ ಸೇವನೆಯಿಂದ ಕರುಳಿನ ಆರೋಗ್ಯ ವೃದ್ಧಿಸುತ್ತಾ? ತಜ್ಞರ ಸಲಹೆ ಏನು?

ಶಿವಲಿಂಗದ ಆರಾಧನೆಯು ಹರ್ಮಿಟ್ ಮೆಡಿಟೇಶನ್ ಅಥವಾ ಕೇವ್ ಮೆಡಿಟೇಶನ್ ಗೆ ಸಮಾನವಾಗಿದೆ. ಇಲ್ಲಿ ನಾವು ಮಾಡುವ ಪ್ರತಿಯೊಂದು ಆಚಾರ, ವಿಚಾರಗಳು ಕೂಡ ವಿವಿಧ ರೀತಿಯ ಥೆರಪಿಯ ಪ್ರಯೋಜನವನ್ನು ಒದಗಿಸುತ್ತದೆ. ದೇವಸ್ಥಾನ, ಪೂಜೆ, ಆಚಾರಗಳು ಉದ್ದೇಶ ತುಂಬಾ ಚೆನ್ನಾಗಿದ್ದರೂ ಕೂಡ ನಾವು ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಅದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಹೆಚ್ಚು ವೈಭವದಿಂದ ಅಥವಾ ಅತ್ಯಂತ ಸರಳವಾಗಿ ಪೂಜೆ ಮಾಡುವುದರಿಂದ ಯಾವುದೇ ವ್ಯತ್ಯಾಸವಿಲ್ಲ ಎನ್ನುತ್ತಾರೆ ಡಾ. ಸುತ್ತೂರು ಮಾಲಿನಿ.