ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿಮಗಿದು ಗೊತ್ತೆ? ಗಾಳಿಪಟ ಹಾರಿಸುವುದರಿಂದ ಮನೋರಂಜನೆ ಸಿಗುವುದಷ್ಟೇ ಅಲ್ಲ ಆರೋಗ್ಯವೂ ವೃದ್ಧಿಯಾಗುತ್ತೆ!

Health Tips: ಗಾಳಿಪಟ ಹಾರಿಸುವುದರಿಂದ ಒಂದಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಆ ಪ್ರಯೋಜನಗಳು ಯಾವವು? ಗಾಳಿಪಟ ಹಾರಿಸುವಾಗ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಯಾವೆಲ್ಲ ಬದಲಾವಣೆಗಳಾಗುತ್ತವೆ? ವರ್ಷದಲ್ಲಿ ಒಮ್ಮೆ ಗಾಳಿಪಟ ಹಾರಿಸುವುದರಿಂದ ಯಾವೆಲ್ಲ ಅನುಕೂಲಗಳನ್ನು ಪಡೆದು ಕೊಳ್ಳಬಹುದು? ಎನ್ನುವ ಬಗ್ಗೆ ಪ್ರೊ. ಸುತ್ತೂರು ಮಾಲಿನಿ ವಿವರಿಸಿದ್ದಾರೆ.

ಗಾಳಿಪಟ ಹಾರಿಸಿದ್ರೆ ನಿಮ್ಮ ದೇಹದಲ್ಲಿ ಈ  ಬದಲಾವಣೆ ಕಂಡುಬರಲಿದೆ

ಪ್ರೊ. ಸುತ್ತೂರು ಮಾಲಿನಿ -

Profile
Pushpa Kumari Mar 31, 2026 8:00 AM

ಬೆಂಗಳೂರು, ಮಾ. 31: ಗಾಳಿಪಟ ಹಾರಿಸುವುದು (Flying kite) ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಒಂದು. ಹಿಂದೂ ಹಬ್ಬಗಳ ಆಚರಣೆಯ ಹಿಂದೆ ಸಾಕಷ್ಟು ವೈಜ್ಞಾನಿಕ ಸಂಗತಿಗಳು ಅಡಗಿವೆ. ಅದರೊಟ್ಟಿಗೆ ಒಂದಷ್ಟು ಆರೋಗ್ಯ ಪ್ರಯೋಜನಗಳೂ ಇವೆ. ಅಂತಹ ಆಚರಣೆಗಳಲ್ಲಿ ಗಾಳಿಪಟ ಹಾರಿಸುವುದು ಕೂಡ ಒಂದು. ಇದರಿಂದ ಒಂದಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಆ ಪ್ರಯೋಜನಗಳು ಯಾವವು? ಗಾಳಿಪಟ ಹಾರಿಸುವಾಗ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಯಾವೆಲ್ಲ ಬದಲಾವಣೆಗಳಾಗುತ್ತವೆ? ವರ್ಷದಲ್ಲಿ ಒಮ್ಮೆ ಗಾಳಿಪಟ ಹಾರಿಸಿದರೆ ಯಾವೆಲ್ಲ ಅನುಕೂಲಗಳನ್ನು ಪಡೆದು ಕೊಳ್ಳಬಹುದು? ಎನ್ನುವ ಕುರಿತು ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರೊ. ಸುತ್ತೂರು ಮಾಲಿನಿ ವಿವರಿಸಿದ್ದಾರೆ.

ಗಾಳಿಪಟಕ್ಕೂ ಮಕ್ಕಳಿಗೂ ಅವಿನಾಭಾವ ಸಂಬಂಧ ಇದೆ. ಅದರಲ್ಲೂ ಮಕರ ಸಂಕ್ರಾಂತಿ ಎಂದ ತಕ್ಷಣ ಎಳೆ ಬಿಸಿಲಿನಲ್ಲಿ ಮಕ್ಕಳು, ದೊಡ್ಡವರು ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಗಾಳಿಪಟ ಹರಿಸುತ್ತಾರೆ. ಇದರಿಂದ ಹಲವು ರೀತಿಯ ಆರೋಗ್ಯ ಪ್ರಯೋಜನವಿದೆ. ಇದರಿಂದ ಖುಷಿಯ ಹಾರ್ಮೋನು ಮೆಲಟೊನಿನ್ ಬಿಡುಗಡೆಯಾಗುತ್ತದೆ. ಅದೇ ರೀತಿ ಚಳಿಗಾಳಿಯಿಂದ ಉಂಟಾಗುವ ಸೋಂಕನ್ನು ತಡೆಯಲು ಕೂಡ ಸಹಕಾರಿ.

ವಿಡಿಯೊ ನೋಡಿ:



ಗಾಳಿಪಟ ಹಾರಿಸುವುದರಿಂದ ಮೆದುಳಿನ ಕಾರ್ಯಚಟುವಟಿಕೆಗಳು ಆ್ಯಕ್ಟೀವ್ ಆಗುತ್ತವೆ. ನಿಮ್ಮ ಮನಸ್ಸಿನಲ್ಲಿದ್ದ ಉದ್ವೇಗ, ಖಿನ್ನತೆಗಳು ಕೂಡ ಕಡಿಮೆಯಾಗುತ್ತದೆ. ಇದರ ಜತೆ ಓಡುವುದು ಮತ್ತು ದಾರವನ್ನು ನಿಯಂತ್ರಿಸುವುದರಿಂದ ಕೈಗಳು, ಭುಜಗಳು ಮತ್ತು ಬೆನ್ನು ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಕೂಡ ಸಿಗುತ್ತದೆ.

ಮೆಮೊರಿ ಪವರ್‌ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೇರಿ ಗಾಳಿಪಟ ಹಾರಿಸುವುದು ಸಾಮಾಜಿಕ ಸಂಬಂಧಗಳನ್ನು ಬಲಪಡಿಸುತ್ತದೆ. ಹಾಗಾಗಿ ರಜಾದಿನದಲ್ಲಿ ಮಕ್ಕಳ ಜತೆ ತಿಂಗಳಿಗೊಮ್ಮೆಯಾದರೂ ಗಾಳಿಪಟ ಹಾರಿಸುವ ಅಭ್ಯಾಸ ಬೆಳೆಸಿಕೊಳ್ಳಿ.