ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dark Circles: ಕಣ್ಣಿನ ಡಾರ್ಕ್ ಸರ್ಕಲ್ ಗೆ ಇಲ್ಲಿದೆ ಮನೆಮದ್ದು

Beauty Tips: ಇತ್ತೀಚಿನ ದಿನಗಳಲ್ಲಿ ಆಫೀಸ್ ಕೆಲಸ, ಅತಿಯಾಗಿ ಮೊಬೈಲ್ ಬಳಕೆ, ರಾತ್ರಿ ಸರಿಯಾಗಿ ನಿದ್ದೆ ಮಾಡದೆ ಇರುವುದರಿಂದ ಅನೇಕ ಕಣ್ಣಿನ ಸಮಸ್ಯೆ ಎದುರಾಗುತ್ತದೆ. ಅಂತಹವುಗಳಲ್ಲಿ ಕಣ್ಣಿನ ಡಾರ್ಕ್ ಸರ್ಕಲ್ ಕೂಡ ಒಂದು. ಡಾರ್ಕ್ ಸರ್ಕಲ್ ಉಂಟಾದಾಗ ಕಣ್ಣಿನ ಅಂದ ಹಾಳಾಗಿ ಮುಖದ ಸೌಂದರ್ಯ ಕಳೆಗುಂದುತ್ತದೆ. ಮುಖವು ವಯಸ್ಸಾದಂತೆ ಕಾಣುತ್ತದೆ. ಹಾಗಾದರೆ ಈ ಡಾರ್ಕ್ ಸರ್ಕಲ್ ಉಂಟಾಗಲು‌ ಕಾರಣ ಏನು? ಡಾರ್ಕ್ ಸರ್ಕಲ್ ನಿವಾರಣೆ ಹೇಗೆ ಮಾಡಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Dark Circle

ನವದೆಹಲಿ: ಮುಖದ ಸೌಂದರ್ಯಕ್ಕೆ ಕಣ್ಣು ಅತೀ ಮುಖ್ಯ. ಜತೆಗೆ ಸೂಕ್ಷ್ಮ ಅಂಗ. ನಿತ್ಯ ಕೆಲಸದ ನಡುವೆ ಕಣ್ಣಿನ ಆರೈಕೆಗೆ ಹೆಚ್ಚು ಸಮಯ ನೀಡಲಾಗದೆ ನಾವು ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆಫೀಸ್ ಕೆಲಸ, ಅತಿಯಾಗಿ ಮೊಬೈಲ್ ಬಳಕೆ, ರಾತ್ರಿ ಸರಿಯಾಗಿ ನಿದ್ದೆ ಮಾಡದೆ ಇರುವುದರಿಂದ ಅನೇಕ ಕಣ್ಣಿನ ಸಮಸ್ಯೆ ಎದುರಾಗುತ್ತದೆ. ಅಂತಹವುಗಳಲ್ಲಿ ಕಣ್ಣಿನ ಡಾರ್ಕ್ ಸರ್ಕಲ್ (Dark Circles) ಕೂಡ ಒಂದು. ಡಾರ್ಕ್ ಸರ್ಕಲ್ ಉಂಟಾದಾಗ ಕಣ್ಣಿನ ಅಂದ ಹಾಳಾಗಿ  ಮುಖದ  ಸೌಂದರ್ಯ ಕಳೆಗುಂದುತ್ತದೆ. ಮುಖವು ವಯಸ್ಸಾದಂತೆ ಕಾಣುತ್ತದೆ. ಹಾಗಾದರೆ ಈ ಡಾರ್ಕ್ ಸರ್ಕಲ್ ಉಂಟಾಗಲು‌ ಕಾರಣ ಏನು? ಡಾರ್ಕ್ ಸರ್ಕಲ್ ನಿವಾರಣೆ ಹೇಗೆ ಮಾಡಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಕಾರಣ ಏನು?

*ಕೆಲಸದ ಒತ್ತಡ.

*ರಾತ್ರಿ ಇಡೀ ಮೊಬೈಲ್ ನೋಡುವುದು, ನಿದ್ದೆಗೆಡುವುದು.

*ಬಿಸಿಲಿ‌ನಲ್ಲಿ ಅತೀ ಹೆಚ್ಚು ಕಾಲ ಕಳೆಯುವುದು.

*ಮೇಕಪ್ ಅನ್ನು ರಾತ್ರಿ ತೊಳೆಯದೇ ಮಲಗುವುದರಿಂದ ಕಣ್ಣಿನ ಸುತ್ತ ಕಪ್ಪು ಕಲೆ ಮತ್ತು ಕಣ್ಣಿನ ಕೆಳಗೆ ಚರ್ಮ ಜೋತು ಬಿದ್ದಂತೆ ಕಾಣುತ್ತದೆ.

*ಲ್ಯಾಪ್ ಟಾಪ್ , ಕಂಪ್ಯೂಟರ್ ಇತರ ಗ್ಯಾಜೆಟ್‌ಗಳ ಅತಿಯಾದ ಬಳಕೆ.

*ಮಾನಸಿಕ ಒತ್ತಡ ಸಮಸ್ಯೆ.

*ಆನುವಂಶಿಕತೆ.

ಪರಿಹಾರ ಕ್ರಮಗಳೇನು?

*ಸೌತೆಕಾಯಿಯನ್ನು ಬಳಸಿದರೆ ಚರ್ಮ ಸೌಮ್ಯಯುತವಾಗುತ್ತದೆ. ಎರಡು ಸೌತೆ ಕಾಯಿಯ ಹೋಳನ್ನು ಕಣ್ಣಿಗೆ ಇಟ್ಟು 15-20 ನಿಮಿಷ ಕಣ್ಣಿನ ಮೇಲೆ ಹಾಗೆ ಬಿಡಬೇಕು. ಇದು ಕಣ್ಣಿನ ಆರೈಕೆ ಮಾಡುತ್ತದೆ. ಹೀಗಾಗಿ ಕಣ್ಣಿನ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಕಣ್ಣಿನ ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಣೆಯಾಗುತ್ತದೆ.

*ಅಲೋವೆರಾ ಜೆಲ್ ಕಣ್ಣಿನ ಸುತ್ತ ಹಚ್ಚಬೇಕು. 15-20 ನಿಮಿಷಗಳ ಬಳಿಕ ಮುಖ ವಾಶ್ ಮಾಡಬೇಕು. ವಾರಕ್ಕೆ 6 ಬಾರಿ ಈ ಕ್ರಮ ಅನುಸರಿಸಿದರೆ ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಣೆ ಆಗಲಿದೆ.

*ಆಲೂಗಡ್ಡೆಯಲ್ಲಿ ವಿಟಮಿನ್ ಸಿ ಪ್ರಮಾಣ ಹೇರಳವಾಗಿದೆ. ಹೀಗಾಗಿ ಆಲೂಗಡ್ಡೆ ರಸ ಸಂಗ್ರಹಿಸಿ ಅದನ್ನು ಹತ್ತಿಯ ಸಹಾಯದಿಂದ ಕಣ್ಣಿನ ಸುತ್ತ ಹಚ್ಚಬೇಕು. ಹತ್ತು ನಿಮಿಷಗಳ ಕಾಲ ಹಾಗೆ ಬಿಟ್ಟು ಉಗುರು ಬೆಚ್ಚನೆ ನೀರಿನಲ್ಲಿ ಕಣ್ಣನ್ನು ತೊಳೆದರೆ ಸಮಸ್ಯೆ ಶಮನವಾಗಲಿದೆ.

*ಕಣ್ಣಿಗೆ ಹಚ್ಚಿದ ಮೇಕಪ್ ಇತರ ತೆಗೆಯಲು ರೋಸ್ ವಾಟರ್ ಬಳಕೆ ಮಾಡುವುದು ಉತ್ತಮ. ರೋಸ್ ವಾಟರ್ ಅನ್ನು ಒಂದು ಹತ್ತಿಯಲ್ಲಿ ಅದ್ದಿ, ಕಣ್ಣಿನ ರೆಪ್ಪೆಯ ಮೇಲೆ 15-20 ನಿಮಿಷಗಳ ಕಾಲ ಬಿಡಬೇಕು. ಇದರಿಂದ ನಿಮ್ಮ ಕಣ್ಣುಗಳ ಕೆಳಗೆ ಇರುವ ಕಪ್ಪು ಬಣ್ಣ ನಿಧಾನವಾಗಿ ಮಾಯವಾಗಲಿದೆ.

ಇದನ್ನು ಓದಿ: Eye Care: ರಾತ್ರಿ ವಾಹನ ಚಾಲನೆ ಮಾಡುವಾಗ ಕಣ್ಣಿನ ಆರೈಕೆಗಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು!

*ಬಾದಾಮಿ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಕೆ ಇದ್ದು ಡಾರ್ಕ್ ಸರ್ಕಲ್ ನಿವಾರಣೆಗೆ ಬಹಳ ಸಹಕಾರಿ ಆಗಲಿದೆ.

*ಟೊಮೆಟೊ ರಸವನ್ನು ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಕಣ್ಣಿನ ಸುತ್ತಲೂ ಹಚ್ಚಿಕೊಳ್ಳಿ. 10 ನಿಮಿಷಗಳ ಬಳಿಕ ಮುಖ ತೊಳೆಯಬೇಕು. ಹೀಗೆ ಮಾಡಿದರೆ ಚರ್ಮ ಕಾಂತಿಯುತವಾಗುವ ಜತೆಗೆ ಕಣ್ಣಿನ ಕಪ್ಪು ಕಲೆಗಳು ನಿವಾರಣೆ ಆಗಲಿದೆ.

*ಹಾಲು ಮತ್ತು ಅರಶಿನವನ್ನು ಮಿಶ್ರ ಮಾಡಿ ಅದನ್ನು ಕಣ್ಣಿನ ಸುತ್ತ ಹಚ್ಚಿಕೊಳ್ಳಬೇಕು. 15 ನಿಮಿಷದ ಬಳಿಕ ಉಗುರು ಬೆಚ್ಚನೆ ನೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ಡಾರ್ಕ್ ಸರ್ಕಲ್ ಸಮಸ್ಯೆ ಪರಿಹಾರ ಆಗಲಿದೆ.

ಇವೆಲ್ಲ ಕ್ರಮಗಳ ಜತೆಗೆ ಮೊಬೈಲ್ ಸೇರಿದಂತೆ ಇತರ ಗ್ಯಾಜೆಟ್ ಬಳಕೆಯನ್ನು ಆದಷ್ಟು ಮಿತಿಗೊಳಿಸಿ. ಕಾಲ ಕಾಲಕ್ಕೆ ಸರಿಯಾಗಿ ಊಟ ತಿಂಡಿ ನಿದ್ದೆ ಮಾಡಬೇಕು. ಒತ್ತಡ ರಹಿತ ಜೀವನ ಶೈಲಿಯ ಕ್ರಮ ಅನುಸರಿಸಿದರೆ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಸಮಸ್ಯೆ ಸಂಪೂರ್ಣ ನಿವಾರಣೆ ಆಗಲಿದೆ.