ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೂದಲಿನ ಉತ್ತಮ ಆರೋಗ್ಯಕ್ಕಾಗಿ ಈ ಟಿಪ್ಸ್ ಬಳಸಿ!

Hair Tips: ಕೆಲವೊಮ್ಮೆ ಸರಳವಾಗಿ ಮನೆಯಲ್ಲಿಯೇ ತಯಾರಿಸಿದ ಟಿಪ್ಸ್ ಅನ್ನು ಬಳಕೆ ಮಾಡುವ ಮೂಲಕ ಕೂದಲಿನ ಆರೋಗ್ಯ ರಕ್ಷಣೆ ಮಾಡಬಹುದು‌. ಈ ಬಗ್ಗೆ ಜೀವನಶೈಲಿ ತರಬೇತುದಾರರೊಬ್ಬರು ಸಲಹೆಯೊಂದನ್ನು ನೀಡಿದ್ದಾರೆ. ಬಹಳ ಹಿಂದೆಯೇ ನಮ್ಮ ಹಿರಿಯರು ಬಳಕೆ ಮಾಡುತ್ತಿದ್ದ ಎಳ್ಳು, ಮಖಾನಾ, ಬೀಜಗಳು, ತುಪ್ಪ, ಖರ್ಜೂರ ಮತ್ತು ಬೀಜಗಳಂತಹ ಪದಾರ್ಥಗಳಲ್ಲಿ ಕೂದಲಿಗೆ ಬೇಕಾದ ಬಯೋಟಿನ್ ಸಮೃದ್ಧವಾಗಿದೆ ಎಂದು ಅವರು ಹೇಳುತ್ತಾರೆ. ಹೀಗಾಗಿ ಇವುಗಳಲ್ಲಿ ಒಂದು ಖಾದ್ಯ ತಯಾರಿಸುವ ಮೂಲಕ ಕೂದಲಿನ ಆರೋಗ್ಯ ರಕ್ಷಣೆ ಮಾಡಬಹುದು‌..

ಕೂದಲಿನ ಆರೋಗ್ಯಕ್ಕೆ ಮನೆಯಲ್ಲೇ ಈ ಖಾದ್ಯ ತಯಾರಿಸಿ!

ಸಂಗ್ರಹ ಚಿತ್ರ -

Profile
Pushpa Kumari May 19, 2026 7:00 AM

ನವದೆಹಲಿ,ಮೇ 18: ವಯಸ್ಸಾದಂತೆ ಕೂದಲು (Hair Health) ಉದುರುವುದು ಸಾಮಾನ್ಯ. ಆದರೆ ಇಂದು ಯೌವನದಲ್ಲಿರುವಾಗಲೇ ಕೂದಲು ಬಿಳಿಯಾಗಿ ಉದುರುವ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಇದನ್ನು ಸರಿಪಡಿಸಲೆಂದು ಮಾರುಕಟ್ಟೆಯಲ್ಲಿ ಶ್ಯಾಂಪೂ,ಕಂಡೀಷನರ್ ಎಂದು ನಾನಾ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರುತ್ತೇವೆ‌. ಅನೇಕ ಆರೋಗ್ಯ ತಜ್ಞರ ಪ್ರಕಾರ, ಕೂದಲಿನ ಆರೋಗ್ಯವು ಹೆಚ್ಚಾಗಿ ದೇಹದೊಳಗೆ ಏನು ನಡೆಯುತ್ತಿದೆ ಎಂಬುದರೊಂದಿಗೆ ಸಂಪರ್ಕ ಹೊಂದಿದೆ. ನಾವು ಮಾಡುವ ಪೋಷಣೆ, ಒತ್ತಡ, ನಿದ್ರೆ, ಕರುಳಿನ ಆರೋಗ್ಯ ಮತ್ತು ಜೀವನಶೈಲಿ ಅಭ್ಯಾಸಗಳು ನಿಮ್ಮ ಕೂದಲು ಆರೋಗ್ಯವಾಗಿ ಇರಿಸುವಂತೆ ಮಾಡುತ್ತದೆ.

ಕೆಲವೊಮ್ಮೆ ಸರಳವಾಗಿ ಮನೆಯಲ್ಲಿಯೇ ತಯಾರಿಸಿದ ಟಿಪ್ಸ್ ಅನ್ನು ಬಳಕೆ ಮಾಡುವ ಮೂಲಕ ಕೂದಲಿನ ಆರೋಗ್ಯ ರಕ್ಷಣೆ ಮಾಡಬಹುದು‌. ಈ ಬಗ್ಗೆ ಜೀವನಶೈಲಿ ತರಬೇತುದಾರರೊಬ್ಬರು ಸಲಹೆಯೊಂದನ್ನು ನೀಡಿದ್ದಾರೆ. ಬಹಳ ಹಿಂದೆಯೇ ನಮ್ಮ ಹಿರಿಯರು ಬಳಕೆ ಮಾಡುತ್ತಿದ್ದ ಎಳ್ಳು, ಮಖಾನಾ, ಬೀಜಗಳು, ತುಪ್ಪ, ಖರ್ಜೂರ ಮತ್ತು ಬೀಜಗಳಂತಹ ಪದಾರ್ಥಗಳಲ್ಲಿ ಕೂದಲಿಗೆ ಬೇಕಾದ ಬಯೋಟಿನ್ ಸಮೃದ್ಧವಾಗಿದೆ ಎಂದು ಅವರು ಹೇಳುತ್ತಾರೆ. ಹೀಗಾಗಿ ಇವುಗಳಲ್ಲಿ ಒಂದು ಖಾದ್ಯ ತಯಾರಿಸುವ ಮೂಲಕ ಕೂದಲಿನ ಆರೋಗ್ಯ ರಕ್ಷಣೆ ಮಾಡಬಹುದು‌

Health Tips: ವ್ಯಾಯಾಮಕ್ಕೂ ಮುನ್ನ ಈ ಹಣ್ಣುಗಳ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ!

ಮಾಡುವ ವಿಧಾನ

ಎಳ್ಳು 2 ಚಮಚ, ಅಗಸೆಬೀಜ 1 ಚಮಚ, ಕುಂಬಳಕಾಯಿ ಬೀಜ 1 ಚಮಚ ,ಸೂರ್ಯಕಾಂತಿ ಬೀಜ ಹಾಗೂ ಹುರಿದ ಮಖಾನಾ 1 ಕಪ್, ನೆನೆಸಿದ ಬಾದಾಮಿ, ಕೊಬ್ಬರಿ ತುರಿ, ಒಣ ಖರ್ಜೂರ ಹಾಗೂ ಬೆಲ್ಲ ,ಶುದ್ಧ ಹಸುವಿನ ತುಪ್ಪ 1 ರಿಂದ 2 ಚಮಚ

ಮೊದಲಿಗೆ ಎಳ್ಳು, ಕುಂಬಳಕಾಯಿ ಮತ್ತು ಸೂರ್ಯಕಾಂತಿ ಬೀಜಗಳನ್ನು ರಾತ್ರಿಯಿಡೀ ನೆನೆಸಿ ಮರುದಿನ ಬೆಳಿಗ್ಗೆ ಅವುಗಳನ್ನು ಒಣಗಿಸಿ, ನಂತರ ಮಖಾನಾದೊಂದಿಗೆ ಲಘುವಾಗಿ ಹುರಿದು ಕೊಳ್ಳಿ. ಬಳಿಕ ಹುರಿದ ಬೀಜಗಳು, ಬಾದಾಮಿ, ಆಕ್ರೋಟ್ ಮತ್ತು ಮಖಾನಾವನ್ನು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ಪುಡಿ ಮಾಡಿ. ಇದಕ್ಕೆ ಖರ್ಜೂರ ಅಥವಾ ಬೆಲ್ಲವನ್ನು ಸೇರಿಸಿ ಮತ್ತೊಮ್ಮೆ ಬ್ಲೆಂಡ್ ಮಾಡಿ. ಕೊನೆಯದಾಗಿ ಕೊಬ್ಬರಿ ತುರಿ ಮತ್ತು ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಸೇವನೆ ಮಾಡಿದರೆ ಆರೋಗ್ಯಕ್ಕೂ ಒಳಿತು ಹಾಗೂ ನಿಮ್ಮ ಕೂದಲನ್ನು ಕೂಡ ರಕ್ಷಣೆ ಮಾಡುತ್ತದೆ. ಬೀಜಗಳು ಆರೋಗ್ಯಕರ ಕೊಬ್ಬುಗಳು, ಸತು, ಮೆಗ್ನೀಸಿಯಮ್ ಮತ್ತು ಒಮೆಗಾ-3 ಕೊಬ್ಬುಗಳನ್ನು ಒದಗಿಸುತ್ತವೆ, ಇದು ನೆತ್ತಿ ಮತ್ತು ಕೂದಲಿನ ಆರೋಗ್ಯವನ್ನು ರಕ್ಷಿಸುತ್ತದೆ..