Health Tips: ತೂಕ ಇಳಿಸ್ಬೇಕಾ? ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಖರ್ಜೂರ ಸೇವಿಸಿ!
ನಿತ್ಯ ಪ್ರೊಟೀನ್‌ಯುಕ್ತ, ಕಡಿಮೆ ಕ್ಯಾಲೊರಿ ಇರುವ ಆಹಾರ ಸೇವಿಸುವುದು ಕಷ್ಟ ಎನ್ನುವವರು ನಿತ್ಯ ಖರ್ಜೂರ ಸೇವನೆ ಮಾಡುವುದರಿಂದ ಸುಲಭವಾಗಿ ತೂಕ ಇಳಿಸಬಹುದು.ಖರ್ಜೂರದಲ್ಲಿ ಇರುವ ಕೊಬ್ಬಿನ ಆಮ್ಲದಿಂದ ಉರಿಯೂತ ಕಡಿಮೆ ಮಾಡಬಹುದು. ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹ ,ಬೊಜ್ಜು ಇತರ ಸಮಸ್ಯೆ ತಡೆಯುತ್ತದೆ. ಖರ್ಜೂರದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ ಸೇರಿದಂತೆ ವಿವಿಧ ಖನಿಜಗಳು ಹೇರಳವಾಗಿದ್ದು ಅತಿಯಾಗಿ ಹಸಿವಾದಾಗ ಎರಡು ಖರ್ಜೂರ ಸೇವನೆ ಮಾಡಿದರೂ ಹಸಿವು ನೀಗಲಿದೆ
ನವದೆಹಲಿ: ದೇಹದ ತೂಕ ಇಳಿಸಲು ಜಿಮ್ ವರ್ಕ್ ಔಟ್ ಮಾಡುವ ಜೊತೆಗೆ ಆಹಾರದಲ್ಲಿ ಕೂಡ ಕೆಲವು ಬದಲಾವಣೆ ಮಾಡುವುದು ಬಹಳ ಮುಖ್ಯ(Health tips). ನಿತ್ಯ ಪ್ರೋಟಿನ್ ಯುಕ್ತ ,ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸುವುದು ಕಷ್ಟ ಎನ್ನುವವರು ನಿತ್ಯ ಖರ್ಜೂರ (Dates) ಸೇವನೆ ಮಾಡುವುದರಿಂದ ಸುಲಭವಾಗಿ ತೂಕ ಇಳಿಸಬಹುದು. ಖರ್ಜೂರ ತಿನ್ನಲು ರುಚಿ ಇರುವ ಜೊತೆಗೆ ದೇಹದ ಆರೋಗ್ಯ ಸಮಸ್ಥಿತಿ ಇಡಲು ಬೇಕಾದ ಪೋಷಕಾಂಶಗಳನ್ನು ನೀಡಲಿದೆ. ಸಣ್ಣ ಆಗಬೇಕು ಎಂದು ಡಯಟ್ ಮಾಡುವವರು ನಿತ್ಯ 2-3 ಖರ್ಜೂರ ಸೇವನೆ ಮಾಡಿದರೆ ಅನೇಕ ಆರೋಗ್ಯ ಪ್ರಯೋಜನ ಕೂಡ ಸಿಗಲಿದೆ.
ಈ ಎಲ್ಲ ಆರೋಗ್ಯ ಪ್ರಯೋಜನ ಸಿಗಲಿದೆ!
ಅಧಿಕ ಫೈಬರ್ ನಿಂದ ಆರೋಗ್ಯ ವೃದ್ಧಿ: ದೇಹದ ತೂಕ ಇಳಿಸುವವರು ಅಧಿಕ ಪ್ರೋಟಿನ್ ಆಹಾರ ತಿನ್ನಬೇಕು. ಈ ನಿಟ್ಟಿನಲ್ಲಿ ಖರ್ಜೂರದ ಸೇವನೆಯಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟಿನ್ ಲಭ್ಯ ವಾಗಲಿದೆ. ಖರ್ಜೂರದಲ್ಲಿ ನಾರಿನ ಅಂಶ ಹೇರಳ ವಾಗಿದೆ. ಇದರಿಂದಾಗಿ ಜೀರ್ಣಕ್ರಿಯೆ ಪ್ರಕ್ರಿಯೆ ಸರಾಗವಾಗಲಿದೆ. ಚಯಾಪಚಯ ಪ್ರಕ್ರಿಯೆ ಉತ್ತಮವಾಗಿ ಇರುವ ಕಾರಣಕ್ಕೆ ದೇಹದ ಆರೋಗ್ಯ ಸುಸ್ಥಿತಿಯಲ್ಲಿ ಇಡಲಿದ್ದು ಮಲಬದ್ಧತೆ, ಅಸಿಡಿಟಿ ಸಮಸ್ಯೆ ನಿವಾರಣೆ ಯಲ್ಲಿಯೂ ಖರ್ಜೂರ ಸೇವನೆ ಪ್ರಧಾನ ಪಾತ್ರ ವಹಿಸಲಿದೆ.
ಬೊಜ್ಜು ಕರಗಿ ದೇಹದ ತೂಕ ಇಳಿಯಲಿದೆ: ಖರ್ಜೂರದಲ್ಲಿ ಇರುವ ಕೊಬ್ಬಿನ ಆಮ್ಲದಿಂದ ಉರಿಯೂತ ಕಡಿಮೆ ಮಾಡಬಹುದು. ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹ , ಬೊಜ್ಜು ಇತರ ಸಮಸ್ಯೆ ತಡೆಯುತ್ತದೆ. ಖರ್ಜೂರದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ ಸೇರಿದಂತೆ ವಿವಿಧ ಖನಿಜಗಳು ಹೇರಳವಾಗಿದ್ದು ಅತೀಯಾಗಿ ಹಸಿವಾದಾಗ ಎರಡು ಖರ್ಜೂರ ಸೇವನೆ ಮಾಡಿದರೂ ಹಸಿವು ನೀಗಲಿದೆ. ಹಾಗಾಗಿ ದೇಹದ ತೂಕ ಹೆಚ್ಚಾಗುವುದು ತಡೆಹಿಡಿದಂತಾಗಲಿದೆ.
ನೋವಿನ ಶಮನ: ಅತಿಯಾದ ದೇಹ ತೂಕದಿಂದ ಮೂಳೆ ನೋವು, ಸಂಧಿವಾತ, ಕೀಲು ನೋವಿನ ಸಮಸ್ಯೆ ಹೊಂದಿದ್ದರೆ ಕ್ಯಾಲ್ಸಿಯಂ ಪ್ರಮಾಣ ಹೊಂದಿರುವ ಖರ್ಜೂರ ಸೇವನೆಮಾಡಬೇಕು ಅದು ಇಂತಹ ನೋವಿನ ಶಮನ ಮಾಡುವ ನೆಲೆಯಲ್ಲಿ ಕೂಡ ಸಹಕಾರಿಯಾಗಲಿದೆ.
ರಕ್ತ ಹೀನತೆ ಸಮಸ್ಯೆ ನಿವಾರಣೆ: ಖರ್ಜೂರ ಸೇವನೆಯು ದೇಹದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುವ ಮೂಲಕ ಬೊಜ್ಜು ನಿವಾರಕವಾಗಲಿದೆ. ಇದರ ಜೊತೆಗೆ ಹೃದಯ ಸಂಬಂಧಿತ ಸಮಸ್ಯೆಗಳ ಉಪಶಮನಕ್ಕೂ ಕೂಡ ಖರ್ಜೂರ ಬಹಳ ಉತ್ತಮ ಎನ್ನಬಹುದು. ಖರ್ಜೂರದಲ್ಲಿ ವಿಟಮಿನ್ ಸಿ ಪ್ರಮಾಣವಿದ್ದು ಇದರಿಂದ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಇದ್ದರೆ ಅದು ನಿವಾರಣೆ ಮಾಡಲಿದೆ.
ಇದನ್ನು ಓದಿ: Health Tips: ನೀರು ಕುಡಿದ ಕೂಡಲೇ ಈ ತೊಂದರೆ ಕಾಣಿಸ್ತಿದ್ಯಾ? ಕಿಡ್ನಿ ಸಮಸ್ಯೆ ಇವೆ ಎನ್ನುವ ಲಕ್ಷಣಗಳಿವು!
ಈ ತಪ್ಪು ಮಾಡದಿರಿ! ಖರ್ಜೂರ ಸೇವನೆ ಮಾಡಿದರೆ ದೇಹದ ತೂಕ ಇಳಿಯುವುದು ನಿಜವೇ ಆಗಿದ್ದರೂ ಕೂಡ ನೀವು ಅದನ್ನು ಯಾವ ಪ್ರಮಾಣದಲ್ಲಿ ಸೇವನೆ ಮಾಡುತ್ತಿದ್ದೀರಿ ಎಂಬುದು ಬಹಳ ಮುಖ್ಯ. ನೀವು ದಿನಕ್ಕೆ ಹೆಚ್ಚೆಂದರೆ 4 ಖರ್ಜೂರ ಸೇವನೆ ಮಾಡುವುದು ದೇಹದ ತೂಕ ಇಳಿಸುವ ನೆಲೆಯಲ್ಲಿ ಸಹಕಾರಿ. ಆದರೆ ಬಾಯಿಗೆ ರುಚಿಯೆಂದು ಬಹಳ ಸೇವಿಸಿ ಬಿಟ್ಟರೆ ಇದು ದೇಹದ ತೂಕ ಹೆಚ್ಚಾಗುವಂತೆ ಮಾಡಲಿದೆ. ಹಾಗಾಗಿ ತೂಕ ಇಳಿಸುವವರು ಈ ತಪ್ಪು ಮಾಡದಿರಿ.