ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Toll Price Hike: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಪ್ರಯಾಣ ಮತ್ತಷ್ಟು ತುಟ್ಟಿ, ಟೋಲ್‌ ದರ ಎಷ್ಟು ಹೆಚ್ಚಾಯ್ತು ನೋಡಿ

ಪ್ರತಿ ವರ್ಷ ಏಪ್ರಿಲ್‌ 1 ರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಶೇ. 3 ರಿಂದ ಶೇ.5 ರಷ್ಟು ಬೆಲೆ ಹೆಚ್ಚಳ ಮಾಡಲು ಅವಕಾಶವಿದೆ. ಅದರಂತೆಯೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಈ ಬಾರಿ ಶೇ. 3 ರಷ್ಟು ಬೆಲೆ ಹೆಚ್ಚಳ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ನೂತನ ಟೋಲ್‌ ದರ ವಾಹನ ಮಾದರಿಯನ್ನು ಆಧರಿಸಿ 5 ರೂ. ನಿಂದ 25 ರೂ. ವರೆಗೆ ಹೆಚ್ಚಳವಾಗಿದೆ.

ಬೆಂಗಳೂರು- ಮೈಸೂರು ಹೈವೇ ಪ್ರಯಾಣ ಮತ್ತಷ್ಟು ತುಟ್ಟಿ, ಎಷ್ಟು ಏರಿಕೆ?

ಟೋಲ್ -

ಹರೀಶ್‌ ಕೇರ
ಹರೀಶ್‌ ಕೇರ Mar 31, 2026 9:35 AM

ಬೆಂಗಳೂರು, ಮಾ.31 : ರಾಜ್ಯದ ಬ್ಯುಸಿ ಹೆದ್ದಾರಿಯಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ (Bengaluru- Mysuru expressway) ಸಂಚರಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತೊಂದು ದರ ಏರಿಕೆಯ (Toll Price Hike) ಶಾಕ್‌ ನೀಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಟೋಲ್‌ ಶುಲ್ಕವನ್ನು ಶೇ. 3 ರಷ್ಟು ಹೆಚ್ಚಳ ಮಾಡಲಾಗಿದ್ದು, ಇನ್ಮುಂದೆ ಎಕ್ಸ್‌ಪ್ರೆಸ್‌ ವೇ ಪ್ರಯಾಣ ಮತ್ತಷ್ಟು ದುಬಾರಿ ಎನಿಸಲಿದೆ.

ಏಪ್ರಿಲ್‌ 1 ರಿಂದ ಹೊಸ ಟೋಲ್‌ ದರ ಅನ್ವಯವಾಗಲಿದೆ. ಪ್ರತಿ ವರ್ಷ ಏಪ್ರಿಲ್‌ 1 ರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಶೇ. 3 ರಿಂದ ಶೇ.5 ರಷ್ಟು ಬೆಲೆ ಹೆಚ್ಚಳ ಮಾಡಲು ಅವಕಾಶವಿದೆ. ಅದರಂತೆಯೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಈ ಬಾರಿ ಶೇ. 3 ರಷ್ಟು ಬೆಲೆ ಹೆಚ್ಚಳ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ನೂತನ ಟೋಲ್‌ ದರ ವಾಹನ ಮಾದರಿಯನ್ನು ಆಧರಿಸಿ 5 ರೂ. ನಿಂದ 25 ರೂ. ವರೆಗೆ ಹೆಚ್ಚಳವಾಗಿದೆ.

ಕೆಂಗೇರಿ ಬಳಿಯ ಕಣಮಿಣಿಕೆಯಿಂದ ಮಂಡ್ಯ ಜಿಲ್ಲೆಯ ನಿಡಘಟ್ಟ ಹಾಗೂ ನಿಡಘಟ್ಟದಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಣಂಗೂರು ಟೋಲ್‌ವರೆಗೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಪರಿಷ್ಕೃತ ದರವನ್ನು ಎನ್‌ಎಚ್‌ಎಐ ಪ್ರಕಟಿಸಿದೆ. ಪ್ರತಿ ವರ್ಷ ಟೋಲ್‌ ದರ ಹೆಚ್ಚಿಸುವ ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ ಈ ಬಾರಿ ಪ್ರಯಾಣಿಕರಿಗೆ ಹೆಚ್ಚಿನ ಹೊರೆ ಹಾಕದಂತೆ ದರ ಪರಿಷ್ಕರಿಸಿದೆ. ಆದರೂ ಹೊಸ ದರಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಲ್ಕನೇ ಬಾರಿ ಏರಿಕೆ:

2023 ರ ಮಾರ್ಚ್‌ನಲ್ಲಿ ಎನ್‌ಎಚ್‌ಎಐ ಬೆಂಗಳೂರು - ಮೈಸೂರು ನಡುವಿನ ಎಕ್ಸ್‌ ಪ್ರೆಸ್‌ವೇಯ ಮೊದಲ ಹಂತದ ರಸ್ತೆಯಾಗಿರುವ ಬೆಂಗಳೂರು-ನಿಡಘಟ್ಟವರೆಗೆ ಟೋಲ್‌ ಸಂಗ್ರಹ ಆರಂಭಿಸಿತು. ಅಂದಿನಿಂದ ಇಂದಿನವರೆಗೆ ನಾಲ್ಕು ಬಾರಿ ಟೋಲ್‌ ದರವನ್ನು ಹೆಚ್ಚಳ ಮಾಡಿದೆ. ಅದೇ ರೀತಿ ಎರಡನೇ ಹಂತದ ಎಕ್ಸ್‌ಪ್ರೆಸ್‌ ವೇ ನಿಡಘಟ್ಟದಿಂದ ಮೈಸೂರುವರೆಗಿನ ರಸ್ತೆಗೆ 2023 ರ ಜೂನ್‌ನಲ್ಲಿ ಟೋಲ್‌ ಶುಲ್ಕ ನಿಗದಿ ಮಾಡಿತ್ತು. ಈ ರಸ್ತೆಯ ಟೋಲ್‌ ಮೂರು ಬಾರಿ ಹೆಚ್ಚಳವಾಗಿದೆ. ಆದರೆ ಸಗಟು ಬೆಲೆ ಸೂಚ್ಯಂಕದ ಆಧಾರದ ಮೇಲೆ ವಾರ್ಷಿಕವಾಗಿ ಈ ದರ ಹೆಚ್ಚಳ ಮಾಡಲಾಗುತ್ತಿದೆ ಎಂದು ಹೆದ್ದಾರಿ ಪ್ರಾಧಿಕಾರ ಸಮರ್ಥಿಸಿಕೊಂಡಿದೆ.

Toll Rates Hike: ವಾಹನ ಸವಾರರಿಗೆ ಬ್ಯಾಡ್‌ ನ್ಯೂಸ್‌; ಏ.1ರಿಂದ ರಾಜ್ಯದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ದರ ಹೆಚ್ಚಳ!

3 ವರ್ಷದಲ್ಲಿ 855 ಕೋಟಿ ಟೋಲ್‌ ಸಂಗ್ರಹ

ಮೊದಲ ಹಂತದ ಎಕ್ಸ್‌ಪ್ರೆಸ್‌ ವೇ ಬೆಂಗಳೂರಿನಿಂದ- ನಿಡಘಟ್ಟದವರೆಗೆ ಸಂಚರಿಸಲು ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವವರು ಕಣ್ಮಿಣಿಕೆ ಗ್ರಾಮದ ಬಳಿ ಇರುವ ಟೋಲ್‌ ಪ್ಲಾಜಾದಲ್ಲಿ ಟೋಲ್‌ ಶುಲ್ಕ ಪಾವತಿ ಮಾಡಬೇಕು. ಈ ಟೋಲ್‌ ಪ್ಲಾಜಾದಲ್ಲಿ 3 ವರ್ಷಗಳಲ್ಲಿ 282.14 ಕೋಟಿ ರೂ. ಟೋಲ್‌ ಶುಲ್ಕ ಸಂಗ್ರಹವಾಗಿದೆ.

ಇನ್ನು ಮೈಸೂರು ಕಡೆಯಿಂದ ಬೆಂಗಳೂರಿಗೆ ಹೋಗುವವರು ಬಿಡದಿಯ ಶೇಷಗಿರಿಹಳ್ಳಿಯ ಬಳಿ ಇರುವ ಟೋಲ್‌ ಪ್ಲಾಜಾದಲ್ಲಿ ಟೋಲ್‌ ಕಟ್ಟುತ್ತಿದ್ದು, ಈ ಟೋಲ್‌ನಲ್ಲಿ 3 ವರ್ಷದಲ್ಲಿ248.2 ಕೋಟಿ ಸಂಗ್ರಹವಾಗಿದೆ. ಇನ್ನು 2 ನೇ ಹಂತದ ಎಕ್ಸ್‌ಪ್ರೆಸ್‌ ವೇ ನಿಡಘಟ್ಟದಿಂದ- ಮೈಸೂರುವವರೆಗೆ ಪ್ರಯಾಣಿಸುವ ವಾಹನಗಳು ಗಣಂಗೂರು ಟೋಲ್‌ ಪ್ಲಾಜಾದಲ್ಲಿ ಟೋಲ್‌ ಶುಲ್ಕ ಪಾವತಿಸಬೇಕಿದ್ದು, ಇಲ್ಲಿ 488.81 ಕೋಟಿ ರೂ. ಶುಲ್ಕ ಸಂಗ್ರಹವಾಗಿದೆ.

ಬೆಂ-ಮೈ ಎಕ್ಸ್‌ಪ್ರೆಸ್‌ ವೇ ಪರಿಷ್ಕೃತ ಟೋಲ್‌ ದರ

ಕಣಿಮಿಣಿಕೆ ಟೋಲ್‌ನಿಂದ ನಿಡಘಟ್ಟ ಕಡೆಗೆ

ವಾಹನ ಹಿಂದಿನ ದರ ಹೊಸ ದರ ಹೆಚ್ಚಳ
ಕಾರು, ವ್ಯಾನ್‌, ಜೀಪ್‌ 175 180 5
ಲಘು ವಾಹನ / ಮಿನಿ ಬಸ್‌ 280 285 5
ಟ್ರಕ್‌ / ಬಸ್‌ / 2 ಆಕ್ಸೆಲ್‌ ವಾಹನ 585 600 15
ಮೂರು ಆಕ್ಸೆಲ್‌ ವಾಣಿಜ್ಯ ವಾಹನ 640 655 20
ಭಾರಿ ಕಟ್ಟಡ ನಿರ್ಮಾಣ ವಾಹನ/ಅಥ್‌ರ್‍ ಮೂವರ್ಸ್‌/4-6 ಆಕ್ಸೆಲ್‌ ವಾಹನ 920 940 20
7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನ 1,120 1,145 25

ಗಣಂಗೂರು ಟೋಲ್‌ನಿಂದ ನಿಡಘಟ್ಟವರೆಗೆ

ವಾಹನ ಹಿಂದಿನ ದರ ಹೊಸ ದರ ಹೆಚ್ಚಳ
ಕಾರು, ವ್ಯಾನ್‌, ಜೀಪ್‌ 170 175 5
ಲಘು ವಾಹನ / ಮಿನಿ ಬಸ್‌ 275 280 5
ಟ್ರಕ್‌ / ಬಸ್‌ / 2 ಆಕ್ಸೆಲ್‌ ವಾಹನ 570 585 15
ಮೂರು ಆಕ್ಸೆಲ್‌ ವಾಣಿಜ್ಯ ವಾಹನ 625 640 15
ಭಾರಿ ಕಟ್ಟಡ ನಿರ್ಮಾಣ ವಾಹನ/ಅಥ್‌ರ್‍ ಮೂವರ್ಸ್‌/4-6 ಆಕ್ಸೆಲ್‌ ವಾಹನ 900 920 20
7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನ 1,095 1,120 25