ನವದೆಹಲಿ, ಡಿ.16: ನಮ್ಮ ದೇಹದ ರಕ್ಷಣೆಗೆ ಆರೋಗ್ಯಪೂರ್ಣ ಆಹಾರಗಳು ಬಹಳ ಮುಖ್ಯವಾಗುತ್ತವೆ. ಇಲ್ಲವಾದಲ್ಲಿ ಅಜೀರ್ಣ, ಮಲಬದ್ಧತೆಯಂತಹ ಅನಾರೋಗ್ಯ ಸಮಸ್ಯೆಗಳು ಕಾಡಲು ಆರಂಭವಾಗುತ್ತದೆ. ಹಾಗಾಗಿ ನಾವು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಬೇಕಾಗುತ್ತದೆ (Healthy Breakfast). ಪ್ರೋಬಯಾಟಿಕ್ ಆಹಾರ ಸೇರಿಸುವುದರಿಂದ ಕರುಳಿನ ಆರೋಗ್ಯ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು. ಇವು ಜೀರ್ಣಾಂಗ ವ್ಯವಸ್ಥೆಯನ್ನು (Better Digestion) ಸರಿಪಡಿಸಿ ದಿನವಿಡೀ ಆ್ಯಕ್ಟೀವ್ ಆಗಿ ಇರಲು ಸಹಾಯ ಮಾಡುತ್ತವೆ. ಜೀರ್ಣಾಂಗ ತಜ್ಞರೊಬ್ಬರು ಇದಕ್ಕೆ ಅನುಗುಣವಾಗಿ ಫೈಬರ್ ಮತ್ತು ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಉಪಾಹಾರ ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ನೀವು ಬೆಳಗಿನ ತಿಂಡಿಗೆ ಸೇವಿಸಬಹುದಾದ, ಆರೋಗ್ಯಪೂರ್ಣ ಆಹಾರದ ವಿವರ ಇಲ್ಲಿದೆ.
ಓವರ್‌ನೈಟ್ ಓಟ್ಸ್ ಜತೆ ಚಿಯಾ ಬೀಜ ಮತ್ತು ಬೆರ್ರಿ
ಓಟ್ಸ್ ಪೌಷ್ಟಿಕ ಆಹಾರದ ಉತ್ತಮ ಆಯ್ಕೆಯಾಗಿದೆ. ಇದು ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್ ಮತ್ತು ಫೈಬರ್‌ನಿಂದ ಸಮೃದ್ಧವಾಗಿದೆ. ಹಾಗಾಗಿ ಇವು ಜೀರ್ಣಕಾರಿ ಆರೋಗ್ಯವನ್ನು ಬೆಂಬಲಿಸುತ್ತದೆ. ಅದೇ ರೀತಿ ತಾಜಾ ಬೆರ್ರಿಗಳು ಉತ್ಕರ್ಷಣ ನಿರೋಧಕಗಳನ್ನು ನೀಡಿ ಜೀರ್ಣ ಕ್ರೀಯೆಯನ್ನು ಹೆಚ್ಚಿಸುತ್ತದೆ.
ಅವಕಾಡೊ ಟೋಸ್ಟ್
ಆವಕಾಡೊ ಟೋಸ್ಟ್ ಹೆಚ್ಚು ಪೌಷ್ಟಿಕಯುಕ್ತ ಆಹಾರ. ಇದು ಧಾನ್ಯಗಳ ಸಂಕೀರ್ಣ ಕಾರ್ಬೋ ಹೈಡ್ರೇಟ್‌ಗಳು ಮತ್ತು ಫೈಬರ್ ಅನ್ನು ಒದಗಿಸುತ್ತದೆ. ಅವಕಾಡೊ ಆರೋಗ್ಯಕರ ಕೊಬ್ಬನ್ನು ಹೊಂದಿದ್ದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ತರಕಾರಿ ಉಪ್ಪಿಟ್ಟು
ಸಾಸಿವೆ ಮತ್ತು ಕರಿಬೇವಿನ ಎಲೆಗಳನ್ನು ಬಳಕೆ ಮಾಡಿದಂತಹ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಮಸಾಲೆಗಳೊಂದಿಗೆ ತರಕಾರಿಗಳನ್ನು ಸೇರಿಸಿ ಉಪ್ಪಿಟ್ಟು ಮಾಡಿ ಸೇವಿಸಿದರೆ ಉತ್ತಮ.
ಚಳಿಗಾಲದಲ್ಲಿ ಸಪೋಟ ಹಣ್ಣಿನ ಆರೋಗ್ಯ ಪ್ರಯೋಜನಗಳು: ಹೃದಯವನ್ನು ಕಾಪಾಡಿ
ಬಾದಾಮಿ ಹಾಲು ಮತ್ತು ದಾಳಿಂಬೆ ಬೀಜಗಳೊಂದಿಗೆ ಸೇರಿಸಿದ ಚಿಯಾ ಫುಡ್
ಈ ಆಹಾರವು ಉತ್ಕರ್ಷಣ ನಿರೋಧಕಗಳನ್ನು ಹೆಚ್ಚು ಮಾಡಿ ಜೀವಸತ್ವ ಮತ್ತು ಆರೋಗ್ಯಕರ ಕೊಬ್ಬುಗಳನ್ನು ನೀಡುತ್ತದೆ. ಈ ಆಹಾರ ನಿಮ್ಮ ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸಲು ಸಹಾಯ ಮಾಡುತ್ತದೆ.
ತೆಂಗಿನಕಾಯಿ ಚಟ್ನಿಯೊಂದಿಗೆ ದೋಸೆ
ಉದ್ದಿನ ದೋಸೆಯಲ್ಲಿ ಪ್ರೋಟೀನ್ ಮತ್ತು ಫೈಬರ್ ಹೆಚ್ಚಾಗಿದೆ. ಹುದುಗುವಿಕೆಯ ಆಹಾರವು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಇದು ಜೀರ್ಣಾಂಗದ ಆರೋಗ್ಯಕ್ಕೆ ಬಹಳಷ್ಟು ಉತ್ತಮ.
ಸೇಬುಗಳು ಮತ್ತು ವಾಲ್ನಟ್‌ಗಳೊಂದಿಗೆ ಕ್ವಿನೋವಾ ಗಂಜಿ
ಕ್ವಿನೋವಾ ಒಂದು ಸಂಪೂರ್ಣ ಪ್ರೋಟೀನ್ ಆಗಿದ್ದು ಅಗತ್ಯವಾದ ಅಮೈನೋ ಆಮ್ಲ ಒದಗಿಸುತ್ತದೆ. ಇದರ ಜತೆ ಸೇಬು ನೈಸರ್ಗಿಕ ಆರೋಗ್ಯವನ್ನು ನೀಡುತ್ತದೆ. ವಾಲ್ನಟ್ಸ್ ಆರೋಗ್ಯಕರ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸಿ ಜೀರ್ಣಕ್ರಿಯೆ ಮತ್ತು ದೇಹದ ಆರೋಗ್ಯ ರಕ್ಷಣೆ ಮಾಡುತ್ತದೆ.