ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಮಕ್ಕಳಲ್ಲಿ ಕಾಡುತ್ತಿದೆಯೇ ಬೊಜ್ಜಿನ ಸಮಸ್ಯೆ? ಪೋಷಕರೇ ಈಗ್ಲೇ ಹುಷಾರಾಗಿರಿ

ಭಾರತದಲ್ಲಿ ಬೊಜ್ಜಿನ ಸಮಸ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದೂ ವಯಸ್ಕರು ಹಾಗೂ ಮಕ್ಕಳು ಈ ಸಮಸ್ಯೆಯನ್ನು ಹೆಚ್ಚು ಎದುರಿಸುತ್ತಿದ್ದಾರೆ ಎಂದು ಅಧ್ಯಯನವೊಂದು ಬಹಿರಂಗ ಪಡಿಸಿದೆ. ಅದರಲ್ಲೂ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿದ್ದು 5 ರಿಂದ 14 ವಯಸ್ಸಿನ 3 ಕೋಟಿ ಮಕ್ಕಳು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಈ ಅತಿಯಾದ ಬೊಜ್ಜು ಅಸ್ತಮಾ ಜೊತೆಗೂ ಇತರ ಕಾಯಿಲೆಗಳಿಗೂ ಕಾರಣವಾಗುತ್ತಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜು! ನಿರ್ಲಕ್ಷಿಸಿದರೆ ಅಪಾಯ ಗ್ಯಾರಂಟಿ

Childhood obesity

Profile Pushpa Kumari Mar 8, 2025 6:30 AM

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆಧುನಿಕ ಆಹಾರ ಶೈಲಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ. ಅದರಲ್ಲೂ ಇಂದಿನ ಜೀವನ ಶೈಲಿಯಿಂದಾಗಿ ಸರಿಯಾದ ಆಹಾರ ಕ್ರಮವಿಲ್ಲದೆ ಜನರಲ್ಲಿ ಬೊಜ್ಜಿನ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ಬೊಜ್ಜಿನ ಸಮಸ್ಯೆ(Health Tips) ದಿನೇ ದಿನೇ ಏರಿಕೆಯಾಗುತ್ತಿದ್ದೂ ವಯಸ್ಕರು ಹಾಗೂ ಮಕ್ಕಳು ಈ ಸಮಸ್ಯೆ ಹೆಚ್ಚು ಎದುರಿಸುತ್ತಿದ್ದಾರೆ ಎಂದು ಅಧ್ಯಯನವೊಂದು ಬಹಿರಂಗ ಪಡಿಸಿದೆ. ಆರೋಗ್ಯ ತಜ್ಞರ ಪ್ರಕಾರ ಅತಿಯಾದ ಬೊಜ್ಜು ಉಂಟಾದಾಗ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತಾ ಹೋಗುತ್ತದೆ. ಅತಿಯಾದ ಬೊಜ್ಜಿನ ಸಮಸ್ಯೆ(Obesity cause) ಮನುಷ್ಯನ ಆರೋಗ್ಯಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ ಎಂದು ಈ ಬಗ್ಗೆ ಲ್ಯಾನ್ಸೆಟ್ ತನ್ನ ಜರ್ನಲ್ ನಲ್ಲಿ ಭಾರತೀಯರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ ಆತಂಕಕಾರಿ ವರದಿಯೊಂದನ್ನು ನೀಡಿದೆ. ಅದರಲ್ಲೂ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿದ್ದು 5 ರಿಂದ 14 ವಯಸ್ಸಿನ 3 ಕೋಟಿ ಮಕ್ಕಳು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಈ ಅತಿಯಾದ ಬೊಜ್ಜು ಅಸ್ತಮಾ ಜೊತೆಗೂ ಇತರ ಕಾಯಿಲೆಗಳಿಗೂ ಕಾರಣವಾಗುತ್ತಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇತ್ತೀಚಿನ ದಿನಗಳಲ್ಲಿ ಹೊರಗಿನ ಆಹಾರವಾದ ಫಾಸ್ಟ್ ಫುಡ್, ಬೇಕರಿ ತಿಂಡಿ ಸೇವನೆ ಅಧಿಕವಾಗಿದ್ದು ಮಕ್ಕಳು ಕೂಡ ಇದೇ ಆಹಾರಕ್ಕೆ ಅವಲಂಬಿತರಾಗಿದ್ದಾರೆ. ಇದರಿಂದಾಗಿ ಶೇ.20 ಮಕ್ಕಳಲ್ಲಿ ಅತಿಯಾದ ಬೊಜ್ಜು ಕಾಣಿಸುತ್ತಿದೆ. 5 ರಿಂದ 14 ವಯಸ್ಸಿನ 3 ಕೋಟಿ ಮಕ್ಕಳು ಬೊಜ್ಜಿನ‌ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ. ಅದೇ ರೀತಿ ಮಹಿಳೆಯರು, ಯುವಕರಲ್ಲೂ ಈ ಬೊಜ್ಜಿನ ಸಮಸ್ಯೆ ಹೇರಳವಾಗಿದ್ದು ಸ್ಥೂಲಕಾಯದ ವಿಚಾರದಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ. ಅಮೆರಿಕ ಹಾಗೂ ಚೀನಾ ಕ್ರಮವಾಗಿ 1 ಹಾಗೂ 2ನೇ ಸ್ಥಾನದಲ್ಲಿದೆ. ಇಂದು ಬೊಜ್ಜಿನಿಂದ ಬಳಲುವವರ ಸಂಖ್ಯೆ 44 ಕೋಟಿಗೂ ‌ ಏರಿಕೆಯಾಗಿದೆ. ಇದರಲ್ಲಿ 21.8 ಪುರುಷರಿದ್ರೆ 23.8 ಕೋಟಿ ಮಹಿಳೆಯರು ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಮಕ್ಕಳಿಗೆ ಜಂಕ್ ಫುಡ್ ಕಡಿಮೆ ಮಾಡಿ:

ಮಕ್ಕಳಲ್ಲಿ ಈ ಬೊಜ್ಜಿನ ಸಮಸ್ಯೆ ಹೆಚ್ಚಾಗಿದ್ದು ಇದರಿಂದ ಮಕ್ಕಳಲ್ಲಿ ಹಲವು ರೀತಿಯ ಸಮಸ್ಯೆಗಳು ಕಾಡಬಹುದು.‌ ಬಾಲ್ಯದ ಈ ಬೊಜ್ಜು ಮಕ್ಕಳ ಟೈಪ್-2 ಡಯಾಬಿಟಿಸ್, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಹೃದಯ ಪಿತ್ತಕೋಶದ ಕಾಯಿಲೆ, ಅಲ್ಲದೆ ಕ್ಯಾನ್ಸರ್‌ಗಳ ಅಪಾಯ ಕೂಡ ಉಂಟು ಮಾಡಬಹುದು. ಹಾಗಾಗಿ ಪೋಷಕರು ಈ ಮೊದಲೇ ಎಚ್ಚೆತ್ತುಕೊಂಡು ಮಕ್ಕಳಿಗೆ ಹೊರಗಿನ ಆಹಾರವನ್ನು ನೀಡುವುದನ್ನು ತಪ್ಪಿಸಬೇಕು.

ಮಧುಮೇಹ ಸಮಸ್ಯೆ ಉಂಟಾಗಲಿದೆ:

ಬೊಜ್ಜು ದೇಹದಲ್ಲಿ ಅತಿಯಾಗಿ ಹೆಚ್ಚಾದಂತೆ ಮಧುಮೇಹ ಸಮಸ್ಯೆಗೆ ಕಾರಣವಾಗಬಹುದು.‌ ಟೈಪ್-2 ಮಧುಮೇಹವು ದೇಹದಲ್ಲಿ ಕಾಣಿಸಿ ಕೊಂಡಂತೆ ಬೊಜ್ಜು ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಮೇಲೆ ಪರಿಣಾಮ ಬೀರಿ ಇನ್ಸುಲಿನ್ ಕಾರ್ಯನಿರ್ವಹಿಸದೆ ಇರುವ ಕಾರಣದಿಂದಾಗಿ ಮತ್ತಷ್ಟು ಬೊಜ್ಜು ಹೆಚ್ಚಾಗಿ ಕಂಡುಬರುವುದು.

ಮಾನಸಿಕ ಸಮಸ್ಯೆ ಹೆಚ್ಚಾಗಬಹುದು:

ಅತೀಯಾದ ಬೊಜ್ಜಿನಿಂದ ಮಾನಸಿಕ ಸಮಸ್ಯೆಯು ಹೆಚ್ಚಾಗಿ ಕಾಡಬಹುದು‌‌. ಬೊಜ್ಜು ಹೆಚ್ಚಾದಂತೆ ಜನರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದೆ. ಬೊಜ್ಜು ಹೆಚ್ಚಾದಾಗ ಭಾವನಾತ್ಮಕ ಆಹಾರ ಸೇವನೆ, ದೈಹಿಕ ಚಟುವಟಿಕೆಯ ಕೊರತೆ, ನಿದ್ದೆಯ ಸಮಸ್ಯೆ, ಇತ್ಯಾದಿ ಆರೋಗ್ಯ ಸಮಸ್ಯೆಯ ಮೇಲೆ ಪರಿಣಾಮ ಬೀರಲಿದೆ.

ಪಾರ್ಶ್ವವಾಯು ಉಂಟಾಗುವ ಸಾಧ್ಯತೆ:

ಅಧಿಕ ತೂಕ ದಿಂದಾಗಿ ಪಾರ್ಶ್ವವಾಯು (strock) ಹೆಚ್ಚಾಗುವ ಸಾಧ್ಯತೆ ಇರಲಿದೆ.ಇನ್ನು ಅಧಿಕ ತೂಕವು ಮೆಟಬಾಲಿಕ್ ಸಿಂಡ್ರೋಮ್’ಗೆ ಕಾರಣ ವಾಗಿದ್ದು, ಅಧಿಕ ಕೊಲೆಸ್ಟ್ರಾಲ್ ರಕ್ತ ದೊತ್ತಡಕ್ಕೂ ಕಾರಣವಾಗುತ್ತದೆ. ಇದರಿಂದ ಮೆದುಳು ಮತ್ತು ಹೃದಯದ ರಕ್ತನಾಳಗಳಿಗೆ ಹಾನಿ ಉಂಟಾಗಿ ರಕ್ತ ಹೆಪ್ಪುಗಟ್ಟಿ ಮೆದುಳಿಗೆ ಸಂಬಂಧಿಸಿದ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಪಾರ್ಶ್ವವಾಯು ಸಮಸ್ಯೆ ಉಂಟಾಗುವ ಸಾಧ್ಯತೆಯು ಹೆಚ್ಚು ಇರಲಿದೆ.

ಸಂಧಿನೋವು:

ಬೊಜ್ಜು ಸಂಧಿವಾತವನ್ನುಂಟು ಮಾಡುತ್ತದೆ. ಸ್ನಾಯು ಸೆಳೆತ ಉಂಟಾ ಗಲು ನಡೆಯಲು ಕಷ್ಟವಾಗುವಂತಹ ಪರಿಸ್ಥಿತಿ ಎದುರಾಗಬಹುದು. ಬೊಜ್ಜಿ ನ ಸಮಸ್ಯೆ ಇರುವವರು ಸೀಮಿತ ಆಸನ ಆಯ್ಕೆಗಳಿಂದಾಗಿ ಹೊರಗೆ ಹೋಗಲು ಕೂಡ ಹಿಂಜರಿಯುತ್ತಾರೆ.

ಇದನ್ನು ಓದಿ: Health Benefits of Mangosteen: ಮ್ಯಾಂಗೋಸ್ಟೀನ್ ಹಣ್ಣಿನ ಸೇವನೆಯಿಂದ ಸಿಗುತ್ತೆ ಈ ಎಲ್ಲಾ ಆರೋಗ್ಯ ಲಾಭ!

ಈ ಅಭ್ಯಾಸ ರೂಢಿಸಿಕೊಳ್ಳಿ:

  • ಹಿತಮಿತವಾದ ಆಹಾರ ಸೇವನೆಯನ್ನು ರೂಢಿಸಿಕೊಳ್ಫುವ ಮೂಲಕ ಬೊಜ್ಜು ಬಾರದಂತೆ ತಡೆಗಟ್ಟಬಹುದು..
  • ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಬೊಜ್ಜು ಬಾರದಂತೆ ತಡೆಯಬಹುದು. ದಿನ ನಿತ್ಯ 30-45 ನಿಮಿಷ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ
  • ಕೊಬ್ಬು ಮತ್ತು ಸಕ್ಕರೆ ಅಧಿಕವಾಗಿ ಇರುವಂತಹ ಆಹಾರದಿಂದ ದೂರ ಇರಿ,ಹೊರಗಿನ ಆಹಾರಗಳ ಸೇವನೆ ಕಡಿಮೆ ಮಾಡಿ.
  • ಸರಿಯಾಗಿ ನಿದ್ರೆ ಮಾಡಿ, ನಿದ್ರಾಹೀನತೆಯಿಂದಾಗಿ ತಡರಾತ್ರಿ ತಿಂದರೆ ತೂಕ ಹೆಚ್ಚಾಗಲಿದೆ. ಹಾಗಾಗಿ ಸರಿಯಾಗಿ ನಿದ್ರೆ ಮಾಡಿದರೆ ಆಗ ದೈಹಿಕ ವಾಗಿಯೂ ಮಾನಸಿಕವಾಗಿಯು ಆರೋಗ್ಯವಾಗಿ ಇರಬಹುದು.