Health Tips: ನೀರು ಕುಡಿದ ಕೂಡಲೇ ಈ ತೊಂದರೆ ಕಾಣಿಸ್ತಿದ್ಯಾ? ಕಿಡ್ನಿ ಸಮಸ್ಯೆ ಇವೆ ಎನ್ನುವ ಲಕ್ಷಣಗಳಿವು!
ನೀರು ಕುಡಿದ ತಕ್ಷಣ ಕಾಣಿಸಿಕೊಳ್ಳುವ ಲಕ್ಷಣಗಳು ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರ ಹೊರ ಹೋಗುವಾಗ ನೋವು ಅಥವಾ ಕಿರಿಕಿರಿ ಇತ್ಯಾದಿ ಲಕ್ಷಣ ಕಾಣಿಸಿಕೊಂಡರೆ ಕಿಡ್ನಿ ಸಮಸ್ಯೆಯು ಆಗಿರಬಹುದು. ನೀರು ಕುಡಿದ ತಕ್ಷಣ ಮೂತ್ರಪಿಂಡಗಳು ಇರುವ ಜಾಗದಲ್ಲಿ ನೋವು ಕಾಣಿಸಿಕೊಂಡರೆ, ಸೂಜಿಯಿಂದ ಚುಚ್ಚಿದಂತೆ ಅನಿಸಿದರೆ ತಕ್ಷಣ ಎಚ್ಚರವಹಿಸಬೇಕು. ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಸಂಬಂಧಿತ ಚಿಕಿತ್ಸೆಗಳನ್ನು ಪಡೆಯಬೇಕು.


ನವದೆಹಲಿ: ಮೂತ್ರಪಿಂಡವು (Kidney Problem) ಮಾನವನ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಆರೋಗ್ಯ ಹದಗೆಡುವುದು ಗ್ಯಾರಂಟಿ. ಅದರಲ್ಲೂ ಆಧುನಿಕ ಜೀವನಶೈಲಿ, ಸೇವಿಸುವ ಆಹಾರದಲ್ಲಿನ ಬದಲಾವಣೆಗಳಿಂದಾಗಿ ಇತ್ತೀಚೆಗೆ ಮೂತ್ರಪಿಂಡ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಮೂತ್ರಪಿಂಡದ ಕಾರ್ಯ ವೈಖ್ಯರಿ ಹದಗೆಡುತ್ತಿರುವುದನ್ನು ಕೆಲವು ಲಕ್ಷಣಗಳ ಮೂಲಕ ನಾವು ಮೊದಲೇ ಗುರುತಿಸಬಹುದು(Health Tips).
ವಿಶೇಷವಾಗಿ ನೀರು ಕುಡಿದ ತಕ್ಷಣ ಕಾಣಿಸಿಕೊಳ್ಳುವ ಲಕ್ಷಣಗಳು ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರ ಹೊರ ಹೋಗುವಾಗ ನೋವು ಅಥವಾ ಕಿರಿಕಿರಿ ಇತ್ಯಾದಿ ಲಕ್ಷಣ ಕಾಣಿಸಿಕೊಂಡರೆ ಕಿಡ್ನಿ ಸಮಸ್ಯೆಯು ಆಗಿರಬಹುದು. ಅದರಲ್ಲೂ ನೀರು ಕುಡಿದ ತಕ್ಷಣ ಕಾಣಿಸಿಕೊಳ್ಳುವ ಲಕ್ಷಣಗಳು ಕಿಡ್ನಿ ಸಮಸ್ಯೆಯೇ ಆಗಿರಬಹುದು.
ನೀರು ಕುಡಿದ ಕೂಡಲೇ ಹೊಟ್ಟೆ ನೋವು:
ಕೆಲವೊಮ್ಮೆ ನೀರು ಕುಡಿದ ಕೂಡಲೇ ನಿಮಗೆ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಈ ರೀತಿ ಹೊಟ್ಟೆ ನೋವು ಕಾಣಿಸಿಕೊಂಡರೆ ಅದು ಕಿಡ್ನಿಯ ಸಮಸ್ಯೆ ಆಗಿರಬಹುದು. ಅಥವಾ ಸೂಜಿಯಲ್ಲಿ ಚುಚ್ಚಿದ ಅನುಭವ ವಾಗಬಹುದು.ನೀರು ಕುಡಿದ ತಕ್ಷಣ ಮೂತ್ರಪಿಂಡಗಳು ಇರುವ ಜಾಗದಲ್ಲಿ ನೋವು ಕಾಣಿಸಿಕೊಂಡರೆ, ಸೂಜಿಯಿಂದ ಚುಚ್ಚಿದಂತೆ ಅನಿಸಿದರೆ ತಕ್ಷಣ ಎಚ್ಚರವಹಿಸಬೇಕು. ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಸಂಬಂಧಿತ ಚಿಕಿತ್ಸೆಗಳನ್ನು ಪಡೆಯಬೇಕು.
ಆಯಾಸ ಉಂಟಾಗುವುದು:
ನೀರು ಕುಡಿದ ತಕ್ಷಣ ಆಯಾಸ, ನಿಶ್ಯಕ್ತಿ ಅನಿಸಿದರೆ ಮೂತ್ರಪಿಂಡಗಳು ಹಾನಿಗೊಳಗಾಗಿವೆ ಎಂಬುದರ ಸಂಕೇತವೆಂದು ಭಾವಿಸಬೇಕು. ಇದಕ್ಕೆ ಪ್ರಮುಖ ಕಾರಣ ದೇಹದಲ್ಲಿ ತ್ಯಾಜ್ಯ ಉತ್ಪನ್ನಗಳು ಸಂಗ್ರಹವಾಗಿ ಕೆಂಪು ರಕ್ತ ಕಣಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಉಂಟಾಗಿ ಕಿಡ್ನಿ ಕಾರ್ಯಕ್ಕೆ ತೊಂದರೆ ಆಗಬಹುದು. ಇದರಿಂದ ರಕ್ತಹೀನತೆ ಉಂಟಾಗಿ ದೇಹ ಆಯಾಸ ಒಳಗಾಗಬಹುದು.
ನೀರು ಕುಡಿದ ಕೂಡಲೇ ಮೂತ್ರ ವಿಸರ್ಜನೆ:
ನೀರು ಕುಡಿದ ಕೂಡಲೇ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ,ಅದು ಮೂತ್ರಪಿಂಡದ ಹಾನಿಯ ಸಂಕೇತವಾಗಿದೆ. ಅಂದರೆ, ಮೂತ್ರಪಿಂಡದ ಕಾರ್ಯ ಚರಣೆಗೆ ಸಮಸ್ಯೆ ಉಂಟಾದಾಗ ಆಗಾಗ್ಗೆ ಮೂತ್ರ ವಿಸರ್ಜಿಸ ಬೇಕೆಂಬ ಭಾವನೆ ಉಂಟಾಗುತ್ತದೆ. ಕೆಲವೊಮ್ಮೆ ಕಿಡ್ನಿ ಸೋಂಕು ಕೂಡ ಈ ರೀತಿಯಾಗಿ ಕಾಣಿಸಿಕೊಳ್ಳಬಹುದು.ಹಾಗಾಗಿ ನೀರು ಕುಡಿದ ಕೂಡಲೇ ಮೂತ್ರ ವಿಸರ್ಜನೆಯಾಗುವುದು ಆರೋಗ್ಯವಂತ ಕಿಡ್ನಿಯ ಲಕ್ಷಣವಲ್ಲ. ಅದಕ್ಕೆ ಕೂಡಲೇ ತಜ್ಞ ವೈದ್ಯರನ್ನು ಭೇಟಿಯಾಗುವುದು ಸೂಕ್ತ.
ವಾಕರಿಕೆ ಉಂಟಾಗುವುದು:
ಬೆಳಗ್ಗೆ ಎದ್ದ ಕೂಡಲೇ ವಾಕರಿಕೆ ಮತ್ತು ವಾಂತಿಯಂತಹ ಅನುಭವ ಆಗುವುದು ಈ ರೀತಿಯ ಸಮಸ್ಯೆ ಉಂಟಾಗಿದ್ದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಯಾಕಂದ್ರೆ ಬೆಳಗ್ಗೆ ಎದ್ದ ಕೂಡಲೇ ಕಾಣಿಸಿಕೊಳ್ಳುವ ಈ ಲಕ್ಷಣಗಳು, ನಿಮ್ಮ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸೂಚಿಸುವ ಸೂಚನೆಯಾಗಿದೆ.
ಇದನ್ನು ಓದಿ: Health Tips: ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಈ ಆಹಾರ ಕ್ರಮ ಪಾಲಿಸಿ
ಮೂತ್ರದಲ್ಲಿ ವ್ಯತ್ಯಾಸ:
ಎಷ್ಟೇ ನೀರು ಕುಡಿದರೂ ಮೂತ್ರ ಕಡಿಮೆ ಬರುತ್ತದೆ.ದಿನದಲ್ಲಿ ಸಾಕಷ್ಟು ನೀರು ಕುಡಿದ ಬಳಿಕವೂ ನಿಮಗೆ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತಿಲ್ಲ ಎಂದಾದರೆ ಕಿಡ್ನಿಯಲ್ಲಿ ಸಮಸ್ಯೆಯಾಗಿದೆ ಎಂದರ್ಥ. ಹಾಗಾಗಿ ಮೂತ್ರ ಪಿಂಡದಲ್ಲಿ ಸಮಸ್ಯೆಯಾದರೆ ಮುಂದೆ ನಾನಾ ರೀತಿಯ ತೊಂದರೆ ಕಾಣಿಸಿ ಕೊಳ್ಳಬಹುದು. ಹಾಗಾಗಿ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಲ್ಲಿ ವೈದ್ಯರನ್ನು ಸಂಪರ್ಕಿಸಿ.