ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heart Attack: ಎದೆನೋವು ಅಥವಾ ಹೃದಯಾಘಾತ? ವ್ಯತ್ಯಾಸದ ಬಗ್ಗೆ ಮೊದಲೇ ತಿಳಿದಿರಿ... ಪ್ರಾಣಾಪಾಯ ತಪ್ಪಿಸಿ

ಇತ್ತೀಚಿಗೆ ಯುವ ಜನತೆಯಲ್ಲಿ ‌ಹೃದಯಘಾತವಾಗುವ ಸಂಖ್ಯೆ ಹೆಚ್ಚಾಗಿದ್ದು ಅದರಲ್ಲೂ ಆರೋಗ್ಯವಂತ ಯುವಕ, ಯುವತಿಯರೇ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾರೆ. ಹಾಗಾಗಿ ಹೃದಯಾಘಾತಕ್ಕೆ ಈಗ ವಯಸ್ಸಿನ ಮಿತಿ ಇಲ್ಲ. ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ ಬರಬಹುದು. ಹೀಗಾಗಿ ಹೃದಯಾಘಾತವಾಗುವ ಸಂದರ್ಭದಲ್ಲಿ ಸಕಾಲಿಕ ಚಿಕಿತ್ಸೆಯು ಅಗತ್ಯವಾಗಿದ್ದು ಹೃದಯಾಘಾತವಾಗುವ ಸಂದರ್ಭದಲ್ಲಿ ಏನು ಮಾಡಬೇಕು, ಯಾವ ಚಿಕಿತ್ಸೆ ನೀಡಬೇಕು ಎನ್ನುವ ಚಿಕಿತ್ಸಾ ವಿಧಾನದ ಬಗ್ಗೆ ಹೃದಯ ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ.

ಹೃದಯಾಘಾತ ಮತ್ತು ಎದೆನೋವು; ಎರಡರ ನಡುವಿನ ವ್ಯತ್ಯಾಸ ತಿಳಿದಿರಲಿ

Profile Pushpa Kumari Feb 14, 2025 6:30 AM

ನವದೆಹಲಿ: ಹಿಂದಿನ ಜೀವನಶೈಲಿಗೆ ಹೋಲಿಸಿದರೆ ಇಂದು ನಾವು ಬದುಕುವಂತಹ ಜೀವನ ಪದ್ಧತಿ ಸಾಕಷ್ಟು ಬದಲಾಗಿದೆ. ಆಧುನಿಕ ಜೀವನ ಶೈಲಿ, ಕೆಲಸದ ಒತ್ತಡ, ದೈಹಿಕ ವ್ಯಾಯಾಮದ ಕೊರತೆಯಿಂದಾಗಿ, ಹೆಚ್ಚಿನ ಜನರು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ(Health Tips). ಈ ಕಾಯಿಲೆಗಳಲ್ಲಿ ಮುಖ್ಯವಾದದ್ದು ಎಂದರೆ ಹೃದಯ ಸಂಬಂಧಿತ ಕಾಯಿಲೆಗಳಾದ ಅಧಿಕ ರಕ್ತದೊತ್ತಡ, ಕಡಿಮೆ ರಕ್ತದೊತ್ತಡ, ಪಾರ್ಶ್ವವಾಯು, ಹೃದಯಾಘಾತ (Heart attack) ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ ಇತ್ಯಾದಿ. ಇದರಿಂದಾಗಿ ಇತ್ತೀಚಿಗೆ ಯುವ ಜನತೆಯಲ್ಲಿ ‌ಹೃದಯಘಾತವಾಗುವ ಸಂಖ್ಯೆ ಹೆಚ್ಚಾಗಿದ್ದು ಅದರಲ್ಲೂ ಆರೋಗ್ಯವಂತ ಯುವಕ, ಯುವತಿಯರೇ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾಗಿ ಹೃದಯಾಘಾತಕ್ಕೆ ಈಗ ವಯಸ್ಸಿನ ಮಿತಿ ಇಲ್ಲ. ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ ಬರಬಹುದು. ಹೀಗಾಗಿ ಹೃದಯಾ ಘಾತವಾಗುವ ಸಂದರ್ಭದಲ್ಲಿ ಸಕಾಲಿಕ ಚಿಕಿತ್ಸೆಯು ಅಗತ್ಯವಾಗಿದ್ದು ಹೃದಯಾಘಾತವಾಗುವ ಸಂದರ್ಭದಲ್ಲಿ ಏನು ಮಾಡಬೇಕು,ಯಾವ ಚಿಕಿತ್ಸೆ ನೀಡಬೇಕು ಎನ್ನುವ ಚಿಕಿತ್ಸಾ ವಿಧಾನದ ಬಗ್ಗೆ ‌ಹೃದಯ ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ.

ಹೃದಯಾಘಾತ,ಎದೆನೋವು ಕಾಣಿಸಿಕೊಂಡ ತಕ್ಷಣ ಏನು ಮಾಡಬೇಕು

ಹೃದಯ ಅಥವಾ ಎದೆಯಭಾಗದಲ್ಲಿ ತೀವ್ರವಾದ ನೋವು, ಬಿಗಿ ,ಉಸಿರು ಕಟ್ಟಿದಂತೆ ಅನಿಸುವುದು ಮತ್ತು ಆ ನೋವು ಹೆಚ್ಚಾಗಿದ್ದಾರೆ ತಕ್ಷಣವೇ ‌ ವೈದ್ಯರನ್ನು ಸಂಪರ್ಕ ಮಾಡಬೇಕು. ಮೊದಲು‌ ರೋಗಿಯ ಬಾಯಿಗೆ ಆಸ್ಪಿರಿನ್ ಗುಳಿಗೆ ನೀಡಿ ನುಂಗಲು ತಿಳಿಸಿ. ತಕ್ಷಣಕ್ಕೆ ಆಸ್ಪಿರಿನ್ ನೀಡುವ ಪ್ರಯೋಜನವೆಂದರೆ ಇದು ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ಒಂದು ವೇಳೆ ರೋಗಿ ಪ್ರಜ್ಞಾಹೀನರಾದರೆ ಸಿಪಿಆರ್ ಕಾರ್ಡಿಯೋ ವಲ್ಮನರಿ ರೆಸಿಪಿಟೇಶನ್‌ ನೀಡುವ ವಿಧಾನ ಅಳವಡಿಸಬೇಕಾಗುತ್ತದೆ.

ಹೃದಯಾಘಾತ, ಎದೆನೋವು ಕಾಣಿಸಿಕೊಂಡ ತಕ್ಷಣ ಏನು ಮಾಡಬೇಕುಳಿಯಿರಿ!

ಕೊರೋನರಿ ಧಮನಿಯಲ್ಲಿ ಬ್ಲಾಕ್ ಉಂಟಾದಾಗ ಹೃದಯಾಘಾತ ಆಗಲಿದೆ. ಹೀಗಾದಾಗ, ರಕ್ತವು ಹೃದಯದ ಸ್ನಾಯುಗಳು ಕಾರ್ಯ ನಿರ್ವಹಿಸುವುದಿಲ್ಲ. , ಅದು ಕೆಲಸ ಮಾಡಲು ಆಮ್ಲಜನಕಯುಕ್ತ ರಕ್ತದ ಅಗತ್ಯವಿದೆ. ಹಾಗಾಗಿ ಕೊರೋನರಿ ಧಮನಿಯಲ್ಲಿ  ಬ್ಲಾಕ್ ಉಂಟಾದಾಗ, ಅದು ಹೃದಯಾಘಾತಕ್ಕೆ ಕಾರಣವಾಗಲಿದೆ.

ಅಂಜಿಯೋಗ್ರಫಿ ಚಿಕಿತ್ಸಾ ವಿಧಾನ!

ಅನೇಕ ಹೃದ್ರೋಗಗಳು ಹೃದಯಾಘಾತ ಅಥವಾ ಹಠಾತ್ ಹೃದಯ ಸ್ತಂಭನದಂತಹ ಪ್ರಮುಖ ಪರಿಣಾಮಗಳಿಗೆ ಕಾರಣವಾಗಬಹುದು. ಹಾಗಾಗಿ ಆರಂಭಿಕ ಹಂತದಲ್ಲಿಯೇ ಹೃದಯದ ಸ್ಥಿತಿಯನ್ನು ತಿಳಿದು ಕೊಳ್ಳಲು ಆಂಜಿಯೋಗ್ರಫಿ ಚಿಕಿತ್ಸಾ ವಿಧಾನ ಬಹಳಷ್ಟು ಪ್ರಯೋಜನಕಾರಿ ಎಂದು ಹೃದಯ ತಜ್ಞರು ವಿವರಿಸಿದ್ದಾರೆ. ಈ ವೈದ್ಯಕೀಯ ಪರೀಕ್ಷೆಗಳು ವ್ಯಕ್ತಿಯ ಆರೋಗ್ಯ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದ್ದು‌ ವೈದ್ಯರು ಈ ಮೇಲಿನ ಯಾವ ಪರೀಕ್ಷೆ ವ್ಯಕ್ತಿಗೆ ಬೇಕಾಗುತ್ತದೆ ಎಂಬುದನ್ನು ನಿರ್ಧರಿಸುತ್ತಾರೆ

ಈ ಚಿಕಿತ್ಸೆಯು ಅಪಧಮನಿಗಳಲ್ಲಿನ ಒತ್ತಡ, ಕಿರಿದಾಗುವಿಕೆ, ಹೃದಯ ಸ್ನಾಯುವಿನ ರಕ್ತದ ಹರಿವನ್ನು ಪರೀಕ್ಷಿಸಲು ಬಳಸಲಾಗುತ್ತದೆ. ಹೃದಯ ಕ್ಕೆ ಸಂಬಂಧಿಸಿದ ವಿಶೇಷ ಚಿಕಿತ್ಸಾ ಆಯ್ಕೆ ಇದಾಗಿದ್ದು, ವೈದ್ಯರು ವ್ಯಕ್ತಿಗೆ ಯಾವ ಚಿಕಿತ್ಸೆಯ ಅಗತ್ಯವಿದೆ, ಎಂಬುದನ್ನು ವೈದ್ಯರು ನಿರ್ಧರಿಸಲು ಇದು ಸಹಾಯ ಮಾಡುತ್ತದೆ. ಆಂಜಿಯೋಪ್ಲ್ಯಾಸ್ಟಿಗಾಗಿ ‌ಒಂದೆರಡು ದಿನಗಳು, ಕೆಲವೊಮ್ಮೆ ವಾರಗಳವರೆಗೆ ಕಾಯಬಹುದು. ಹಾಗಾಗಿ ರೋಗಿಗಳು ಅವರ ಕುಟುಂಬಗಳು ಈ ಫಲಿತಾಂಶಗಳನ್ನು ಖಚಿತಪ ಡಿಸಿಕೊಳ್ಳಲು ಈ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನು ಓದಿ: Health Tips: ಖಾಲಿ ಹೊಟ್ಟೆಗೆ ಹಾಗಲಕಾಯಿ ಜ್ಯೂಸ್​​​ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ?

ಎಕೋಕಾರ್ಡಿಯೋಗ್ರಾಮ್:

ಎಕೋಕಾರ್ಡಿಯೋಗ್ರಾಮ್ ಇದು ಅಲ್ಟ್ರಾಸೌಂಡ್ ಪರೀಕ್ಷೆಯಾಗಿದ್ದು ಇದು ಹೃದಯದ ಆರೋಗ್ಯವನ್ನು ವಿವರಿಸಲು ಧ್ವನಿ ತರಂಗಗಳ ಮೂಲಕ ಮಾಹಿತಿ ನೀಡಲಿದೆ. ಹೃದಯ ಸಮಸ್ಯೆ ಪತ್ತೆಹಚ್ಚಲು ಸಹ ಹೃದಯದ ಕಾರ್ಯಾಚರಣೆಗಳು ಹೇಗಿವೆ ಎಂಬುದನ್ನು ಈ ಚಿಕಿತ್ಸಾ ವಿಧಾನವು ತಿಳಿಸಲಿದೆ. ಹಾಗಾಗಿ ಹೃದ್ರೋಗದ ಆರಂಭಿಕ ಚಿಹ್ನೆಗಳು ಮತ್ತು ರೋಗ ಲಕ್ಷಣಗಳು ಕಾಣಿಸಿಕೊಂಡಾಗ ಎಷ್ಟು ಸಾಧ್ಯವೋ ಅಷ್ಟು ಬೇಗ ವೈದ್ಯರನ್ನು ಸಂಪರ್ಕ ಮಾಡುವುದೇ ಉತ್ತಮ.