ಬೆಂಗಳೂರು: ಇವತ್ತು ಎಲ್ಲರೂ ಕೂಡ ಮಾನವನ ಉಗಮದ (origin of man) ಬಗ್ಗೆ ತಿಳಿದುಕೊಳ್ಳಬೇಕಿದೆ. ಯಾಕೆಂದರೆ ನಾವು ಮಾನವ ಧರ್ಮದ (Humanity) ಬಗ್ಗೆ ತಿಳಿದುಕೊಳ್ಳಬೇಕಿದೆ. ಜಾತಿ, ಮತ, ಧರ್ಮದ ಹೆಸರಿನಲ್ಲಿ ಇವತ್ತು ನಾವು ಗಲಾಟೆ ಮಾಡುತ್ತಿದ್ದೇವೆ. ನಾವೆಲ್ಲರೂ ಒಂದೇ, ನಮ್ಮೆಲ್ಲರ ಮೂಲ ಒಂದೇ ಎಂಬುದನ್ನು ಮರೆತಿದ್ದೇವೆ ಎನ್ನುತ್ತಾರೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ (Dr. Suttur Malini). ವಿಶ್ವವಾಣಿ ಹೆಲ್ತ್ (Vishwavani health) ಯೂಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಎಲ್ಲರ ರಕ್ತ ಕೆಂಪು ಬಣ್ಣದ್ದೇ ಆಗಿದೆ. ಹೀಗಿರುವಾಗ ನಾವೆಲ್ಲರೂ ಒಂದೇ ಆಗಿದ್ದೇವೆ ಎಂದರು.
ಮನುಷ್ಯನ ಬಗ್ಗೆ ದೀರ್ಘವಾದ ಅಧ್ಯಯನಗಳು ಕೂಡ ನಾವೆಲ್ಲರೂ ಒಂದೇ ಮೂಲದಿಂದ ಬಂದವರು ಎಂಬುದನ್ನು ಹೇಳುತ್ತದೆ. ಜಗತ್ತಿನಲ್ಲಿ ಇರುವುದು ಮಾನವ ಧರ್ಮ ಮಾತ್ರ ಎಂಬುದನ್ನು ತಿಳಿಸುತ್ತದೆ. ಎಲ್ಲ ಧರ್ಮದ ಸಾರವು ಕೂಡ ಪ್ರೀತಿ, ದಯೆ, ಸಹಿಷ್ಣುತೆಯನ್ನೇ ಹೇಳುವುದು. ಆದರೆ ಈಗ ಅದರ ಮೂಲವನ್ನು ಬಿಟ್ಟು ಧರ್ಮವನ್ನು ಮಾತ್ರ ಅನುಸರಿಸಲಾಗುತ್ತದೆ ಎಂದು ತಿಳಿಸಿದರು.
ಶವಾಗಾರದಲ್ಲಿ ಜೀವಂತವಾಗಿ ಎದ್ದ ಕೂತ ಮೃತ ವ್ಯಕ್ತಿ; ಏನಿದು ಪವಾಡ?
ಮಾನವ ಎಂದರೆ ಹೋಮೋಸೇಪಿಯನ್ಸ್ . ಎಲ್ಲರಲೂ ಇರುವುದು ಕೇವಲ ೪೬ ವರ್ಣತಂತುಗಳಿವೆ. ಅದಕ್ಕಿಂತ ಕಡಿಮೆ, ಹೆಚ್ಚು ಇದ್ದರೆ ಅದು ವಿವಿಧ ಕಾಯಿಲೆಯ ಲಕ್ಷಣವಾಗಿರುತ್ತದೆ. ಇನ್ನು ಎಲ್ಲ ಮನುಷ್ಯನ ರಕ್ತ ಕೆಂಪು ವರ್ಣದ್ದಾಗಿದೆ ಎಂದು ಅವರು ಹೇಳಿದರು.
ಎಲ್ಲಾ ಮನುಷ್ಯರು ಹುಟ್ಟಿರುವುದು ಅಫ್ರಿಕದಲ್ಲಿ. ಹೀಗಾಗಿ ಎಲ್ಲರ ತವರು ಮನೆಯು ಆಫ್ರಿಕವೇ ಆಗಿದೆ. ಬೇರೆ ಎಲ್ಲ ಕಡೆಗೆ ಮನುಷ್ಯ ವಲಸೆ ಹೋಗಿ ನೆಲೆಯಾಗಿದ್ದಾನೆ. ಸುಮಾರು ೨- ೩ ಲಕ್ಷ ವರ್ಷಗಳ ಹಿಂದೆಯಷ್ಟೇ ಮಾನವನ ಉಗಮವಾಗಿದೆ. ಅಷ್ಟು ಹಳೆಯ ಪಳೆಯುಳಿಕೆ ಸಿಕ್ಕಿರುವುದು ಆಫ್ರಿಕದಲ್ಲಿ ಮಾತ್ರ. ಹೀಗಾಗಿ ಎಲ್ಲರ ಮೂಲ ಆಫ್ರಿಕಾ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.
ಮನುಷ್ಯ ಆಫ್ರಿಕಾದಲ್ಲೇ ಹುಟ್ಟಿದ್ದಾನೆ ಎನ್ನುವುದರ ಮತ್ತೊಂದು ಸಾಕ್ಷಿ ಎಂದರೆ ಮಹಿಳೆಯರಲ್ಲಿರುವ ಮೈಟೋಕಾಂಡ್ರಿಯಾ ಡಿಎನ್ಎ. ಇದರ ಮೂಲ ಹುಡುಕಲು ಹೊರಟಾಗ ಅದು ಸಿಕ್ಕಿರುವುದು ಕೂಡ ಆಫ್ರಿಕಾದ ೨ ಲಕ್ಷ ವರ್ಷಗಳ ಹಿಂದೆ ಇದ್ದ ಮಹಿಳೆಯ ಪಳೆಯುಳಿಕೆಯಲ್ಲಿ. ಹೀಗಾಗಿ ವೈಜ್ಞಾನಿಕವಾಗಿ ಎಲ್ಲರೂ ಕೂಡ ಒಂದೇ. ಜಾತಿ, ಧರ್ಮ, ಕುಲಕ್ಕಾಗಿ ನಡೆಯುತ್ತಿರುವ ಹೊಡೆದಾಟಗಳು ಕೇವಲ ರಾಜಕೀಯಕ್ಕಾಗಿಯೇ ಆಗಿದೆ ಎಂದರು.
ಇನ್ನು ಪುರುಷನ ವೈ ವರ್ಣ ತಂತುವಿನ ಮೂಲ ಕೂಡ ಆಫ್ರಿಕಾದಲ್ಲೇ ಸಿಗುತ್ತದೆ. ಆ ಕಾಲದಲ್ಲಿ ಆಫ್ರಿಕಾದಲ್ಲಿ ಸಾಕಷ್ಟು ರೂಪಾಂತರಗಳು ನಡೆಯುತ್ತಿತ್ತು. ಬಹಳಷ್ಟು ವರ್ಷಗಳು ಕಳೆದ ಮೇಲೆ ಹೋಮೋಸೇಪಿಯನ್ ಗಳು ಏಷ್ಯಾ, ಆಸ್ಟ್ರೇಲಿಯಾ, ಯುರೋಪಿಯನ್ ಖಂಡಗಳಿಗೆ ವಲಸೆ ಹೋದರು ಎಂದು ಹೇಳಿದರು.
ಆಫ್ರಿಕಾದ ಹವಾಮಾನ ಮತ್ತು ಪರಿಸರ ಮಾನವನ ಉಗಮಕ್ಕೆ ಪೂರಕವಾಗಿತ್ತು. ಅದು ಭೂಮಧ್ಯೆ ರೇಖೆಗೆ ಹತ್ತಿರವಾಗಿರುವುದರಿಂದ ಜೀವವೈವಿಧ್ಯತೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಮಾನವನ ಉಗಮದ ಬಳಿಕ ಹಲವಾರು ರೀತಿಯ ಬದಲಾವಣೆಗಳು ನಡೆದು ಇಂದಿನ ಆಧುನಿಕ ಮಾನವ ರೂಪುಗೊಂಡಿದ್ದಾನೆ ಎಂದರು.
ಕೂದಲಿನ ಉತ್ತಮ ಆರೋಗ್ಯಕ್ಕಾಗಿ ಈ ಟಿಪ್ಸ್ ಬಳಸಿ!
ಮಾನವನ ದೇಹದಲ್ಲಿ ಏನೇ ಬದಲಾವಣೆ ಮಾಡಬೇಕಾದರೂ ಕೂಡ ಎನರ್ಜಿ ಲೆಕ್ಕಾಚಾರಗಳು ನಡೆಯುತ್ತವೆ. ಇದಕ್ಕೆ ಭೌಗೋಳಿಕ ಅಂಶಗಳು ಕಾರಣವಾಗಿರುತ್ತದೆ. ಮಾನವನ ಬಣ್ಣ, ಎತ್ತರ, ಬುದ್ದಿ ಮತ್ತೆಯಲ್ಲಿ ವ್ಯತ್ಯಾಸವಿದ್ದರೂ ಕೂಡ ನಾವೆಲ್ಲರೂ ಒಂದೇ ಆಗಿದ್ದೇವೆ ಎಂದು ಅವರು ತಿಳಿಸಿದರು.