ಪಾರಿಜಾತ ಎಲೆಯಲ್ಲಿದೆ ಅದ್ಭುತ ಔಷಧೀಯ ಗುಣ!
Health Tips: ಪಾರಿಜಾತ ವೃಕ್ಷವನ್ನು ಸನಾತನ ಧರ್ಮದಲ್ಲಿ ಕೂಡ ಪೂಜಿಸಲಾಗುತ್ತದೆ. ಈ ಗಿಡದ ಹೂವು, ಎಲೆಗಳು ಆರೋಗ್ಯಕ್ಕೆ ಕನ್ನಡಿಯಾಗಿದೆ. ಏಕೆಂದರೆ ಇದರ ಎಲೆಗಳು ಈಗ ವೈಜ್ಞಾನಿಕ ಸಂಶೋಧನೆಯಿಂದ ಪ್ರಬಲ ಆರೋಗ್ಯ ಪ್ರಯೋಜನ ಗಳಿಗೆ ಸಹಾಯಕವಾಗಲಿದೆ ಎಂದು ಸಾಬೀತು ಕೂಡ ಆಗಿದೆ. ಆಯುರ್ವೇದದಲ್ಲಿ ಇದನ್ನು 'ದೇವಲೋಕದ ಪುಷ್ಪ' ಎಂದು ಕರೆಯಲಿದ್ದು ಇದರ ಎಲೆಗಳಲ್ಲಿ ನೂರಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ..
ಸಂಗ್ರಹ ಚಿತ್ರ -
ಬೆಂಗಳೂರು,ಜ.20: ಪಾರಿಜಾತ ವೃಕ್ಷವನ್ನು ಸನಾತನ ಧರ್ಮದಲ್ಲಿ ಕೂಡ ಪೂಜಿಸಲಾಗುತ್ತದೆ. ಈ ಗಿಡದ ಹೂವು, ಎಲೆಗಳು (Parijat Leaves) ಆರೋಗ್ಯಕ್ಕೆ ಕನ್ನಡಿಯಾಗಿದೆ.ಏಕೆಂದರೆ ಇದರ ಎಲೆಗಳು ಈಗ ವೈಜ್ಞಾನಿಕ ಸಂಶೋಧನೆಯಿಂದ ಪ್ರಬಲ ಆರೋಗ್ಯ ಪ್ರಯೋಜನಗಳಿಗೆ ಸಹಾಯಕ ವಾಗಲಿದೆ ಎಂದು ಸಾಬೀತು ಕೂಡ ಆಗಿದೆ. ಆಯುರ್ವೇದದಲ್ಲಿ ಇದನ್ನು 'ದೇವಲೋಕದ ಪುಷ್ಪ' ಎಂದು ಕರೆಯಲಿದ್ದು ಇದರ ಎಲೆಗಳಲ್ಲಿ ನೂರಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಯಂತೆ. ಪಾರಿಜಾತವು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಮತ್ತು ಆಂಟಿ ಹೆಲ್ಮಿಂಟಿಕ್ ಗುಣಗಳನ್ನು ಹೊಂದಿದ್ದು ಆರೋಗ್ಯ ಲಾಭದ ಮಾಹಿತಿ ಇಲ್ಲಿದೆ
ಸಂಧಿವಾತ ಮತ್ತು ಕೀಲು ನೋವಿಗೆ ಪರಿಹಾರ:
ಪಾರಿಜಾತ ಎಲೆಗಳು ಸಂಧಿವಾತ ಮತ್ತು ಕೀಲು ನೋವನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ಇವುಗಳಲ್ಲಿ ಉರಿ ಯೂತ ನಿವಾರಕ ಸಂಯುಕ್ತಗಳು ಇದ್ದು ಇದರ ಎಲೆಗಳನ್ನು ಸೇವನೆ ಮಾಡಿವುದರಿಂದ ಸಂಧಿವಾತಕ್ಕೆ ಸಂಬಂಧಿಸಿದ ಊತ ಮತ್ತು ನೋವನ್ನು ಕಡಿಮೆ ಮಾಡುವ ಮೂಲಕ ಇದರ ಸಂಯುಕ್ತಗಳು ಕಾರ್ಯನಿರ್ವಹಿಸುತ್ತವೆ.
Health Tips: ಚಳಿಗಾಲದ ಆರೋಗ್ಯಕ್ಕೆ ಕರಿಮೆಣಸು ರಾಮಬಾಣ!
ಉಸಿರಾಟದ ಸಮಸ್ಯೆ ನಿವಾರಣೆ:
ಉರಿಯೂತ, ಕಿರಿಕಿರಿ ಮತ್ತು ಉಸಿರಾಟದ ಸಮಸ್ಯೆಯನ್ನು ಗುಣಪಡಿಸುವ ಶಕ್ತಿ ಇದರಲ್ಲಿದೆ. ಕೆಮ್ಮು ಮತ್ತು ಆಸ್ತಮಾಗೆ ಈ ಎಲೆಗಳ ಕಷಾಯ ಪರಿಣಾಮಕಾರಿ.
ಜ್ವರಕ್ಕೆ ರಾಮಬಾಣ:
ಪಾರಿಜಾತ ಎಲೆಗಳು ಜ್ವರವನ್ನು ಕಡಿಮೆ ಮಾಡಲು ಮತ್ತು ಶೀತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಜ್ವರಗಳ ವಿರುದ್ಧ ಹೋರಾಡುವ ಮೂಲಕ ಪಾರಿಜಾತ ಎಲೆಗಳು ಸಹಾಯ ಮಾಡುತ್ತವೆ
ಜೀರ್ಣಕ್ರಿಯೆಗೆ ಸಹಕಾರಿ:
ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಮತ್ತು ಜಠರಗರುಳಿನ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದು ಹೊಟ್ಟೆಯುಬ್ಬರ, ಅಜೀರ್ಣ ಮತ್ತು ವಾಯು ಮುಂತಾದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.ಹಾಗಾಗಿ ಈ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಇದರ ಸೇವನೆ ಮಾಡಬಹುದು.
ತ್ವಚೆಯ ಆರೈಕೆ:
ಎಲೆಗಳ ಪೇಸ್ಟ್ ಮಾಡಿ ಚರ್ಮಕ್ಕೆ ಹಚ್ಚುವುದರಿಂದ ದದ್ದುಗಳು ಅಥವಾ ಸೋಂಕುಗಳಿಗೆ ಹಚ್ಚುವುದರಿಂದ ಶಮನ ಸಿಗುತ್ತದೆ. ಇದು ಚರ್ಮಕ್ಕೆ ವಯಸ್ಸಾಗುವಿಕೆಯನ್ನು ತಡೆಯುವ ಗುಣವನ್ನೂ ಕೂಡ ಹೊಂದಿದೆ.
ಮಾನಸಿಕ ಒತ್ತಡ ನಿವಾರಣೆ:
ಈ ಎಲೆಗಳಲ್ಲಿರುವ ಫೈಟೊಕೆಮಿಕಲ್ಸ್ ಮನಸ್ಸನ್ನು ಶಾಂತ ಮಾಡಿ ಉತ್ಸಾಹದಾಯಕವಾಗಿ ಇರುವಂತೆ ಮಾಡುತ್ತದೆ. ಕಾರ್ಟಿಸೋಲ್ ಒತ್ತಡದ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.