ಶವಾಗಾರದಲ್ಲಿ ಜೀವಂತವಾಗಿ ಎದ್ದ ಕೂತ ಮೃತ ವ್ಯಕ್ತಿ; ಏನಿದು ಪವಾಡ?
Viral Neews: ಅತೀಯಾಗಿ ಕುಡಿದಿದ್ದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಣೆ ಮಾಡಿದ್ದರು. ಇದಕ್ಕಾಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಆದರೆ ಭದ್ರತಾ ಸಿಬ್ಬಂದಿ ಕೋಲ್ಡ್ ಸ್ಟೋರೇಜ್ ಘಟಕಗಳಲ್ಲಿ ವಿಚಿತ್ರ ಶಬ್ದ ವೊಂದು ಕೇಳಿ ಬಂದಿದ್ದು ಅಲ್ಲಿದ್ದ ಕಾರ್ಮಿಕರು ಭಯಭೀತರಾಗಿದ್ದರು. ಆದರೆ ಇದನ್ನು ಪರಿಶೀಲನೆ ಮಾಡಿದಾಗ ವ್ಯಕ್ತಿಯೂ ಜೀವಂತವಾಗಿ ಪತ್ತೆಯಾಗಿದ್ದಾನೆ..
ಸಂಗ್ರಹ ಚಿತ್ರ -
ಗೋರಾ, ಮೇ 19: "ಸತ್ತ ವ್ಯಕ್ತಿಗೆ ಮತ್ತೆ ಜೀವ ಬಂತು" ಈ ಮಾತು ಕೇಳಲು ಆಶ್ಚರ್ಯ ಎನಿಸಬಹುದು. ಆದರೆ ಕಮಿಯೆನ್ನಾ ಗೋರಾ ಪಟ್ಟಣದಲ್ಲಿ (Kamienna Góra) ಇಂತಹುವುದೇ ಘಟನೆಯೊಂದು ನಡೆದಿದೆ. ಅತೀಯಾಗಿ ಕುಡಿದಿದ್ದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಣೆ ಮಾಡಿದ್ದರು. ಇದಕ್ಕಾಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಆದರೆ ಭದ್ರತಾ ಸಿಬ್ಬಂದಿ ಕೋಲ್ಡ್ ಸ್ಟೋರೇಜ್ ಘಟಕಗಳಲ್ಲಿ ವಿಚಿತ್ರ ಶಬ್ದವೊಂದು ಕೇಳಿ ಬಂದಿದ್ದು ಅಲ್ಲಿದ್ದ ಕಾರ್ಮಿಕರು ಭಯಭೀತ ರಾಗಿದ್ದರು. ಆದರೆ ಇದನ್ನು ಪರಿಶೀಲನೆ ಮಾಡಿದಾಗ ವ್ಯಕ್ತಿಯೂ ಜೀವಂತವಾಗಿ ಪತ್ತೆಯಾಗಿದ್ದಾನೆ
ಕಮಿಲ್ ಎಂಬ ಹೆಸರಿನ 25 ವರ್ಷದ ಯುವಕ ಸ್ನೇಹಿತರ ಜೊತೆ ಪಾರ್ಟಿಗೆ ತೆರಳಿ ಅತೀಯಾಗಿ ಮದ್ಯಸೇವನೆ ಮಾಡಿದ್ದ. ಆದರೆ ಆತ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ವೈದ್ಯರು ಬಂದು ಪರಿ ಶೀಲನೆ ಮಾಡಿದಾಗ ಯಾವುದೇ ನಾಡಿಮಿಡಿತ ಹಾಗೂ ಉಸಿರಾಟದ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಆತ ಮೃತ ಪಟ್ಟಿದ್ದಾನೆ ಎಂದು ಶವಾಗಾರ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ಕಮಿಲ್ ಅವರ ದೇಹವನ್ನು ರೆಫ್ರಿಜರೇಟರ್ ಶವಾಗಾರ ವಿಭಾಗದೊಳಗೆ ಇರಿಸಲಾಗಿದ್ದರೂ, ಭದ್ರತಾ ಸಿಬ್ಬಂದಿ ಕೋಲ್ಡ್ ಸ್ಟೋರೇಜ್ ಘಟಕಗಳಲ್ಲಿ ಶಬ್ದಗಳು ಕೇಳಿಬರುತ್ತಿದ್ದವು. ಧೈರ್ಯ ಮಾಡಿ ಫ್ರೀಜರ್ ಬಾಗಿಲು ತೆರೆದಾಗ ಅಲ್ಲಿದ್ದ ದೃಶ್ಯ ಕಂಡು ಎಲ್ಲರೂ ಬೆಚ್ಚಿಬಿದ್ದರು. ರೆಫ್ರಿಜರೇಟರ್ ಬಾಗಿಲು ತೆರೆದಾಗ, ಕಾಮಿಲ್ ಜೀವಂತವಾಗಿದ್ದಾನೆ. ಆತ ಪ್ರಜ್ಞೆಯನ್ನು ಕಳೆದು ಕೊಂಡಿದ್ದು ಚಳಿಯಿಂದ ಬಳಲುತ್ತಿದ್ದ.
ವೈದ್ಯಕೀಯ ವಿಜ್ಞಾನದಲ್ಲಿ ಇದನ್ನು ಅತ್ಯಂತ ಅಪರೂಪದ ಘಟನೆ ಎನ್ನಲಾಗುತ್ತದೆ. ಕೆಲವೊಮ್ಮೆ ಅತಿಯಾದ ಆಲ್ಕೋಹಾಲ್ ಸೇವನೆ ಯಿಂದ ಮನುಷ್ಯನ ದೇಹದ ಅಂಗಾಂಗಗಳ ಚಟುವಟಿಕೆಗಳು ಮತ್ತು ನಾಡಿಮಿಡಿತ ನಿಧಾನವಾಗುತ್ತದೆ. ಆದರೆ ಈಘಟನೆಯ ವಿಚಿತ್ರ ಅಂದ್ರೆ ಯುವಕ ವೈದ್ಯಕೀಯ ತಪಾಸಣೆ ಮುಗಿಸಿಯೂ ಮತ್ತೆ ಪಬ್ ಗೆ ತೆರಳಿ ಕುಡಿಯಲು ಪ್ರಾರಂಭ ಮಾಡಿದ್ದಾನೆ ಎಂದು ತಿಳಿದು ಬಂದಿದೆ.