ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Paper Cups: ಚಹಾ ಕುಡಿಯೋಕೆ ಪೇಪರ್ ಕಪ್ ಬಳಸ್ತಿದ್ರೆ ಇವತ್ತೇ ನಿಲ್ಲಿಸಿ... ಆರೋಗ್ಯಕ್ಕಿದೇ ಕುತ್ತು!

ಪೇಪರ್ ಕಪ್ ಬಳಕೆ ಬಗ್ಗೆ ಅಧ್ಯಯನವೊಂದನ್ನು ಮಾಡಲಾಗಿದ್ದು ಕಾಗದದ ಕಪ್‌ನಲ್ಲಿ ಬಿಸಿ ಪಾನೀಯವನ್ನು 15 ನಿಮಿಷಗಳ ಕಾಲ ಇರಿಸಿದರೆ ಸುಮಾರು 20,000 ರಿಂದ 25,000 ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಬಿಡುಗಡೆ ಮಾಡಲಿದೆ. ಈ ಕಣಗಳು ನಮ್ಮ ದೇಹವನ್ನು ಪ್ರವೇಶಿಸಿದಾಗ ಹಾರ್ಮೋನುಗಳ ಅಸಮತೋಲನ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗಬಹುದು.

ಪೇಪರ್ ಕಪ್‌ನಲ್ಲಿ ಕಾಫಿ- ಟೀ ಕುಡಿಯೋ ಅಭ್ಯಾಸ ಇದ್ಯಾ? ಹಾಗಿದ್ರೆ ನಿಲ್ಸಿ!

Profile Pushpa Kumari Mar 18, 2025 6:00 AM

ನವದೆಹಲಿ: ನಾವು ಸಾಮಾನ್ಯವಾಗಿ ಟೀ, ಕಾಫಿ ಕುಡಿಯಲು ಪೇಪರ್ ಕಪ್(Paper Cups)ಗಳನ್ನು ಬಳಸುತ್ತೇವೆ. ಆದರೆ ಈ ಪೇಪರ್ ಕಪ್ ಗಳ ನ್ನು ಬಳಸುವ ಬಗ್ಗೆ ತಜ್ಞರು ಶಾಕಿಂಗ್ ಅಂಶಗಳನ್ನು ಹೊರ ಹಾಕಿದ್ದು ಇದು ನಮ್ಮ ಆರೋಗ್ಯಕ್ಕೆ ಬಹಳಷ್ಟು ಅಪಾಯಕಾರಿ ಎಂದು ಬಹಿರಂಗ ಪಡಿಸಿದ್ದಾರೆ. ಹಾಗಾಗಿ ಟೀ ಕಾಫಿ ಇಷ್ಟ ಎಂದು ಹೋದಲೆಲ್ಲಾ ಪೇಪರ್‌ ಕಪ್‌ನಲ್ಲಿ ಬಿಸಿ ಟೀ, ಕಾಫಿ ಕುಡಿಯುತ್ತಿದ್ದರೆ ಇದೇ ನಮ್ಮ ಆರೋಗ್ಯಕ್ಕೆ ಬಹಳಷ್ಟು ಮಾರಕವಾಗಬಹುದು. ಪೇಪರ್ ಗ್ಲಾಸ್ ಬಿಸಿಗೆ ಮೆಲ್ಟ್ ಆಗುವ ಕಾರಣ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕಾಫಿ ಅಥವಾ ಬಿಸಿನೀರಿನಂತಹ ಯಾವುದೇ ಬಿಸಿ ಪಾನೀ‌ಯವನ್ನು ಈ ಕಪ್‌ಗಳಿಗೆ ಹಾಕುವಾಗ ಮೈಕ್ರೋಪ್ಲಾಸ್ಟಿಕ್‌ನ ಸಣ್ಣ ಕಣಗಳು ಈ ಪದರದಿಂದ ಹೊರಬರಲು ಪ್ರಾರಂಭಿಸುತ್ತವೆ. ಈ ಕಣಗಳು ತುಂಬಾ ಚಿಕ್ಕದಾಗಿದ್ದು, ಈ ಕಣಗಳು ಕಪ್‌ನಿಂದ ಕರಗಿ ದೇಹಕ್ಕೆ ಸೇರಲಿದೆ. ಅವು ನಮ್ಮ ಆರೋಗ್ಯಕ್ಕೆ(Health tips) ಅತ್ಯಂತ ಹಾನಿಕಾರಕವಾಗಿದೆ‌

ಕಾಗದದ ಕಪ್‌ನಲ್ಲಿ ಸಾವಿರಾರು ಮೈಕ್ರೋಪ್ಲಾಸ್ಟಿಕ್ ಕಣಗಳಿವೆ:

ಪೇಪರ್ ಕಪ್ ಬಳಕೆ ಬಗ್ಗೆ ಅಧ್ಯಯನವೊಂದನ್ನು ಮಾಡಲಾಗಿದ್ದು ಕಾಗದದ ಕಪ್‌ನಲ್ಲಿ ಬಿಸಿ ಪಾನೀಯವನ್ನು 15 ನಿಮಿಷಗಳ ಕಾಲ ಇರಿಸಿದರೆ ಸುಮಾರು 20,000 ರಿಂದ 25,000 ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಬಿಡುಗಡೆ ಮಾಡಲಿದೆ. ಈ ಕಣಗಳು ನಮ್ಮ ದೇಹವನ್ನು ಪ್ರವೇಶಿಸಿದಾಗ ಹಾರ್ಮೋನುಗಳ ಅಸಮತೋಲನ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೆ ಕಾರಣಬವಾಗಬಹುದು. ಸಾಮಾನ್ಯವಾಗಿ ಪೇಪರ್ ಗ್ಲಾಸ್ ನಲ್ಲಿ ಜಲ ನಿರೋಧಕ ಶಕ್ತಿ ಇರದ ಕಾರಣ ಅವುಗಳ ಒಳಪದರದಲ್ಲಿ ಬಳ ಸುವ ರಾಸಾಯನಿಕಗಳಾದ ಮೈಕ್ರೋಪ್ಲಾಸ್ಟಿಕ್ ಅಥವಾ ಪರ್ಫ್ಲೋ ರೊಆಲ್ಕೈಲ್ ಹೊಟ್ಟೆ ಕ್ಯಾನ್ಸರ್​ಗೆ ಕಾರಣವಾಗಬಹುದು.

ಈ ಪ್ಲಾಸ್ಟಿಕ್ ಕಣಗಳು ಕರುಳಿನಲ್ಲಿ ಸಂಗ್ರಹವಾಗಿ ಜೀರ್ಣಾಂಗ ಕಾರ್ಯಕ್ಕೆ ಹಾನಿ ಉಂಟು ಮಾಡಲಿದೆ. ಇದು ಅತಿಸಾರದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಇದಲ್ಲದೆ, ಮೂತ್ರಪಿಂಡದ ಹಾನಿಯನ್ನು ಸಹ ಉಂಟುಮಾಡಬಹುದು. ಗರ್ಭಾವಸ್ಥೆಯಲ್ಲಿ ಈ ಕಪ್ ಬಳಕೆ ಮಾಡಲೇ ಬಾರದು.ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿದಿನ ಪೇಪರ್ ಕಪ್ ಗಳನ್ನು ಬಳಸುವ ಜನರು ತುಂಬಾ ಹೆಚ್ಚಿನ ಅಪಾಯದಲ್ಲಿದ್ದಾರೆ.

ಪೇಪರ್ ಕಪ್ ಗಳಲ್ಲಿ ಟೀ ಕಾಫಿ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ಯೂ ಹೆಚ್ಚುವ ಸಾಧ್ಯತೆ ಇದೆ. ಕಪ್‌ನಲ್ಲಿ ಬಿಸಿ ಚಹಾ ಅಥವಾ ಕಾಫಿಯನ್ನು ಹಾಕುವುದರಿಂದ, ಕಪ್‌ನಲ್ಲಿರುವ ಕಾಗದವು ಸಣ್ಣ ತುಂಡುಗಳಾಗಿ ಒಡೆ ಯುತ್ತದೆ. ಈ ತುಣುಕುಗಳು ಚಹಾ ಅಥವಾ ಕಾಫಿಯಲ್ಲಿ ಕರಗಿ ಅಸಿಡಿಟಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೇ ಪೇಪರ್ ಲೋಟ ಗಳಿಂದ ವಿವಿಧ ಸೋಂಕುಗಳು ಉಂಟಾಗುವ ಸಾಧ್ಯತೆ ಇದೆ.

ಇದನ್ನು ಓದಿ: Health Tips: ಆರೋಗ್ಯ ವೃದ್ಧಿಗಾಗಿ ಸೇವಿಸಬೇಕಾದ ಆಯುರ್ವೇದ ಎಲೆಗಳು

ಉತ್ತಮ ಆಯ್ಕೆ ಯಾವುದು?

ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ನೀವು ಸಾಧ್ಯವಾದಷ್ಟು ಪೇಪರ್ ಕಪ್ ಗಳನ್ನು ಬಳಸುವುದನ್ನು ತಪ್ಪಿಸಬೇಕು. ಬದಲಾಗಿ ಸ್ಟೀಲ್ ಕಪ್ ಗಳನ್ನು ಬಳಸಬಹುದು. ನೀವು ಹೊರಗೆ ಚಹಾ ಅಥವಾ ಕಾಫಿ ಕುಡಿ ಯುವ ಅಭ್ಯಾಸ ಇದ್ದರೆ ಮಣ್ಣಿನ ಕಪ್ ಬಳಕೆ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಅಥವಾ ಮತ್ತೆ ಮತ್ತೆ ಬಳಸಬಹುದಾದ ಟೀ ಕಪ್‌ಗಳನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಿ. ಇದು ಪರಿಸರಕ್ಕೆ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೂ ಹೆಚ್ಚು ಪ್ರಯೋಜನಕಾರಿ.