ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Health Tips: ನಿಮ್ಮ ಡಯಟ್‌ನಿಂದ ಈ ಆಹಾರಗಳನ್ನು ದೂರವಿಡಿ

Diet Plan: ಆರೋಗ್ಯಪೂರ್ಣ ಜೀವನಕ್ಕಾಗಿ ಕೇವಲ ಡಯಟ್ ಮಾತ್ರವಲ್ಲ ಅದಕ್ಕೆ ಸೂಕ್ತವಾದ ಆಹಾರ ಕ್ರಮವನ್ನು ಪಾಲನೆ ಮಾಡುವುದು ಕೂಡ ಮುಖ್ಯ. ಕೆಲವು ಆಹಾರಗಳು ಹೊರ ನೋಟಕ್ಕೆ ಉತ್ತಮ ಎನಿಸಿಕೊಂಡರೂ ಎಲ್ಲರ ದೇಹಕ್ಕೆ ಹೊಂದಾಣಿಕೆಯಾಗುವುದಿಲ್ಲ. ಹಾಗಾಗಿ ಕೆಲವು ಅಭ್ಯಾಸಗಳನ್ನು ನಾವು ತ್ಯಜಿಸಬೇಕಾಗುತ್ತದೆ. ಅವೇನು ಎನ್ನುವ ವಿವರ ಇಲ್ಲಿದೆ.

ಡಯಟ್‌ನಲ್ಲಿ ಎಂದಿಗೂ ಈ ತಪ್ಪು ಮಾಡದಿರಿ

ಸಂಗ್ರಹ ಚಿತ್ರ -

Profile
Pushpa Kumari Jun 11, 2026 7:00 AM

ನವದೆಹಲಿ, ಜೂ. 10: ತೂಕ ಇಳಿಕೆಗಾಗಿ ಜನರು ಹರಸಾಹಸಪಡುತ್ತಲೇ ಇರುತ್ತಾರೆ. ಡಯಟ್, ವರ್ಕೌಟ್ ಎಂದು ಕೆಲವರು ಇದರತ್ತಲೇ ಗಮನ ಹರಿಸುತ್ತಾರೆ. ಆದರೆ ಆರೋಗ್ಯಪೂರ್ಣ ಜೀವನಕ್ಕಾಗಿ ಕೇವಲ ಡಯಟ್ ಮಾತ್ರವಲ್ಲ. ಅದಕ್ಕೆ ಸೂಕ್ತವಾದ ಆಹಾರ ಕ್ರಮ ಪಾಲಿಸುವುದು ಕೂಡ ಮುಖ್ಯ. ಕೆಲವು ಆಹಾರಗಳು ಹೊರ ನೋಟಕ್ಕೆ ಉತ್ತಮ ಎನಿಸಿಕೊಂಡರೂ ಎಲ್ಲರ ದೇಹಕ್ಕೆ ಹೊಂದಾಣಿಕೆಯಾಗುವುದಿಲ್ಲ. ಹಾಗಾಗಿ ಕೆಲವು ಅಭ್ಯಾಸಗಳನ್ನು ನಾವು ತ್ಯಜಿಸಬೇಕಾಗುತ್ತದೆ.

ನಮ್ಮ ಡಯೆಟ್ ಪ್ಲ್ಯಾಮ್‌ನಲ್ಲಿ ಕೆಲವೊಂದು ಆಹಾರಗಳನ್ನು ನಿಷೇಧಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ‌. ಇದರಿಂದ ಸಕ್ಕರೆ ಸಮತೋಲನ, ಜೀರ್ಣಕ್ರಿಯೆ, ಹಾರ್ಮೋನ್ ಆರೋಗ್ಯ ಮತ್ತು ದೀರ್ಘಕಾಲೀನ ಯೋಗಕ್ಷೇಮವನ್ನು ಪಾಲನೆ ಮಾಡಬಹುದು ಎಂದು ಈ ಅಭ್ಯಾಸ ಕ್ರಮದ ಬಗ್ಗೆ ತಿಳಿಸಿ ಕೊಟ್ಟಿದ್ದಾರೆ.

ಹಣ್ಣಿನ ಜ್ಯೂಸ್ ಮತ್ತು ಸ್ಮೂಥಿಗಳು

ಹಣ್ಣುಗಳನ್ನು ಜ್ಯೂಸ್ ಮಾಡಿ ಕುಡಿಯುವ ಬದಲಿಗೆ ನೇರವಾಗಿ ತಿನ್ನಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ಹಣ್ಣುಗಳನ್ನು ಜ್ಯೂಸ್ ಮಾಡಿದಾಗ ಅದರಲ್ಲಿರುವ ನಾರಿನಂಶವು ನಷ್ಟವಾಗುತ್ತದೆ. ನಾರಿನಂಶವು ಇಲ್ಲದಿದ್ದರೆ ನೈಸರ್ಗಿಕ ಸಕ್ಕರೆಯಾದ 'ಫ್ರಕ್ಟೋಸ್' ಪ್ರಮಾಣ ಹೆಚ್ಚಾಗಿ ದೇಹವನ್ನು ಸೇರಬಹುದು.

ಸಾಮಾನ್ಯ ಬ್ರೆಡ್‌

​ಮಾರುಕಟ್ಟೆಯಲ್ಲಿ ಇರುವ ಬಿಳಿ ಅಥವಾ ಗೋಧಿ ಬ್ರೆಡ್‌ಗಳ ಬದಲಿಗೆ 'ಸೋರ್ಡೋ ಬ್ರೆಡ್' ಬಳಸಬೇಕು. ಸೋರ್ಡೋ ಬ್ರೆಡ್ ನೈಸರ್ಗಿಕ ಹುದುಗುವಿಕೆ ಪ್ರಕ್ರಿಯೆಗೆ ಒಳಗಾಗುತ್ತದೆ. ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದ್ದು ಆರೋಗ್ಯಕ್ಕೂ ಒಳಿತು. ಅಲ್ಲದೆ, ಸಂಸ್ಕರಿಸಿದ ಸಾಮಾನ್ಯ ಬ್ರೆಡ್‌ಗಳಿಗೆ ಹೋಲಿಸಿದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ದಿಢೀರ್ ಆಗಿ ಹೆಚ್ಚು ಮಾಡುವುದಿಲ್ಲ.

ಬೇಸಿಗೆಯಲ್ಲೂ ತಂಪಾಗಿಸುವ ಪುದೀನಾದ ಸತ್ವಗಳು ಗೊತ್ತೇ?

ಖಾಲಿ ಹೊಟ್ಟೆಯಲ್ಲಿ ಹಣ್ಣು ಸೇವಿಸುವುದು

​ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬರೀ ಹಣ್ಣುಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ. ನಿಮ್ಮ ದಿನವನ್ನು ಕೇವಲ ಹಣ್ಣಿನೊಂದಿಗೆ ಪ್ರಾರಂಭಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಕೆ ಮತ್ತು ಇಳಿಕೆ ಉಂಟಾಗಬಹುದು. ಇದು ಅವರಿಗೆ ಹಸಿವು, ಸುಸ್ತು ಇತ್ಯಾದಿ ಕಿರಿಕಿರಿಯನ್ನುಂಟು ಮಾಡುತ್ತದೆ.

ದುಬಾರಿ ಸಪ್ಲಿಮೆಂಟ್‌ಗಳು ಬೇಡ

ಹೆಚ್ಚಿನವರು ತೂಕ ಇಳಿಸಬೇಕೆಂದು ಶಾರ್ಟ್ ಕಟ್ ಅಭ್ಯಾಸ ಬೆಳೆಸುತ್ತಾರೆ. ದುಬಾರಿ ಸಪ್ಲಿಮೆಂಟ್‌ಗಳು, ಫ್ಯಾಟ್ ಬರ್ನರ್‌ಗಳು ಮತ್ತು ಡಿಟಾಕ್ಸ್ ಡ್ರಿಂಕ್ಸ್‌ಗಳನ್ನು ಬಳಸುತ್ತಾರೆ. ಆದರೆ ಇಂತಹ ಸೇವನೆ ಒಳ್ಳೆಯದಲ್ಲ. ಇವುಗಳಿಂದ ದೀರ್ಘಕಾಲದ ಆರೋಗ್ಯ ಪ್ರಯೋಜನಗಳಿಲ್ಲ.