ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕದಲ್ಲಿ ಮೊದಲ ಬಾರಿಗೆ ಮೃತ ವಯಸ್ಕ ದಾನಿಯ ರೋಬೋಟ್ ಸಹಾಯಿತ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಯಲ್ಲಿ ದಾನಿಯ ಅಂಗ ಲಭ್ಯವಾದಾಗ ಪ್ರತಿನಿಮಿಷವೂ ಬಹುಮುಖ್ಯ. ಮೃತ ದಾನಿಯ ಸಂದರ್ಭದಲ್ಲಿ ರೋಬೋಟಿಕ್ ಕಸಿ ನಡೆಸಲು ಅತ್ಯುತ್ತಮ ಸಮನ್ವಯ ಮತ್ತು ಕ್ಲಿನಿಕಲ್ ಧೈರ್ಯ ಅಗತ್ಯ. ಈ ಸಾಧನೆ ತಂತ್ರಜ್ಞಾನ, ತಂಡದ ಕೆಲಸ ಮತ್ತು ಸಮಯೋಚಿತ ನಿರ್ಧಾರಗಳು ಟ್ರಾನ್ಸ್‌ಪ್ಲಾಂಟ್ ವೈದ್ಯಕೀಯದ ಗಡಿಗಳನ್ನು ಹೇಗೆ ವಿಸ್ತರಿಸ ಬಹುದು ಎಂಬುದನ್ನು ತೋರಿಸಿದೆ.

ಶಸ್ತ್ರಚಿಕಿತ್ಸಾ ಸಿದ್ಧತೆ ಮತ್ತು ನಿಖರತೆ ಜೀವ ಉಳಿಸಿದ ಐತಿಹಾಸಿಕ ಸಾಧನೆ

-

Ashok Nayak
Ashok Nayak Nov 26, 2025 9:45 AM

ಬೆಂಗಳೂರು: ಫೋರ್ಟಿಸ್ ಹಾಸ್ಪಿಟಲ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು, ಕರ್ನಾಟಕ ದಲ್ಲಿ ಮೊದಲ ಬಾರಿಗೆ ರೋಬೋಟ್ ಸಹಾಯಿತ ಮೃತ ವಯಸ್ಕ ದಾನಿಯ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಐತಿಹಾಸಿಕ ಸಾಧನೆ ಮಾಡಿದೆ. 68 ವರ್ಷದ ರೋಗಿಗೆ ನಡೆಸಲಾದ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ಮೃತ ದಾನಿ ಕಸಿಗಳ ಕ್ಷೇತ್ರದಲ್ಲಿ ಮಹತ್ವ ದ ಮೈಲುಗಲ್ಲು, ಏಕೆಂದರೆ ರೋಬೋಟ್ ಸಹಾಯಿತ ಕಸಿಗಳು ಸಾಮಾನ್ಯ ಕಸಿಗಳಿಗಿಂತ ಅಪರೂಪವಾಗಿದ್ದು ಅಂಗ ಜೀವಂತವಾಗಿರಲು ತ್ವರಿತ ಸಮನ್ವಯ ಅಗತ್ಯವಾಗಿರುತ್ತದೆ.

ರೋಗಿ ಕಿರಣ್ (ಹೆಸರು ಬದಲಾಯಿಸಲಾಗಿದೆ), ಬೆಂಗಳೂರು ಮೂಲದ 68 ವರ್ಷದ ವ್ಯಕ್ತಿ, ಮಧುಮೇಹ ಮತ್ತು ರಕ್ತದೊತ್ತಡದ ಇತಿಹಾಸ ಹೊಂದಿದ್ದು, ಸ್ಟೇಜ್ V ಕ್ರಾನಿಕ್ ಕಿಡ್ನಿ ಡಿಸೀಸ್‌ನಿಂದ ಬಳಲುತ್ತಿದ್ದರು. ಅವರು ಹಿಮೋಡಯಾಲಿಸಿಸ್‌ನಲ್ಲಿ ಇದ್ದು ಸೂಕ್ತ ದಾನಿ ಗಾಗಿ ಕಾಯುತ್ತಿದ್ದರು. ಸಾಮಾನ್ಯವಾಗಿ ರೋಬೋಟ್ ಸಹಾಯಿತ ಕಸಿಗಳನ್ನು ಜೀವಂತ ದಾನಿಗಳಿಂದ ಮಾತ್ರ ಮಾಡಲಾಗುತ್ತದೆ. ಏಕೆಂದರೆ ಈ ವಿಧಾನವು ಹೆಚ್ಚಿನ ಪೂರ್ವ ಯೋಜನೆ, ವಿಶೇಷ ರೋಬೋಟಿಕ್ ವ್ಯವಸ್ಥೆ ಮತ್ತು ನಿಖರ ಸಾಧನಗಳನ್ನು ಅಗತ್ಯ ವಿರಿಸುತ್ತದೆ. ಮೃತ ದಾನಿಯ ಕಸಿಗಳನ್ನು ಸಾಮಾನ್ಯವಾಗಿ ಓಪನ್ ವಿಧಾನದಲ್ಲೇ ಮಾಡ ಲಾಗುತ್ತದೆ, ಏಕೆಂದರೆ ದಾನಿಯನ್ನು ಬ್ರೇನ್-ಡೇಡ್ ಎಂದು ಘೋಷಿಸಿದ ನಂತರ ಅತ್ಯಲ್ಪ ಸಮಯದೊಳಗೆ ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳಬೇಕಾಗುತ್ತದೆ.

ಇದನ್ನೂ ಓದಿ: Health Tips: ಚಳಿಗಾಲದಲ್ಲಿ ಕೀಲುಗಳ ಆರೈಕೆ ಹೇಗೆ?

ಆದರೆ ಈ ಅಪರೂಪದ ಪ್ರಕರಣದಲ್ಲಿ, ಸಿದ್ಧತೆ ಮತ್ತು ಅವಕಾಶ ಎರಡೂ ಒಂದೇ ವೇಳೆ ಪೂರ್ತಿಯಾಗಿ ಹೊಂದಿಕೊಂಡವು. ಫೋರ್ಟಿಸ್ ಹಾಸ್ಪಿಟಲ್, ಬನ್ನೇರುಘಟ್ಟ ರಸ್ತೆಯ ರೋಬೋಟಿಕ್ ಆಪರೇಷನ್ ಥಿಯೇಟರ್ ಈಗಾಗಲೇ ಮತ್ತೊಂದು ರೋಬೋಟ್ ಶಸ್ತ್ರ ಚಿಕಿತ್ಸೆಗೆ ಸಂಪೂರ್ಣ ಸಿದ್ಧವಾಗಿತ್ತು. ಇದೇ ವೇಳೆ ಸೂಕ್ತ ಮೃತ ದಾನಿಯ ಮೂತ್ರಪಿಂಡ ಲಭ್ಯವಾದಾಗ ತಂಡವು ತಕ್ಷಣ ನಿರ್ಧಾರ ತೆಗೆದುಕೊಂಡು ರೋಬೋಟ್ ಸಹಾಯಿತ ಮೂತ್ರಪಿಂಡ ಕಸಿಯನ್ನು ಆಯ್ಕೆ ಮಾಡಿತು. ಇದರೊಂದಿಗೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮೃತ ದಾನಿಯ ರೋಬೋಟ್ ಸಹಾಯಿತ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವಲ್ಲಿ ತಂಡ ಯಶಸ್ವಿಯಾಗಿ ದಾಖಲೆ ಮಾಡಿತು.

ಈ ಸಂಕೀರ್ಣ ಮತ್ತು ಸಮಯಸಂವೇದಿ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್ ಹಾಸ್ಪಿಟಲ್‌ನ ಯೂರೋಲಜಿ, ಯೂರೋ-ಆಂಕೊಲಜಿ, ಯೂರೋ-ಗೈನಕಾಲಜಿ, ಆಂಡ್ರೋಲಜಿ, ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮತ್ತು ರೋಬೋಟಿಕ್ ಸರ್ಜರಿ ವಿಭಾಗದ ಪ್ರಿನ್ಸಿಪಲ್ ಡೈರೆಕ್ಟರ್ ಡಾ. ಮೋಹನ್ ಕೇಶವಮೂರ್ತಿ ಅವರ ನೇತೃತ್ವದಲ್ಲಿ ಯೂರೋಲಜಿ, ನೆಫ್ರಾಲಜಿ, ಐಸಿಯು ಮತ್ತು ಅನಸ್ತೀಷಿಯಾ ವಿಭಾಗಗಳ ಬಹುಶಿಸ್ತೀಯ ತಂಡ ನೆರವೇರಿಸಿತು.

Dr

ಡಾ.ಮೋಹನ್ ಕೇಶವಮೂರ್ತಿ ಅವರು ಹೇಳಿದರು: “ಈ ಶಸ್ತ್ರಚಿಕಿತ್ಸೆ ಸಿದ್ಧತೆ, ನಿಖರತೆ ಮತ್ತು ತಂತ್ರಜ್ಞಾನದ ಅಪರೂಪದ ಸಮ್ಮಿಲನ. ಮೃತ ದಾನಿಯ ಕಸಿಗಳು ಸಮಯಕ್ಕೆ ತುಂಬಾ ಗುರ್ತಿಸಲ್ಪಟ್ಟಿದ್ದು, ರೋಬೋಟಿಕ್ ವಿಧಾನದಲ್ಲಿ ಅವುಗಳನ್ನು ಮಾಡುವುದೇ ಅಪರೂಪ. ಆದರೆ ನಮ್ಮ ರೋಬೋಟಿಕ್ OT ಈಗಾಗಲೇ ಸಿದ್ಧ ವಾಗಿದ್ದರಿಂದ ನಾವು ಅದನ್ನು ಸಮರ್ಪಕವಾಗಿ ಬಳಸಿಕೊಂಡು ಶಸ್ತ್ರಚಿಕಿತ್ಸೆ ಮಾಡಲಾ ಯಿತು. ಇದರಿಂದ ರಕ್ತ ನಷ್ಟ ಕಡಿಮೆಯಾಗಿ ರೋಗಿ ವೇಗವಾಗಿ ಚೇತರಿಸಿಕೊಳ್ಳಲು ನೆರವಾಯಿತು. ಇದು ಬೆಂಗಳೂ ರಿನ ವೈದ್ಯಕೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣ ಮತ್ತು ಫೋರ್ಟಿಸ್‌ನ ಶಸ್ತ್ರಚಿಕಿತ್ಸಾ ಶ್ರೇಷ್ಠತೆಗೆ ಸಾಕ್ಷಿ.”

ಫೋರ್ಟಿಸ್ ಹಾಸ್ಪಿಟಲ್ ಬನ್ನೇರುಘಟ್ಟ ರಸ್ತೆಯ ನೆಫ್ರಾಲಜಿ & ಟ್ರಾನ್ಸ್‌ಪ್ಲಾಂಟ್ ಫಿಜಿಷಿ ಯನ್ ಡಾ.ಮಂಜುನಾಥ್ ಎಸ್ ಅವರು ಹೇಳಿದರು: “ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಯಲ್ಲಿ ದಾನಿಯ ಅಂಗ ಲಭ್ಯವಾದಾಗ ಪ್ರತಿನಿಮಿಷವೂ ಬಹುಮುಖ್ಯ. ಮೃತ ದಾನಿಯ ಸಂದರ್ಭದಲ್ಲಿ ರೋಬೋಟಿಕ್ ಕಸಿ ನಡೆಸಲು ಅತ್ಯುತ್ತಮ ಸಮನ್ವಯ ಮತ್ತು ಕ್ಲಿನಿಕಲ್ ಧೈರ್ಯ ಅಗತ್ಯ. ಈ ಸಾಧನೆ ತಂತ್ರಜ್ಞಾನ, ತಂಡದ ಕೆಲಸ ಮತ್ತು ಸಮಯೋಚಿತ ನಿರ್ಧಾರ ಗಳು ಟ್ರಾನ್ಸ್‌ಪ್ಲಾಂಟ್ ವೈದ್ಯಕೀಯದ ಗಡಿಗಳನ್ನು ಹೇಗೆ ವಿಸ್ತರಿಸಬಹುದು ಎಂಬುದನ್ನು ತೋರಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುರಕ್ಷಿತ ಮತ್ತು ರೋಗಿ ಸ್ನೇಹಿ ಕಸಿಗಳಿಗೆ ಇದು ದಾರಿ ಮಾಡಿಕೊಡುತ್ತದೆ.”

ಫೋರ್ಟಿಸ್ ಹಾಸ್ಪಿಟಲ್, ಬನ್ನೇರುಘಟ್ಟ ರಸ್ತೆಯ ಫೆಸಿಲಿಟಿ ಡೈರೆಕ್ಟರ್ ಡಾ.ತೇಜಸ್ವಿನಿ ಪಾರ್ಥಸಾರಥಿ ಹೇಳಿದರು: “ಈ ಮೈಲುಗಲ್ಲು ಸಿದ್ಧತೆ ಮತ್ತು ಬಹುಶಿಸ್ತೀಯ ತಂಡದ ಒಗ್ಗಟ್ಟಿನ ಮಹತ್ವವನ್ನು ಎತ್ತಿ ತೋರಿಸುತ್ತದೆ. ಅತ್ಯಂತ ಸಮಯಸಂವೇದಿ ಮೃತ ದಾನಿ ಅವಕಾಶವನ್ನು ರೋಬೋಟಿಕ್ ಕಸಿಯಾಗಿ ಪರಿವರ್ತಿಸುವ ಸಾಮರ್ಥ್ಯ ನಮ್ಮ ತಂಡದ ಕ್ಲಿನಿಕಲ್ ಸಾಮರ್ಥ್ಯ ಮತ್ತು ತೀರ್ಮಾನಾತ್ಮಕತೆಯ ಬಗ್ಗೆ ಹೇಳುತ್ತದೆ. ಮುಖ್ಯವಾಗಿ, ಇದು ರೋಗಿಗಳಿಗೆ ಉತ್ತಮ ಫಲಿತಾಂಶ ಮತ್ತು ವೇಗದ ಚೇತರಿಕೆಯನ್ನು ನೀಡುತ್ತದೆ. ರೋಗಿಗಳ ಹಿತಕ್ಕಾಗಿ ನವೀನ ಚಿಕಿತ್ಸೆ ವಿಧಾನಗಳನ್ನು ಪರಿಚಯಿಸುವಲ್ಲಿ ನಾವು ಬದ್ಧರಾಗಿದ್ದೇವೆ.”