Weight Loss: ಕಡಿಮೆ ಕ್ಯಾಲೋರಿ ಆಹಾರ ಸೇವಿಸಿ ತೂಕ ಇಳಿಸಿ- ಫಿಟ್‌ನೆಸ್ ತಜ್ಞರು ಹೇಳೋದೇನು?
ತೂಕ ಇಳಿಕೆಗೆ ಕಡಿಮೆ ಕ್ಯಾಲೋರಿ(Weight Loss) ಇರುವ ಆಹಾರ ಪದಾರ್ಥ ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ನಾವು ಸೇವಿಸುವಂತಹ ಕೆಲವು ಆಹಾರಗಳಲ್ಲಿ ಕ್ಯಾಲೋರಿಗಳು ಅಧಿಕವಿರಲಿದ್ದು ಇಂತಹ ಆಹಾರವನ್ನು ಹೆಚ್ಚಾಗಿ ಸೇವಿಸಿದರೆ ತೂಕದಲ್ಲಿ ಹೆಚ್ಚಳ ಎದುರಾಗುತ್ತದೆ. ಹಾಗಾಗಿ ತೂಕ ನಿಯಂತ್ರಿಸಲು ನಿಮ್ಮ ಡಯಟ್‌ನಲ್ಲಿ ನೀವು ಕಡಿಮೆ ಕ್ಯಾಲೋರಿ ಪದಾರ್ಥಗಳ ಸೇವನೆ ಜೊತೆಗೆ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ ತೂಕ ನಷ್ಟ ಬೇಗ ಆಗುತ್ತದೆ.


ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಹೇಗಾದರೂ ಮಾಡಿ ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ಜಿಮ್, ವರ್ಕೌಟ್, ಡಯಟ್ ಎಂದು ನಾನಾ ರೀತಿಯಲ್ಲಿ ಪ್ರಯತ್ನ ಪಡುತ್ತಲೇ ಇರುತ್ತಾರೆ. ಆದರೆ ಹೆಚ್ಚಿನ ಜನರಿಗೆ ಹೇಗೆ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಯಾವೆಲ್ಲ ಆಹಾರ ತೂಕ ಕಡಿಮೆಗೆ ಸಹಕಾರಿ ಎಂಬುದರ ಬಗ್ಗೆ ತಿಳಿಯದೇ ಇರುವುದರಿಂದ ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಕೆಯಾಗುವುದಿಲ್ಲ. ವಿಶೇಷವಾಗಿ ತೂಕ ಇಳಿಕೆಗೆ ಕಡಿಮೆ ಕ್ಯಾಲೋರಿ(Weight Loss Tips) ಇರುವ ಆಹಾರ ಪದಾರ್ಥ ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ನಾವು ಸೇವಿಸುವಂತಹ ಕೆಲವು ಆಹಾರಗಳಲ್ಲಿ ಕ್ಯಾಲೋರಿಗಳು ಅಧಿಕವಿರಲಿದ್ದು ಇಂತಹ ಆಹಾರವನ್ನು ಹೆಚ್ಚಾಗಿ ಸೇವಿ ಸಿದರೆ ತೂಕದಲ್ಲಿ ಹೆಚ್ಚಳ ಎದುರಾಗುತ್ತದೆ. ಹಾಗಾಗಿ ತೂಕ ನಿಯಂತ್ರಿಸಲು ನಿಮ್ಮ ಡಯಟ್‌ನಲ್ಲಿ ನೀವು ಕಡಿಮೆ ಕ್ಯಾಲೋರಿ ಪದಾರ್ಥಗಳ ಸೇವನೆ ಜೊತೆಗೆ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ ತೂಕ ನಷ್ಟ ಬೇಗ ಆಗುತ್ತದೆ.
ಸಲಾಡ್ ತಿನ್ನುವ ಆಯ್ಕೆ ಕಡಿಮೆ ಇರಲಿ:
ಹಸಿರು ತರಕಾರಿ ಮತ್ತು ಹಣ್ಣಿನ ಸೇವನೆಯಿಂದ ಕಡಿಮೆ ಕ್ಯಾಲೋರಿ ಲಭ್ಯವಾಗುತ್ತದೆ ಎಂದು ಬಹುತೇಕ ಜನರು ಸಲಾಡ್ ಅನ್ನು ಸೇವನೆ ಮಾಡುತ್ತಾರೆ. ಸಲಾಡ್ ಜೊತೆಗೆ ಚೀಸ್, ಕ್ಯಾನ್ ಬೇರಿ, ಇತರ ನೆನೆಸಿಟ್ಟ ಕಾಳುಗಳನ್ನು ಮಿಶ್ರಮಾಡಿ ಸೇವನೆ ಮಾಡುತ್ತಾರೆ. ಹೀಗೆ ಮಾಡುವು ದರಿಂದ ಕ್ಯಾಲೊರಿ ಕಡಿಮೆ ಆಗುವ ಬದಲಿಗೆ ಹೆಚ್ಚಾಗಲಿದೆ. ಹಾಗಾಗಿ ಸಲಾಡ್ ಸೇವನೆ ಮಾಡುವಾಗಲು ಕ್ಯಾಲೋರಿ ಬಗ್ಗೆ ಯೋಚಿಸಿ.
ಮನೆಯಲ್ಲೇ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಿ:
ಎಷ್ಟೊ ಸಂದರ್ಭದಲ್ಲಿ ಹೊರಗಿನ ಆಹಾರ ಪಾರ್ಟಿ ಎಂದೆಲ್ಲ ಪ್ರಯಾಣಿ ಸುವಾಗ ನಮ್ಮ ಡಯೆಟ್ , ಕಡಿಮೆ ಕ್ಯಾಲೊರಿ ಆಹಾರ ನಿಯಮಗಳನ್ನೆಲ್ಲ ತಪ್ಪಿಸುತ್ತೇವೆ. ಹೀಗಾಗಿ ನಿಮ್ಮ ದೇಹಕ್ಕೆ ಅಧಿಕ ಕ್ಯಾಲೊರಿ ಲಭ್ಯ ಆಗುವ ಸಾಧ್ಯತೆ ಇದೆ. ಹಾಗಾಗಿ ಡಯೆಟ್ ಪಾಲನೆ ಮಾಡುವವರು ಹೊರಗೆ ತಿನ್ನುವುದನ್ನು ತಪ್ಪಿಸಿ.
ಹಣ್ಣು ತರಕಾರಿ ಸೇವನೆ ಮಾಡಿ
ನೀವು ಮನೆಯಲ್ಲಿ ಆಗಲಿ ಅಥವಾ ಹೊರಗೆ ಆಗಲಿ ಊಟ ತಿಂಡಿ ಮಾಡುವಾಗ ಬದ್ಧ ನಿಯಮ ಅನುಸರಿಸಿ. ಅಂದರೆ ಕಡಿಮೆ ಕ್ಯಾಲೊರಿ ಇರುವ ಫುಡ್ ಗಳಿಗೆ ಆದ್ಯತೆ ನೀಡಿ. ಅನ್ನ , ಪಿಜ್ಜಾ , ಬರ್ಗರ್ ಎಂದು ಸೇವನೆ ಮಾಡುವ ಬದಲು ಹಣ್ಣು ತರಕಾರಿ ಸೇವನೆ ಮಾಡಿ. ಈ ತರ ಸಣ್ಣ ಬದ ಲಾವಣೆ ನಿಮ್ಮ ದೇಹದ ತೂಕ ಇಳಿಕೆ ಮೇಲೆ ಮಹತ್ವದ ಪರಿಣಾಮ ಬೀರಲಿದೆ.
ಹೆಚ್ಚು ಸೇವನೆ ಬೇಡ:
ಕಡಿಮೆ ಕ್ಯಾಲೋರಿ ಆಹಾರ ಎಂದು ಅದನ್ನೇ ಅತಿಯಾಗಿ ಸೇವಿಸುವುದು ಸಹ ಉತ್ತಮ ಕ್ರಮವಲ್ಲವಾಗಿದೆ.ಹೀಗೆ ಸೇವಿಸುವ ಆಹಾರದಿಂದ ನಿಮಗೆ ಹಸಿವಿನ ಪ್ರಮಾಣ ಅಧಿಕ ವಾಗುತ್ತದೆ.ಹಸಿವು ಹೆಚ್ಚಾಗಿ ಇದ್ದರು ಅದನ್ನು ಸಲಾಡ್ ಮತ್ತು ಇತರ ಕಡಿಮೆ ಕ್ಯಾಲೋರಿ ಆಹಾರದ ಮೂಲಕ ಹಸಿವು ತಣಿಸಬೇಕೆ ವಿನಃ ಹೊಟ್ಟೆ ಪೂರ್ತಿ ಅಜೀರ್ಣ ಆಗುವ ಆಹಾರವನ್ನು ತಿನ್ನಬಾರದು.
ಇದನ್ನು ಓದಿ:Summer Health Tips: ಬೇಸಿಗೆಯಲ್ಲೇ ಹೊಟ್ಟೆಯ ಅನಾರೋಗ್ಯ ಕಾಡುವುದೇಕೆ?
ಸಿಹಿ ತಿಂಡಿ ಕಡಿಮೆ ಸೇವಿಸಿ:
ಸಿಹಿ ತಿಂಡಿಗಳಾದ ಚಾಕಲೇಟ್, ಕೇಕ್ , ಬಿಸ್ಕತ್, ಐಸ್ ಕ್ರೀಂ ಇತರೆಗಳಲ್ಲಿ ಅಧಿಕ ಕ್ಯಾಲೊರಿ ಇರುತ್ತದೆ. ಹಾಗಾಗಿ ಇವುಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು.ಹೀಗೆ ಮಾಡುವುದರಿಂದ ದೇಹಕ್ಕೆ ಕಡಿಮೆ ಕ್ಯಾಲೊರಿ ಆಹಾರ ಮಾತ್ರ ಪೂರೈಕೆಯಾಗಿ ನೀವು ಹೆಚ್ಚು ಆರೋಗ್ಯಯುತವಾಗಿರ ಬಹುದು.ಡಯಟ್ ಪಾಲನೆ ಮಾಡುವಾಗ ಕಡ್ಡಾಯವಾಗಿ ವೈದ್ಯಕೀಯ ಸಲಹೆ ಪಡೆಯುವುದನ್ನು ನೀವು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.