ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ನಿಯಮಿತವಾಗಿ ತುಪ್ಪ ಸೇವಿಸಿ ಆರೋಗ್ಯದಲ್ಲಾಗುವ ಅದ್ಭುತ ಬದಲಾವಣೆ ಗಮನಿಸಿ

Health Tips: ತುಪ್ಪದಲ್ಲಿ ಕ್ಯಾಲ್ಸಿಯಂ, ರಂಜಕ, ಖನಿಜಗಳು, ಪೊಟ್ಯಾಸಿಯಮ್, ವಿಟಮಿನ್ ಎ, ಕೆ, ಇ, ಡಿ, ಒಮೆಗಾ 3 ಮತ್ತು ಒಮೆಗಾ 9 ಕೊಬ್ಬಿನಾಮ್ಲಗಳಂತಹ ಅಧಿಕ ಪೋಷಕಾಂಶಗಳು ಇದ್ದು, ವಿವಿಧ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಹಾಗಾಗಿ ತಜ್ಞರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ.

ತುಪ್ಪ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲ ಪ್ರಯೋಜನ

ತುಪ್ಪ.

Profile Pushpa Kumari Mar 11, 2025 7:00 AM

ನವದೆಹಲಿ: ಆರೋಗ್ಯಕರ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ ಮುಖ್ಯ ಪದಾರ್ಥವೆಂದರೆ ಅದು ತುಪ್ಪ (Ghee). ಇದು ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವುದಲ್ಲದೆ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ (Ghee Benefits) ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ಆಯುರ್ವೇದದ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಶುದ್ಧ ಹಸುವಿನ ತುಪ್ಪವನ್ನು ಸೇವಿಸಿದರೆ ಭಾರಿ ಆರೋಗ್ಯ ‌ಲಾಭ ಸಿಗುತ್ತದೆ. ತುಪ್ಪದಲ್ಲಿ ಕ್ಯಾಲ್ಸಿಯಂ, ರಂಜಕ, ಖನಿಜ, ಪೊಟ್ಯಾಸಿ ಯಮ್, ವಿಟಮಿನ್ ಎ, ಕೆ, ಇ, ಡಿ, ಒಮೆಗಾ 3 ಮತ್ತು ಒಮೆಗಾ 9 ಕೊಬ್ಬಿನಾಮ್ಲಗಳಂತಹ ಅಧಿಕ ಪೋಷಕಾಂಶಗಳು ಇದ್ದು, ವಿವಿಧ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ (Health Tips). ಹಾಗಾಗಿ ತಜ್ಞರು ಹೇಳುವಂತೆ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇವಿಸಿ ಅದರಿಂಗಾಗುವ ಚಮತ್ಕಾರಿ ಬದಲಾವಣೆ ಗಮನಿಸಿ.

ಜೀರ್ಣಕ್ರಿಯೆಗೆ ಸಹಕಾರಿ

ತುಪ್ಪವು ಆರೋಗ್ಯಕರ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಅಂದರೆ ತುಪ್ಪದ ಸೇವನೆ ಜೀರ್ಣ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಆಮ್ಲಗಳ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುವುದಲ್ಲದೆ ಅಜೀರ್ಣ, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ತುಪ್ಪವು ಬ್ಯುಟೈರೇಟ್ ಅನ್ನು ಹೊಂದಿದ್ದು ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಕರುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಹೊಟ್ಟೆ ಉಬ್ಬು ವುದು, ಮಲಬದ್ಧತೆ ಅಥವಾ ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಇದು ಬಹಳಷ್ಟು ಉಪಕಾರಿ.

ಚರ್ಮಕ್ಕೆ ಒಳ್ಳೆಯದು

‌ತುಪ್ಪವು ನಿಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಲಕ್ಷಣಗಳು ಚರ್ಮದ ಸಮಸ್ಯೆಯನ್ನು ಶಮನ ಮಾಡುತ್ತದೆ. ಆಯುರ್ವೇದ ಮತ್ತು ಇಂಟಿಗ್ರೇಟಿವ್ ಮೆಡಿಸಿನ್ ಜರ್ನಲ್ ಪ್ರಕಾರ, ತುಪ್ಪವು ಎಸ್ಜಿಮಾ, ಮೊಡವೆ ಮತ್ತು ಶುಷ್ಕತೆಯಂತಹ ವಿವಿಧ ಚರ್ಮದ ಸಮಸ್ಯೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ದದ್ದು, ಮೊಡವೆ ಶಮನಗೊಳಿಸಲು ಮತ್ತು ಚರ್ಮದ ಸೋಂಕನ್ನು ತಡೆಯಲು ಸಹ ಪರಿಣಾಮಕಾರಿ ಮಾರ್ಗ ಎನಿಸಿಕೊಂಡಿದೆ. ಇದಲ್ಲದೆ ತುಪ್ಪವನ್ನು ಸೇವಿಸುವುದರಿಂದ ಚರ್ಮ ತೇವಾಂಶದಿಂದ ಕೂಡಿ ಹೊಳೆಯುವಂತೆ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದಿನ ನಿತ್ಯದ ಆಹಾರದಲ್ಲಿ ತುಪ್ಪವನ್ನು ಬಳಸಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ವಿಷಕಾರಿ ಅಂಶಗಳಿಂದ ದೇಹ ಮುಕ್ತವಾಗುತ್ತದೆ. ತುಪ್ಪದಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಜಾಸ್ತಿ ಕಂಡು ಬರುತ್ತಿದ್ದು, ಇದು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ, ಉತ್ಕ ರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಅಲ್ಲದೆ ವೈರಸ್, ಜ್ವರ, ಕೆಮ್ಮು ಇತ್ಯಾದಿ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡಲಿದೆ

ತುಪ್ಪದ ಇನ್ನೊಂದು ಪ್ಲಸ್‌ ಪಾಯಿಂಟ್‌ ಎಂದರೆ ದೇಹದಲ್ಲಿ ಅಧಿಕವಾಗಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಇದು ದೇಹದ ಚಯಾಪಚಯಕ್ಕಾಗಿ ಬೇಕಾದ ಪೋಷಕಾಂಶಗ ಳನ್ನು ಹೆಚ್ಚು ಮಾಡಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ತರುತ್ತದೆ.

ಮೆದುಳು ಮತ್ತು ಮೂಳೆಗಳಿಗೂ ಒಳ್ಳೆಯದು

ತುಪ್ಪವು ಪೋಷಕಾಂಶಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳಿಂದ ಸಮೃದ್ಧವಾಗಿದ್ದು, ಇದು ಮೆದುಳು, ಮೂಳೆ, ಹೃದಯ ಮತ್ತು ನರವ್ಯೂಹದ ಚಟುವಟಿಕೆ ಮೇಲೆ ದನಾತ್ಮಕ ಪರಿಣಾಮ ಬೀರುತ್ತದೆ.

ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು

ನಮ್ಮ ದೇಹ ಹೆಚ್ಚು ಹೀಟ್‌ಗೆ ಒಳಗಾದಾಗ ಕಣ್ಣುಗಳು ಕೆಂಪಾಗುತ್ತವೆ ಮತ್ತು ಒಣಗುತ್ತವೆ. ನಿಯಮಿತವಾಗಿ ತುಪ್ಪ ತಿನ್ನುವುದರಿಂದ ಅದರಲ್ಲಿರುವ ಒಮೇಗಾ 3 ಫ್ಯಾಟಿ ಆಮ್ಲಗಳು ಕಣ್ಣುಗಳ ದೃಷ್ಟಿಗೆ ಸಂಬಂಧಪಟ್ಟಂತೆ ಇರುವ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.‌ ಕಣ್ಣಿನ ರಕ್ಷಣೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಇದನ್ನು ಓದಿ:Health Tips: ಮಕ್ಕಳಲ್ಲಿ ಕಾಡುತ್ತಿದೆಯೇ ಬೊಜ್ಜಿನ ಸಮಸ್ಯೆ? ಪೋಷಕರೇ ಈಗ್ಲೇ ಹುಷಾರಾಗಿರಿ

ಪಿರಿಯಡ್ಸ್ ನೋವಿನ ಸಮಸ್ಯೆ ಕಡಿಮೆ ಮಾಡಲಿದೆ

ತುಪ್ಪ ಸೇವಿಸುವುದರಿಂದ ದೇಹದಲ್ಲಿನ ಹಾರ್ಮೋನ್ ಸಮತೋಲನದಲ್ಲಿಡಬಹುದು. ಋತುಚಕ್ರದ ಸಮಯದಲ್ಲಿ ಹೊಟ್ಟೆ ನೋವು ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಆಹಾರದಲ್ಲಿ ತುಪ್ಪವನ್ನು ಸೇರಿಸಿಕೊಳ್ಳಬೇಕು.